ಮೆಟಾ (Meta) ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್ಆ್ಯಪ್ ದಿನಕ್ಕೊಂದು ನೂತನ ಫೀಚರ್ಗಳನ್ನು ಘೋಷಣೆ ಮಾಡುತ್ತಿದೆ. ಬಳಕೆದಾರರ ನೆಚ್ಚಿನ ಆ್ಯಪ್ ಆಗಿ ಗುರುತಿಸಿಕೊಂಡಿರುವ ಈ ಆ್ಯಪ್ ಇದೀಗ ತನ್ನ ಆಂಡ್ರಾಯ್ಡ್ (Android) ಮತ್ತು ಐಒಎಸ್ ಬಳಕೆದಾರರಿಗೆ ಹೊಸ ಆಯ್ಕೆಯೊಂದನ್ನು ನೀಡಿದೆ. ಈ ಹಿಂದೆ ಬಳಕೆದಾರರು ವಾಟ್ಸ್ಆ್ಯಪ್ನಲ್ಲಿ (WhatsApp) ಆನೌನ್ ನಂಬರ್ಗೆ ಮೆಸೇಜ್ ಮಾಡಬೇಕು ಎಂದಾದಲ್ಲಿ ಆ ಸಂಖ್ಯೆಯನ್ನು ಕಾಂಟೆಕ್ಟ್ ಲಿಸ್ಟ್ನಲ್ಲಿ ಸೇವ್ ಮಾಡಬೇಕಿತ್ತು. ಈ ಸಮಸ್ಯೆಯನ್ನು ಮನಗಂಡು ನೂತನ ಫೀಚರ್ ಅನ್ನು ಬಿಡುಗಡೆ ಮಾಡಿದೆ.
ಇನ್ನುಂದೆ ವಾಟ್ಸ್ಆ್ಯಪ್ನ ಆಂಡ್ರಾಯ್ಡ್ ಮತ್ತು ಐಎಸ್ ಬಳಕೆದಾರರು ಆನೌನ್ ನಂಬರ್ಗೆ ಮೆಸೇಜ್ ಮಾಡಬೇಕು ಎಂದಾದಲ್ಲಿ ಮೊಬೈಲ್ ಸಂಖ್ಯೆಯನ್ನು ಸೇವ್ ಮಾಡಿಕೊಳ್ಳಬೇಕು ಎಂದಿಲ್ಲ. ಬದಲಾಗಿ ನೇರವಾಗಿ ಮೆಸೇಜ್ ಮಾಡುವಂತಹ ಆಯ್ಕೆ ನೀಡಲಾಗಿದೆ. ಇದಕ್ಕಾಗಿ ನೀವು ವಾಟ್ಸ್ಆ್ಯಪ್ ತೆರೆದು ‘ಸ್ಟಾರ್ಟ್ ನ್ಯೂ ಚಾಟ್’ ಬಟನ್ ಮೇಲೆ ಟ್ಯಾಪ್ ಮಾಡಬೇಕು. ಸರ್ಚ್ ಬಾರ್ನಲ್ಲಿ ಅನೌನ್ ನಂಬರ್ ಅನ್ನು ಟೈಪ್ ಮಾಡಿದ ನಂತರ ಆ ಕಾಂಟೆಕ್ಟ್ ಅನ್ನು ಹುಡುಕಿ ಮೆಸೇಜ್ ಕಳುಹಿಸಲು ಆಯ್ಕೆ ಕೇಳುತ್ತದೆ.
Infinix GT 10 Pro: ನಥಿಂಗ್ ಫೋನ್ ವಿನ್ಯಾಸ ಕಾಪಿ ಮಾಡಿತೇ ಇನ್ಫಿನಿಕ್ಸ್ ಫೋನ್?
ಹೆಚ್ಚಿನ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಈ ಆಯ್ಕೆ ಲಭ್ಯವಿದೆ. ನಿಮಗೆ ಸಿಗುತ್ತಿಲ್ಲ ಎಂದಾದರೆ ಪ್ಲೇ ಸ್ಟೋರ್ ಅಥವಾ ಆ್ಯಪ್ ಸ್ಟೋರ್ಗೆ ತೆರಳು ವಾಟ್ಸ್ಆ್ಯಪ್ ನೂತನ ಆವೃತ್ತಿಯನ್ನು ಅಪ್ಡೇಟ್ ಮಾಡಿಕೊಳ್ಳಿ. ವಾಟ್ಸ್ಆ್ಯಪ್ ವೈಶಿಷ್ಟ್ಯದ ಕುರಿತು ಎಲ್ಲ ಮಾಹಿತಿಯನಗನು ಹಂಚಿಕೊಳ್ಳುವ WaBetaInfo ಈ ಬಗ್ಗೆ ಮಾಹಿತಿ ನೀಡಿದೆ.
ವಾಟ್ಸ್ಆ್ಯಪ್ ಸದ್ಯದಲ್ಲೇ ಫೋನ್ ನಂಬರ್ ಪ್ರೈವಸಿ ಫೀಚರ್ ಕಮ್ಯೂನಿಟಿ ಅನೌನ್ಸ್ಮೆಂಟ್ ಗ್ರೂಪ್ನಲ್ಲಿ ಕೊಡಲಿದೆ. ಹೆಸರೇ ಸೂಚಿಸುವಂತೆ, ಬಳಕೆದಾರರು ತಮ್ಮ ಮೊಬೈಲ್ ನಂಬರ್ ಅನ್ನು ಕಮ್ಯೂನಿಟಿ ಅನೌನ್ಸ್ಮೆಂಟ್ ಗ್ರೂಪ್ನಲ್ಲಿ ಮರೆಮಾಡುವ ಮೂಲಕ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಈ ವೈಶಿಷ್ಟ್ಯವು ಸಹಾಯ ಮಾಡುತ್ತದೆ. ಈ ಫೀಚರ್ ಮೂಲಕ, ಅವರ ಫೋನ್ ಸಂಖ್ಯೆಯು ಕಮ್ಯೂನಿಟಿ ಅಡ್ಮಿನ್ ಮತ್ತು ಅವರ ನಂಬರ್ ಅನ್ನು ಸೇವ್ ಮಾಡಿಟ್ಟುಕೊಂಡವರಿಗೆ ಮಾತ್ರ ಗೋಚರಿಸುತ್ತದೆ. ಗ್ರೂಪ್ನಲ್ಲಿ ಇರುವ ಇತರೆ ಸದಸ್ಯರಿಂದ ತಮ್ಮ ಮೊಬೈಲ್ ಸಂಖ್ಯೆಗಳನ್ನು ಮರೆಮಾಡಲು ಇದು ಬಳಕೆದಾರರಿಗೆ ಸಹಾಯ ಮಾಡುತ್ತದೆ.
ಆದಾಗ್ಯೂ, ಕಮ್ಯೂನಿಟಿ ಅಡ್ಮಿನ್ಗಳಿಗೆ ಫೋನ್ ಸಂಖ್ಯೆ ಯಾವಾಗಲೂ ಗೋಚರಿಸುತ್ತದೆ. ಜೊತೆಗೆ ಈ ಆಯ್ಕೆ ಗ್ರೂಪ್ನಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತದೆ. ಕಮ್ಯೂನಿಟಿಗಳಿಗಾಗಿ ಹೊಸ ಫೋನ್ ಸಂಖ್ಯೆ ಗೌಪ್ಯತೆ ವೈಶಿಷ್ಟ್ಯವು ಸದ್ಯ ಕೆಲವು ಬೀಟಾ ಬಳಕೆದಾರರಿಗೆ ಲಭ್ಯವಿದೆ. ಇದು ಸದ್ಯದಲ್ಲೇ ಎಲ್ಲ ಆಂಡ್ರಾಯ್ಡ್ ಮತ್ತು ಐಇಎಸ್ ಬಳಕೆದಾರರಿಗೆ ಅಪ್ಡೇಟ್ ಮಾಡುವ ಮೂಲಕ ಸಿಗಲಿದೆ ಎಂದು ವರದಿ ಆಗಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ