WhatsApp New Feature: ಆಂಡ್ರಾಯ್ಡ್, ಐಒಎಸ್ ಬಳಕೆದಾರರೇ ಗಮನಿಸಿ: ಸದ್ಯದಲ್ಲೇ ವಾಟ್ಸ್​ಆ್ಯಪ್​ನಿಂದ ಬರುತ್ತೆ ವಿಶೇಷ ಮೆಸೇಜ್

|

Updated on: Mar 25, 2023 | 2:15 PM

ವಾಟ್ಸ್​ಆ್ಯಪ್ ತನ್ನ ಬಳಕೆದಾರರೊಂದಿಗೆ ಅಧಿಕೃತ ಚಾಟ್ ಅನ್ನು ಪ್ರಾರಂಭಿಸಲಿದೆ. ಅಂದರೆ ನಿಮ್ಮ ಖಾತೆಗೆ ವಾಟ್ಸ್​ಆ್ಯಪ್​ನಿಂದ ಮೆಸೇಜ್ ಬರಲಿದ್ದು, ಇದರಲ್ಲಿ ಅನೇಕ ಮಾಹಿತಿಗಳನ್ನು ನೀಡಲಾಗುತ್ತದೆ.

WhatsApp New Feature: ಆಂಡ್ರಾಯ್ಡ್, ಐಒಎಸ್ ಬಳಕೆದಾರರೇ ಗಮನಿಸಿ: ಸದ್ಯದಲ್ಲೇ ವಾಟ್ಸ್​ಆ್ಯಪ್​ನಿಂದ ಬರುತ್ತೆ ವಿಶೇಷ ಮೆಸೇಜ್
WhatsApp
Follow us on

ಮೆಟಾ (Meta) ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್​ಆ್ಯಪ್ ದಿನಕ್ಕೊಂದು ಫಿಚರ್​ಗಳನ್ನು ಘೋಷಣೆ ಮಾಡುತ್ತಿದೆ. ಈಗೀಗ ಕೇವಲ ಆಂಡ್ರಾಯ್ಡ್ (Android), ಐಒಎಸ್ ಬಳಕೆದಾರರಿಗೆ ಮಾತ್ರವಲ್ಲದೆ ವೆಬ್ ಮತ್ತು ಟ್ಯಾಬ್ಲೆಟ್​ನಲ್ಲಿ ವಾಟ್ಸ್​ಆ್ಯಪ್ ಬಳಸುವವರಿಗೂ ನೂತನ ಆಯ್ಕೆಗಳನ್ನು ನೀಡುತ್ತಿದೆ. ಹೀಗಾಗಿಯೇ ದಿನದಿಂದ ದಿನಕ್ಕೆ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸುತ್ತಿರುವ ವಾಟ್ಸ್​ಆ್ಯಪ್ (WhatsApp) ಅನ್ನು ಇಂದು ಕೇವಲ ಭಾರತದಲ್ಲೇ ಸುಮಾರು 550 ಮಿಲಿಯನ್ ಜನರು ಉಪಯೋಗಿಸುತ್ತಿದ್ದಾರೆ. ಇದೀಗ ಬಳಕೆದಾರರಿಗೆ ಬಹಳ ಉಪಯುಕ್ತವಾದ ಫೀಚರ್ ಒಂದನ್ನು ಪರಿಚಯಿಸಲು ವಾಟ್ಸ್​ಆ್ಯಪ್ ಮುಂದಾಗಿದೆ. ಹೊಸ ಆಯ್ಕೆಯ ಮೂಲಕ ವಾಟ್ಸ್​ಆ್ಯಪ್ ನಿಮಗೆ ವಿಶೇಷವಾದ ಮೆಸೇಜ್​ಗಳನ್ನು ಕಳುಹಿಸಲಿದೆ. ಈ ಅಪ್ಡೇಟ್ ಕುರಿತ ಮಾಹಿತಿ ಇಲ್ಲಿದೆ ನೋಡಿ.

ವಾಟ್ಸ್​ಆ್ಯಪ್ ತನ್ನ ಬಳಕೆದಾರರೊಂದಿಗೆ ಅಧಿಕೃತ ಚಾಟ್ ಅನ್ನು ಪ್ರಾರಂಭಿಸಲಿದೆ. ಅಂದರೆ ನಿಮ್ಮ ಖಾತೆಗೆ ವಾಟ್ಸ್​ಆ್ಯಪ್​ನಿಂದ ಮೆಸೇಜ್ ಬರಲಿದ್ದು, ಇದರಲ್ಲಿ ಅನೇಕ ಮಾಹಿತಿಗಳನ್ನು ನೀಡಲಾಗುತ್ತದೆ. ಉದಾಹರಣೆಗೆ ಕಂಪನಿ ಮುಂದಿನ ದಿನಗಳಲ್ಲಿ ಪರಿಚಯಿಸಲಿರುವ ಹೊಸ ಅಪ್ಡೇಟ್ ಬಗ್ಗೆ ಅಥವಾ ನೂತನ ಫೀಚರ್ ಕುರಿತು ಮೆಸೇಜ್ ಕಳುಹಿಸಿ ಮಾಹಿತಿ ನೀಡಲಿದೆ. ಇದು ವಾಟ್ಸ್​ಆ್ಯಪ್​ನ ಅಧಿಕೃತ ಚಾಟ್ ಆಗಿದ್ದು ವೆರಿಫೈ ಮಾರ್ಕ್ ಕೂಡ ಇರಲಿದೆ. ಬಳಕೆದಾರರಿಗೆ ವಾಟ್ಸ್​ಆ್ಯಪ್ ಅನ್ನು ಹೇಗೆ ಉಪಯೋಗಿಸ ಬೇಕು ಎಂಬುವುದರಿಂದ ಹಿಡಿದು ಕೆಲ ಟಿಪ್ಸ್​ಗಳನ್ನು ಕೂಡ ನೀಡಲಿದೆಯಂತೆ.

Samsung Galaxy F14 5G: ಸ್ಮಾರ್ಟ್​ಫೋನ್ ಮಾರುಕಟ್ಟೆ ಶಾಕ್: ಕೇವಲ 12,990 ರೂ. ಗೆ ಹೊಸ 5G ಫೋನ್ ರಿಲೀಸ್ ಮಾಡಿದ ಸ್ಯಾಮ್​ಸಂಗ್

ಇದನ್ನೂ ಓದಿ
Flipkart Electronics sale: ಫ್ಲಿಪ್​ಕಾರ್ಟ್​ನಲ್ಲಿ ಎಲೆಕ್ಟ್ರಾನಿಕ್ಸ್ ಸೇಲ್ ಆರಂಭ: ಐಫೋನ್ ಸೇರಿದಂತೆ ಸ್ಮಾರ್ಟ್​ಫೋನ್​ಗಳಿಗೆ ಬಂಪರ್ ಡಿಸ್ಕೌಂಟ್
Tech Tips: ನಿಮ್ಮ ಆಧಾರ್ ಕಾರ್ಡ್ ಮೂಲಕ ಯಾರಾದರು ಸಿಮ್ ಖರೀದಿಸಿದ್ದಾರಾ?: ಹೇಗೆ ತಿಳಿಯುವುದು?
Nothing Ear 2: ಸ್ಟೈಲಿಶ್ ಆಗಿ ಪ್ರೀಮಿಯಂ ಸೌಂಡ್ ಅನುಭವ ಪಡೆಯಲು ನಥಿಂಗ್
Samsung Galaxy M54 5G: ಗ್ಯಾಜೆಟ್ ಲೋಕದಲ್ಲಿ 5G ಯುಗ ಸ್ಯಾಮ್​ಸಂಗ್ ಹೊಸ ಸ್ಮಾರ್ಟ್​ಫೋನ್

ಸದ್ಯಕ್ಕೆ ಈ ಆಯ್ಕೆ ಪರೀಕ್ಷಾ ಹಂತದಲ್ಲಿದ್ದು ಕೆಲವೇ ದಿನಗಳಲ್ಲಿ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಲಭ್ಯವಾಗಲಿದೆ. ಇದರ ಮೂಲಕ ಬಳಕೆದಾರರು ವಾಟ್ಸ್​ಆ್ಯಪ್​ನಲ್ಲಿ ಏನು ಹೊಸದು ಬಂದಿದೆ ಎಂದು ಗೂಗಲ್​ನಲ್ಲಿ ಹುಡುಕುವ ತೊಂದರೆ ಇರುವುದಿಲ್ಲ. ಬದಲಾಗಿ ಎಲ್ಲ ಮಾಹಿತಿಯನ್ನು ವಾಟ್ಸ್​ಆ್ಯಪ್ ತನ್ನ ವಾಟ್ಸ್​ಆ್ಯಪ್​ನಲ್ಲೇ ನೀಡುತ್ತಿದೆ. ನಿಮಗೆ ಈ ಮಾಹಿತಿ ಬೇಡ ಎಂದಾದರೆ ಇದನ್ನು ಮ್ಯೂಟ್ ಅಥವಾ ಖಾತೆಯನ್ನು ಬ್ಲಾಕ್ ಮಾಡುವ ಆಯ್ಕೆ ಕೂಡ ನೀಡಲಿದೆಯಂತೆ.

ವಿಂಡೀಸ್ ಬಳಕೆದಾರರಿಗೆ ಹೊಸ ಆಯ್ಕೆ:

ವಾಟ್ಸ್​ಆ್ಯಪ್ ವೆಬ್ ಉಪಯೋಗಿಸುತ್ತಿರುವ ವಿಂಡೀಸ್ ಬಳಕೆದಾರರಿಗೆ ಹೊಸ ಆಯ್ಕೆಯೊಂದನ್ನು ನೀಡಿದೆ. ವಿಂಡೋಸ್​ ಬಳಕೆದಾರರಿಗೆ ಹೊಸ ವಾಟ್ಸ್​ಆ್ಯಪ್ ಅನ್ನು ಪರಿಚಯಿಸಿದ್ದು ಇದು ಅತ್ಯಂತ ವೇಗವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಐಒಎಸ್, ಆಂಡ್ರಾಯ್ಡ್ ಮಾದದರಿಯಲ್ಲಿ ಕೆಲಸ ಮಾಡುತ್ತದಂತೆ. ಇದರ ಜೊತೆಗೆ ಗ್ರೂಪ್ ವಿಡಿಯೋ ಕರೆ ಮತ್ತು ಆಡಿಯೋ ಕರೆ ಆಯ್ಕೆಯನ್ನು ನೀಡಲಾಗಿದೆ. ಎಂಟು ಜನರೊಂದಿಗೆ ಒಮ್ಮೆಲೆ ವಿಡಿಯೋ ಕಾಲ್​ನಲ್ಲಿ ಮಾತನಾಡುವ ಅವಕಾಶ ಕಲ್ಪಿಸಲಾಗಿದೆ. ಅಂತೆಯೆ 32 ಜನರು ಆಡಿಯೋ ಕಾಲ್​ನಲ್ಲಿ ಕನೆಕ್ಟ್ ಆಗಬಹುದಂತೆ. ಸದ್ಯಕ್ಕೆ ಈ ಆಯ್ಕೆಯನ್ನು ವಿಂಡೀಸ್ ಬಳಕೆದಾರರಿಗೆ ಮಾತ್ರ ನೀಡಲಾಗಿದ್ದು, ಮ್ಯಾಕ್ ಡೆಸ್ಕ್ ಟಾಪ್​ನವರಿಗಾಗಿ ಪರೀಕ್ಷಾ ಹಂತದಲ್ಲಿದೆ.

ಐಒಎಸ್​ನಲ್ಲಿ ಹೊಸ ಫೀಚರ್:

ವಾಟ್ಸ್​ಆ್ಯಪ್ ತನ್ನ ಐಫೋನ್ ಬಳಕೆದಾರರಿಗೆ ವಾಯ್ಸ್ ಸ್ಟೇಟಸ್ ಫೀಚರ್ ಅನ್ನು ವಾಟ್ಸ್​ಆ್ಯಪ್ ಪರಿಚಯಿಸಿದ್ದು, ಇದರ ಮೂಲಕ​ ಸ್ಟೇಟಸ್​ನಲ್ಲಿ ವಾಯ್ಸ್ ಮೆಸೇಜ್ (Voice Message) ಅನ್ನು ಹಂಚಿಕೊಳ್ಳಬಹುದು. ವಾಯ್ಸ್ ಸ್ಟೇಟಸ್ ಫೀಚರ್ ಆಂಡ್ರಾಯ್ಡ್ ಬಳಕೆದಾರರಿಗೆ ಕಳೆದ ತಿಂಗಳು ಫೆಬ್ರವರಿಯಲ್ಲೇ ನೀಡಲಾಗಿತ್ತು. ಇದು ಅತ್ಯಂತ ಯಶಸ್ವಿಯಾದ ಹಿನ್ನೆಲೆಯಲ್ಲಿ ಐಫೋನ್‌ ಬಳಕೆದಾರರಿಗೆ ಸಹ ಈ ಸೌಲಭ್ಯವನ್ನು ಕಲ್ಪಿಸಿದೆ. ಈವರೆಗೆ ಸ್ಟೇಟಸ್​ನಲ್ಲಿ ವಿಡಿಯೋ, ಫೋಟೋ, ಲಿಂಕ್​ ಮತ್ತು ಬರಹಗಳನ್ನು ಮಾತ್ರ ಹಂಚಿಕೊಳ್ಳಬಹುದಿತ್ತು. ಇದೀಗ ವಾಯ್ಸ್ ಸ್ಟೇಟಸ್ ಎಂಬ ಹೊಸ ಫೀಚರ್ ಮೂಲಕ ಬಳಕೆದಾರರು ಸ್ಟೇಟಸ್​ನಲ್ಲಿ ವಾಯ್ಸ್ ನೋಟ್ ಅಥವಾ ವಾಯ್ಸ್ ಕ್ಲಿಪ್​ಗಳನ್ನು ಶೇರ್ ಮಾಡಬಹುದಾಗಿದೆ. ವಾಯ್ಸ್ ಸ್ಟೇಟಸ್ ಬಳಕೆದಾರರಿಗೆ 30 ಸೆಕೆಂಡ್​ಗಳ ಕಾಲ ಇರಲಿದೆ..

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ