WhatsApp Edit Message: ವಾಟ್ಸ್​ಆ್ಯಪ್​ನಲ್ಲಿ ಸೆಂಡ್ ಮಾಡಿದ ಮೆಸೇಜ್ ಎಡಿಟ್ ಮಾಡಬಹುದು: ಹೇಗೆ ಗೊತ್ತೇ?

|

Updated on: Feb 23, 2023 | 6:50 PM

WhatsApp New Features: ವಾಟ್ಸ್​ಆ್ಯಪ್ ಎಡಿಟ್ ಮೆಸೇಜ್ ಫೀಚರ್ ಪ್ರಕಾರ, ಬಳಕೆದಾರರು ಯಾರಿಗಾದರೂ ಸಂದೇಶ ಕಳುಹಿಸಿದಾಗ ಅಕ್ಷರಗಳು ತಪ್ಪಾಗಿದ್ದಲ್ಲಿ, ಅದನ್ನು ಎಡಿಟ್ ಮಾಡಲು ಸಾಧ್ಯವಿದೆ. ಆದರೆ, ಇದಕ್ಕೆ 15 ನಿಮಿಷಗಳ ಕಾಲವಕಾಶ ಮಾತ್ರ ಇರುತ್ತದೆ.

WhatsApp Edit Message: ವಾಟ್ಸ್​ಆ್ಯಪ್​ನಲ್ಲಿ ಸೆಂಡ್ ಮಾಡಿದ ಮೆಸೇಜ್ ಎಡಿಟ್ ಮಾಡಬಹುದು: ಹೇಗೆ ಗೊತ್ತೇ?
WhatsApp Edit Feature
Follow us on

ಮೆಟಾ (Meta) ಒಡೆತನದ ನಂಬರ್ ಒನ್ ಅಪ್ಲಿಕೇಷನ್ ವಾಟ್ಸ್​ಆ್ಯಪ್ ಇಂದು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಪ್ರಪಂಚದಲ್ಲಿ 2.24 ಬಿಲಿಯನ್ ಬಳಕೆದಾರರನ್ನು ಹೊಂದಿರುವ ಇದರಲ್ಲಿ ಪ್ರತಿ ತಿಂಗಳು ಒಂದಲ್ಲ ಒಂದು ಹೊಸ ಅಪ್ಡೇಟ್ ಬಿಡುಗಡೆ ಆಗುತ್ತಲೇ ಇದೆ. ಆಂಡ್ರಾಯ್ಡ್, ಐಒಎಸ್ ಹಾಗೂ ವೆಬ್ ಆವೃತ್ತಿಗೆ ನೂತನ ಆಯ್ಕೆಗಳನ್ನು ನೀಡುವ ವಾಟ್ಸ್​ಆ್ಯಪ್​ನಲ್ಲಿ (WhatsApp) ಈಗಾಗಲೇ ಸಾಲು ಸಾಲು ಫೀಚರ್​ಗಳು ಪರೀಕ್ಷಾ ಹಂತದಲ್ಲಿದೆ. ಮೊನ್ನೆಯಷ್ಟೆ ಐಫೋನ್ ಬಳಕೆದಾರರಿಗೆ ಪಿಚ್ಚರ್-ಇನ್-ಪಿಚ್ಚರ್ ಮೋಡ್ ಎಂಬ ಹೊಸ ಆಯ್ಕೆ ನೀಡಿತ್ತು. ಇದರ ಬೆನ್ನಲ್ಲೇ ಮತ್ತೊಂದು ನೂತನ ಅಪ್ಡೇಟ್ ಪರಿಚಯಿಸಲು ವಾಟ್ಸ್​ಆ್ಯಪ್ ಮುಂದಾಗಿದೆ. ಅದುವೇ ಎಡಿಟ್ ಮೆಸೇಜ್ ಆಯ್ಕೆ. ಹೌದು, ಕೆಲವೇ ದಿನಗಳಲ್ಲಿ ವಾಟ್ಸ್​ಆ್ಯಪ್​ನಲ್ಲಿ ಕಳುಹಿಸದ ಮೆಸೇಜ್ ಅನ್ನು ಎಡಿಟ್ (Edit Message) ಮಾಡುವಂತಹ ಆಯ್ಕೆ ನಿಮಗೆ ಸಿಗಲಿದೆ.

ಎಡಿಟ್ ಮೆಸೇಜ್ ಫೀಚರ್ ಪ್ರಕಾರ, ಬಳಕೆದಾರರು ಯಾರಿಗಾದರೂ ಸಂದೇಶ ಕಳುಹಿಸಿದಾಗ ಅಕ್ಷರಗಳು ತಪ್ಪಾಗಿದ್ದಲ್ಲಿ, ಅದನ್ನು ಎಡಿಟ್ ಮಾಡಲು ಸಾಧ್ಯವಿದೆ. ಆದರೆ, ಇದಕ್ಕೆ 15 ನಿಮಿಷಗಳ ಕಾಲವಕಾಶ ಮಾತ್ರ ಇರುತ್ತದೆ. ಪ್ರಸ್ತುತ, ವಾಟ್ಸ್​ಆ್ಯಪ್​​ನಲ್ಲಿ ಮೀಸಲಾದ ಎಡಿಟ್ ಆಯ್ಕೆ ಇಲ್ಲ. ಒಮ್ಮೆ ಕಳುಹಿಸಿದ ಮೆಸೇಜ್ ಅನ್ನು ಡಿಲೀಟ್ ಮಾತ್ರ ಮಾಡಬಹುದು, ಆದರೆ ಎಡಿಟ್‌ ಮಾಡಲು ಸಾಧ್ಯವಿಲ್ಲ. ಮುಂಬರುವ ವೈಶಿಷ್ಟ್ಯವನ್ನು ಬಳಸಿ ಮೆಸೇಜ್ ಕಳುಹಿಸಿದ ನಂತರ ಅವುಗಳನ್ನು ಎಡಿಟ್‌ ಮಾಡಲು ಸಾಧ್ಯವಾಗಿಸುತ್ತದೆ. ಎಲ್ಲಾ ವಾಟ್ಸ್​ಆ್ಯಪ್​​ ಸಂಬಂಧಿತ ಬೆಳವಣಿಗೆಗಳನ್ನು ಟ್ರ್ಯಾಕ್ ಮಾಡುವ ವೆಬ್‌ಸೈಟ್ Wabetainfo ಈ ವೈಶಿಷ್ಟ್ಯವನ್ನು ಗುರುತಿಸಿದೆ.

ಈ ಎಡಿಟ್ ಬಟನ್ ವೈಶಿಷ್ಟ್ಯದ ಮೇಲೆ ವಾಟ್ಸ್​ಆ್ಯಪ್​​ ಐದು ವರ್ಷಗಳ ಹಿಂದೆಯೇ ಗಮನಹರಿಸಲು ಆರಂಭಿಸಿದ್ದರೂ ಟ್ವಿಟರ್​ನಲ್ಲಿ ಈ ಕುರಿತು ವರದಿ ಬಂದ ಬೆನ್ನಿಗೆ ಅದನ್ನು ಕೈಬಿಟ್ಟಿತ್ತು. ಈಗ ಐದು ವರ್ಷಗಳ ನಂತರ ಮತ್ತೆ ಎಡಿಟ್ ಬಟನ್ ಕುರಿತು ವಾಟ್ಸ್​ಆ್ಯಪ್​​ ಪರೀಕ್ಷಿಸುತ್ತಿದೆ. ಬಳಕೆದಾರರು ಕಳುಹಿಸಿದ ಸಂದೇಶವನ್ನು ಲಾಂಗ್ ಪ್ರೆಸ್ ಮೂಲಕ ಆಯ್ಕೆ ಮಾಡಿದಾಗ, ಸಂದೇಶವನ್ನು ನಕಲಿಸು(ಕಾಪಿ), ಫಾರ್ವರ್ಡ್ ಆಯ್ಕೆಯೊಂದಿಗೆ ಎಡಿಟ್ ಆಯ್ಕೆಯೂ ಗೋಚರಿಸಲಿದೆ. ಎಡಿಟ್ ಬಟನ್ ಆಯ್ಕೆ ಮಾಡಿದ ಬಳಿಕ ಕಳುಹಿಸಲಾದ ಸಂದೇಶದಲ್ಲಿ ಅಕ್ಷರ ದೋಷವಿದ್ದರೆ, ಅದನ್ನು ಸರಿಪಡಿಸಬಹುದು.

ಇದನ್ನೂ ಓದಿ
Infinix Smart 7: 6000mAh ಬ್ಯಾಟರಿ: ಭಾರತದಲ್ಲಿ ಕೇವಲ 7,299 ರೂ. ಗೆ ರಿಲೀಸ್ ಆಗಿದೆ ಹೊಸ ಫೋನ್: ಯಾವುದು?
Best 2 TB Hard Disks In India: ಕಡಿಮೆ ಬೆಲೆಗೆ ಸಿಗುತ್ತಿರುವ 2TB ಸ್ಟೋರೇಜ್ ಸಾಮರ್ಥ್ಯದ ಬೆಸ್ಟ್ ಹಾರ್ಡ್ ಡಿಸ್ಕ್ ಇಲ್ಲಿದೆ ನೋಡಿ
IPL 2023: 4K ರೆಸಲ್ಯೂಶನ್​ನಲ್ಲಿ ಐಪಿಎಲ್ 2023 ವೀಕ್ಷಿಸಿ: ಜಿಯೋ ಬಳಕೆದಾರರಿಗೆ ಬಂಪರ್ ಸುದ್ದಿ
Noisefit Crew: ₹1,499ಕ್ಕೆ ದೊರೆಯುತ್ತಿದೆ ಆಕರ್ಷಕ ವಿನ್ಯಾಸದ ನಾಯ್ಸ್​ಫಿಟ್ ಕ್ರೂ ಸ್ಮಾರ್ಟ್​ವಾಚ್

TRAI: ಟ್ರಾಯ್​ನಿಂದ ಶಾಕಿಂಗ್ ನಿರ್ಧಾರ: ಬ್ಯಾನ್​ ಆಗಲಿದೆ 10 ಅಂಕಿಗಳ ಮೊಬೈಲ್ ನಂಬರ್​

ಐಒಎಸ್​ನಲ್ಲಿ ಪಿಕ್ಚರ್-ಇನ್-ಪಿಕ್ಚರ್ ಫೀಚರ್:

ವಾಟ್ಸ್​ಆ್ಯಪ್ ಪಿಕ್ಚರ್-ಇನ್-ಪಿಕ್ಚರ್ ಆಯ್ಕೆಯನ್ನು ಐಒಎಸ್ ಬಳಕೆದಾರರಿಗೆ ಲಭ್ಯವಾಗುವಂತೆ ಮಾಡಿದೆ. ಈ ನೂತನ ಫೀಚರ್ ಮೂಲಕ ವಿಡಿಯೋ ಕರೆಯಲ್ಲಿ ಮತ್ತಷ್ಟು ಹೊಸ ರೀತಿಯ ಅನುಭವ ಬಳಕೆದಾರರಿಗೆ ಸಿಗಲಿದೆ. ಇದರ ಮೂಲಕ ವಾಟ್ಸ್​ಆ್ಯಪ್ ಬಳಕೆದಾರರು ಯಾವುದೇ ಅಡೆತಡೆ ಇಲ್ಲದೆ ವಿಡಿಯೋ ಕರೆಯಲ್ಲಿ ಮಾತನಾಡಬಹುದು. ಫೇಸ್‌ಟೈಮ್‌ನ ಪಿಕ್ಚರ್-ಇನ್-ಪಿಕ್ಚರ್ ಮೋಡ್‌ನಂತೆಯೇ ಇದುಕೂಡ ಕೆಲಸ ಮಾಡಲಿದ್ದು, ಗ್ರೂಪ್‌ ಕರೆ ಅಥವಾ ವೈಯುಕ್ತಿಕ ಕರೆಯಲ್ಲಿದ್ದಾಗ ಇತರೆ ಆ್ಯಪ್‌ಗಳನ್ನು ಓಪನ್‌ ಮಾಡುವ ಮೂಲಕ ಒಂದೇ ಬಾರಿಗೆ ಕೆಲಸವನ್ನು ಮಾಡಬಹುದಾಗಿದೆ. ಈ ಸಂದರ್ಭ ಕರೆ ಕಟ್ ಆಗುವುದು ಅಥವಾ ಸ್ಟ್ರಕ್ ಆಗುವಂತಹ ಯಾವುದೇ ಪ್ರಕ್ರಿಯೆ ನಡೆಯುವುದಿಲ್ಲ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ