WhatsApp Tricks: ನಿಮ್ಮ ಸ್ನೇಹಿತರಿಗೆ ತಿಳಿಯದಂತೆ ವಾಟ್ಸ್​ಆ್ಯಪ್ ಮೆಸೇಜ್ ನೋಡಬಹುದು: ಹೇಗೆ ಗೊತ್ತೇ?

| Updated By: Vinay Bhat

Updated on: Sep 02, 2022 | 12:54 PM

Tech Tips and Tricks: ನಿಮ್ಮ ಸ್ನೇಹಿತರ ವಾಟ್ಸ್​ಆ್ಯಪ್ ಮೆಸೇಜ್ ನೋಡಿದರೂ ಬ್ಲೂ ಟಿಕ್ ಬಾರದಂತೆ ಮಾಡಲು ವಾಟ್ಸ್​ಆ್ಯಪ್​ನಲ್ಲಿಯೇ ಆಯ್ಕೆ ಇದೆ. ಇದಕ್ಕಾಗಿ ಕೆಳಗಿನ ಟಿಪ್ಸ್ ಫಾಲೋ ಮಾಡಿ.

WhatsApp Tricks: ನಿಮ್ಮ ಸ್ನೇಹಿತರಿಗೆ ತಿಳಿಯದಂತೆ ವಾಟ್ಸ್​ಆ್ಯಪ್ ಮೆಸೇಜ್ ನೋಡಬಹುದು: ಹೇಗೆ ಗೊತ್ತೇ?
WhatsApp Tips and Tricks
Follow us on

ಪ್ರಸಿದ್ಧ ವಾಟ್ಸ್​ಆ್ಯಪ್ (WhatsApp) ಇಂದು ಕೋಟ್ಯಾಂತರ ಜನರ ನೆಚ್ಚಿನ ಮೆಸೇಜಿಂಗ್ ಅಪ್ಲಿಕೇಷನ್ ಆಗಿದೆ. ದಿನದ ಆರಂಭ ಹಾಗೂ ದಿನದ ಕೊನೆ ಇದರಿಂದಲೇ ಆಗುತ್ತದೆ ಎಂದರೆ ತಪ್ಪಾಗಲಾರದು. ವಾಟ್ಸ್​ಆ್ಯಪ್ ಜನರಿಗೆ ಇಷ್ಟೊಂದು ಹತ್ತಿರವಾಗಲು ಮುಖ್ಯ ಕಾರಣ ಇದರಲ್ಲಿರುವ ಫೀಚರ್ಸ್ (Features). ಅತ್ಯಂತ ಸುಲಭವಾಗಿ ಕಾರ್ಯನಿರ್ವಹಿಸುವ ಆಯ್ಕೆಗಳನ್ನು ವಾಟ್ಸ್​ಆ್ಯಪ್ ತನ್ನ ಬಳಕೆದಾರರಿಗೆ ನೀಡಿದೆ. ಈಗಂತು ಒಂದರ ಹಿಂದೆ ಒಂದರಂತೆ ಆಕರ್ಷಕ ಅಪ್ಡೇಟ್​ಗಳನ್ನು ಕಂಪನಿ ನೀಡುತ್ತಿದೆ. ಅಂತೆಯೆ ವಾಟ್ಸ್​ಆ್ಯಪ್​ನಲ್ಲಿ ನಿಮಗೆ ತಿಳಿದಿರದ ಅನೇಕ ಆಯ್ಕೆಗಳಿವೆ. ಕೆಲವೊಂದು ಟ್ರಿಕ್ಸ್​ಗಳನ್ನು (Tricks) ಬಳಸಿಕೊಂಡು ವಾಟ್ಸ್​ಆ್ಯಪ್ ಅನ್ನು ನಿಮಗೆ ಬೇಕಾದ ರೀತಿಯಲ್ಲಿ ಬಳಸಬಹುದು.

ಅಂತೆಯೆ ವಾಟ್ಸ್​ಆ್ಯಪ್​ನಲ್ಲಿ​ ಬಂದ ಮೆಸೇಜ್ ಅನ್ನು ತೆರೆದು ನೋಡಿದರೆ ಅದರಲ್ಲಿ ಬ್ಲೂ ಟಿಕ್ ಕಾಣಿಸುತ್ತದೆ. ನಮಗೆ ಆ ಮೆಸೇಜ್ ನೋಡಬೇಕು ಆದರೆ ಬ್ಲೂ ಟಿಕ್ ಬರಬಾರದು ಎಂದು ಕೆಲವರು ಇದಕ್ಕಾಗಿ ಥರ್ಡ್ ಪಾರ್ಟಿ ಆ್ಯಪ್ ಮೊರೆ ಹೋಗುತ್ತಾರೆ. ಇದಕ್ಕಾಗಿ ನೀವು ಯಾವುದೇ ಮೂರನೇ ಅಪ್ಲಿಕೇಷನ್ ಅನ್ನು ಇನ್​ಸ್ಟಾಲ್ ಮಾಡಬೇಕೆಂದಿಲ್ಲ. ಬದಲಾಗಿ ನೀವು ನಿಮ್ಮ ಸ್ನೇಹಿತರ ವಾಟ್ಸ್​ಆ್ಯಪ್ ಮೆಸೇಜ್ ನೋಡಿದರೂ ಬ್ಲೂ ಟಿಕ್ ಬಾರದಂತೆ ಮಾಡಲು ವಾಟ್ಸ್​ಆ್ಯಪ್​ನಲ್ಲಿಯೇ ಆಯ್ಕೆ ಇದೆ. ಇದಕ್ಕಾಗಿ ಕೆಳಗಿನ ಟಿಪ್ಸ್ ಫಾಲೋ ಮಾಡಿ.

  • ಫೋನ್​ನಲ್ಲಿ ವಾಟ್ಸ್​ಆ್ಯಪ್ ತೆರೆಯಿರಿ ಮತ್ತು ಮೇಲ್ಬಾಗದಲ್ಲಿರುವ ಮೂರು ಡಾಟ್ ಕ್ಲಿಕ್ ಮಾಡಿ.
  • ಸೆಟ್ಟಿಂಗ್ಸ್ ಆಯ್ಕೆಯ ಒಳಹೊಕ್ಕಿ ಅಕೌಂಟ್ ಅನ್ನು ಸೆಲೆಕ್ಟ್ ಮಾಡಿ.
  • ನಂತರ ಪ್ರೈವಸಿ ಎಂದು ಬರೆದಿರುವುದು ಕಾಣಿಸುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ.
  • ಪ್ರೈವಸಿ ಫೀಚರ್ ಒಳಗಡೆ ರೀಡ್ ರಿಸಿಪ್ಟ್ ಆಯ್ಕೆಯನ್ನು ಆಫ್ ಮಾಡಿದರೆ ಆಯಿತು.
  • ಈ ಟ್ರಿಕ್ಸ್ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಲಭ್ಯವಿದೆ.

ನಿಮ್ಮ ಫೋನ್​ನಲ್ಲಿನ ನೋಟಿಫಿಕೇಷನ್ ಆಯ್ಕೆಯಲ್ಲಿ ಕೆಲವೊಂದು ಬದಲಾವಣೆ ಮಾಡುವ ಮೂಲಕವೂ ವಾಟ್ಸ್​ಆ್ಯಪ್ ಮೆಸೇಜ್ ಅನ್ನು ವೀಕ್ಷಿಸಬಹುದು. ಇದಕ್ಕಾಗಿ ಈ ಕೆಳಗಿನ ಸೂತ್ರ ಅನುಸರಿಸಿ.

ಇದನ್ನೂ ಓದಿ
Infinix Note 12 Pro 4G: 108MP ಕ್ಯಾಮೆರಾದ ಈ ಹೊಸ ಫೋನಿನ ಮಾರಾಟ ಆರಂಭ: ಆಫರ್​ನಲ್ಲಿ ಕಡಿಮೆ ಬೆಲೆಗೆ ಖರೀದಿಸಿ
ಟ್ವೀಟ್ ಮಾಡಿದ ನಂತರ ಅದನ್ನು ಎಡಿಟ್ ಮಾಡುವ ಅವಕಾಶ ನೀಡಲಿದೆ ಟ್ವಿಟರ್
iPhone 14 Series: ಬಿಡುಗಡೆಗೆ ಕೆಲವೇ ದಿನವಿರುವಾಗ ಸೋರಿಕೆ ಆಯ್ತು ಐಫೋನ್ 14 ಬೆಲೆ: ಎಷ್ಟು ಗೊತ್ತೇ?
Nokia 2660 Flip: ಭಾರತದಲ್ಲಿ ಧೂಳೆಬ್ಬಿಸುತ್ತಿದೆ ನೋಕಿಯಾದ ಹೊಸ ಫೋನ್: ಯಾವುದು?, ಬೆಲೆ ಎಷ್ಟು?
  • ಫೋನ್​ನಲ್ಲಿ ವಾಟ್ಸ್​ಆ್ಯಪ್ ತೆರೆಯಿರಿ ಮತ್ತು ಮೇಲ್ಬಾಗದಲ್ಲಿರುವ ಮೂರು ಡಾಟ್ ಕ್ಲಿಕ್ ಮಾಡಿ.
  • ಸೆಟ್ಟಿಂಗ್ಸ್ ಆಯ್ಕೆಯ ಒಳಹೊಕ್ಕಿ ನೋಟಿಫಿಕೇಷನ್ ಅನ್ನು ಸೆಲೆಕ್ಟ್ ಮಾಡಿ.
  • ಅಲ್ಲಿ ಕಾಣಿಸುವ ಪಾಪ್ಅಪ್ ನೋಟಿಫಿಕೇಷನ್ ಆಯ್ಕೆಯನ್ನು ಆನ್ ಮಾಡಿ.
  • ಆಗ ಮೂರು ಆಯ್ಕೆಗಳು ಕಾಣಿಸುತ್ತದೆ. ಅದನ್ನು ಓದಿ ನಿಮಗೆ ಬೇಕಾದ ಆಯ್ಕೆಯನ್ನು ಸೆಲೆಕ್ಟ್ ಮಾಡಿ.
  • ಹೀಗೆ ಮಾಡಿದ ನಂತರ ವಾಟ್ಸ್​ಆ್ಯಪ್​ನಲ್ಲಿ ಬಂದ ಮೆಸೇಜ್ ಫೋನಿನ ಡಿಸ್ ಪ್ಲೇ ಮೇಲೆ ಪಾಪ್ಅಪ್ ಆಗಿ ಕಾಣಿಸುತ್ತದೆ.

Published On - 12:54 pm, Fri, 2 September 22