WhatsApp New Feature: ವಾಟ್ಸ್​ಆ್ಯಪ್​ನಲ್ಲಿ ಬಂದಿದೆ ಅಚ್ಚರಿಯ ಶಾರ್ಟ್​ಕಟ್ ಫೀಚರ್: ಚಾಟ್ ಮಾಡೋವಾಗ ಸಿಗುತ್ತೆ ಈ ಆಯ್ಕೆ

| Updated By: Vinay Bhat

Updated on: Nov 29, 2021 | 3:18 PM

WhatsApp shortcut feature: ಶಾರ್ಟ್​ ಕಟ್ ಫೀಚರ್ ಮೂಲಕ ನೀವು ವಾಟ್ಸ್​ಆ್ಯಪ್​​ನ ಚಾಟ್ ಬಾಕ್ಸ್‌ನಲ್ಲಿ ಡೌನ್‌ಲೋಡ್ ಮಾಡದೆ ಸ್ಟಿಕ್ಕರ್‌ಗಳನ್ನು ಫಾರ್ವರ್ಡ್ ಮಾಡಬಹುದಾಗಿದೆ. ಈ ಹೊಸ ಆಯ್ಕೆ ವಾಟ್ಸ್​ಆ್ಯಪ್​​ ಆಂಡ್ರಾಯ್ಡ್​ನ ಬೇಟಾ ಬಳಕೆದಾರರಿಗೆ ಮಾತ್ರ ಲಭ್ಯವಾಗುತ್ತಿದೆ.

WhatsApp New Feature: ವಾಟ್ಸ್​ಆ್ಯಪ್​ನಲ್ಲಿ ಬಂದಿದೆ ಅಚ್ಚರಿಯ ಶಾರ್ಟ್​ಕಟ್ ಫೀಚರ್: ಚಾಟ್ ಮಾಡೋವಾಗ ಸಿಗುತ್ತೆ ಈ ಆಯ್ಕೆ
WhatsApp
Follow us on

ವಿಶ್ವದಲ್ಲಿ ಕೋಟ್ಯಾಂತರ ಬಳಕೆದಾರರನ್ನು ಹೊಂದಿರುವ ಫೇಸ್​ಬುಕ್ (facebook) ಒಡೆತನದ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್​ಆ್ಯಪ್ (WhatsApp)​ ಈಗೀಗ ಹೊಸ ಹೊಸ ಅಪ್ಡೇಟ್​ಗಳನ್ನು ನೀಡುತ್ತಿದೆ. ಸದ್ಯ ಇದೀಗ ಬಳಕೆದಾರರಿಗೆ ಉತ್ತಮ ಅನುಭವವನ್ನು ನೀಡಲು ಹೊಸ ಫೀಚರ್ಸ್‌ ಪರಿಚಯಿಸಲು ವಾಟ್ಸ್​ಆ್ಯಪ್ ಮುಂದಾಗಿದೆ. ಅದುವೇ ಶಾರ್ಟ್​ ಕಟ್ ಫೀಚರ್ ಆಯ್ಕೆ. ಇದರ ಮೂಲಕ ನೀವು ವಾಟ್ಸ್​ಆ್ಯಪ್​​ನ ಚಾಟ್ ಬಾಕ್ಸ್‌ನಲ್ಲಿ ಡೌನ್‌ಲೋಡ್ ಮಾಡದೆ ಸ್ಟಿಕ್ಕರ್‌ಗಳನ್ನು ಫಾರ್ವರ್ಡ್ ಮಾಡಬಹುದಾಗಿದೆ. ಅಂದರೆ ಚಾಟ್‌ನಿಂದ ನೇರವಾಗಿ ಈ ಸ್ಟಿಕ್ಕರ್‌ಗಳನ್ನು ಬೇರಯವರಿಗೆ ಫಾರ್ವರ್ಡ್ ಮಾಡಲು ಶಾರ್ಟ್‌ಕಟ್ ಆಯ್ಕೆ ಅನುವು ಮಾಡಿಕೊಡುತ್ತದೆ.

ಸದ್ಯಕ್ಕೆ ಈ ಹೊಸ ಆಯ್ಕೆ ವಾಟ್ಸ್​ಆ್ಯಪ್​​ ಆಂಡ್ರಾಯ್ಡ್​ನ ಬೇಟಾ ಬಳಕೆದಾರರಿಗೆ ಮಾತ್ರ ಲಭ್ಯವಾಗುತ್ತಿದೆ. ಕೆಲವೇ ದಿನಗಳಲ್ಲಿ ಎಲ್ಲ ಬಳಕೆದಾರರಿಗೆ ಇದು ಸಿಗಲಿದೆಯಂತೆ. ವಿಶೇಷ ಎಂದರೆ ಈ ಹೊಸ ಆಯ್ಕೆ ನಿಮ್ಮ ಫೋನ್‌ನ ಮೆಮೊರಿಯನ್ನು ಉಳಿಸುತ್ತದೆ. ಸ್ಟಿಕ್ಕರ್​ನ ಮೇಲೆ ಲಾಂಗ್​ಪ್ರೆಸ್ ಮಾಡಿದ ಮೇಲೆ ಸೆಲೆಕ್ಟ್ ಆಗುತ್ತದೆ. ಬಳಿಕ ಫಾರ್ವರ್ಡ್ ಕೀ ಕಾಣಲಿದೆ. ನಂತರ ನೀವು ಇತರರಿಗೆ ಸ್ಟಿಕ್ಟರ್ ಅನ್ನು ಕಳುಹಿಸಬಹುದು.

ಇತ್ತೀಚೆಗಷ್ಟೆ ವಾಟ್ಸ್​ಆ್ಯಪ್​ನ PC ಮತ್ತು Mac ಬಳಕೆದಾರರಿಗೆ ಸ್ಟಿಕ್ಕರ್ ತಯಾರಕ ಸಾಧನದ ಆಗಮನವನ್ನು ಪ್ರಕಟಿಸಿತ್ತು. ವಾಟ್ಸ್​ಆ್ಯಪ್ ವೆಬ್ ಬಳಕೆದಾರರು ತಮ್ಮದೇ ಆದ ಕಸ್ಟಮ್ ಸ್ಟಿಕ್ಕರ್‌ಗಳನ್ನು ರಚಿಸಲು ಹೊಸ ಫೀಚರ್ ಒಂದನ್ನು ಪರಿಚಯಿಸಿ, ಮ್ಯಾಕ್ ಮತ್ತು ಪಿಸಿ ಪ್ಲಾಟ್‌ಫಾರ್ಮ್ ಬಳಕೆದಾರರಿಗೆ ಈ ವೈಶಿಷ್ಟ್ಯವನ್ನು ಲಭ್ಯವಾಗುವಂತೆ ಮಾಡಿದೆ. ಡೆಸ್ಕ್‌ಟಾಪ್ ಬಳಕೆದಾರರಿಗಾಗಿ ಮುಂಬರುವ ವಾರದಲ್ಲಿ ಈ ಫೀಚರ್ ಲಭ್ಯವಾಗಬಹುದು ಎಂದು ವರದಿಗಳು ತಿಳಿಸಿವೆ. ಈ ಮೂಲಕ ವಾಟ್ಸ್​ಆ್ಯಪ್​ ಬಳಕೆದಾರರು ಕಸ್ಟಮ್ ಸ್ಟಿಕ್ಕರ್‌ಗಳನ್ನು ಪರಿಚಯಿಸಲು ಮೂರನೇ ವ್ಯಕ್ತಿಯ ಅಪ್ಲಿಕೇಶನ್‌ಗಳನ್ನು ಬಳಸಬೇಕಾದ ಅಗತ್ಯತೆಗೆ ಕೊನೆಹಾಡಲಾಗಿದೆ.

ಇನ್ನು ವಾಟ್ಸ್​ಆ್ಯಪ್​ ಶೀಘ್ರದಲ್ಲೇ ಫೇಸ್​ಬುಕ್​ನಲ್ಲಿರುವಂತೆಯೆ ಮೆಸೇಜ್‌ ರಿಯಾಕ್ಷನ್‌ ಫೀಚರ್ಸ್‌ ಅನ್ನು ಪರಿಚಯಿಸಲಿದೆ. ಈಗಾಗಲೇ ಇದರ ಪರೀಕ್ಷಾ ಹಂತಕೂಡ ಮುಕ್ತಾಯಗೊಂಡಿದ್ದು, ಮುಂದಿನ ಅಪ್ಡೇಟ್​ನಲ್ಲಿ ಬಳಕೆದಾರರಿಗೆ ಸಿಗುವ ಅಂದಾಜಿದೆ. ಈಗಾಗಲೇ ಇನ್​ಸ್ಟಾಗ್ರಾಮ್, ಫೇಸ್​ಬುಕ್, ಐಮೆಸೇಜ್ ಮತ್ತು ಲಿಂಕ್ಡಿನ್​ನಲ್ಲಿ ಇರುವಂತಹ ಜನಪ್ರಿಯ ಅಪ್ಲಿಕೇಶನ್‌ಗಳು ಬಳಕೆದಾರರಿಗೆ ಮೆಸೇಜ್‌ ರಿಯಾಕ್ಷನ್‌ ಫೀಚರ್ಸ್‌ಗಳನ್ನು ನೀಡುತ್ತಿವೆ. ಇದೇ ಕಾರಣಕ್ಕೆ ವಾಟ್ಸ್​ಆ್ಯಪ್​ ಕೂಡ ಸದ್ಯದಲ್ಲೇ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಮೆಸೇಜ್‌ ರಿಯಾಕ್ಷನ್‌ ಸೇರಿಸಲು ಸಿದ್ಧತೆ ನಡೆಸಿದೆ.

Jio Tariff Hike: ಏರ್ಟೆಲ್, ವಿ ಬಳಿಕ ಈಗ ಜಿಯೋದಿಂದ ಗ್ರಾಹಕರಿಗೆ ಬಿಗ್ ಶಾಕ್: ಪ್ಲಾನ್​ಗಳ ಬೆಲೆಯಲ್ಲಿ ಏರಿಕೆ

UAN Aadhaar Link: ಯುಎಎನ್ ಜೊತೆ ಆಧಾರ್‌ ಲಿಂಕ್‌ ಮಾಡಲು ನವೆಂಬರ್ 30 ಕಡೇ ದಿನ: ಲಿಂಕ್‌ ಮಾಡುವುದು ಹೇಗೆ?

(WhatsApp new feature will make it simpler for users to forward stickers to their contacts)