120W ಫಾಸ್ಟ್ ಚಾರ್ಜರ್, ಸೋನಿ ಕ್ಯಾಮೆರಾ: ವಿವೋ X100 ಸರಣಿ ಬಿಡುಗಡೆಗೆ ದಿನಾಂಕ ಫಿಕ್ಸ್

|

Updated on: Dec 11, 2023 | 2:28 PM

Vivo X100 Series: ಇದೇ ಡಿಸೆಂಬರ್ 14 ರಂದು ಜಾಗತಿಕ ಮಾರುಕಟ್ಟೆಯಲ್ಲಿ ವಿವೋ X100 ಸರಣಿಯ ಬಿಡುಗಡೆ ಆಗಲಿದೆ. ಇದರಲ್ಲಿ ವಿವೋ X100 ಮತ್ತು ವಿವೋ X100 ಪ್ರೊ ಎಂಬ ಎರಡು ಫೋನುಗಳು ಇರಲಿದೆ. X100 ಪ್ರೊ 5,000mAh, 120W ಚಾರ್ಜಿಂಗ್‌ನೊಂದಿಗೆ ಬರುತ್ತದೆ. ಇವುಗಳ ಬೆಲೆ ತಿಳಿದುಬಂದಿಲ್ಲ.

120W ಫಾಸ್ಟ್ ಚಾರ್ಜರ್, ಸೋನಿ ಕ್ಯಾಮೆರಾ: ವಿವೋ X100 ಸರಣಿ ಬಿಡುಗಡೆಗೆ ದಿನಾಂಕ ಫಿಕ್ಸ್
Vivo X100 series
Follow us on

2023ನೇ ವರ್ಷ ಮಗಿಯುವ ಹೊತ್ತಿಗೆ ವಿವೋ ಕಂಪನಿ ಒಂದರ ಹಿಂದೆ ಒಂದರಂತೆ ಮೊಬೈಲ್​ಗಳನ್ನು ಮಾರುಕಟ್ಟೆಗೆ ತರುತ್ತಿದೆ. ಈ ವಾರ ವಿವೋದ ಕೆಲ ಫೋನುಗಳು ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಲಿದೆ. ಹೀಗಿರುವಾಗ ಇದೀಗ ಮತ್ತೊಂದು ಸ್ಮಾರ್ಟ್​ಫೋನ್ ಲಾಂಚ್ ಮಾಡುವ ಬಗ್ಗೆ ಘೋಷಣೆ ಮಾಡಿದೆ. ಇದೇ ಡಿಸೆಂಬರ್ 14 ರಂದು ವಿವೋ X100 ಸರಣಿಯ (Vivo X100 Series) ಜಾಗತಿಕವಾಗಿ ಬಿಡುಗಡೆ ಆಗಲಿದೆ. ಇದರಲ್ಲಿ ಎರಡು ಫೋನುಗಳು ಇರಲಿದ್ದು, ವಿವೋ X100 ಮತ್ತು ವಿವೋ X100 ಪ್ರೊ ಆಗಿದೆ. ಚೀನಾದಲ್ಲಿ ರಿಲೀಸ್ ಆದ ವಾರಗಳ ನಂತರ ಈ ಫೋನ್ ಬಿಡುಗಡೆ ಆಗುತ್ತಿದೆ. ಸಾಕಷ್ಟು ಬಲಿಷ್ಠವಾಗಿರುವ ಈ ಫೋನಿನ ಫೀಚರ್ಸ್ ಏನಿದೆ ಎಂಬುದನ್ನು ನೋಡೋಣ.

ಕಳೆದ ತಿಂಗಳು ಚೀನಾದಲ್ಲಿ ಬಿಡುಗಡೆಯಾದ ವಿವೋ X100 ಮತ್ತು ವಿವೋ X100 ಪ್ರೊ ಆಂಡ್ರಾಯ್ಡ್ 14-ಆಧಾರಿತ OriginOS 4 ನಲ್ಲಿ ರನ್ ಆಗುತ್ತದೆ. ಈ ಫೋನ್ ಚೆನ್ ಯೆ ಬ್ಲಾಕ್, ಸ್ಟಾರ್ ಟ್ರಯಲ್ ಬ್ಲೂ, ಸನ್‌ಸೆಟ್ ಆರೆಂಜ್ ಮತ್ತು ವೈಟ್ ಮೂನ್‌ಲೈಟ್ (ಚೀನೀ ಭಾಷೆಯಿಂದ ಅನುವಾದಿಸಲಾಗಿದೆ) ಬಣ್ಣಗಳಲ್ಲಿ ಮಾರಾಟವಾಗುತ್ತದೆ. 6.78-ಇಂಚಿನ AMOLED 8T LTPO ಡಿಸ್ಪ್ಲೇ ಜೊತೆಗೆ 120Hz ವರೆಗಿನ ರಿಫ್ರೆಶ್ ದರ ಹೊಂದಿದೆ. ಎರಡೂ ಫೋನ್‌ಗಳು 4nm ಡೈಮೆನ್ಸಿಟಿ 9300 ಚಿಪ್‌ಸೆಟ್‌ನಿಂದ 16GB RAM ನೊಂದಿಗೆ ಜೋಡಿಸಲ್ಪಟ್ಟಿವೆ.

ಸಿದ್ಧವಾಗುತ್ತಿದೆ ನಥಿಂಗ್ ಕಂಪನಿಯ 3ನೇ ಸ್ಮಾರ್ಟ್​ಫೋನ್ ನಥಿಂಗ್ ಫೋನ್ 3: ಯಾವಾಗ ಬಿಡುಗಡೆ?

ಇದನ್ನೂ ಓದಿ
ವಿವೋದಿಂದ ಬಜೆಟ್ ಬೆಲೆಗೆ ಬಂಪರ್ ಸ್ಮಾರ್ಟ್​ಫೋನ್ ಬಿಡುಗಡೆ: ಯಾವುದು?
ಆ್ಯಪಲ್​ನಿಂದ ಇಬ್ಬರು ಪ್ರಮುಖ ತಂತ್ರಜ್ಞರ ನಿರ್ಗಮನ; ಸಂಸ್ಥೆಗೆ ಆಘಾತ
ಗ್ಯಾಲಕ್ಸಿ A25 5G: ಬರುತ್ತಿದೆ ಸ್ಯಾಮ್​ಸಂಗ್ ಕಂಪನಿ ಹೊಸ ಸ್ಮಾರ್ಟ್​ಫೋನ್
200MP ಕ್ಯಾಮೆರಾದ ಸ್ಯಾಮ್​ಸಂಗ್ ಗ್ಯಾಲಕ್ಸಿ S24 ಸರಣಿ ಯಾವಾಗ ಬಿಡುಗಡೆ?

ವಿವೋ X100 ಮತ್ತು ವಿವೋ X100 ಪ್ರೊ ಸ್ಮಾರ್ಟ್​ಫೋನ್​ಗಳು ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್‌ಗಳನ್ನು ಹೊಂದಿದೆ. ವಿವೋ X100 50-ಮೆಗಾಪಿಕ್ಸೆಲ್ ಪ್ರಾಥಮಿಕ Sony IMX920 VCS ಬಯೋನಿಕ್ ಮುಖ್ಯ ಕ್ಯಾಮೆರಾ ಮತ್ತು 64-ಮೆಗಾಪಿಕ್ಸೆಲ್ Zeiss ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾವನ್ನು ಒಳಗೊಂಡಿದೆ. ಪ್ರೊ ಮಾದರಿಯು 50-ಮೆಗಾಪಿಕ್ಸೆಲ್ ಸೋನಿ IMX989 1-ಇಂಚಿನ ಸಂವೇದಕ ಮತ್ತು 50-ಮೆಗಾಪಿಕ್ಸೆಲ್ ಝೈಸ್ APO ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾವನ್ನು ಹೊಂದಿದೆ. ಎರಡೂ ಮಾದರಿಗಳಲ್ಲಿ 50-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ ಇದೆ.

ಎರಡೂ ಫೋನ್‌ಗಳು 1TB ವರೆಗಿನ UFS 4.0 ಅಂತರ್ಗತ ಸಂಗ್ರಹಣೆಯೊಂದಿಗೆ ಬರಲಿದೆ. ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಒಳಗೊಂಡಿವೆ. ವಿವೋ X100 ಮತ್ತು ವಿವೋ X100 ಪ್ರೊ ಕ್ರಮವಾಗಿ 5,000mAh (120W ಚಾರ್ಜಿಂಗ್‌ನೊಂದಿಗೆ) ಮತ್ತು 5,400mAh (100W ಚಾರ್ಜಿಂಗ್) ಬ್ಯಾಟರಿಗಳನ್ನು ಪ್ಯಾಕ್ ಮಾಡುತ್ತದೆ. ಕಂಪನಿಯ ಪ್ರಕಾರ, ಎರಡೂ ಫೋನುಗಳು ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP68 ರೇಟಿಂಗ್ ಅನ್ನು ಹೊಂದಿದೆ. ಇವುಗಳ ಬೆಲೆ ತಿಳಿದುಬಂದಿಲ್ಲ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ