ವಿಶ್ವದ ಅತ್ಯಂತ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ಮತ್ತು ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ವಾಟ್ಸ್ಆ್ಯಪ್ ಡೌನ್ (WhatsApp Down) ಆಗಿರುವ ಬಗ್ಗೆ ವರದಿ ಆಗಿದೆ. ಭಾರತ (India), ಇಂಗ್ಲೆಂಡ್ ಸೇರಿದಂತೆ ವಿಶ್ವದ ಅನೇಕ ಕಡೆಗಳನ್ನು ನಿನ್ನೆ ಮಧ್ಯರಾತ್ರಿ ವಾಟ್ಸ್ಆ್ಯಪ್ (WhatsApp) ಬಳಸಲು ಸಾಧ್ಯವಾಗುತ್ತರಲಿಲ್ಲ ಎಂದು ಬಳಕೆದಾರರು ದೂರಿದ್ದಾರೆ. ಇಂಗ್ಲೆಂಡ್ನಲ್ಲಿ ನಲ್ಲಿ 177,000 ಬಳಕೆದಾರರಿಗೆ ವಾಟ್ಸ್ಆ್ಯಪ್ ಸಮಸ್ಯೆ ಎದುರಿಸಿದ್ದಾರೆ. ಅಮೆರಿಕಾರಲ್ಲಿ 43,000 ಬಳಕೆದಾರರು, ಸುಮಾರು 16,000 ವರದಿಗಳು ಭಾರತದಿಂದ ಬಂದಿವೆಯಂತೆ.
ವಾಟ್ಸ್ಆ್ಯಪ್ ಸರಿಯಾಗಿ ಕಾರ್ಯನಿರ್ವಹಿಸದ ಬಗ್ಗೆ ಬಳಕೆದಾರರು ಟ್ವಿಟ್ಟರ್ ಅಪ್ಲಿಕೇಶನ್ ಮೂಲಕ ದೂರು ನೀಡಿದ್ದಾರೆ. ಸಂದೇಶಗಳನ್ನು ಕಳುಹಿಸಲು ಸಾಧ್ಯವಾಗದೇ ಇರುವುದರಿಂದ ಈ ಸಮಸ್ಯೆಗಳು ಸರ್ವರ್‌ಗೆ ಸಂಬಂಧಿಸಿವೆ ಎಂದು ತಿಳಿದುಬಂದಿದೆ. ವಾಟ್ಸ್ಆ್ಯಪ್ ಡೌನ್ ಆಗಿರುವುದು ತನ್ನ ಗಮನಕ್ಕೆ ಬಂದ ಕೂಡಲೇ ತ್ವರಿತವಾಗಿ ಪ್ರತಿಕ್ರಿಯಿಸಿದ ಕಂಪನಿ, ಸಮಸ್ಯೆಯನ್ನು ಒಪ್ಪಿಕೊಂಡು ಬೆಳಗಾಗುವಷ್ಟರಲ್ಲಿ ಸರಿಪಡಿಸಿದೆ.
Honor MagicPad 13: ಆ್ಯಪಲ್ ಐಪ್ಯಾಡ್ಗೆ ಸ್ಪರ್ಧೆ ಒಡ್ಡುತ್ತಿದೆ ಹೊಸ ಹಾನರ್ ಮ್ಯಾಜಿಕ್ಪ್ಯಾಡ್
ಆನ್‌ಲೈನ್ ಮಾನಿಟರಿಂಗ್ ಪ್ಲಾಟ್‌ಫಾರ್ಮ್ Downdetector.com ಪ್ರಕಾರ, ತಡರಾತ್ರಿ 1:25 ಕ್ಕೆ ವಾಟ್ಸ್ಆ್ಯಪ್ ಡೌನ್ ಆಗಿದೆ. ಬೆಳಗಿನ ಜಾವ 4 ಗಂಟೆ ಸುಮಾರಿಗೆ ವಾಟ್ಸ್ಆ್ಯಪ್ ಈ ಸಮಸ್ಯೆಯನ್ನು ಬಗೆಹರಿಸಿದೆ. ವರದಿಗಳ ಪ್ರಕಾರ, 61 ಪ್ರತಿಶತ ಬಳಕೆದಾರರು ಮೆಸೇಜ್ ಕಳುಹಿಸುವಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುವ ಬಗ್ಗೆ ದೂರು ನೀಡಿದ್ದಾರೆ. 35 ಪ್ರತಿಶತ ಬಳಕೆದಾರರು ಅಪ್ಲಿಕೇಶನ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಹೇಳಿದ್ದಾರೆ. ಡೆಸ್ಕ್‌ಟಾಪ್ ಆವೃತ್ತಿ ಮತ್ತು ವೆಬ್ ಆವೃತ್ತಿಯಲ್ಲೂ ಈ ಸಮಸ್ಯೆ ಕಂಡುಬಂದಿತ್ತು.
ಸುಮಾರು ಎರಡು ಗಂಟೆಗಳಿಗೂ ಹೆಚ್ಚು ಕಾಲ ವಾಟ್ಸ್ಆ್ಯಪ್ ಡೌನ್ ಆಗಿತ್ತು. ವಾಟ್ಸ್ಆ್ಯಪ್ ಸರಿಯಾಗಿ ಕಾರ್ಯನಿರ್ವಹಿಸದ ತಕ್ಷಣ ಬಳಕೆದಾರರು ಟ್ವಿಟ್ಟರ್ಗೆ ಬಂದು ದೂರಿದ್ದಾರೆ. ಒಬ್ಬ ಬಳಕೆದಾರರು ಅಧಿಕೃತ ವಾಟ್ಸ್ಆ್ಯಪ್ ಅಕೌಂಟ್ ಅನ್ನು ಟ್ಯಾಗ್ ಮಾಡಿ, “ಭಾರತದಲ್ಲಿ ಬೆಳಗಾಗುವ ಮೊದಲು ಇದನ್ನು ಸರಿಪಡಿಸಿ, ಶುಭೋದಯ ಮೆಸೇಜ್ ಕಳುಹಿಸಬೇಕು” ಎಂದು ಟ್ವೀಟ್ ಮಾಡಿದ್ದಾರೆ.. ಮತ್ತೊಬ್ಬರು, “ವಾಟ್ಸ್ಆ್ಯಪ್ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಆದರಷ್ಟು ಬೇಗ ಸರಿಪಡಿಸಿ,” ಎಂದು ಬರೆದುಕೊಂಡಿದ್ದಾರೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ