WhatsApp: ವಾಟ್ಸ್​ಆ್ಯಪ್​ನಲ್ಲಿ ಸ್ಟೇಟಸ್ ನೋಡಲು ಬರುತ್ತಿದೆ ಹೊಸ ಆಯ್ಕೆ: ಏನದು..?

| Updated By: Vinay Bhat

Updated on: Aug 21, 2022 | 6:08 AM

WhatsApp New Feature: ವಾಟ್ಸ್​ಆ್ಯಪ್ ಮತ್ತೊಂದು ಹೊಸ ಆಯ್ಕೆಯನ್ನು ಪರೀಕ್ಷಿಸುತ್ತಿರುವ ಬಗ್ಗೆ ವರದಿಯಾಗಿದೆ. ಇದರ ಪ್ರಕಾರ ಬಳಕೆದಾರರು ವಾಟ್ಸ್​ಆ್ಯಪ್​ ಚಾಟ್‌ ಲಿಸ್ಟ್‌ನಲ್ಲಿಯೇ ಸ್ಟೇಟಸ್‌ ಅಪ್ಡೇಟ್‌ ಅನ್ನು ವೀಕ್ಷಿಸುವುದಕ್ಕೆ ಸಾಧ್ಯವಾಗಲಿದೆ.

WhatsApp: ವಾಟ್ಸ್​ಆ್ಯಪ್​ನಲ್ಲಿ ಸ್ಟೇಟಸ್ ನೋಡಲು ಬರುತ್ತಿದೆ ಹೊಸ ಆಯ್ಕೆ: ಏನದು..?
ವಾಟ್ಸಾಪ್
Follow us on

ವಿಶ್ವದಲ್ಲಿ ಕೋಟ್ಯಾಂತರ ಬಳಕೆದಾರರನ್ನು ಹೊಂದಿರುವ ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್​ಆ್ಯಪ್(WhatsApp) ದಿಢೀರ್ ಆಗಿ ಕೆಲ ನೂತನ ಅಪ್ಡೇಟ್​ಗಳನ್ನು ಪರಿಚಯಿಸುತ್ತಿದೆ. ಈ ವರ್ಷವಂತು ಅನೇಕ ವಿನೂತನ ಅಪ್ಡೇಟ್​ಗಳನ್ನು (Update) ನೀಡಿ ಬಳಕೆದಾರರನ್ನು ಮತ್ತಷ್ಟು ಖುಷಿ ಪಡಿಸುತ್ತಿದೆ. ಅತ್ಯಂತ ಸುಲಭವಾಗಿ ಕಾರ್ಯನಿರ್ವಹಿಸುವಂತಹ ಆಯ್ಕೆಯನ್ನು ಒಂದರ ಹಿಂದೆ ಒಂದರಂತೆ ವಾಟ್ಸ್​ಆ್ಯಪ್ ನೀಡುತ್ತಿದೆ. ಇದೀಗ ವಾಟ್ಸ್​ಆ್ಯಪ್ ಮತ್ತೊಂದು ಹೊಸ ಆಯ್ಕೆಯನ್ನು ಪರೀಕ್ಷಿಸುತ್ತಿರುವ ಬಗ್ಗೆ ವರದಿಯಾಗಿದೆ. ಇದರ ಪ್ರಕಾರ ಬಳಕೆದಾರರು ವಾಟ್ಸ್​ಆ್ಯಪ್​ ಚಾಟ್‌ ಲಿಸ್ಟ್‌ನಲ್ಲಿಯೇ ಸ್ಟೇಟಸ್‌ (Status) ಅಪ್ಡೇಟ್‌ ಅನ್ನು ವೀಕ್ಷಿಸುವುದಕ್ಕೆ ಸಾಧ್ಯವಾಗಲಿದೆ. ಅಂದರೆ ನೀವು ನಿಮ್ಮ ಬಳಗದವರ ವಾಟ್ಸ್​ಆ್ಯಪ್​ ಸ್ಟೇಟಸ್‌ ಅನ್ನು ವಾಟ್ಸ್​ಆ್ಯಪ್ ಚಾಟ್‌ ಲಿಸ್ಟ್‌ನಲ್ಲಿಯೇ ನೋಡಬಹುದು.

ಈ ಬಗ್ಗೆ ವಾಬೇಟಾಇನ್ಫೋ ವರದಿ ಮಾಡಿದ್ದು, ಬಳಕೆದಾರರಯ ತಮ್ಮ ಕೊನೆಯ ಸಂದೇಶದ ಜೊತೆಗೆ ಕಂಟ್ಯಾಕ್ಟ್‌ ಲಿಸ್ಟ್‌ನಲ್ಲಿ ವಾಟ್ಸ್​ಆ್ಯಪ್​ ಸ್ಟೇಟಸ್‌ ಅಪ್ಡೇಟ್‌ ಅನ್ನು ತೋರಿಸಲಿದೆ. ನಿಮ್ಮ ಚಾಟ್‌ ಲಿಸ್ಟ್‌ನಲ್ಲಿರುವ ಯಾವುದೇ ಸಂಪರ್ಕವು ಹೊಸ ಸ್ಟೇಟಸ್‌ ಅಪ್ಡೇಟ್‌ ಅಪ್‌ಲೋಡ್ ಮಾಡಿದಾಗ, ಅದು ಚಾಟ್ ಪಟ್ಟಿಯಲ್ಲಿ ಸಹ ಗೋಚರಿಸುತ್ತದೆ.

ಪ್ರಸ್ತುತ ವಾಟ್ಸ್​ಆ್ಯಪ್​ನಲ್ಲಿ ಬಳಕೆದಾರರು ಚಾಟ್ ಲಿಸ್ಟ್‌ ಅನ್ನು ವೀಕ್ಷಿಸಿದಾಗ, ಅವರು ಲಾಸ್ಟ್‌ ಸಂದೇಶವನ್ನು ಶೇರ್‌ ಮಾಡಿರುವುದನ್ನು ಮಾತ್ರ ಕಾಣಬಹುದು. ಈ ಸ್ಟೇಟಸ್‌ ಅಪ್ಡೇಟ್‌ ವೀಕ್ಷಿಸಲು ಅವರ ಪ್ರೊಫೈಲ್ ಚಿತ್ರವನ್ನು ಟ್ಯಾಪ್ ಮಾಡಬೇಕಾಗುತ್ತದೆ. ವಾಟ್ಸ್​​ಆ್ಯಪ್​​ನಲ್ಲಿ ಸ್ಟೇಟಸ್‌ ಅಪ್‌ಡೇಟ್‌ಗಳನ್ನು ಹಂಚಿಕೊಳ್ಳುವ ಬಳಕೆದಾರರಿಗೆ ಇದು ಸಾಕಷ್ಟು ಉಪಯುಕ್ತವಾಗಲಿದೆ.

ಇದನ್ನೂ ಓದಿ
Cyberdog: ಶವೋಮಿಯ ಸೈಬರ್ ಡಾಗ್ ರೋಬೋಟ್ ಬೆಲೆ ಎಷ್ಟು?: ಇದು ಏನೆಲ್ಲ ಮಾಡುತ್ತೆ?
Galaxy S23 Ultra: ಸ್ಯಾಮ್​ಸಂಗ್ ಗ್ಯಾಲಕ್ಸಿ S23 ಆಲ್ಟ್ರಾ ಸ್ಮಾರ್ಟ್​​ಫೋನ್ ಬಗ್ಗೆ ಹೊರಬಿತ್ತು ಶಾಕಿಂಗ್ ವಿಚಾರ
Fake App: ಪ್ಲೇ ಸ್ಟೋರ್​ನಲ್ಲಿ 35 ಅಪಾಯಕಾರಿ ಆ್ಯಪ್ ಪತ್ತೆ: ಇನ್​ಸ್ಟಾಲ್ ಮಾಡಿದ್ರೆ ತಕ್ಷಣ ಡಿಲೀಟ್ ಮಾಡಿ
ಮಾರುಕಟ್ಟೆಯಲ್ಲಿ ಧೂಳೆಬ್ಬಿಸುತ್ತಿದೆ ಹಾನರ್‌ 70 5G ಸ್ಮಾರ್ಟ್‌ಫೋನ್‌: ಏನಿದೆ ಫೀಚರ್ಸ್?, ಬೆಲೆ ಎಷ್ಟು?

ಇನ್ನು ಪ್ರೈವಸಿಗೆ ಸಂಬಂಧಿಸಿದಂತೆ ವಾಟ್ಸ್​ಆ್ಯಪ್​ ಮಹತ್ವದ ಬದಲಾವಣೆ ತರಲು ಸಜ್ಜಾಗಿದೆ. ಇನ್ನುಂದೆ ವಾಟ್ಸ್​ಆ್ಯಪ್​ನಲ್ಲಿ ನಿಮಗೆ ಸ್ಕ್ರೀನ್ ಶಾಟ್ ತೆಗೆಯಲು ಸಾಧ್ಯವಿಲ್ಲ. ಸದ್ಯದಲ್ಲೇ ಈ ಆಯ್ಕೆಯನ್ನು ನಿರ್ಬಂಧಿಸಲಿದೆ. ಈ ವರ್ಷದ ಆರಂಭದಲ್ಲಿ ವಾಟ್ಸ್​ಆ್ಯಪ್ ವೀವ್ ಒನ್ಸ್ ಎಂಬ ಫೀಚರ್ ಪರಿಚಿಸಿತ್ತು. ಇದರ ಮೂಲಕ ಫೋಟೋ ಅಥವಾ ವಿಡಿಯೋವನ್ನು ಓಪನ್ ಮಾಡಿ ನೋಡಿದ ತಕ್ಷಣ ಅದು ಮಾಯವಾಗುವುದು ಮಾತ್ರವಲ್ಲದೆ, ಇವು ಫೋನ್ ಮೆಮೊರಿಯಲ್ಲಿ ಎಲ್ಲಿಯೂ ಸ್ಟೋರ್ ಕೂಡ ಆಗದಿರುವುದು ವಿಶೇಷವಾಗಿದೆ. ಆದರೆ, ಇದನ್ನು ಸ್ಕ್ರೀನ್ ಶಾಟ್ ತೆಗೆಯುವಂತಹ ಆಯ್ಕೆ ಇತ್ತು. ಇದೀಗ ಈ ಫೀಚರ್​ನಲ್ಲಿ ಸ್ಕ್ರೀನ್ ಶಾಟ್ ತೆಗೆಯುವ ಆಯ್ಕೆಯನ್ನು ಬ್ಲಾಕ್ ಮಾಡಲು ಮುಂದಾಗಿದೆ.

ಅಂತೆಯೆ ಮುಂದಿನ ದಿನಗಳಲ್ಲಿ ವಾಟ್ಸ್​ಆ್ಯಪ್​ನಲ್ಲಿ ನೀವು ಡಿಲೀಟ್ ಮಾಡಿದ ಮೆಸೇಜ್ ಅನ್ನು ರಿಕವರಿ ಮಾಡು ಆಯ್ಕೆ ಬರಲಿದೆ. ಈ ಬಗ್ಗೆ ವಾಟ್ಸ್​ಆ್ಯಪ್ ​ಬೇಟಾಇನ್​ಫೊ ವರದಿ ಮಾಡಿದ್ದು, ಆಂಡ್ರಾಯ್ಡ್ ಬೇಟಾ ವರ್ಷನ್​ನಲ್ಲಿ ಇದನ್ನು ಪರೀಕ್ಷಿಸಲಾಗುತ್ತಿದೆ. ಈಗ ನೀವು ಯಾರಿಗಾದರು ಮೆಸೇಜ್ ಕಳುಹಿಸಿದ್ದನ್ನು ತಪ್ಪಿ ಡಿಲೀಟ್ ಮಾಡಿದ್ದರೆ ಆ ಮೆಸೇಜ್ ಅನ್ನು ಮರಳಿ ಪಡೆಯುವ ಆಯ್ಕೆ ಇದಾಗಿದೆ. ಆದರೆ, ಇದು ಎಷ್ಟು ಸಮಯದ ಒಳಗೆ ರಿಕವರಿ ಮಾಡಬಹುದು ಎಂಬ ಬಗ್ಗೆ ಇನ್ನೂ ತಿಳಿದುಬಂದಿಲ್ಲ. ಸದ್ಯದಲ್ಲೇ ಈ ಆಯ್ಕೆ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಸಿಗಲಿದೆಯಂತೆ.