WhatsApp Tricks: ವಾಟ್ಸ್​​ಆ್ಯಪ್​​ನಲ್ಲಿ ಇನ್​ಸ್ಟಾಗ್ರಾಮ್​​ ರೀಲ್ಸ್ ನೋಡುವ ಟ್ರಿಕ್ ನಿಮಗೆ ಗೊತ್ತೇ?: ಇಲ್ಲಿದೆ ನೋಡಿ

ನೀವು ವಾಟ್ಸ್ಆ್ಯಪ್ ಅನ್ನು ಬಳಸುತ್ತಿದ್ದರೆ ಮತ್ತು ಇನ್ಸ್ಟಾಗ್ರಾಮ್​ನ ರೀಲ್‌ಗಳನ್ನು ವಾಟ್ಸ್ಆ್ಯಪ್​ನಲ್ಲಿ ನೋಡಲು ಬಯಸಿದರೆ, ಒಂದು ಟ್ರಿಕ್ ಇದೆ. ನೀವು ವಾಟ್ಸ್ಆ್ಯಪ್​ನಲ್ಲಿ ರೀಲ್ಸ್ ವೀಕ್ಷಿಸಬಹುದು. ಇದಕ್ಕಾಗಿ ಮೆಟಾ AI ನಿಮಗೆ ಸಹಾಯ ಮಾಡುತ್ತದೆ. ಇದು ಹೇಗೆ ಕಾರ್ಯನಿರ್ವಹಿಸುತ್ತದೆ?, ಏನೆಲ್ಲ ಮಾಡಬೇಕು ಎಂಬ ಕುರಿತ ಪೂರ್ಣ ಮಾಹಿತಿ ಇಲ್ಲಿದೆ.

WhatsApp Tricks: ವಾಟ್ಸ್​​ಆ್ಯಪ್​​ನಲ್ಲಿ ಇನ್​ಸ್ಟಾಗ್ರಾಮ್​​ ರೀಲ್ಸ್ ನೋಡುವ ಟ್ರಿಕ್ ನಿಮಗೆ ಗೊತ್ತೇ?: ಇಲ್ಲಿದೆ ನೋಡಿ
Insta reels on WhatsApp
Follow us
| Updated By: Digi Tech Desk

Updated on: Sep 30, 2024 | 11:09 AM

ವಾಟ್ಸ್ಆ್ಯಪ್ ಅತ್ಯಂತ ಜನಪ್ರಿಯ ಸಂದೇಶ ಕಳುಹಿಸುವ ಅಪ್ಲಿಕೇಶನ್ ಆಗಿದ್ದು ಶತಕೋಟಿ ಬಳಕೆದಾರರು ಉಪಯೋಗಿಸುತ್ತಿದ್ದಾರೆ. ಇದು ವಿಶ್ವಾದ್ಯಂತ 2.5 ಬಿಲಿಯನ್‌ಗಿಂತಲೂ ಹೆಚ್ಚು ಮಾಸಿಕ ಸಕ್ರಿಯ ಬಳಕೆದಾರರನ್ನು ಹೊಂದಿದೆ (2023 ರಂತೆ). ಜನರು ಇದನ್ನು ವೈಯಕ್ತಿಕ ಸಂವಹನಕ್ಕಾಗಿ ಮಾತ್ರವಲ್ಲದೆ ವ್ಯಾಪಾರ, ಅಧ್ಯಯನ ಮತ್ತು ಇತರ ಪ್ರಮುಖ ಕಾರ್ಯಗಳಿಗಾಗಿ ಬಳಸುತ್ತಾರೆ. ಆದರೆ, ಅನೇಕರಿಗೆ ತಿಳಿದಿಲ್ಲದ ಕೆಲವು ಟ್ರಿಕ್ ಈ ವಾಟ್ಸ್ಆ್ಯಪ್ನಲ್ಲಿ ಅಡಕವಾಗಿದೆ. ಅಂತಹ ಒಂದು ವೈಶಿಷ್ಟ್ಯದ ಬಗ್ಗೆ ನಾವು ಹೇಳುತ್ತೇವೆ.

ಇತ್ತೀಚಿನ ದಿನಗಳಲ್ಲಿ, ಒಮ್ಮೆ ನೀವು ಇನ್ಸ್ಟಾಗ್ರಾಮ್​ನಲ್ಲಿ ರೀಲ್‌ಗಳನ್ನು ಸ್ಕ್ರೋಲ್ ಮಾಡಲು ಪ್ರಾರಂಭಿಸಿದರೆ, ಗಂಟೆಗಳು ಕಳೆದಯುದೇ ಗೊತ್ತಾಗುವುದಿಲ್ಲ. ಅಂತಹ ರೀಲ್‌ಗಳು ಒಂದರ ನಂತರ ಒಂದರಂತೆ ಬರುತ್ತವೆ, ಇದು ಟೈಮ್ ಪಾಸ್ ಆಗಲು ಉತ್ತಮವಾಗಿದೆ. ಆದರೆ, ವಾಟ್ಸ್ಆ್ಯಪ್ನಲ್ಲಿ ಈರೀತಿಯ ಫೀಚರ್ ಇಲ್ಲ. ಹೀಗಿದ್ದರೂ ಈ ಟ್ರಿಕ್ ಮೂಲಕ ನೀವು ವಾಟ್ಸ್ಆ್ಯಪ್​ನಲ್ಲಿಇನ್ಸ್ಟಾಗ್ರಾಮ್ ರೀಲ್ಸ್ ನೋಡಬಹುದು. ಇದಕ್ಕಾಗಿ ಮೆಟಾ AI ನಿಮಗೆ ಸಹಾಯ ಮಾಡುತ್ತದೆ.

ಇನ್ಸ್ಟಾಗ್ರಾಮ್​ನ ಯಾವುದೇ ರೀಲ್ಸ್ ಆಗಿರಲಿ, ನೀವು ಸಂದೇಶ ಕಳುಹಿಸುವ ವಾಟ್ಸ್ಆ್ಯಪ್​ನಲ್ಲಿಅಪ್ಲಿಕೇಶನ್‌ನಲ್ಲಿ ವೀಕ್ಷಿಸಲು ಸಾಧ್ಯವಾಗುತ್ತದೆ. ಇದು ಹೇಗೆ ಎಂಬುದನ್ನು ನೋಡೋಣ

ವಾಟ್ಸ್ಆ್ಯಪ್​ನಲ್ಲಿಇನ್ಸ್ಟಾಗ್ರಾಮ್ ರೀಲ್‌ಗಳನ್ನು ವೀಕ್ಷಿಸುವುದು ಹೇಗೆ?:

ವಾಟ್ಸ್ಆ್ಯಪ್​ನಲ್ಲಿಇನ್ಸ್ಟಾಗ್ರಾಮ್ ರೀಲ್‌ಗಳನ್ನು ವೀಕ್ಷಿಸಲು ನೀವು ಯಾವುದೇ ಥರ್ಡ್ ಪಾರ್ಟಿಕ್ ಅಪ್ಲಿಕೇಷನ್​ಗೆ ಹೋಗಬೇಕಾಗಿಲ್ಲ. ಇದಕ್ಕಾಗಿ ನೀವು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ವಾಟ್ಸ್ಆ್ಯಪ್ಗೆ ಹೋಗಬೇಕು, ನಂತರ ಮೆಟಾ AI ಚಾಟ್‌ಬಾಟ್ ತೆರೆಯಿರಿ. ಈ ಚಾಟ್‌ನಲ್ಲಿ TV9 Kannada Reels ಅಥವಾ ವಿರಾಟ್ ಕೊಹ್ಲಿ ರೀಲ್ಸ್, ಫನ್ ರೀಲ್ಸ್ ಹೀಗೆ ನೀವು ಯಾವ ರೀಲ್‌ಗಳನ್ನು ನೋಡಲು ಬಯಸುತ್ತೀರೋ ಅದರ ಹೆಸರನ್ನು ನಮೂದಿಸಿ. ಆಗ ನೀವು ಅದಕ್ಕೆ ಸಂಬಂಧಿಸಿದ ಕೆಲವು ರೀಲ್‌ಗಳನ್ನು ಪಡೆಯುತ್ತೀರಿ.

ವಾಟ್ಸ್ಆ್ಯಪ್​ನಲ್ಲಿಹೊಸ ವೈಶಿಷ್ಟ್ಯ:

ವಾಟ್ಸ್ಆ್ಯಪ್ ಕಂಪನಿಯು ಬಳಕೆದಾರರ ಅನುಕೂಲಕ್ಕಾಗಿ ಅನೇಕ ಹೊಸ ವೈಶಿಷ್ಟ್ಯಗಳನ್ನು ತರುತ್ತಲೇ ಇರುತ್ತದೆ. ಇದೀಗ ತನ್ನ ವೆಬ್ ಬಳಕೆದಾರರಿಗಾಗಿ ಹೊಸ ಫೀಚರ್ ತರಲು ಹೊರಟಿದೆ. ಕಂಪನಿಯು ತನ್ನ ವೆಬ್ ಬಳಕೆದಾರರಿಗಾಗಿ ವೆಬ್‌ನಲ್ಲಿ ಹೊಸ ಸರ್ಚ್ ಲಿಂಕ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ವೈಶಿಷ್ಟ್ಯದ ಸಹಾಯದಿಂದ, ವಾಟ್ಸ್ಆ್ಯಪ್ ಬಳಕೆದಾರರು ತಮ್ಮ ವೆಬ್‌ನಲ್ಲಿ ಯಾವುದೇ ಲಿಂಕ್ ಅನ್ನು ಸುಲಭವಾಗಿ ಹುಡುಕಲು ಸಾಧ್ಯವಾಗುತ್ತದೆ.

ವಾಟ್ಸ್ಆ್ಯಪ್​ನಲ್ಲಿ ಬರುವ ಈ ಹೊಸ ವೈಶಿಷ್ಟ್ಯವು ಗೂಗಲ್ ಪ್ಲೇ ಸ್ಟೋರ್ನಲ್ಲಿ ಲಭ್ಯವಿರುವ ಆಂಡ್ರಾಯ್ಡ್ 2.24.20.28 ಬೀಟಾ ಆವೃತ್ತಿಯಲ್ಲಿ ಸ್ವೀಕರಿಸಲಾಗಿದೆ. ಈ ಫೀಚರ್ ಸದ್ಯಕ್ಕೆ ಅಭಿವೃದ್ಧಿ ಹಂತದಲ್ಲಿದೆ. ಇದು ಬಳಕೆದಾರರ ಅನೇಕ ಕಾರ್ಯಗಳನ್ನು ಬಹಳ ಸುಲಭಗೊಳಿಸುತ್ತದೆ. ನೀವು ಯಾವುದೇ ಲಿಂಕ್ ಅನ್ನು ಹುಡುಕಲು ಬಯಸಿದರೆ, ಕೆಲವೇ ಸೆಕೆಂಡುಗಳಲ್ಲಿ ಇದು ಸಿಗುತ್ತದೆ. ಈ ವೈಶಿಷ್ಟ್ಯವನ್ನು ಬಳಸಲು, ಕೆಳಭಾಗದಲ್ಲಿ ಒಂದು ಬಟನ್ ಇರುತ್ತದೆ. ಅಲ್ಲಿ ಲಿಂಕ್ ಅನ್ನು ಸರ್ಚ್ ಮಾಡಿದಾಗ ನಿಮಗೆ ಸುಲಭವಾಗಿ ತೋರಿಸಲಾಗುತ್ತದೆ.