Vodafone Idea: ಅನಿಯಮಿತ ಕರೆ ಮತ್ತು 100 GB ಡೇಟಾ: ಅತ್ಯುತ್ತಮ ರಿಚಾರ್ಜ್​ ಪ್ಲ್ಯಾನ್ ಪರಿಚಯಿಸಿದ VI

| Updated By: ಝಾಹಿರ್ ಯೂಸುಫ್

Updated on: Jul 28, 2021 | 6:19 PM

ಈ ಯೋಜನೆಗಳಲ್ಲಿ ಡೇಟಾ ಬಳಕೆಗೆ ದೈನಂದಿನ ಮಿತಿ ಇರುವುದಿಲ್ಲ ಎಂಬುದು ವಿಶೇಷ. ಹಾಗೆಯೇ ಅನಿಯಮಿತ ಸ್ಥಳೀಯ ಹಾಗೂ ರಾಷ್ಟ್ರೀಯ ರೋಮಿಂಗ್ ಕರೆ ಮಾಡಬಹುದು.

Vodafone Idea: ಅನಿಯಮಿತ ಕರೆ ಮತ್ತು 100 GB ಡೇಟಾ: ಅತ್ಯುತ್ತಮ ರಿಚಾರ್ಜ್​ ಪ್ಲ್ಯಾನ್ ಪರಿಚಯಿಸಿದ VI
ವಿ (ವೊಡಾಫೋನ್-ಐಡಿಯಾ) 399 ರೂ. ಪ್ಲ್ಯಾನ್: 399 ಪ್ರಿಪೇಯ್ಡ್ ಪ್ಲ್ಯಾನ್​ನಲ್ಲೂ ಪ್ರತಿದಿನ 1.5 ಜಿಬಿ ಡೇಟಾ ಸಿಗಲಿದೆ. ಅದರೊಂದಿಗೆ ಅನಿಯಮಿತ ಕರೆ ಮತ್ತು 100 ಎಸ್‌ಎಂಎಸ್ ಸೌಲಭ್ಯ ದೊರೆಯಲಿದೆ. ಇನ್ನು ವಿ ಆ್ಯಪ್​ಗಳ ಚಂದಾದಾರಿಕೆ ಕೂಡ ದೊರೆಯಲಿದ್ದು, ಇದರ ವಾಲಿಡಿಟಿ 56 ದಿನಗಳು.
Follow us on

ಜನಪ್ರಿಯ ಟೆಲಿಕಾಂ ಕಂಪೆನಿ ವೊಡಾಫೋನ್ ಐಡಿಯಾ ಲಿಮಿಟೆಡ್ (VIL) ತನ್ನ ಗ್ರಾಹಕರಿಗೆ ಹೊಸ ಪೋಸ್ಟ್‌ಪೇಯ್ಡ್​ ರಿಚಾರ್ಜ್​ ಪ್ಲ್ಯಾನ್​ಗಳನ್ನು ಪರಿಚಯಿಸಿದೆ. ಕಾರ್ಪೊರೇಟ್ ಗ್ರಾಹಕರನ್ನು ಗಮನದಲ್ಲಿಟ್ಟು ಬಿಡುಗಡೆ ಮಾಡಲಾಗಿರುವ ಹೊಸ ರಿಚಾರ್ಜ್​ ಯೋಜನೆಗಳು 299 ರೂ.ಗಳಿಂದ ಪ್ರಾರಂಭವಾಗುತ್ತವೆ. ಈ ಯೋಜನೆಗಳಲ್ಲಿ ಡೇಟಾ ಬಳಕೆಗೆ ದೈನಂದಿನ ಮಿತಿ ಇರುವುದಿಲ್ಲ ಎಂಬುದು ವಿಶೇಷ. ಹಾಗೆಯೇ ಅನಿಯಮಿತ ಸ್ಥಳೀಯ ಹಾಗೂ ರಾಷ್ಟ್ರೀಯ ರೋಮಿಂಗ್ ಕರೆ ಮಾಡಬಹುದು. ಅದರ ಜೊತೆಗೆ ಇನ್ನೂ ಅನೇಕ ಪ್ರಯೋಜನಗಳನ್ನು ಈ ರಿಚಾರ್ಜ್ ಪ್ಲ್ಯಾನ್ ಮೂಲಕ ಪಡೆಯಬಹುದು. ಹಾಗಿದ್ರೆ ವೊಡಾಫೋನ್-ಐಡಿಯಾ ಪರಿಚಯಿಸಿರುವ ಹೊಸ ಪೋಸ್ಟ್​​ಪೇಯ್ಡ್ ಪ್ಲ್ಯಾನ್​ಗಳಾವುವು ನೋಡೋಣ.

299 ರೂ. ಪ್ಲ್ಯಾನ್- ಈ ಯೋಜನೆಯಲ್ಲಿ ಬಳಕೆದಾರರಿಗೆ 30 ಜಿಬಿ ಡೇಟಾ ಸಿಗಲಿದೆ

349 ರೂ. ಪ್ಲ್ಯಾನ್ – ಈ ರಿಚಾರ್ಜ್​ ಪ್ಲ್ಯಾನ್​ನಲ್ಲಿ 40 ಜಿಬಿ ಡೇಟಾ ಲಭ್ಯವಿರಲಿದೆ.

399 ರೂ. ಯೋಜನೆ – 399 ರೂ ಪ್ಲ್ಯಾನ್​ ಮೂಲಕ ಬಳಕೆದಾರರು 60 ಜಿಬಿ ಡೇಟಾ ಪಡೆಯಬಹುದು.

499 ರೂ ಪ್ಲ್ಯಾನ್ – ಈ ಯೋಜನೆಯಲ್ಲಿ 100 ಜಿಬಿ ಡೇಟಾವನ್ನು ನೀಡಲಾಗುತ್ತಿದೆ.

ಈ ರಿಚಾರ್ಜ್​ ಪ್ಲ್ಯಾನ್ ಮೂಲಕ ಸಿಗುವ ಇನ್ನಿತರ ಪ್ರಯೋಜನಗಳು:

– ತಿಂಗಳಿಗೆ 3 ಸಾವಿರ ಮೆಸೇಜ್ ಕಳುಹಿಸಬಹುದು.

– ಮೊಬೈಲ್ ಭದ್ರತೆ

– ಕಾರ್ಪೊರೇಟ್ ಗ್ರಾಹಕರು ಮುಂದಿನ ಬಿಲ್ಲಿಂಗ್ ಮತ್ತು ಹೊಸ ವ್ಯವಹಾರ ಯೋಜನೆಗಳಿಗೆ ಅಪ್‌ಗ್ರೇಡ್ ಮಾಡಬಹುದು.

– ಪೊಸಿಶನ್ ಟ್ರ್ಯಾಕಿಂಗ್ ಸೊಲ್ಯುಷನ್

– ವಿ ಮೂವೀಸ್ ಮತ್ತು ಡಿಸ್ನಿ ಹಾಟ್‌ಸ್ಟಾರ್ ವಿಐಪಿ 1 ವರ್ಷದ ಸಬ್ಸ್​ಕ್ರಿಪ್ಷನ್ ಸಿಗಲಿದೆ.

– ಪ್ರೊಫೈಲ್ ಟ್ಯೂನ್ಸ್, ಕಾಲರ್ ಟ್ಯೂನ್ಸ್. ಹಾಗೂ ಪ್ರಿ ರೆಕಾರ್ಡಿಂಗ್ ಮೆಸೇಜ್ ಆಯ್ಕೆಯೂ ಇರುತ್ತದೆ.

 

ಇದನ್ನೂ ಓದಿ: Rahul Dravid: ಶ್ರೀಲಂಕಾ ನಾಯಕನ ಜೊತೆ ರಾಹುಲ್ ದ್ರಾವಿಡ್ ಮಾತನಾಡಿದ್ದೇನು? ಇಲ್ಲಿದೆ ಉತ್ತರ

ಇದನ್ನೂ ಓದಿ: Ola electric scooter: ಓಲಾ ಎಲೆಕ್ಟ್ರಿಕ್ ಸ್ಕೂಟರ್ ಟಾಪ್ ಸ್ಪೀಡ್ ಎಷ್ಟು ಗೊತ್ತಾ?

 

(Vodafone Idea launches new Bang Recharge plans)