AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WhatsApp Update: ವಾಟ್ಸ್ಆ್ಯಪ್​ಗೆ ಬರಲಿದೆ ಬಹುನಿರೀಕ್ಷೆಯ ಫೀಚರ್: ಸದ್ಯದಲ್ಲೇ ಬಳಕೆದಾರರಿಗೆ ಲಭ್ಯ

ಈ ಫೀಚರ್​​ನ ಮತ್ತೊಂದು ವೈಶಿಷ್ಟ್ಯ ಎಂದರೆ, ಒಂದು ವೇಳೆ ನಿಮ್ಮ ಫೋನ್ ಸಕ್ರೀಯವಾಗಿಲ್ಲದಿದ್ದರೂ ಕೂಡ ಅಂದರೆ ನಿಮ್ಮ ಮೊಬೈಲ್​ನಲ್ಲಿ ಇಂಟರ್ನೆಟ್ ಕನೆಕ್ಟಿವಿಟಿ ಇಲ್ಲದಿದ್ದರೂ ಕೂಡ ನೀವು ಡೆಸ್ಕ್ ಟಾಪ್ ಮೇಲೆ ವಾಟ್ಸ್​ಆ್ಯಪ್​​ ಚಾಟಿಂಗ್ ನಡೆಸಬಹುದು.

WhatsApp Update: ವಾಟ್ಸ್ಆ್ಯಪ್​ಗೆ ಬರಲಿದೆ ಬಹುನಿರೀಕ್ಷೆಯ ಫೀಚರ್: ಸದ್ಯದಲ್ಲೇ ಬಳಕೆದಾರರಿಗೆ ಲಭ್ಯ
ವಾಟ್ಸ್​ಆ್ಯಪ್ ಪ್ರಾತಿನಿಧಿಕ ಚಿತ್ರ
TV9 Web
| Updated By: Vinay Bhat|

Updated on: Jul 15, 2021 | 3:49 PM

Share

ಬಳಕೆದಾರರಿಗೆ ಸದಾ ಒಂದಲ್ಲಾ ಒಂದು ಹೊಸ ಅಪ್ಡೇಟ್​ಗಳನ್ನು ನೀಡುತ್ತಾ ಬರುತ್ತಿರುವ ಫೇಸ್​ಬುಕ್ (Facebook) ಒಡೆತನದ ವಾಟ್ಸ್​ಆ್ಯಪ್ ಸದ್ಯ ಉಪಯುಕ್ತವಾದ ಫೀಚರ್ ಒಂದನ್ನು ಪರಿಚಯಿಸಲು ಮುಂದಾಗಿದೆ. ಈ ನೂತನ ವೈಶಿಷ್ಟ್ಯದ ಹೆಸರು Multi-Device ಸಪೋರ್ಟ್ (WhatsApp Multi-Device Support Feature). ಈ ಹೊಸ ಅಪ್ಡೇಟ್​ನ ಸಹಾಯದಿಂದ ಬಳಕೆದಾರರು ಫೋನ್ ಹೊರತುಪಡಿಸಿ, ಇತರೆ ನಾಲ್ಕು ಡಿವೈಸ್​ಗಳ ಮೇಲೆ ವಾಟ್ಸ್​ಆ್ಯಪ್​ ಖಾತೆಯನ್ನು ನಿರ್ವಹಿಸಬಹುದು. ಅಂದರೆ ಬಳಕೆದಾರರು ತಮ್ಮ ಫೋನ್‌ನಲ್ಲಿ ಮತ್ತು ಇತರ ನಾಲ್ಕು ಫೋನ್ ಅಲ್ಲದ ಡಿವೈಸ್‌ಗಳಲ್ಲಿ ಏಕಕಾಲದಲ್ಲಿ ಒಂದೇ ಸಂಖ್ಯೆಯ ವಾಟ್ಸ್​ಆ್ಯಪ್ (WhatApp)​​ ಖಾತೆಯನ್ನು ಪ್ರವೇಶಿಸಲು ಅನುಮತಿಸುತ್ತದೆ.

ಹೀಗೆ ಖಾತೆ ಲಿಂಕ್ ಆದರೂ ಕೂಡ ಬಳಕೆದಾರರ ಪ್ರೈವೆಸಿಗೆ ಯಾವುದೇ ಧಕ್ಕೆ ಉಂಟಾಗುವುದಿಲ್ಲ ಎಂದು ವಾಟ್ಸ್​ಆ್ಯಪ್ ಹೇಳಿದೆ. ಪ್ರಸ್ತುತ, ಒಂದು ಖಾತೆ ಸಂಖ್ಯೆಗೆ ಲಿಂಕ್ ಮಾಡಲಾದ ವಾಟ್ಸ್​ಆ್ಯಪ್​​ ಫೋನ್‌ನಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತದೆ. ಬಳಕೆದಾರರು ಅದನ್ನು ತಮ್ಮ ಡೆಸ್ಕ್‌ಟಾಪ್‌ನಲ್ಲಿ ವಾಟ್ಸ್​ಆ್ಯಪ್​​ ವೆಬ್ ಮೂಲಕ ಪ್ರವೇಶಿಸುವಬಹುದು.

ಅಲ್ಲದೆ ಈಗ ಇರುವ ಫೀಚರ್​​ನ ಪ್ರಕಾರ ವೆಬ್‌ನಲ್ಲಿ ವಾಟ್ಸ್​ಆ್ಯಪ್​​ ಕಾರ್ಯನಿರ್ವಹಿಸಬೇಕಾದರೆ ಮೊಬೈಲ್‌ನಲ್ಲಿ ಕೂಡ ನೆಟ್‌ ಆನ್‌ ಆಗಿರಬೇಕಾಗುತ್ತದೆ. ಆದರೆ ಮಲ್ಟಿ ಡಿವೈಸ್‌ ಸಾಮರ್ಥ್ಯ ಫೀಚರ್ಸ್‌ ಇದೆಲ್ಲವನ್ನೂ ಬದಲಾಯಿಸಲಿದೆ. ಬರಲಿರುವ ಹೊಸ ಅಪ್ಡೇಟ್​ನಲ್ಲಿ ಪ್ರತಿ ಸಹವರ್ತಿ ಸಾಧನವು ನಿಮ್ಮ ವಾಟ್ಸ್​ಆ್ಯಪ್​​ಗೆ ಸ್ವತಂತ್ರವಾಗಿ ಸಂಪರ್ಕ ಸಾಧಿಸುತ್ತದೆ ಮತ್ತು ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಮೂಲಕ ನಿರ್ವಹಿಸುತ್ತದೆ ಎಂದು ಕಂಪೆನಿ ಹೇಳಿದೆ.

ಈ ಫೀಚರ್​​ನ ಮತ್ತೊಂದು ವೈಶಿಷ್ಟ್ಯ ಎಂದರೆ, ಒಂದು ವೇಳೆ ನಿಮ್ಮ ಫೋನ್ ಸಕ್ರೀಯವಾಗಿಲ್ಲದಿದ್ದರೂ ಕೂಡ ಅಂದರೆ ನಿಮ್ಮ ಮೊಬೈಲ್​ನಲ್ಲಿ ಇಂಟರ್ನೆಟ್ ಕನೆಕ್ಟಿವಿಟಿ ಇಲ್ಲದಿದ್ದರೂ ಕೂಡ ನೀವು ಡೆಸ್ಕ್ ಟಾಪ್ ಮೇಲೆ ವಾಟ್ಸ್​ಆ್ಯಪ್​​ ಚಾಟಿಂಗ್ ನಡೆಸಬಹುದು. ಆದರೆ, ಬೇರೆ ಡಿವೈಸ್ ಮೇಲೆ ವಾಟ್ಸ್​ಆ್ಯಪ್​​ ಬಳಸಲು ಇಂಟರ್ನೆಟ್ ಅವಶ್ಯಕತೆ ಇದೆ. ಕಂಪನಿ ಪ್ರಸ್ತುತ ಈ ವೈಶಿಷ್ಟ್ಯವನ್ನು ಬೀಟಾ ವರ್ಶನ್ ಗಾಗಿ ಮಾತ್ರ ರೋಲ್ಔಟ್ ಮಾಡಿದೆ.

ಇನ್ನೂ ಬಳಕೆದಾರರು ತಮ್ಮ ಖಾತೆಗೆ ಯಾವ ಸಾಧನಗಳನ್ನು ಲಿಂಕ್ ಮಾಡಿದ್ದಾರೆ ಎಂಬುದರ ಕುರಿತು ಹೆಚ್ಚುವರಿ ನಿಯಂತ್ರಣ ಮತ್ತು ರಕ್ಷಣೆಗಳನ್ನು ಸಹ ಪಡೆಯುತ್ತಾರೆ. ಮೊದಲಿಗೆ, ಪ್ರತಿಯೊಬ್ಬರೂ ತಮ್ಮ ಫೋನ್‌ನಿಂದ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಹೊಸ ಒಡನಾಡಿ ಸಾಧನಗಳನ್ನು ಲಿಂಕ್ ಮಾಡುವ ಅಗತ್ಯವಿರುತ್ತದೆ. ಅಂದರೆ ಈ ಹೊಸ ಆಯ್ಕೆಯನ್ನು ನೀವು ಎಲ್ಲೇ ಬಳಸಬೇಕು ಎಂದಿದ್ದರೆ ನಿಮ್ಮ ಬಯೋಮೆಟ್ರಿಕ್ ದೃಡೀಕರಣದ ಅಗತ್ಯವಿರುತ್ತದೆ.

ಅಂತಿಮವಾಗಿ, ಜನರು ತಮ್ಮ ಖಾತೆಗೆ ಲಿಂಕ್ ಮಾಡಲಾದ ಎಲ್ಲಾ ಸಹವರ್ತಿ ಸಾಧನಗಳನ್ನು ನೋಡಲು ಸಾಧ್ಯವಾಗುತ್ತದೆ ಮತ್ತು ಅವು ಕೊನೆಯದಾಗಿ ಬಳಸಿದಾಗ ಮತ್ತು ಅಗತ್ಯವಿದ್ದರೆ ಅವುಗಳಿಂದ ದೂರದಿಂದಲೇ ಲಾಗ್ ಔಟ್ ಮಾಡಲು ಸಾಧ್ಯವಾಗುತ್ತದೆ. ಸದ್ಯಕ್ಕೆ ವಾಟ್ಸ್​ಆ್ಯಪ್​ನ ಬೀಟಾ ಪ್ರೋಗ್ರಾಮ್ ಭಾಗವಾಗಿರುವ ಬಳಕೆದಾರರಿಗೆ ಕಂಪನಿ ಈ ವೈಶಿಷ್ಟ್ಯವನ್ನು ನೀಡದೆ. ಮುಂದಿನ ದಿನಗಳಲ್ಲಿ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೂ ಈ ಆಯ್ಕೆ ಲಭ್ಯವಾಗಲಿದೆ.

ನಿಮ್ಮ ಸ್ಮಾರ್ಟ್​ಫೋನ್ ತಕ್ಷಣ ಹೈ ಸ್ಪೀಡ್​ನಲ್ಲಿ ಚಾರ್ಜ್ ಆಗಬೇಕಾ: ಇಲ್ಲಿದೆ ನೋಡಿ ಟ್ರಿಕ್

ಬಂಪರ್ ಪ್ರೊಸೆಸರ್, ಅದ್ಭುತ ಕ್ಯಾಮೆರಾ-ಬ್ಯಾಟರಿ: Redmi Note 10T ಫೋನಿನ 5G ಬೆಲೆ ಇಷ್ಟೆನಾ?

(WhatsApp Update WhatsApp rolls out multi-device feature for limited users)

ಕೇಸ್ ವಾಪಸ್ ತೆಗೆದುಕೊಂಡರೆ ಮನು ವಿರುದ್ಧ ಸಾಕ್ಷಿ ಬಿಡ್ತೀನಿ: ಸಂತ್ರಸ್ತೆ
ಕೇಸ್ ವಾಪಸ್ ತೆಗೆದುಕೊಂಡರೆ ಮನು ವಿರುದ್ಧ ಸಾಕ್ಷಿ ಬಿಡ್ತೀನಿ: ಸಂತ್ರಸ್ತೆ
ಸಿನಿಮಾ ಆರಿಸಿಕೊಂಡಿದ್ದೇಕೆ? ಜನಾರ್ಧನ ರೆಡ್ಡಿ ಪುತ್ರನ ಉತ್ತರ
ಸಿನಿಮಾ ಆರಿಸಿಕೊಂಡಿದ್ದೇಕೆ? ಜನಾರ್ಧನ ರೆಡ್ಡಿ ಪುತ್ರನ ಉತ್ತರ
ಪಕ್ಷದ ಕಾರ್ಯದರ್ಶಿ ಮತ್ತು ಅಧಿಕಾರಿಗಳ ಸಭೆ ರಾಮನಗರದಲ್ಲಿ ನಡೆಯಲಿದೆ: ಶಾಸಕ
ಪಕ್ಷದ ಕಾರ್ಯದರ್ಶಿ ಮತ್ತು ಅಧಿಕಾರಿಗಳ ಸಭೆ ರಾಮನಗರದಲ್ಲಿ ನಡೆಯಲಿದೆ: ಶಾಸಕ
ಮನೆಯಲ್ಲಿ ಯಾರೂ ಇಲ್ಲದಿದ್ದಾಗ 3ನೇ ಮಹಡಿಯ ಕಿಟಕಿಯಿಂದ ಹೊರಗೆ ನೇತಾಡಿದ ಮಗು
ಮನೆಯಲ್ಲಿ ಯಾರೂ ಇಲ್ಲದಿದ್ದಾಗ 3ನೇ ಮಹಡಿಯ ಕಿಟಕಿಯಿಂದ ಹೊರಗೆ ನೇತಾಡಿದ ಮಗು
ಸುರ್ಜೇವಾಲಾ ಶಾಸಕರನ್ನು ಭೇಟಿಯಾಗುತ್ತಿರುವುದು ಒಂದು ಪ್ರಕ್ರಿಯೆ: ಲಕ್ಷ್ಮಿ
ಸುರ್ಜೇವಾಲಾ ಶಾಸಕರನ್ನು ಭೇಟಿಯಾಗುತ್ತಿರುವುದು ಒಂದು ಪ್ರಕ್ರಿಯೆ: ಲಕ್ಷ್ಮಿ
ಸರ್ಕಾರೀ ಕೆಲಸದ ನಿಮಿತ್ತ ಸಿಎಂ, ಡಿಸಿಎಂ ದೆಹಲಿ ಹೋಗಿರಬಹುದು: ದೇಶಪಾಂಡೆ
ಸರ್ಕಾರೀ ಕೆಲಸದ ನಿಮಿತ್ತ ಸಿಎಂ, ಡಿಸಿಎಂ ದೆಹಲಿ ಹೋಗಿರಬಹುದು: ದೇಶಪಾಂಡೆ
ಐಶ್ವರ್ಯಾ ಗೌಡ ವಂಚನೆ ಪ್ರಕರಣ: ಮತ್ತೆ ಇಡಿ ವಿಚಾರಣೆಗೆ ಹಾಜರಾದ ಡಿಕೆ ಸುರೇಶ್
ಐಶ್ವರ್ಯಾ ಗೌಡ ವಂಚನೆ ಪ್ರಕರಣ: ಮತ್ತೆ ಇಡಿ ವಿಚಾರಣೆಗೆ ಹಾಜರಾದ ಡಿಕೆ ಸುರೇಶ್
ಊರಿಗೆ ರಸ್ತೆಗಿಂತ ಬಡವನ ಹೊಟ್ಟೆಗೆ ಅನ್ನ ಮತ್ತು ಮೈಗೆ ಬಟ್ಟೆ ಮುಖ್ಯ: ಸವದಿ
ಊರಿಗೆ ರಸ್ತೆಗಿಂತ ಬಡವನ ಹೊಟ್ಟೆಗೆ ಅನ್ನ ಮತ್ತು ಮೈಗೆ ಬಟ್ಟೆ ಮುಖ್ಯ: ಸವದಿ
ಇವತ್ತು ಸಿದ್ದೇಶ್ವರ ಹುಟ್ಟುಹಬ್ಬ, ವಿಶ್ ಮಾಡಲು ಬಂದಿದ್ದೇವೆ: ಹರೀಶ್
ಇವತ್ತು ಸಿದ್ದೇಶ್ವರ ಹುಟ್ಟುಹಬ್ಬ, ವಿಶ್ ಮಾಡಲು ಬಂದಿದ್ದೇವೆ: ಹರೀಶ್
ರೆಬೆಲ್ ನಾಯಕರಲ್ಲಿ ಕುಮಾರ ಬಂಗಾರಪ್ಪ ಉಳಿದವರಿಗಿಂತ ಜಾಸ್ತಿ ಜನಪ್ರಿಯ
ರೆಬೆಲ್ ನಾಯಕರಲ್ಲಿ ಕುಮಾರ ಬಂಗಾರಪ್ಪ ಉಳಿದವರಿಗಿಂತ ಜಾಸ್ತಿ ಜನಪ್ರಿಯ