ಈ ವರ್ಷ ವಾಟ್ಸ್‌ಆ್ಯಪ್ (WhatsApp) ತನ್ನ ಬಳಕೆದಾರರಿಗೆ ಒಂದರ ಹಿಂದೆ ಒಂದರಂತೆ ಆಕರ್ಷಕ ಫೀಚರ್ಗಳನ್ನು ಪರಿಚಯಿಸುತ್ತಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಉಪಯುಕ್ತವಾದ ಅಪ್ಡೇಟ್ಗಳನ್ನು ನೀಡುತ್ತಿದೆ. ಇತ್ತೀಚೆಗಷ್ಟೆ ಮೆಸೇಜ್ ರಿಯಾಕ್ಷನ್ (Message Reaction) ಸೇರಿದಂತೆ ಕೆಲ ಅಮೂಲ್ಯ ವಿಶೇಷತೆಗಳನ್ನು ಪರಿಚಯಿಸಿದ್ದ ವಾಟ್ಸ್ಆ್ಯಪ್ನಲ್ಲಿ ಸಾಲು ಸಾಲು ಹೊಸ ಆಯ್ಕೆಗಳು ಬರಲು ಪರೀಕ್ಷಾ ಹಂತದಲ್ಲಿದೆ. ಎರಡು ದಿನಗಳ ಹಿಂದೆಯಷ್ಟೆ ವಾಟ್ಸ್‌ಆ್ಯಪ್, ಕಳುಹಿಸಿದ ಮೆಸೇಜ್ ಅನ್ನು ಎಡಿಟ್ ಮಾಡುವ ಆಯ್ಕೆ ಗ್ರಾಹಕರಿಗೆ ಒದಗಿಸುವುದಾಗಿ ಹೇಳಿದ್ದ ಕಂಪನಿ ಇದೀಗ ಮತ್ತೊಂದು ಹೊಸ ಫೀಚರ್ ಅನ್ನು ತರುತ್ತಿರುವ ಬಗ್ಗೆ ವರದಿಯಾಗಿದೆ. ಈ ಬಾರಿ ಮೆಟಾ ಒಡೆತನದ ವಾಟ್ಸ್‌ಆ್ಯಪ್ ಪರಿಚಯಿಸುತ್ತಿರುವುದು ಡಿಲೀಟ್ ಆದ ಚಾಟ್ ಅನ್ನು ಮರಳಿಸುವುದು. ಅಂದರೆ ತಪ್ಪಾಗಿ ನೀವು ಮೆಸೇಜ್ ಒಂದನ್ನು ಡಿಲೀಟ್ (Delete) ಮಾಡಿದರೆ ಅದನ್ನು ಅನ್ಡು ಮಾಡುವ ಆಯ್ಕೆ ನಿಮಗೆ ವಾಟ್ಸ್ಆ್ಯಪ್ನಲ್ಲಿ ಸಿಗಲಿದೆ.
ಹೆಚ್ಚಿನ ಬಾರಿ ಬಳಕೆದಾರರು ಮೆಸೇಜ್ ಡಿಲೀಟ್ ಮಾಡಲು ಹೊರಟಾಗ ಡಿಲೀಟ್ ಫಾರ್ ಎವರಿವರ್ ಬದಲು ಡಿಲೀಟ್ ಫಾರ್ ಮಿ ಒತ್ತಿ ಬಿಡುತ್ತಾರೆ. ವಾಟ್ಸ್ಆ್ಯಪ್ನ ಈ ಹೊಸ ಅನ್ಡು ಬಟನ್ ಇದಕ್ಕೆ ಸಹಕಾರಿ ಆಗಲಿದೆ. ಸದ್ಯದಲ್ಲೇ ಈ ಆಯ್ಕೆ ಎಲ್ಲ ಬಳಕೆದಾರರಿಗೆ ಸಿಗಲಿದೆಯಂತೆ. ವಾಟ್ಸ್‌ಆ್ಯಪ್ ಬೇಟಾ ವರ್ಷನ್ನಲ್ಲಿರುವ ಈ ಆಯ್ಕೆ ಬಗ್ಗೆ ಸ್ಕ್ರೀನ್ ಶಾಟ್ ಒಂದಿದ್ದು, ಇದರ ಪ್ರಕಾರ ನೀವು ಡಿಲೀಟ್ ಫಾರ್ ಮಿ ಆಯ್ಕೆಯನ್ನು ಒತ್ತಿದ ತಕ್ಷಣ ಮೇಲಿನ ಭಾಗದಲ್ಲಿ ಈ ಮೆಸೇಜ್ ಅನ್ನು ಅನ್ಡು ಮಾಡಬೇಕೆ ಎಂಬ ಪಾಪ್-ಅಪ್ ಆಯ್ಕೆ ಕಾಣಲಿದೆ. ಈಗಾಗಲೇ ಟೆಲಿಗ್ರಾಮ್ನಲ್ಲಿ ಈ ಅಪ್ಡೇಟ್ ನೀಡಲಾಗಿದೆ.
ಎಡಿಟ್ ಆಯ್ಕೆ:
ಮೆಸೇಜಿಂಗ್ ಅಪ್ಲಿಕೇಶನ್ ಆ್ಯಪ್‌ನ ಬೀಟಾ ಆವೃತ್ತಿಯಲ್ಲಿ ಎಡಿಟ್ ಬಟನನ್ನು ಪರೀಕ್ಷಿಸುತ್ತಿದೆ. ಪ್ರಸ್ತುತ, ವಾಟ್ಸ್ಆ್ಯಪ್ನಲ್ಲಿ ಮೀಸಲಾದ ಎಡಿಟ್ ಆಯ್ಕೆ ಇಲ್ಲ. ಒಮ್ಮೆ ಕಳುಹಿಸಿದ ಮೆಸೇಜ ಅನ್ನು ಡಿಲೀಟ್ ಮಾತ್ರ ಮಾಡಬಹುದು, ಆದರೆ ಎಡಿಟ್ ಮಾಡಲು ಸಾಧ್ಯವಿಲ್ಲ. ಸದ್ಯ ಮುಂಬರುವ ವೈಶಿಷ್ಟ್ಯವನ್ನು ಬಳಸಿ ಮೆಸೇಜ್ ಕಳುಹಿಸಿದ ನಂತರ ಅವುಗಳನ್ನು ಎಡಿಟ್ ಮಾಡಲು ಸಾಧ್ಯವಾಗಿಸುತ್ತದೆ. ಎಲ್ಲಾ ವಾಟ್ಸ್‌ಆ್ಯಪ್ ಸಂಬಂಧಿತ ಬೆಳವಣಿಗೆಗಳನ್ನು ಟ್ರ್ಯಾಕ್ ಮಾಡುವ ವೆಬ್‌ಸೈಟ್ Wabetainfo ಈ ವೈಶಿಷ್ಟ್ಯವನ್ನು ಗುರುತಿಸಿದೆ.
Moto G82 5G: ಜೂ. 7ಕ್ಕೆ ಮಾರುಕಟ್ಟೆಗೆ ಅಪ್ಪಳಿಸಲಿದೆ ಮೋಟೋರೊಲಾದ ಹೊಸ 5G ಫೋನ್
ಟ್ವಿಟರ್ ಕೂಡ ಟ್ವೀಟ್ ಎಡಿಟ್ ಫೀಚರ್ ಬಗ್ಗೆ ಪರಿಶೀಲನೆ ನಡೆಸುತ್ತಿರುವ ಸಂದರ್ಭದಲ್ಲಿ ವಾಟ್ಸ್‌ಆ್ಯಪ್ ಹೊಸ ಆಯ್ಕೆಯನ್ನು ಬಳಕೆದಾರರಿಗೆ ಒದಗಿಸಲು ಉತ್ಸುಕವಾಗಿದೆ. ಈ ಎಡಿಟ್ ಬಟನ್ ವೈಶಿಷ್ಟ್ಯದ ಮೇಲೆ ವಾಟ್ಸ್‌ಆ್ಯಪ್ ಐದು ವರ್ಷಗಳ ಹಿಂದೆಯೇ ಗಮನಹರಿಸಲು ಆರಂಭಿಸಿದ್ದರೂ ಟ್ವಿಟರ್‍ನಲ್ಲಿ ಈ ಕುರಿತು ವರದಿ ಬಂದ ಬೆನ್ನಿಗೆ ಅದನ್ನು ಕೈಬಿಟ್ಟಿತ್ತು. ಈಗ ಐದು ವರ್ಷಗಳ ನಂತರ ಮತ್ತೆ ಎಡಿಟ್ ಬಟನ್ ಕುರಿತು ವಾಟ್ಸ್‌ಆ್ಯಪ್ ಪರೀಕ್ಷಿಸುತ್ತಿದೆ.
ವಾಟ್ಸ್‌ಆ್ಯಪ್ ಅಭಿವೃದ್ಧಿಪಡಿಸುತ್ತಿರುವ ಫೀಚರ್‌ನ ಸ್ಕ್ರೀನ್‌ಶಾಟ್ ಅನ್ನು ವೆಬಿಟೈನ್‌ಫೋ ಹಂಚಿಕೊಂಡಿದೆ. ಬಳಕೆದಾರರು ಕಳುಹಿಸಿದ ಸಂದೇಶವನ್ನು ಲಾಂಗ್ ಪ್ರೆಸ್ ಮೂಲಕ ಆಯ್ಕೆ ಮಾಡಿದಾಗ, ಸಂದೇಶವನ್ನು ನಕಲಿಸು(ಕಾಪಿ), ಫಾರ್ವರ್ಡ್ ಆಯ್ಕೆಯೊಂದಿಗೆ ಎಡಿಟ್ ಆಯ್ಕೆಯೂ ಗೋಚರಿಸಲಿದೆ. ಎಡಿಟ್ ಬಟನ್ ಆಯ್ಕೆ ಮಾಡಿದ ಬಳಿಕ ಕಳುಹಿಸಲಾದ ಸಂದೇಶದಲ್ಲಿ ಅಕ್ಷರ ದೋಷವಿದ್ದರೆ, ಅದನ್ನು ಸರಿಪಡಿಸಬಹುದು.
ತಂತ್ರಜ್ಞಾನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:54 pm, Sun, 5 June 22