WhatsApp: ವಾಟ್ಸ್​ಆ್ಯಪ್​ನಲ್ಲಿ ಮೆಸೇಜ್ ಕಳುಹಿಸಿದ ಬಳಿಕ ಎಡಿಟ್ ಮಾಡಬಹುದು: ಹೇಗೆ ಗೊತ್ತೇ?

WhatsApp New Feature: ಇತ್ತೀಚೆಗಷ್ಟೆ ಮೆಸೇಜ್ ರಿಯಾಕ್ಷನ್ ಆಯ್ಕೆ ಪರಿಚಯಿಸಿದ್ದ ವಾಟ್ಸ್​ಆ್ಯಪ್ ಇದೀಗ ವಾಟ್ಸ್‌ಆ್ಯಪ್ ಕಳುಹಿಸಿದ ಮೆಸೇಜ್ ಅನ್ನು ಎಡಿಟ್ ಮಾಡುವ ಫೀಚರ್ ಅನ್ನು ಗ್ರಾಹಕರಿಗೆ ಒದಗಿಸಲು ಮುಂದಾಗಿದೆ.

WhatsApp: ವಾಟ್ಸ್​ಆ್ಯಪ್​ನಲ್ಲಿ ಮೆಸೇಜ್ ಕಳುಹಿಸಿದ ಬಳಿಕ ಎಡಿಟ್ ಮಾಡಬಹುದು: ಹೇಗೆ ಗೊತ್ತೇ?
Whatsapp New Feature
Follow us
| Updated By: Digi Tech Desk

Updated on:Jun 04, 2022 | 5:00 PM

ವಾಟ್ಸ್​ಆ್ಯಪ್​ನಲ್ಲಿ (WhatsApp) ಈಗಾಗಲೇ ಸಾಲು ಸಾಲು ಫೀಚರ್​ಗಳು ಪರೀಕ್ಷಾ ಹಂತದಲ್ಲಿದೆ. ಒಂದರ ಹಿಂದೆ ಮತ್ತೊಂದು ಎಂಬಂತೆ ವಾಟ್ಸ್​ಆ್ಯಪ್ ತನ್ನ ಬಳಕೆದಾರರಿಗೆ ಹೊಸ ಹೊಸ ಆಯ್ಕೆಯನ್ನು ನೀಡುತ್ತಿದೆ. ಇತ್ತೀಚೆಗಷ್ಟೆ ಮೆಸೇಜ್ ರಿಯಾಕ್ಷನ್ (Message Reaction) ಸೇರಿದಂತೆ ಕೆಲ ಅಮೂಲ್ಯ ವಿಶೇಷತೆಗಳನ್ನು ಪರಿಚಯಿಸಿದ್ದ ವಾಟ್ಸ್​ಆ್ಯಪ್ ಇದೀಗ ಅಚ್ಚರಿಯ ಆಯ್ಕೆ ತರಲು ಹೊರಟಿದೆ. ಅದುವೇ ಎಡಿಟ್ ಆಯ್ಕೆ. ಹೌದು, ಈ ಬಾರಿ ವಾಟ್ಸ್‌ಆ್ಯಪ್ ಕಳುಹಿಸಿದ ಮೆಸೇಜ್ ಅನ್ನು ಎಡಿಟ್ ಮಾಡುವ ಆಯ್ಕೆಯನ್ನು ಗ್ರಾಹಕರಿಗೆ ಒದಗಿಸಲು ಮುಂದಾಗಿದ್ದು, ನೂತನ ಆಯ್ಕೆಯನ್ನು ಪರಿಶೀಲಿಸುತ್ತಿದೆ. ಇದರ ಪ್ರಕಾರ ಬಳಕೆದಾರರು ಯಾರಿಗಾದರೂ ಸಂದೇಶ ಕಳುಹಿಸಿದಾಗ ಅಕ್ಷರಗಳು ತಪ್ಪಾಗಿದ್ದಲ್ಲಿ, ಅದನ್ನು ಎಡಿಟ್ (WhatsApp Edit) ಮಾಡಲು ಸಾಧ್ಯವಿದೆ.

ಮೆಸೇಜಿಂಗ್ ಅಪ್ಲಿಕೇಶನ್ ಆ್ಯಪ್‌ನ ಬೀಟಾ ಆವೃತ್ತಿಯಲ್ಲಿ ಎಡಿಟ್ ಬಟನನ್ನು ಪರೀಕ್ಷಿಸುತ್ತಿದೆ. ಪ್ರಸ್ತುತ, ವಾಟ್ಸ್​ಆ್ಯಪ್​​ನಲ್ಲಿ ಮೀಸಲಾದ ಎಡಿಟ್ ಆಯ್ಕೆ ಇಲ್ಲ. ಒಮ್ಮೆ ಕಳುಹಿಸಿದ ಮೆಸೇಜ ಅನ್ನು ಡಿಲೀಟ್ ಮಾತ್ರ ಮಾಡಬಹುದು, ಆದರೆ ಎಡಿಟ್‌ ಮಾಡಲು ಸಾಧ್ಯವಿಲ್ಲ. ಸದ್ಯ ಮುಂಬರುವ ವೈಶಿಷ್ಟ್ಯವನ್ನು ಬಳಸಿ ಮೆಸೇಜ್ ಕಳುಹಿಸಿದ ನಂತರ ಅವುಗಳನ್ನು ಎಡಿಟ್‌ ಮಾಡಲು ಸಾಧ್ಯವಾಗಿಸುತ್ತದೆ. ಎಲ್ಲಾ ವಾಟ್ಸ್​ಆ್ಯಪ್​​ ಸಂಬಂಧಿತ ಬೆಳವಣಿಗೆಗಳನ್ನು ಟ್ರ್ಯಾಕ್ ಮಾಡುವ ವೆಬ್‌ಸೈಟ್ Wabetainfo ಈ ವೈಶಿಷ್ಟ್ಯವನ್ನು ಗುರುತಿಸಿದೆ.

Best Smartphone: ಇಲ್ಲಿದೆ ನೋಡಿ 20,000 ರೂ. ಒಳಗೆ ಖರೀದಿಸಬಹುದಾದ ಬೆಸ್ಟ್ ಸ್ಮಾರ್ಟ್​​ಫೋನ್​ಗಳು

ಇದನ್ನೂ ಓದಿ
Image
Instagram: ಇನ್​​ಸ್ಟಾಗ್ರಾಮ್ ರೀಲ್ಸ್​ನಲ್ಲಿ ದೊಡ್ಡ ಬದಲಾವಣೆ: ಹೊಸ ಆಯ್ಕೆಯಲ್ಲಿ ಏನಿದೆ ನೋಡಿ
Image
Best Smartphone: ಇಲ್ಲಿದೆ ನೋಡಿ 15,000 ರೂ. ಒಳಗೆ ನೀವು ಖರೀದಿಸಬಹುದಾದ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳು
Image
WhatsApp: ನಿಮ್ಮ ಫ್ರೆಂಡ್ಸ್ ನಿಮ್ಮನ್ನ ಹೈಡ್ ಮಾಡಿ ಏನು ಸ್ಟೇಟಸ್ ಹಾಕಿದ್ದಾರೆ ನೋಡಬೇಕೇ?: ಇಲ್ಲಿದೆ ಟ್ರಿಕ್
Image
Vivo: ವಿವೋದ ಹೊಸ ಸ್ಮಾರ್ಟ್​​ಫೋನ್ ಫೀಚರ್ ಕಂಡು ಬೆರಗಾದ ಟೆಕ್ ಮಾರುಕಟ್ಟೆ: ಅಂಥದ್ದೇನಿದೆ ನೋಡಿ

ಟ್ವಿಟರ್ ಕೂಡ ಟ್ವೀಟ್ ಎಡಿಟ್ ಫೀಚರ್ ಬಗ್ಗೆ ಪರಿಶೀಲನೆ ನಡೆಸುತ್ತಿರುವ ಸಂದರ್ಭದಲ್ಲಿ ವಾಟ್ಸ್‌ಆ್ಯಪ್ ಹೊಸ ಆಯ್ಕೆಯನ್ನು ಬಳಕೆದಾರರಿಗೆ ಒದಗಿಸಲು ಉತ್ಸುಕವಾಗಿದೆ. ಈ ಎಡಿಟ್ ಬಟನ್ ವೈಶಿಷ್ಟ್ಯದ ಮೇಲೆ ವಾಟ್ಸ್​ಆ್ಯಪ್​​ ಐದು ವರ್ಷಗಳ ಹಿಂದೆಯೇ ಗಮನಹರಿಸಲು ಆರಂಭಿಸಿದ್ದರೂ ಟ್ವಿಟರ್‍ನಲ್ಲಿ ಈ ಕುರಿತು ವರದಿ ಬಂದ ಬೆನ್ನಿಗೆ ಅದನ್ನು ಕೈಬಿಟ್ಟಿತ್ತು. ಈಗ ಐದು ವರ್ಷಗಳ ನಂತರ ಮತ್ತೆ ಎಡಿಟ್ ಬಟನ್ ಕುರಿತು ವಾಟ್ಸ್​ಆ್ಯಪ್​​ ಪರೀಕ್ಷಿಸುತ್ತಿದೆ.

ವಾಟ್ಸ್​ಆ್ಯಪ್​​ ಅಭಿವೃದ್ಧಿಪಡಿಸುತ್ತಿರುವ ಫೀಚರ್‌ನ ಸ್ಕ್ರೀನ್‌ಶಾಟ್ ಅನ್ನು ವೆಬಿಟೈನ್‌ಫೋ ಹಂಚಿಕೊಂಡಿದೆ. ಬಳಕೆದಾರರು ಕಳುಹಿಸಿದ ಸಂದೇಶವನ್ನು ಲಾಂಗ್ ಪ್ರೆಸ್ ಮೂಲಕ ಆಯ್ಕೆ ಮಾಡಿದಾಗ, ಸಂದೇಶವನ್ನು ನಕಲಿಸು(ಕಾಪಿ), ಫಾರ್ವರ್ಡ್ ಆಯ್ಕೆಯೊಂದಿಗೆ ಎಡಿಟ್ ಆಯ್ಕೆಯೂ ಗೋಚರಿಸಲಿದೆ. ಎಡಿಟ್ ಬಟನ್ ಆಯ್ಕೆ ಮಾಡಿದ ಬಳಿಕ ಕಳುಹಿಸಲಾದ ಸಂದೇಶದಲ್ಲಿ ಅಕ್ಷರ ದೋಷವಿದ್ದರೆ, ಅದನ್ನು ಸರಿಪಡಿಸಬಹುದು.

ಆಂಡ್ರಾಯ್ಡ್‌ಗಾಗಿ ವಾಟ್ಸ್​ಆ್ಯಪ್​​ ಬೀಟಾದಲ್ಲಿ ವೈಶಿಷ್ಟ್ಯವನ್ನು ಪರೀಕ್ಷಿಸಲಾಗುತ್ತಿದೆ. ಆದರೆ ಐಓಎಸ್ ಮತ್ತು ಡೆಸ್ಕ್‌ಟಾಪ್‌ಗಾಗಿ ವಾಟ್ಸ್​ಆ್ಯಪ್​​ ಬೀಟಾಗೆ ಅದೇ ವೈಶಿಷ್ಟ್ಯವನ್ನು  ತರುವಲ್ಲಿ  ವಾಟ್ಸ್​ಆ್ಯಪ್​​ ಕಾರ್ಯನಿರ್ವಹಿಸುತ್ತಿದೆ ಎಂದು ವರದಿ ಹೇಳುತ್ತದೆ ಮತ್ತು ಹೆಚ್ಚಿನ ವಿವರಗಳು ನಂತರ ಲಭ್ಯವಿರುತ್ತವೆ ಎಂದು ತಿಳಿಸಿದೆ.

ತಂತ್ರಜ್ಞಾನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:54 pm, Sat, 4 June 22