WhatsApp New Feature: ವಾಟ್ಸ್​ಆ್ಯಪ್​ನಿಂದ ಬಂತು ಊಹಿಸಲಾಗದ ಫೀಚರ್: ಒಂದೆ ಆ್ಯಪ್​ನಲ್ಲಿ ಎರಡು ಅಕೌಂಟ್

|

Updated on: Oct 20, 2023 | 4:23 PM

Two WhatsApp Accounts on One Phone: ಒಂದು ಸ್ಮಾರ್ಟ್​ಫೋನ್​ನಲ್ಲಿ ಎರಡು ವಿಭಿನ್ನ ವಾಟ್ಸ್​ಆ್ಯಪ್​ ಖಾತೆಗಳನ್ನು ಬಳಸಲು ಜನರು ಈ ಹಿಂದೆ ಡ್ಯುಯಲ್ ಅಥವಾ ಕ್ಲೋನ್ ಅಪ್ಲಿಕೇಶನ್ ವೈಶಿಷ್ಟ್ಯವನ್ನು ಬಳಸಬೇಕಾಗಿತ್ತು. ಆದರೀಗ ಒಂದು ವಾಟ್ಸ್​ಆ್ಯಪ್ ಅಪ್ಲಿಕೇಶನ್‌ನಲ್ಲಿ ನೀವು ಎರಡು ಮೊಬೈಲ್ ಸಂಖ್ಯೆಗಳನ್ನು ಬಳಸಬಹುದಾಗಿದೆ. ಇದನ್ನು ಹೇಗೆ ಬಳಸುವುದು ಎಂಬುದನ್ನು ನೋಡೋಣ.

WhatsApp New Feature: ವಾಟ್ಸ್​ಆ್ಯಪ್​ನಿಂದ ಬಂತು ಊಹಿಸಲಾಗದ ಫೀಚರ್: ಒಂದೆ ಆ್ಯಪ್​ನಲ್ಲಿ ಎರಡು ಅಕೌಂಟ್
WhatsApp New Feature
Follow us on

ಬಳಕೆದಾರರ ಅನುಭವವನ್ನು ಸುಧಾರಿಸಲು ವಾಟ್ಸ್​ಆ್ಯಪ್ (WhatsApp)​ ತನ್ನ ಮೆಸೇಜಿಂಗ್ ಅಪ್ಲಿಕೇಶನ್‌ಗೆ ಅನೇಕ ಪ್ರಮುಖ ವೈಶಿಷ್ಟ್ಯಗಳನ್ನು ಬಿಡುಗಡೆ ಮಾಡುತ್ತಿದೆ. ಇತ್ತೀಚೆಗಷ್ಟೆ ಚಾಟ್ ಲಾಕ್, HD ಫೋಟೋ ಆಯ್ಕೆ, ಮೆಸೇಜ್​ಗಳನ್ನು ಎಡಿಟ್ ಮಾಡುವುದು, ಸ್ಕ್ರೀನ್ ಹಂಚಿಕೆ ಹೀಗೆ ಒಂದರ ಹಿಂದೆ ಒಂದರಂತೆ ನೂತನ ಅಪ್ಡೇಟ್ ಪರಿಚಯಿಸುತ್ತದೆ. ಇವೆಲ್ಲವೂ ಬಹಳ ಮುಖ್ಯವಾದ ವಾಟ್ಸ್​ಆ್ಯಪ್​ ವೈಶಿಷ್ಟ್ಯಗಳಾಗಿದ್ದು, ಜನರಿಗೆ ಮತ್ತಷ್ಟು ಹತ್ತಿರವಾಗಿದೆ. ಈಗ, ಮತ್ತೊಂದು ಊಹಿಸಲಾಗದ ಫೀಚರ್ ಅನ್ನು ವಾಟ್ಸ್​ಆ್ಯಪ್​ ನೀಡಿದ್ದು, ಇದೀಗ ಒಂದೇ ಅಪ್ಲಿಕೇಶನ್‌ನಲ್ಲಿ ಎರಡು ಮೊಬೈಲ್ ಸಂಖ್ಯೆಗಳನ್ನು ಬಳಸಬಹುದಾಗಿದೆ.

ಒಂದು ಸ್ಮಾರ್ಟ್​ಫೋನ್​ನಲ್ಲಿ ಎರಡು ವಿಭಿನ್ನ ವಾಟ್ಸ್​ಆ್ಯಪ್​ ಖಾತೆಗಳನ್ನು ಬಳಸಲು ಜನರು ಈ ಹಿಂದೆ ಡ್ಯುಯಲ್ ಅಥವಾ ಕ್ಲೋನ್ ಅಪ್ಲಿಕೇಶನ್ ವೈಶಿಷ್ಟ್ಯವನ್ನು ಬಳಸಬೇಕಾಗಿತ್ತು. ಆದರೀಗ ಒಂದು ವಾಟ್ಸ್​ಆ್ಯಪ್ ಅಪ್ಲಿಕೇಶನ್‌ನಲ್ಲಿ ನೀವು ಎರಡು ಮೊಬೈಲ್ ಸಂಖ್ಯೆಗಳನ್ನು ಬಳಸಬಹುದಾಗಿದೆ. ಇದನ್ನು ಹೇಗೆ ಬಳಸುವುದು ಎಂಬುದನ್ನು ನೋಡೋಣ.

ಭಾರತದಲ್ಲಿ ಪಿಕ್ಸೆಲ್ ಸರಣಿಯ ಸ್ಮಾರ್ಟ್​ಫೋನ್ ತಯಾರಿಸಲು ಮುಂದಾದ ಗೂಗಲ್

ಇದನ್ನೂ ಓದಿ
ಒನ್​ಪ್ಲಸ್​ನ ಚೊಚ್ಚಲ ಮಡುಚುವ ಫೋನ್ ರಿಲೀಸ್: ಬೆಲೆ ಕೇಳಿದ್ರೆ ಶಾಕ್ ಆಗ್ತೀರಿ
Tech Tips: ಮೊಬೈಲ್ ಬ್ಯಾಟರಿ ಹಾಳಾಗದಂತೆ ಎಚ್ಚರಿಕೆ ವಹಿಸುವುದು ಹೇಗೆ?
ಮೊಬೈಲ್‌ನ ಜೀವಿತಾವಧಿ ಎಷ್ಟು?: ಒಂದು ಫೋನ್ ಅನ್ನು ಎಷ್ಟು ವರ್ಷ ಬಳಸಬಹುದು?
ವಾಟ್ಸ್​ಆ್ಯಪ್ ವಾಯ್ಸ್ ನೋಟ್​ನಲ್ಲಿ ಅಚ್ಚರಿ ಆಯ್ಕೆ
  • ವಾಟ್ಸ್​ಆ್ಯಪ್​ ಅಪ್ಲಿಕೇಶನ್‌ನಲ್ಲಿ ಎರಡನೇ ಖಾತೆಯನ್ನು ರಚಿಸುವುದು ಸರಳ ಪ್ರಕ್ರಿಯೆಯಾಗಿದೆ. ಇದಕ್ಕಾಗಿ ನಿಮ್ಮ ಫೋನ್​ನಲ್ಲಿ ಎರಡನೇ ಸಿಮ್ ಅಥವಾ eSIM ತಂತ್ರಜ್ಞಾನವನ್ನು ಬೆಂಬಲಿಸುವ ಸಾಧನದ ಅಗತ್ಯವಿರುತ್ತದೆ.
  • ವಾಟ್ಸ್​ಆ್ಯಪ್​ ಸೆಟ್ಟಿಂಗ್‌ಗಳಿಗೆ ಹೋಗಿ ಮತ್ತು ನಿಮ್ಮ ಹೆಸರಿನ ಮುಂದೆ ಇರುವ ಬಾಣದ ಮೇಲೆ ಟ್ಯಾಪ್ ಮಾಡಿ.
  • ನೀವು ಈಗ “ಆ್ಯಡ್ ಅಕೌಂಟ್” ಆಯ್ಕೆ ಮಾಡಬೇಕಾಗುತ್ತದೆ. ಈ ಹಂತವು ನಿಮ್ಮ ಎರಡನೇ ಖಾತೆಗೆ ಸೆಟಪ್ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತದೆ.

ಗಮನಿಸಿ: ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ನ ಅಧಿಕೃತ ಬ್ಲಾಗ್‌ನಲ್ಲಿ ಉಲ್ಲೇಖಿಸಲಾದ ವಿವರಗಳ ಪ್ರಕಾರ, ನಿಮ್ಮ ಪ್ರತಿಯೊಂದು ಖಾತೆಗಳಿಗೆ ಗೌಪ್ಯತೆ ಮತ್ತು ಅಧಿಸೂಚನೆ ಸೆಟ್ಟಿಂಗ್‌ಗಳ ಮೇಲೆ ನೀವು ಸಂಪೂರ್ಣ ನಿಯಂತ್ರಣವನ್ನು ಹೊಂದಿರುತ್ತೀರಿ.

ಸದ್ಯಕ್ಕೆ ವಾಟ್ಸ್​ಆ್ಯಪ್​ ಈ ವೈಶಿಷ್ಟ್ಯವನ್ನು ಪ್ರಕಟಿಸಿದೆಯಷ್ಟೆ. ಮುಂಬರುವ ವಾರಗಳಲ್ಲಿ ಒಂದು ಅಪ್ಲಿಕೇಶನ್‌ನಲ್ಲಿ ಬಹು ಖಾತೆಗಳನ್ನು ಹೊರತರಲಾಗುವುದು ಎಂದು ದೃಢಪಡಿಸಿದೆ. ಅಂದರೆ ಅಕ್ಟೋಬರ್ ಅಂತ್ಯದ ವೇಳೆಗೆ ಅಥವಾ ನವೆಂಬರ್ ಆರಂಭದಲ್ಲಿ ನೀವು ಇದನ್ನು ನಿರೀಕ್ಷಿಸಬಹುದು. ಪ್ರಸ್ತುತ, ವಾಟ್ಸ್​ಆ್ಯಪ್​ನ ಬೀಟಾ ಪರೀಕ್ಷಕರು ಈ ವೈಶಿಷ್ಟ್ಯವನ್ನು ಬಳಸಲು ಪ್ರಾರಂಭಿಸಬಹುದು. ಈ ವೈಶಿಷ್ಟ್ಯವು ಮೊದಲು ವಾಟ್ಸ್​ಆ್ಯಪ್​ನ ಆಂಡ್ರಾಯ್ಡ್ ಆವೃತ್ತಿಗೆ ಬರಲಿದೆ.

ವಾಯ್ಸ್ ನೋಟ್ಸ್​ನಲ್ಲಿ ‘ವೀವ್ ಒನ್ಸ್’ ವೈಶಿಷ್ಟ್ಯ:

ಇನ್‌ಸ್ಟಂಟ್ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ತನ್ನ ಐಒಎಸ್ ಮತ್ತು ಆಂಡ್ರಾಯ್ಡ್ ಎರಡರಲ್ಲೂ ಬಳಕೆದಾರರಿಗೆ ವಾಯ್ಸ್ ನೋಟ್ಸ್​ನಲ್ಲಿ ‘ವೀವ್ ಒನ್ಸ್’ ವೈಶಿಷ್ಟ್ಯವನ್ನು ಹೊರತರುತ್ತಿದೆ. ಈ ಫೀಚರ್ ಪ್ರಸ್ತುತ ಬೀಟಾ ಪರೀಕ್ಷೆಯ ಹಂತದಲ್ಲಿದೆ ಮತ್ತು ಮುಂಬರುವ ದಿನಗಳಲ್ಲಿ ಬಳಕೆದಾರರಿಗೆ ಸಿಗಲಿದೆ. ವಾಟ್ಸ್​ಆ್ಯಪ್ ಬಳಕೆದಾರರು ಈಗಾಗಲೇ ಆ್ಯಪ್‌ನಲ್ಲಿ ಯಾರಿಗಾದರು ಫೋಟೋ ಮತ್ತು ವಿಡಿಯೋಗಳನ್ನು ಕಳುಹಿಸುವಾಗ ‘ವೀನ್ ಒನ್ಸ್’ ಆಯ್ಕೆಯನ್ನು ಆರಿಸಿಕೊಳ್ಳಬಹುದು. ಈಗ ಅದೇ ಫೀಚರ್ ವಾಯ್ಸ್ ನೋಟ್‌ಗಳಿಗೂ ಬರಲಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ