WhatsApp: ಇನ್ಮುಂದೆ ವಾಟ್ಸ್​ಆ್ಯಪ್ ಕಾರ್ಯನಿರ್ವಹಿಸಲ್ಲ: ಐಫೋನ್ ಬಳಕೆದಾರರು ತಪ್ಪದೇ ಈ ಸ್ಟೋರಿ ಓದಿ

| Updated By: Vinay Bhat

Updated on: Sep 02, 2022 | 3:43 PM

ಇದೇ ತಿಂಗಳ 7ನೇ ತಾರೀಕಿನಂದು ಆ್ಯಪಲ್ 14 ಸರಣಿಯ ಫೋನ್​ಗಳು ಲಾಂಚ್ ಆಗಲಿದೆ. ಹೀಗಿರುವಾಗ ಕೆಲವು ಐಫೋನ್‌ ಮಾಡೆಲ್‌ಗಳಲ್ಲಿ ಶಾಶ್ವತವಾಗಿ ವಾಟ್ಸ್​ಆ್ಯಪ್ ಅಪ್ಲಿಕೇಶನ್ ಸ್ಥಗಿತವಾಗಲಿದೆ ಎಂದು ತಿಳಿದುಬಂದಿದೆ.

WhatsApp: ಇನ್ಮುಂದೆ ವಾಟ್ಸ್​ಆ್ಯಪ್ ಕಾರ್ಯನಿರ್ವಹಿಸಲ್ಲ: ಐಫೋನ್ ಬಳಕೆದಾರರು ತಪ್ಪದೇ ಈ ಸ್ಟೋರಿ ಓದಿ
iPhone WhatsApp
Follow us on

ವಾಟ್ಸ್​ಆ್ಯಪ್ (WhatsApp) ಇಂದು ವಿಶ್ವದ ನಂಬರ್ ಒನ್ ಮೆಸೇಜಿಂಗ್ ಅಪ್ಲಿಕೇಷನ್ ಆಗಿ ಹೊರಹೊಮ್ಮಿದೆ. ಕಳೆದ ಕೆಲವು ತಿಂಗಳುಗಳಿಂದಂತು ಬಳಕೆದಾರರಿಗೆ ಅಗತ್ಯವಿರುವ ಅನೇಕ ಹೊಸ ಹೊಸ ಫೀಚರ್​ಗಳನ್ನು ಪರಿಚಯಿಸುತ್ತಿದೆ. ಇದರ ನಡುವೆ ಐಫೋನ್ (iPhone) ಬಳಕೆದಾರರಿಗೆ ವಾಟ್ಸ್​ಆ್ಯಪ್ ಆಘಾತಕಾರಿ ಸುದ್ದಿಯೊಂದನ್ನು ನೀಡಿದೆ. ಇನ್ಮುಂದೆ ಐಫೋನ್​ನ ಈ ಮಾಡೆಲ್​ನಲ್ಲಿ ವಾಟ್ಸ್​ಆ್ಯಪ್ ಕಾರ್ಯನಿರ್ವಹಿಸುವುದಿಲ್ಲ. ಆ್ಯಪಲ್ ಐಫೋನ್ 14 ಸರಣಿಯ ಸ್ಮಾರ್ಟ್​ಫೋನ್ ಬಿಡುಗಡೆಗೆ ಸಿದ್ಧವಾಗಿದೆ. ಇದೇ ತಿಂಗಳ ಏಳನೇ ತಾರೀಕಿನಂದು ಆ್ಯಪಲ್ ಈವೆಂಟ್ ಆಯೋಜಿಸಿದ್ದು ಇದರಲ್ಲಿ 14 ಸರಣಿಯ (Apple iPhone 14 Series) ಫೋನ್​ಗಳು ಲಾಂಚ್ ಆಗಲಿದೆ. ಹೀಗಿರುವಾಗ ಕೆಲವು ಐಫೋನ್‌ ಮಾಡೆಲ್‌ಗಳಲ್ಲಿ ಶಾಶ್ವತವಾಗಿ ವಾಟ್ಸ್​ಆ್ಯಪ್ ಅಪ್ಲಿಕೇಶನ್ ಸ್ಥಗಿತವಾಗಲಿದೆ ಎಂದು ತಿಳಿದುಬಂದಿದೆ.

ಆ್ಯಪಲ್‌ನ ಇತ್ತೀಚಿನ ಬೆಂಬಲ ನವೀಕರಣದ ಪ್ರಕಾರ ಇದೇ ಅಕ್ಟೋಬರ್ 1, 2022 ರಿಂದ ಕೆಲವು ಐಫೋನ್‌ ಮಾಡೆಲ್‌ಗಳಲ್ಲಿ ಶಾಶ್ವತವಾಗಿ ವಾಟ್ಸ್​ಆ್ಯಪ್​ ಅಪ್ಲಿಕೇಶನ್ ಇನ್ನು ಮುಂದೆ ಬೆಂಬಲಿಸುವುದಿಲ್ಲ ಎಂದು ಸೂಚಿಸಿದೆ. ಐಒಎಸ್ 10 ಅಥವಾ ಐಒಎಸ್ 11 ಆವೃತ್ತಿಗಳಲ್ಲಿ ಆ್ಯಪ್ ಚಾಲನೆ ಮಾಡುವ ಐಫೋನ್ ಬಳಕೆದಾರರಿಗೆ ವಾಟ್ಸ್​ಆ್ಯಪ್​ ಈಗಾಗಲೇ ಎಚ್ಚರಿಕೆ ಸಂದೇಶ ಕೂಡ ರವಾನಿಸಿದೆ.

ವಾಟ್ಸ್​ಆ್ಯಪ್​ ಮೆಸೆಜ್‌ ಆಪ್‌ ಈ ಬಗ್ಗೆ ಬಳಕೆದಾರರಿಗೆ ಸೂಚನೆಯನ್ನು ಕಳುಹಿಸಿದ್ದು, ವಾಟ್ಸ್​ಆ್ಯಪ್​ ಶೀಘ್ರದಲ್ಲೇ ನಿಮ್ಮ ಫೋನ್‌ನಲ್ಲಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ ಎಂದು ತಿಳಿಸುತ್ತದೆ. ಹೀಗಾಗಿ ವಾಟ್ಸ್​ಆ್ಯಪ್​ ಅಪ್ಲಿಕೇಶನ್ ಅನ್ನು ಬಳಸುವುದನ್ನು ಮುಂದುವರಿಸಲು ಬಳಕೆದಾರರು ತಮ್ಮ ಐಫೋನ್‌ಗಳನ್ನು ನವೀಕರಿಸಬೇಕಾಗುತ್ತದೆ ಎಂದು ಸಂದೇಶ ಕಳುಹಿಸಿದೆ.

ಇದನ್ನೂ ಓದಿ
ಅತಿಯಾದ ಸ್ಮಾರ್ಟ್​ಫೋನ್, ಲ್ಯಾಪ್​ಟಾಪ್ ಬಳಕೆಯಿಂದ ಏನಾಗುತ್ತೇ?: ಅಚ್ಚರಿ ವಿಚಾರ ಬಹಿರಂಗ
iPhone 14: ಸೆಪ್ಟಂಬರ್​ನಲ್ಲಿ ಬಿಡುಗಡೆ ಆಗಲಿರುವ ಸ್ಮಾರ್ಟ್​ಫೋನ್​ಗಳು ಯಾವುವು?: ಇಲ್ಲಿದೆ ನೋಡಿ ಲಿಸ್ಟ್
Infinix Note 12 Pro 4G: 108MP ಕ್ಯಾಮೆರಾದ ಈ ಹೊಸ ಫೋನಿನ ಮಾರಾಟ ಆರಂಭ: ಆಫರ್​ನಲ್ಲಿ ಕಡಿಮೆ ಬೆಲೆಗೆ ಖರೀದಿಸಿ
ಟ್ವೀಟ್ ಮಾಡಿದ ನಂತರ ಅದನ್ನು ಎಡಿಟ್ ಮಾಡುವ ಅವಕಾಶ ನೀಡಲಿದೆ ಟ್ವಿಟರ್

ಐಫೋನ್ 5 ಮತ್ತು ಐಫೋನ್ 5C ಫೋನ್‌ಗಳಲ್ಲಿ ವಾಟ್ಸ್​ಆ್ಯಪ್​ ಸ್ಥಗಿತವಾಗಲಿದೆ. ಆ್ಯಪಲ್‌ ಐಓಎಸ್‌ 12 ಅಥವಾ ಅದಕ್ಕಿಂತ ಮುಂದಿನ ಐಓಎಸ್‌ ಹೊಂದಿರುವ ಐಫೋನ್‌ಗಳಲ್ಲಿ ಯಾವುದೇ ಅಡೆ ತಡೆಯಿಲ್ಲದೆ ವಾಟ್ಸ್​ಆ್ಯಪ್​ ಕಾರ್ಯನಿರ್ವಹಿಸಲಿದೆ. ಹಾಗೆಯೇ ಐಒಎಸ್ 10 ಮತ್ತು ಐಒಎಸ್ 11 ಐಓಎಸ್‌ ಹಳೆಯ ಆಪರೇಟಿಂಗ್ ಸಿಸ್ಟಂಗಳಾಗಿದ್ದು, ಹೊಸ ಸಾಫ್ಟ್‌ವೇರ್‌ ಅಪ್‌ಡೇಟ್‌ ಅನ್ನು ಸ್ವೀಕರಿಸಿರಬಹುದು. ಅದಕ್ಕಾಗಿ ನೀವು ಐಫೋನ್​ನಲ್ಲಿ ಸೆಟ್ಟಿಂಗ್​ಗೆ ತೆರಳು ಜನರೇಲ್‌ ಆಯ್ಕೆ ಮಾಡಬೇಕು. ನಂತರ ಇತ್ತೀಚಿನ iOS ಆವೃತ್ತಿಯನ್ನು ಪಡೆಯಲು ಸಾಫ್ಟ್‌ವೇರ್ ಅಪ್‌ಡೇಟ್‌ ಆಯ್ಕೆ ಮೇಲೆ ಟ್ಯಾಪ್ ಮಾಡಿ. ಈ ಸಂದರ್ಭ ಯಾವುದೇ ಇತರೆ ಆಯ್ಕೆಯನ್ನು ಒತ್ತದಿರಿ. ಇದು ಅಪ್ಡೇಟ್ ಆಗಲು ಕೆಲ ಸಮಯ ತೆಗೆದುಕೊಳ್ಳುತ್ತದೆ.