ಮೆಟಾ (Meta) ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್ಅ್ಯಪ್ (WhatsApp) ಹೊಸ ವರ್ಷ ಆಗಮಿಸುತ್ತಿದ್ದಂತೆ ಹೊಸ ಹೊಸ ಫೀಚರ್ಗಳನ್ನು ನೀಡುತ್ತಿದೆ. ಯೂಸರ್ ಫ್ರೆಂಡ್ಲಿ ಅಪ್ಡೇಟ್ ಪರಿಚಯಿಸಿ ಬಳಕೆದಾರರ ಮನಗೆದ್ದಿರುವ ವಾಟ್ಸ್ಆ್ಯಪ್ ಅನ್ನು ಇಂದು ಬಳಸುತ್ತಿರುವವರ ಸಂಖ್ಯೆ 2 ಬಿಲಿಯನ್ ದಾಟಿದೆ. ಭಾರತದಲ್ಲೇ ಸುಮಾರು 550 ಮಿಲಿಯನ್ ಜನರು ಉಪಯೋಗಿಸುತ್ತಿದ್ದಾರೆ. ವಾಟ್ಸ್ಆ್ಯಪ್ನಲ್ಲಿ ಈಗಾಗಲೇ ಸಾಲು ಸಾಲು ಅಪ್ಡೇಟ್ಗಳು ಪರೀಕ್ಷಾ ಹಂತದಲ್ಲಿದ್ದು ಒಂದರ ಹಿಂದೆ ಒಂದರಂತೆ ಬರಲು ತಯಾರಾಗಿ ನಿಂತಿದೆ. ಇದರ ನಡುವೆ ಬಳಕೆದಾರರಿಗೆ ಯಾವುದೇ ಸೂಚನೆ ನೀಡದೆ ಅಚ್ಚರಿಯ ಆಯ್ಕೆಯೊಂದನ್ನು ವಾಟ್ಸ್ಆ್ಯಪ್ ಆ್ಯಡ್ ಮಾಡಲು ಮುಂದಾಗಿದೆ. ಸದ್ದಿಲ್ಲದೆ ವಾಟ್ಸ್ಆ್ಯಪ್ 21 ಹೊಸ ಎಮೋಜಿಗಳನ್ನು (Emoji) ಪರಿಚಯಿಸುವ ಬಗ್ಗೆ ಕೆಲಸ ಮಾಡುತ್ತಿದೆ.
ಬಳಕೆದಾರರಿಗೆ ಮುಂದಿನ ಅಪ್ಡೇಟ್ನಲ್ಲಿ ಹೊಸ 21 ಎಮೋಜಿಗಳು ಕಾಣಸಿಗುವ ಸಂಭಬವಿದೆ. ಇದು ಮೆಸೇಜ್ ರಿಯಾಕ್ಷನ್ನಲ್ಲೂ ಲಭ್ಯವಿದೆ. ಇದರ ಜೊತೆಗೆ 8 ಎಮೋಜಿಗಳನ್ನು ಹೊಸ ರೂಪದಲ್ಲಿ ಬಿಡುಗಡೆ ಮಾಡಿದೆ. ಸದ್ಯಕ್ಕೆ ಈ ಆಯ್ಕೆಗಳು ವಾಟ್ಸ್ಆ್ಯಪ್ ಬೇಟಾ ವರ್ಷನ್ನಲ್ಲಿ ಕಾಣಿಸಿಕೊಂಡಿದೆ. ಇದರ ಜೊತೆಗೆ ಕಂಪ್ಯಾನಿಯನ್ ಮೋಡ್ ಆಯ್ಕೆ ಆಯ್ದ ಕೆಲ ಬಳಕೆದಾರರಿಗೆ ಲಭ್ಯವಾಗುತ್ತಿದೆ. ವಾಟ್ಸ್ಆ್ಯಪ್ನ ಈ ಹೊಸ ಕಂಪ್ಯಾನಿಯನ್ ಮೋಡ್ ಎಂಬ ಫೀಚರ್ಸ್ ಮೂಲಕ ಬಳಕೆದಾರರು ಏಕಕಾಲದಲ್ಲಿ ಎರಡು ಡಿವೈಸ್‌ಗಳಲ್ಲಿ ವಾಟ್ಸ್ಆ್ಯಪ್ ಅನ್ನು ಬಳಸಬಹುದು. ಅಂದರೆ ನಿಮ್ಮ ವಾಟ್ಸ್ಆ್ಯಪ್ ಆಕೌಂಟ್ ಅನ್ನು ಎರಡು ಮೊಬೈಲ್‌ಗಳಲ್ಲಿ ಬಳಸಬಹುದು.
JIO: ಜಿಯೋ ಧಮಾಕ ಪ್ಲಾನ್: ಈ ಯೋಜನೆ ಹಾಕಿಸಿಕೊಂಡರೆ ಒಂದು ವರ್ಷದ ವರೆಗೆ ಟೆನ್ಶನ್ ಬೇಡ
ವರದಿಯ ಪ್ರಕಾರ, ಬೇಟಾ ಬಳಕೆದಾರರು ಟ್ಯಾಬ್ಲೆಟ್ ಮೂಲಕ ಒಂದೇ ನಂಬರ್ನ ವಾಟ್ಸ್ಆ್ಯಪ್ ಅನ್ನು ಎರಡು ಡಿವೈಸ್ನಲ್ಲಿ ಉಪಯೋಗಿಸಲು ಆಗುತ್ತಿದೆಯಂತೆ. ಇದು ಕೆಲ ಬಳಕೆದಾರರಿಗೆ ಮಾತ್ರ ಲಭ್ಯವಾಗುತ್ತಿದ್ದು ನೋಟಿಫಿಕೇಶನ್ ಮೂಲಕ ಮಾಹಿತಿ ನೀಡುತ್ತದೆ. ಸದ್ಯದಲ್ಲೇ ಈ ಆಯ್ಕೆ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೂ ಸಿಗಲಿದೆ ಎಂದು ಹೇಳಲಾಗಿದೆ.
ಇದು ಬಾರ್‌ಕೋಡ್ ಸ್ಕ್ಯಾನ್ ಮೂಲಕ ಕಾರ್ಯನಿರ್ವಹಿಸುತ್ತದೆ ಎಂದು ಹೇಳಲಾಗಿದೆ. ಒಂದೇ ಸಮಯದಲ್ಲಿ ನಾಲ್ಕು ಡಿವೈಸ್‌ಗಳಲ್ಲಿ ಅಕೌಂಟ್ ಲಿಂಕ್ ಮಾಡಿದರೆ ಲಿಂಕ್ ಮಾಡಲಾದ ಎಲ್ಲಾ ಫೋನ್‌ಗಳಲ್ಲಿಯೂ ಚಾಟ್‌ಗಳು ಮತ್ತು ಡೇಟಾವನ್ನು ಬಳಕೆದಾರ ಸ್ವೀಕರಿಸುತ್ತಾನೆ. ಆಯ್ದ ಟ್ಯಾಬ್ಲೆಟ್ ಬಳಕೆದಾರರು ತಮ್ಮ ವಾಟ್ಸ್ಆ್ಯಪ್ ಅನ್ನು ಅಪ್ಡೇಟ್ ಮಾಡುವ ಮೂಲಕ ಈ ಆಯ್ಕೆಯನ್ನು ಆನಂದಿಸಬಹುದು. ಇದು ಎಂಡ್ ಟು ಎಂಡ್ ಎನ್‌ಕ್ರಿಪ್ಯನ್ ಮೂಲಕ ಕಾರ್ಯನಿರ್ವಹಿಸಲಿದೆ.
ನಿಮಗೆ ನೀವೇ ಮೆಸೇಜ್ ಮಾಡಬಹುದು:
ವಾಟ್ಸ್ಆ್ಯಪ್ ನಿಮ್ಮ ನಂಬರ್ಗೆ ನೀವೇ ಮೆಸೇಜ್ ಮಾಡಬಹುದಾದ ಆಯ್ಕೆಯನ್ನು ಆಯ್ದ ಬಳಕೆದಾರರಿಗೆ ಕಲ್ಪಿಸಲು ಮುಂದಾಗಿದೆ. ವಾಟ್ಸ್ಆ್ಯಪ್ನ ಈ ಹೊಸ ಮೆಸೇಜ್ ವಿಥ್ ಯುವರ್ಸೆಲ್ಫ್ ಎಂಬ ಫೀಚರ್ ಕಾಂಟೆಕ್ಟ್ ಲಿಸ್ಟ್ನಲ್ಲಿ ಕಾಣಲಿದೆ. ವಾಟ್ಸ್ಆ್ಯಪ್ ತೆರೆದು ನ್ಯೂ ಚಾಟ್ನಲ್ಲಿ ಕಾಂಟೆಕ್ಟ್ ಲಿಸ್ಟ್ ಓಪನ್ ಮಾಡಿದರೆ ಅಲ್ಲಿ ನಿಮಗೆ ನಿಮ್ಮ ನಂಬರ್ ಕಾಣಸಿಗುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದರೆ ಚಾಟ್ ಬಾಕ್ಸ್ ಓಪನ್ ಆಗಲಿದ್ದು ನಿಮಗೆ ನೀವೇ ಮೆಸೇಜ್ ಕಳುಹಿಸಬಹುದು. ಈ ಚಾಟ್ ಬಾಕ್ಸ್ನಲ್ಲಿ ನಿಮಗೆ ಎಲ್ಲ ರೀತಿಯ ಆಯ್ಕೆ ಕಾಣಸಿಗುತ್ತದೆ. ಫೋಟೋ, ವಿಡಿಯೋ, ಡಾಕ್ಯುಮೆಂಟ್, ಆಡಿಯೋ ಎಲ್ಲ ರೀತಿಯ ಫೈಲ್ಗಳನ್ನು ಕಳುಹಿಸಬಹುದು.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ