ಕಳೆದ ಒಂದು ವಾರದಿಂದ ಭಾರತೀಯ ಟೆಕ್ ಮಾರುಕಟ್ಟೆಯಲ್ಲಿ ಸಾಕಷ್ಟು ರೋಚಕತೆ ಸೃಷ್ಟಿಸಿದ್ದ ವಿವೋ ಕಂಪನಿಯ ಹೊಸ ಸ್ಮಾರ್ಟ್‌ಫೋನ್ ವಿವೋ ವಿ29ಇ (Vivo V29e) ಇದೀಗ ಬಿಡುಗಡೆ ಆಗಿದೆ. ಇಂದು ಮಧ್ಯಾಹ್ಹ 12 ಗಂಟೆಗೆ ವಿವೋ ತನ್ನ V-ಸರಣಿ ಅಡಿಯಲ್ಲಿ ಫೋಟೋ ಪ್ರಿಯರಿಗೆ ಹಾಗೂ ಬಜೆಟ್-ಕೇಂದ್ರಿತ ಗ್ರಾಹಕರಿಗಾಗಿ ಈ ನೂತನ ಫೋನನ್ನು ಅನಾವರಣ ಮಾಡಿದೆ. ಕಡಿಮೆ ಬೆಲೆಯಾಗಿದ್ದರೂ ಈ ಫೋನ್ನಲ್ಲಿ ಹುಬ್ಬೇರಿಸುವಂತಹ ಫೀಚರ್ಗಳು ಅಡಕವಾಗಿದೆ. ಹಾಗಾದರೆ ವಿವೋ V29e ಫೋನಿನ ಬೆಲೆ ಎಷ್ಟು?, ಏನೆಲ್ಲ ಫೀಚರ್ಸ್ ಇದೆ ಎಂಬುದನ್ನು ನೋಡೋಣ.
ವಿವೋ V29e ಸ್ಮಾರ್ಟ್‌ಫೋನ್ ದೇಶದಲ್ಲಿ ಎರಡು ಸ್ಟೋರೇಜ್ ಕಾನ್ಫಿಗರೇಶನ್‌ಗಳಲ್ಲಿ ರಿಲೀಸ್ ಆಗಿದೆ. ಇದರ 8GB RAM ಮತ್ತು 128GB ಸ್ಟೋರೇಜ್ ಆಯ್ಕೆಗೆ 26,999 ರೂ. ನಿಗದಿ ಮಾಡಲಾಗಿದೆ. ಅಂತೆಯೆ 8GB RAM ಮತ್ತು 256GB ಸ್ಟೋರೇಜ್ ರೂಪಾಂತರಕ್ಕೆ 28,999 ರೂ. ಇದೆ. ಈ ಫೋನ್ ಕೆಂಪು ಅಥವಾ ನೀಲಿ ಬಣ್ಣಗಳ ಆಯ್ಕೆಯಲ್ಲಿ ಬಂದಿದೆ. ವಿಶೇಷವಾಗಿ ಆರ್ಟಿಸ್ಟಿಕ್ ಕೆಂಪು ಆಯ್ಕೆಯ ಬಣ್ಣವನ್ನು ಬದಲಾಯಿಸುವ ತಂತ್ರಜ್ಞಾನ ಅಳವಡಿಸಲಾಗಿದೆ.
Yess! #TheMasterpiece is finally here. And you can now #DelightEveryMoment of yours by pre-booking now!. Guess what, you’re getting a 10% cashback too.
Know more: https://t.co/HeS2bZ21zo#vivoV29e #ThePortraitMasterpiece #TheDesignMasterpiece pic.twitter.com/PSKi11sdfm
— vivo India (@Vivo_India) August 28, 2023
ಹೊಸದಾಗಿ ಬಿಡುಗಡೆ ಮಾಡಲಾದ ಈ ಸ್ಮಾರ್ಟ್‌ಫೋನ್ ಮುಂಗಡ-ಆರ್ಡರ್‌ಗಳಿಗೆ ಲಭ್ಯವಿದೆ. ಸೆಪ್ಟೆಂಬರ್ 7 ರಿಂದ ಕಂಪನಿಯ ಅಧಿಕೃತ ವೆಬ್‌ಸೈಟ್ ಮತ್ತು ರಿಟೇಲ್ ಸ್ಟೋರ್‌ಗಳ ಜೊತೆಗೆ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್ ಮೂಲಕ ಖರೀದಿಗೆ ಸಿಗಲಿದೆ.
ಕಡಿಮೆ ಬೆಲೆಯ 5G ಫೋನ್ಗಳು: ಇಲ್ಲಿದೆ 15,000 ರೂ. ಒಳಗಿನ ಬೆಸ್ಟ್ ಸ್ಮಾರ್ಟ್ಫೋನ್ಸ್
ವಿವೋ V29e ಸ್ಮಾರ್ಟ್‌ಫೋನ್ ರಿಯಲ್ ಮಿ, ಮೋಟೋರೊಲಾ, ಲಾವಾ ಬ್ರ್ಯಾಂಡ್‌ಗಳ ಫೋನ್ನಲ್ಲಿರುವಂತೆ ನಯವಾದ ಫ್ರೇಮ್ ಮತ್ತು ಬಾಗಿದ ವಿನ್ಯಾಸ ಹೊಂದಿದೆ. ಇದರಲ್ಲಿ ಹೆಚ್ಚಿನ ರಿಫ್ರೆಶ್ ದರದೊಂದಿಗೆ ಪೂರ್ಣ-HD+ ರೆಸಲ್ಯೂಶನ್ (2400×1080 ಪಿಕ್ಸೆಲ್‌ಗಳು) ಜೊತೆಗೆ 6.73-ಇಂಚಿನ AMOLED ಡಿಸ್ ಪ್ಲೇ ಇದೆ. ಮುಂಭಾಗದ ಪಂಚ್ ಹೋಲ್ ಕಟೌಟ್ ಒಳಗೆ 50-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಇದು ಆಕರ್ಷಕವಾಗಿದ್ದು ಉತ್ತಮ ಫೋಕಸ್‌ಗಾಗಿ “ಐ ಆಟೋ ಫೋಕಸ್” ಆಯ್ಕೆ ನೀಡಲಾಗಿದೆ. ಇನ್ನು ಈ ಸ್ಮಾರ್ಟ್ಫೋನ್ನಲ್ಲಿ ಕ್ವಾಲ್ಕಮ್ನ ಸ್ಮಾಪ್ಡ್ರಾಗನ್ 695 SoC ಪ್ರೊಸೆಸರ್ ಅನ್ನು ಅಳವಡಿಸಲಾಗಿದೆ.
ಈ ಫೋನಿನ ಹಿಂಭಾಗ ಎರಡು ಕ್ಯಾಮೆರಾ ಸಂವೇದಕಗಳನ್ನು ಅಳವಡಿಸಲಾಗಿದೆ. ಇದು 64-ಮೆಗಾಪಿಕ್ಸೆಲ್ OIS ಕ್ಯಾಮೆರಾ ಮತ್ತು 8-ಮೆಗಾಪಿಕ್ಸೆಲ್ ವೈಡ್-ಆಂಗಲ್ ಕ್ಯಾಮೆರಾ ಆಗಿದೆ. ಪ್ರೀಮಿಯಂ ಲುಕ್‌ಗಾಗಿ ಹಿಂಭಾಗದಲ್ಲಿ ಗ್ಲಾಸ್ ಫಿನಿಶ್ ಕೂಡ ಇದೆ. ಕ್ಯಾಮೆರಾ ಅಪ್ಲಿಕೇಶನ್ ಪೋರ್ಟ್ರೇಟ್, ಮೈಕ್ರೋ ಮೂವಿ, ಹೈ-ರೆಸಲ್ಯೂಶನ್, ಪ್ಯಾನೋ, ಸ್ಲೋ-ಮೋ, ಡಬಲ್ ಎಕ್ಸ್‌ಪೋಸರ್, ಡ್ಯುಯಲ್ ವ್ಯೂ, ಸೂಪರ್‌ಮೂನ್ ಮತ್ತು ಲೈಟ್ ಎಫೆಕ್ಟ್‌ಗಳನ್ನು ಒಳಗೊಂಡಿದೆ.
5000mAh ಬ್ಯಾಟರಿ ಶಕ್ತಿ ನೀಡಲಾಗಿದ್ದು, 44W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಕಂಪನಿಯು ಬಾಕ್ಸ್‌ನಲ್ಲಿ ಚಾರ್ಜರ್ ಅನ್ನು ಸಹ ನೀಡುತ್ತದೆ. ಇತರ ಪ್ರಮುಖ ವೈಶಿಷ್ಟ್ಯಗಳೆಂದರೆ 5G ಸಪೋರ್ಟ್ ಮಾಡುತ್ತದೆ, ಟೈಪ್-C ಚಾರ್ಜಿಂಗ್ ಪೋರ್ಟ್, ಡ್ಯುಯಲ್-ಸಿಮ್ ಕಾರ್ಡ್ ಸ್ಲಾಟ್, ಆಂಡ್ರಾಯ್ಡ್ 13-ಆಧಾರಿತ Funtouch OS ಮತ್ತು ಇನ್-ಡಿಸ್ ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಆಯ್ಕೆಯನ್ನು ನೀಡಲಾಗಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ