ವಿಶ್ವದಲ್ಲಿ 2000 ಮಿಲಿಯನ್ಗೂ ಅಧಿಕ ಬಳಕೆದಾರರನ್ನು ಹೊಂದಿರುವ ಮೆಟಾ (Meta) ಒಡೆಯನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್ಆ್ಯಪ್ ಈಗಾಗಲೇ ಅನೇಕ ಫೀಚರ್ಗಳನ್ನು ಪರಿಚಯಿಸಿ ಗ್ರಾಹಕರ ನೆಚ್ಚಿನ ಆ್ಯಪ್ ಎನಿಸಿಕೊಂಡಿದೆ. ಆಂಡ್ರಾಯ್ಡ್, ಐಒಎಸ್ (iOS), ವೆಬ್ ಬಳಕೆದಾರರಿಗೆ ನೂತನ ಆಯ್ಕೆಗಳನ್ನು ಪರಿಚಯಿಸುತ್ತಿರುವ ವಾಟ್ಸ್ಆ್ಯಪ್ನಲ್ಲಿ ಸಾಲು ಸಾಲು ಅಪ್ಡೇಟ್ಗಳು ಬರಲು ಪರೀಕ್ಷಾ ಹಂತದಲ್ಲಿದೆ. ಈವರೆಗೆ ವಿಶೇಷ ಫೀಚರ್ಗಳನ್ನು ಮಾತ್ರ ಪರಿಚಯಿಸುತ್ತಿದ್ದ ಈ ಮೆಸೇಜಿಂಗ್ ಆ್ಯಪ್ ಇದೀಗ ತನ್ನ ನೋಟವನ್ನು ಬದಲಾಯಿಸಲು ಮುಂದಾಗಿದೆ. ಸದ್ಯದಲ್ಲೇ ವಾಟ್ಸ್ಆ್ಯಪ್ (WhatsApp) ಹೊಸ ರೂಪದಲ್ಲಿ ಬಳಕೆದಾರರಿಗೆ ಸಿಗಲಿದೆ.
ಮೆಟಾ ತನ್ನ ಮೆಸೇಜಿಂಗ್ ಆ್ಯಪ್ ವಾಟ್ಸ್ಆ್ಯಪ್ ಅನ್ನು ಹೊಸ ಸ್ಟೈಲ್ನಲ್ಲಿ ಬಿಡುಗಡೆ ಮಾಡಲು ಸಿದ್ಧವಾಗಿದೆ. ಅಂದರೆ ನೀವು ವಾಟ್ಸ್ಆ್ಯಪ್ ತೆರೆದ ಬಳಿಕ ಸೆಟ್ಟಿಂಗ್ಸ್, ಚಾಟ್ ಲಿಸ್ಟ್ ಹೊಸ ಮಾದರಿಯಲ್ಲಿ ಗೋಚರಿಸಲಿದೆ. ಮೊದಲಿಗೆ ಈ ಆಯ್ಕೆ ಐಒಎಸ್ ಬಳಕೆದಾರರಿಗೆ ಸಿಗಲಿದೆಯಂತೆ. ನಂತರ ಆಂಡ್ರಾಯ್ಡ್ನಲ್ಲಿ ಬರಲಿದೆ.
ವಾಟ್ಸ್ಆ್ಯಪ್ ಕೆಲವೇ ದಿನಗಳಲ್ಲಿ ತನ್ನ ಸ್ಟೇಟಸ್ ವಿಭಾಗದಲ್ಲಿ ಬದಲಾವಣೆ ಮಾಡಲಿದೆ. ಅಂದರೆ ನೀವು ವಾಟ್ಸ್ಆ್ಯಪ್ನಲ್ಲಿ ಏನಾದರು ಸ್ಟೇಟಸ್ ಹಂಚಿಕೊಂಡರೆ ಅದು ನೇರವಾಗಿ ಫೇಸ್ಬುಕ್ ಸ್ಟೇಟಸ್ನಲ್ಲೂ ಕಾಣಿಸಲಿದೆ. ಈ ಹಿಂದೆ ವಾಟ್ಸ್ಆ್ಯಪ್ನಲ್ಲಿ ಸ್ಟೇಟಸ್ ಹಂಚಿಕೊಂಡರೆ ಅದನ್ನು ಎಫ್ಬಿಗೂ ಶೇರ್ ಮಾಡಬೇಕಿತ್ತು. ಆದರೀಗ ಹೊಸ ಫೀಚರ್ ಪ್ರಕಾರ ಅಟೋಮೆಟ್ ಆಗಿ ವಾಟ್ಸ್ಆ್ಯಪ್ನಲ್ಲಿ ಶೇರ್ ಮಾಡಿದ ಸ್ಟೇಟಸ್ ಫೇಸ್ಬುಕ್ ಸ್ಟೇಟಸ್ಗೂ ಅಪ್ಲೋಡ್ ಆಗಲಿದೆ. ಹಾಗಂತ ಇದು ಕಡ್ಡಾಯವಲ್ಲ. ವಾಟ್ಸ್ಆ್ಯಪ್ನಲ್ಲಿ ಹೊಸ ಆಯ್ಕೆಯೊಂದು ಕಾಣಿಸಲಿದ್ದು ಆನ್-ಆಫ್ ಮಾಡುವ ಮೂಲಕ ಇದನ್ನು ಬಳಸಬಹುದು. ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಸದ್ಯದಲ್ಲೇ ಈ ಆಯ್ಕೆ ಸಿಗಲಿದೆಯಂತೆ.
ಇನ್ನು ಸದ್ಯದಲ್ಲೇ ಬಳಕೆದಾರರು ವಾಟ್ಸ್ಆ್ಯಪ್ನಲ್ಲಿ ತಮಗೆ ಬೇಕಾದ ಚಾಟ್ ಅನ್ನು ಲಾಕ್ ಮಾಡಬಹುದು ಅಥವಾ ಹೈಡ್ ಮಾಡಬಹುದು. ವಾಟ್ಸ್ಆ್ಯಪ್ ಕುರಿತ ಎಲ್ಲಾ ವಿಷಯಗಳನ್ನು ಹಂಚಿಕೊಳ್ಳುವ Wabetainfo ಈ ಬಗ್ಗೆ ವರದಿ ಮಾಡಿದ್ದು, ವಾಟ್ಸ್ಆ್ಯಪ್ನಲ್ಲಿ ಚಾಟ್ ಅನ್ನು ಲಾಕ್ ಮಾಡಿದಾಗ ಬಳಕೆದಾರರು ತಮ್ಮ ಫಿಂಗರ್‌ಪ್ರಿಂಟ್ ಅಥವಾ ಪಾಸ್‌ಕೋಡ್ ಅನ್ನು ಬಳಸಿಕೊಂಡು ಮಾತ್ರ ತೆರೆಯಲು ಸಾಧ್ಯವಾಗುತ್ತಂತೆ. ಹೀಗಿದ್ದಾಗ ಇದನ್ನು ಬೇರೆ ಯಾರೂ ಸಹ ವೀಕ್ಷಣೆ ಮಾಡಲು ಸಾಧ್ಯವಾಗುವುದಿಲ್ಲ. ಈ ಆಯ್ಕೆ ಚಾಟ್ನ ಕಾಂಟೆಕ್ಟ್ ಅಥವಾ ಗ್ರೂಪ್ನ ಇನ್ಫೋದಲ್ಲಿ ಇರುತ್ತದೆ. ಇದನ್ನು ಆ್ಯಕ್ಟಿವ್ ಮಾಡಿದ ತಕ್ಷಣ ಆ ಚಾಟ್ ಹೈಡ್ ಆಗಿ ಹೊಸ ಸೆಕ್ಷನ್ಗೆ ಹೋಗುತ್ತದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:29 pm, Mon, 10 April 23