ಮೆಟಾ (Meta) ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್ಆ್ಯಪ್ ಪ್ರತಿ ತಿಂಗಳು ತನ್ನ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಒಂದಲ್ಲ ಒಂದು ಹೊಸ ಅಪ್ಡೇಟ್ ಪರಿಚಯಿಸುತ್ತಲೇ ಇರುತ್ತದೆ. ಇದಕ್ಕಾಗಿಯೆ ಈ ಆ್ಯಪ್ ಅನ್ನು ಇಂದು ಬಳಸುತ್ತಿರುವವರ ಸಂಖ್ಯೆ 550 ಮಿಲಿಯನ್ಗೂ ಅಧಿಕವಿದೆ. ವಾಟ್ಸ್ಆ್ಯಪ್ (WhatsApp) ಒಂದೇ ಸಮಯದಲ್ಲಿ ತನ್ನ ಆಂಡ್ರಾಯ್ಡ್ ಮತ್ತು ಐಒಎಸ್ (iOS) ಬಳಕೆದಾರರಿಗೆ ಒಂದೇ ರೀತಿಯ ಫೀಚರ್ ಪರಿಚಯಿಸುವುದಿಲ್ಲ. ಐಫೋನ್ ವಾಟ್ಸ್ಆ್ಯಪ್ನಲ್ಲಿರುವ ಕೆಲ ಫೀಚರ್ಗಳು ಈಗಲೂ ಆಂಡ್ರಾಯ್ಡ್ನಲ್ಲಿ ಇಲ್ಲ. ಅಂತೆಯೆ ಆಂಡ್ರಾಯ್ಡ್ ವಾಟ್ಸ್ಆ್ಯಪ್ನಲ್ಲಿ ಇರುವ ಅದೆಷ್ಟೊ ಆಯ್ಕೆಗಳು ಐಫೋನ್ನಲ್ಲಿ ಇನ್ನಷ್ಟೆ ಬರಬೇಕದೆ. ಇದರಲ್ಲಿ ಪಿಕ್ಚರ್-ಇನ್-ಪಿಕ್ಚರ್ ಫೀಚರ್ಸ್ ಕೂಡ ಒಂದು. ಆದರೀಗ ವಾಟ್ಸ್ಆ್ಯಪ್ ಈ ಆಯ್ಕೆಯನ್ನು ಐಒಎಸ್ ಬಳಕೆದಾರರಿಗೆ ಲಭ್ಯವಾಗುವಂತೆ ಮಾಡಿದೆ.
ಈ ನೂತನ ಆಯ್ಕೆಯ ಮೂಲಕ ವಿಡಿಯೋ ಕರೆಯಲ್ಲಿ ಮತ್ತಷ್ಟು ಹೊಸ ರೀತಿಯ ಅನುಭವ ಬಳಕೆದಾರರಿಗೆ ಸಿಗಲಿದೆ. ಕಳೆದ ಡಿಸೆಂಬರ್ನಲ್ಲಿ ಪಿಕ್ಚರ್-ಇನ್-ಪಿಕ್ಚರ್ ಫೀಚರ್ ಆಂಡ್ರಾಯ್ಡ್ನಲ್ಲಿ ಲಭ್ಯವಾಗಿತ್ತು. ಇದೀಗ ಐಒಎಸ್ ಬಳಕೆದಾರರಿಗೂ ಸಿಗುತ್ತಿದೆ. ಈ ಹೊಸ ಫೀಚರ್ ಮೂಲಕ ವಾಟ್ಸ್ಆ್ಯಪ್ ಬಳಕೆದಾರರು ಯಾವುದೇ ಅಡೆತಡೆ ಇಲ್ಲದೆ ವಿಡಿಯೋ ಕರೆಯಲ್ಲಿ ಮಾತನಾಡಬಹುದು. ಆ್ಯಪಲ್ ಬಳಕೆದಾರರಿಗಾಗಿ ವಾಟ್ಸ್ಆ್ಯಪ್ ಕಳೆದ ವರ್ಷ ಮೊದಲ ಬಾರಿಗೆ ಈ ಫೀಚರ್ಸ್ ಅನ್ನು ಪರೀಕ್ಷಿಸಲು ಪ್ರಾರಂಭಿಸಿತ್ತು. ಅದರಂತೆ ಇದೀಗ ಲಭ್ಯವಾಗುವಂತೆ ಮಾಡಿದೆ.
ಫೇಸ್‌ಟೈಮ್‌ನ ಪಿಕ್ಚರ್-ಇನ್-ಪಿಕ್ಚರ್ ಮೋಡ್‌ನಂತೆಯೇ ಇದುಕೂಡ ಕೆಲಸ ಮಾಡಲಿದ್ದು, ಗ್ರೂಪ್ ಕರೆ ಅಥವಾ ವೈಯುಕ್ತಿಕ ಕರೆಯಲ್ಲಿದ್ದಾಗ ಇತರೆ ಆ್ಯಪ್‌ಗಳನ್ನು ಓಪನ್ ಮಾಡುವ ಮೂಲಕ ಒಂದೇ ಬಾರಿಗೆ ಕೆಲಸವನ್ನು ಮಾಡಬಹುದಾಗಿದೆ. ಈ ಸಂದರ್ಭ ಕರೆ ಕಟ್ ಆಗುವುದು ಅಥವಾ ಸ್ಟ್ರಕ್ ಆಗುವಂತಹ ಯಾವುದೇ ಪ್ರಕ್ರಿಯೆ ನಡೆಯುವುದಿಲ್ಲ. ನೀವು ವೆಬ್ ಬ್ರೌಸರ್ ಅಥವಾ ವೆಬ್ಸೈಟ್ನಲ್ಲಿಇ ಕರೆ ಮಾಡಿದರೆ ಈ ವಿಡಿಯೋ ಸಂಬಂಧಿಸಿದ ಚಿಕ್ಕ ವಿಂಡೋ ಕಾಣಿಸಿಕೊಳ್ಳುತ್ತದೆ. ಆ್ಯಪಲ್ ಡಿವೈಸ್ ಬಳಕೆದಾರರು 23.3.77 ಗೆ ಅಪ್‌ಡೇಟ್ ಮಾಡಿಕೊಂಡರೆ ಈ ಆಯ್ಕೆ ಸಿಗಲಿದೆ.
Tech Tips: ನಿಮ್ಮ ಫೋನ್ನಲ್ಲಿರುವ ಡಿಸ್ ಪ್ಲೇಯನ್ನು ಹೀಗೂ ಉಪಯೋಗಿಸಬಹುದು: ಒಮ್ಮೆ ಟ್ರೈ ಮಾಡಿ ನೋಡಿ
ಮೊನ್ನೆಯಷ್ಟೆ ವಾಟ್ಸ್ಆ್ಯಪ್ ತನ್ನ ಆಂಡ್ರಾಯ್ಡ್ ಬಳಕೆದಾರರಿಗೆ ವಿಶೇಷ ಫೀಚರ್ವೊಂದನ್ನು ಬಿಡುಗಡೆ ಮಾಡಿತ್ತು. ಅದುವೇ ಒಂದೇ ಬಾರಿಗೆ 100 ಫೋಟೋ ಅಥವಾ ವಿಡಿಯೋವನ್ನು ಕಳುಹಿಸುವ ಆಯ್ಕೆ. ಈ ಹಿಂದೆ ವಾಟ್ಸ್ಆ್ಯಪ್ನಲ್ಲಿ ಒಂದೇ ಬಾರಿಗೆ ಕೇವಲ 30 ಫೋಟೋಗಳನ್ನು ಮಾತ್ರ ಕಳುಹಿಸಬಹುದಾಗುತ್ತು, ಆದರೆ ಈ ಹೊಸ ಫೀಚರ್ನ ಪ್ರಕಾರ ಇದರ ಮಿತಿಯನ್ನು ಹೆಚ್ಚಿಸಲಾಗಿದೆ. ಆಂಡ್ರಾಯ್ಡ್ ಆವೃತ್ತಿ 2.22.24.73 ಕ್ಕೆ ವಾಟ್ಸ್ಆ್ಯಪ್ ಅನ್ನು ಅಪ್ಡೇಟ್ ಮಾಡಿದರೆ ಒಂದೇ ಬಾರಿಗೆ 100 ಫೋಟೋಗಳನ್ನು ಅಥವಾ ವಿಡಿಯೋಗಳನ್ನು ಕಳುಹಿಸಬಹುದು.
ವಾಟ್ಸ್ಆ್ಯಪ್ ಕರೆಯನ್ನು ಶೆಡ್ಯುಲ್ ಮಾಡಿಕೊಳ್ಳಬಹುದಾದ ಉಪಯುಕ್ತ ಫೀಚರ್ ನೀಡಲು ಮುಂದಾಗಿದೆ. ಹೌದು, ಯಾವುದೇ ಸ್ಮಾರ್ಟ್ಫೋನ್ನಲ್ಲೂ ಈರೀತಿಯ ಆಯ್ಕೆ ಇಲ್ಲ. ಆದರೆ, ವಾಟ್ಸ್ಆ್ಯಪ್ ಇದೇ ಮೊದಲ ಬಾರಿಗೆ ತನ್ನ ಕರೆಗಳನ್ನು ಶೆಡ್ಯುಲ್ ಮಾಡುವ ಆಯ್ಕೆ ನೀಡುತ್ತಿದೆ. ಅಂದರೆ ವಾಟ್ಸ್ಆ್ಯಪ್ನಲ್ಲಿ ಬಳಕೆದಾರರು ಮುಂಚಿತವಾಗಿಯೇ ಕರೆಯನ್ನು ನಿಗದಿಪಡಿಸುವ ಸಮಯಕ್ಕೆ ಮಾಡಬಹುದಾಗಿದೆ. ಈ ಮೂಲಕ ಪ್ರಮುಖ ಸಂಭಾಷಣೆಯನ್ನು ಯಾರೂ ಸಹ ಮಿಸ್ ಮಾಡಿಕೊಳ್ಳುವ ಸಂಭವ ಇರುವುದಿಲ್ಲ ಎಂದು ಸಂಸ್ಥೆ ಹೇಳಿದೆ. ಅಷ್ಟೇ ಅಲ್ಲದೆ ಯಾರನ್ನಾದರೂ ಕೆಲಸಕ್ಕೆ ನೇಮಿಸಿಕೊಳ್ಳಲು ಸಂದರ್ಶನ ಮಾಡಬೇಕು ಎಂದಿದ್ದರೆ, ಈ ವೇಳೆ ಸಂದರ್ಶಕರು ಸಂದರ್ಶನಕ್ಕೆ ಹಾಜರಾಗುವ ವ್ಯಕ್ತಿ ಜೊತೆ ಯಾವ ಸಮಯದಲ್ಲಿ ಮಾತನಾಡಬೇಕು ಎಂಬುದನ್ನು ಶೆಡ್ಯುಲ್ ಮಾಡಬಹುದು.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ