WhatsApp New Feature: ವಾಟ್ಸ್​ಆ್ಯಪ್ ಸ್ಟೇಟಸ್​ನಲ್ಲಿ ಮಹತ್ವದ ಬದಲಾವಣೆ: ಬಂದಿದೆ ಹೊಸ ಫೀಚರ್

|

Updated on: Mar 17, 2023 | 2:07 PM

ಭಾರತದಲ್ಲೇ ಸುಮಾರು 550 ಮಿಲಿಯನ್ ಬಳಕೆದಾರರನ್ನು ಹೊಂದಿರುವ ವಾಟ್ಸ್​ಆ್ಯಪ್ (WhatsApp) ಇದೀಗ ತನ್ನ ಐಒಎಸ್ ಬಳಕೆದಾರರಿಗೆ ಉಪಯುಕ್ತವಾದ ಆಯ್ಕೆಯನ್ನು ನೀಡಿದೆ.

WhatsApp New Feature: ವಾಟ್ಸ್​ಆ್ಯಪ್ ಸ್ಟೇಟಸ್​ನಲ್ಲಿ ಮಹತ್ವದ ಬದಲಾವಣೆ: ಬಂದಿದೆ ಹೊಸ ಫೀಚರ್
WhatsApp Voice Status
Follow us on

ಮೆಟಾ (Meta) ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್​ಆ್ಯಪ್ ಕಳೆದ ವರ್ಷ ಪರಿಚಯಿಸಿದ ಫೀಚರ್​ಗಳಿಗೆ ಲೆಕ್ಕವಿಲ್ಲ. 2022 ರಲ್ಲಿ ಸಾಕಷ್ಟು ಬೆಳವಣಿಗೆ ಕಂಡ ವಾಟ್ಸ್​ಆ್ಯಪ್ ಈ ವರ್ಷ ಕೂಡ ವಿಶೇಷ ಅಪ್ಡೆಟ್​​​ಗಳನ್ನು ಪರಿಚಯಿಸುವಲ್ಲಿ ಕೆಸಲ ಮಾಡುತ್ತಿದೆ. ಭಾರತದಲ್ಲೇ ಸುಮಾರು 550 ಮಿಲಿಯನ್ ಬಳಕೆದಾರರನ್ನು ಹೊಂದಿರುವ ವಾಟ್ಸ್​ಆ್ಯಪ್ (WhatsApp) ಇದೀಗ ತನ್ನ ಐಒಎಸ್ ಬಳಕೆದಾರರಿಗೆ ಉಪಯುಕ್ತವಾದ ಆಯ್ಕೆಯನ್ನು ನೀಡಿದೆ. ಐಫೋನ್ ಬಳಕೆದಾರರಿಗೆ ವಾಯ್ಸ್ ಸ್ಟೇಟಸ್ ಫೀಚರ್ ಅನ್ನು ವಾಟ್ಸ್​ಆ್ಯಪ್ ಪರಿಚಯಿಸಿದ್ದು, ಇದರ ಮೂಲಕ​ ಸ್ಟೇಟಸ್​ನಲ್ಲಿ ವಾಯ್ಸ್ ಮೆಸೇಜ್ (Voice Message) ಅನ್ನು ಹಂಚಿಕೊಳ್ಳಬಹುದು.

ವಾಯ್ಸ್ ಸ್ಟೇಟಸ್ ಫೀಚರ್ ಆಂಡ್ರಾಯ್ಡ್ ಬಳಕೆದಾರರಿಗೆ ಕಳೆದ ತಿಂಗಳು ಫೆಬ್ರವರಿಯಲ್ಲೇ ನೀಡಲಾಗಿತ್ತು. ಇದು ಅತ್ಯಂತ ಯಶಸ್ವಿಯಾದ ಹಿನ್ನೆಲೆಯಲ್ಲಿ ಐಫೋನ್‌ ಬಳಕೆದಾರರಿಗೆ ಸಹ ಈ ಸೌಲಭ್ಯವನ್ನು ಕಲ್ಪಿಸಿದೆ. ಈವರೆಗೆ ಸ್ಟೇಟಸ್​ನಲ್ಲಿ ವಿಡಿಯೋ, ಫೋಟೋ, ಲಿಂಕ್​ ಮತ್ತು ಬರಹಗಳನ್ನು ಮಾತ್ರ ಹಂಚಿಕೊಳ್ಳಬಹುದಿತ್ತು. ಇದೀಗ ವಾಯ್ಸ್ ಸ್ಟೇಟಸ್ ಎಂಬ ಹೊಸ ಫೀಚರ್ ಮೂಲಕ ಬಳಕೆದಾರರು ಸ್ಟೇಟಸ್​ನಲ್ಲಿ ವಾಯ್ಸ್ ನೋಟ್ ಅಥವಾ ವಾಯ್ಸ್ ಕ್ಲಿಪ್​ಗಳನ್ನು ಶೇರ್ ಮಾಡಬಹುದಾಗಿದೆ.

ವಾಯ್ಸ್ ಸ್ಟೇಟಸ್ ಬಳಕೆದಾರರಿಗೆ 30 ಸೆಕೆಂಡ್​ಗಳ ಕಾಲ ಇರಲಿದೆ. ಇದಕ್ಕಾಗಿ ಬರಹಗಳನ್ನು ಹಂಚಿಕೊಳ್ಳಬಹುದಾದ ಜಾಗದಲ್ಲಿ ಮೈಕ್ರೊ ಫೋನ್ ಆಯ್ಕೆಯನ್ನು ಕೂಡ ನೀಡಲಾಗಿದೆ. ಇಲ್ಲಿ ಮೈಕ್ರೊ ಫೋನ್ ಮೇಲೆ ಕ್ಲಿಕ್ ಮಾಡುವ ಮೂಲಕ ವಾಯ್ಸ್ ಸ್ಟೇಟಸ್ ಶೇರ್ ಮಾಡಬಹುದು. ಇದು ಎಂಡ್-ಟು-ಎಂಡ್ ಎನ್​ಕ್ರಿಪ್ಟೆಡ್ ಆಗಿದೆ.

ಇದನ್ನೂ ಓದಿ
Galaxy A54 5G: ಒಂದೇ ದಿನ ಎರಡು ಬೊಂಬಾಟ್ ಸ್ಮಾರ್ಟ್​ಫೋನ್ಸ್ ಬಿಡುಗಡೆ ಮಾಡಿದ ಸ್ಯಾಮ್​ಸಂಗ್: ಯಾವುವು?, ಏನು ವಿಶೇಷತೆ?
Airtel 5G: 265ಕ್ಕೂ ಅಧಿಕ ನಗರಗಳಲ್ಲಿ ಏರ್ಟೆಲ್ 5G ಲಾಂಚ್: ಪ್ಲಾನ್, ಬೆಲೆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ
iPhone 11: ವಿಶೇಷ ಆಫರ್​ನಲ್ಲಿ ₹17,999ಕ್ಕೆ ಆ್ಯಪಲ್ iPhone 11 64 GB ಲಭ್ಯ
Jio 5G Recharge Offer: ರಿಲಯನ್ಸ್ ಜಿಯೋ ₹2,999 ರೀಚಾರ್ಜ್, 1 ವರ್ಷ ವ್ಯಾಲಿಡಿಟಿ, ಪ್ರತಿದಿನ 2.5GB 5G

Poco X5 5G: 22 ನಿಮಿಷಗಳಲ್ಲಿ ಚಾರ್ಜ್ ಫುಲ್: ಭಾರತದಲ್ಲಿ ಅತಿ ಕಡಿಮೆ ಬೆಲೆಗೆ ಪೋಕೋ X5 5G ಸ್ಮಾರ್ಟ್​ಫೋನ್ ಬಿಡುಗಡೆ

ವಾಟ್ಸ್​ಆ್ಯಪ್​ನಲ್ಲಿ ಇನ್ನಷ್ಟು ಅನೇಕ ಅಪ್ಡೇಟ್​ಗಳು ಬರಲಿಕ್ಕಿದೆ. ಇದರಲ್ಲಿ ಸಾಕಷ್ಟು ಕುತೂಹಲ ಕೆರಳಿಸಿರುವ ಎಕ್ಸ್​ಪೇರಿಂಗ್ ಗ್ರೂಪ್ ಫೀಚರ್ ಕೂಡ ಒಂದು. ಇದರ ಮೂಲಕ ಆ್ಯಕ್ಟಿವ್ ಇಲ್ಲದ ಗ್ರೂಪ್​ಗೆ ಮುಕ್ತಾಯದ ದಿನಾಂಕ ಎಂಬುದನ್ನು ನಿಗದಿ ಮಾಡಿರಲಾಗುತ್ತದೆ. ಆ ಸಮಯ ಬಂದ ನಂತರ ವಾಟ್ಸ್​ಆ್ಯಪ್ ನಿಮಗೆ ಆ ಗ್ರೂಪ್​ನಿಂದ ಹಿಂದೆ ಸರಿಯಲು ಮತ್ತು ಅಡ್ಮಿನ್​ಗೆ ಗ್ರೂಪ್ ಡಿಲೀಟ್ ಮಾಡಲು ಅಲರ್ಟ್ ಮಾಡುತ್ತಾ ಇರುತ್ತದೆ. ಈ ಆಯ್ಕೆ ವಾಟ್ಸ್​ಆ್ಯಪ್ ಗ್ರೂಪ್ ಇನ್​ಫೋ ದಲ್ಲಿ ಇರುತ್ತದೆ. ಅಂತೆಯೆ ಈ ಮುಕ್ತಾಯದ ದಿನಾಂಕವನ್ನು ಬದಲಾವಣೆ ಮಾಡುವ ಅವಕಾಶ ಕೂಡ ಇರುತ್ತದಂತೆ. ಇದರ ಮೂಲಕ ಆ್ಯಕ್ಟಿವ್ ಇಲ್ಲದ ಗ್ರೂಪ್​ನಿಂದ ನೀವು ಹಿಂದೆ ಸರಿದು ಮೆಮೋರಿಯನ್ನು ಉಳಿತಾಯ ಮಾಡಬಹುದು.

ವಾಟ್ಸ್​ಆ್ಯಪ್ ಗ್ರೂಪ್​ನಲ್ಲಿ ಬದಲಾವಣೆ:

ವಾಟ್ಸ್​ಆ್ಯಪ್ ಮತ್ತೊಂದು ಹೊಸ ಫೀಚರ್ ಬಗ್ಗೆ ಘೋಷಣೆ ಮಾಡಿದೆ. ಅದುವೇ ಗ್ರೂಪ್​ನಲ್ಲಿ ಫೋನ್ ನಂಬರ್ ಬದಲಿಗೆ ಹೆಸರು ಕಾಣಿಸುವಂತಹ ಆಯ್ಕೆ. ಅಂದರೆ ಬಳಕೆದಾರರು ವಾಟ್ಸ್​ಆ್ಯಪ್​ ಗ್ರೂಪ್‌ನಲ್ಲಿ ಯಾವುದೇ ಅಪರಿಚಿತ ಸಂಪರ್ಕದಿಂದ ಸಂದೇಶವನ್ನು ಸ್ವೀಕರಿಸಿದರೆ ಚಾಟ್ ಪಟ್ಟಿಯೊಳಗೆ ಬಳಕೆದಾರರ ಫೋನ್‌ ಸಂಖ್ಯೆ ಬದಲಿಗೆ ಹೆಸರುಗಳನ್ನು ತೋರಿಸುತ್ತದೆ. ಈ ಮೂಲಕ ನಂಬರ್ ಸೇವ್ ಮಾಡದೆ ಮೆಸೇಜ್ ಕಳುಹಿಸಿದವರು ಯಾರೆಂದು ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ