Womans Day 2025 Gift: ರೂ. 81 ಸಾವಿರ ಮೌಲ್ಯದ ಐಫೋನ್ 16 ಕೇವಲ 50 ಸಾವಿರಕ್ಕೆ ಖರೀದಿಸಿ
Apple iPhone 16 Offer: ಐಫೋನ್ 16 (128GB) ರೂಪಾಂತರದ ಬೆಲೆ 79,900 ರೂ. ಮತ್ತು ನೀವು ಅದನ್ನು ಪ್ರಸಿದ್ಧ ಇ ಕಾಮರ್ಸ್ ತಾಣ ಅಮೆಜಾನ್ನಿಂದ ಆರ್ಡರ್ ಮಾಡಬಹುದು. ಅಮೆಜಾನ್‌ನಲ್ಲಿ ಈ ಫೋನ್ ಮೇಲೆ ನೇರ ಶೇ. 9 ರಷ್ಟು ರಿಯಾಯಿತಿ ಲಭ್ಯವಿದೆ ಮತ್ತು ನೀವು ಇದನ್ನು 72,900 ರೂ. ಗೆ ಆರ್ಡರ್ ಮಾಡಬಹುದು. ವಿಶೇಷವೆಂದರೆ ಈ ಫೋನ್ ಮೇಲೆ ಪ್ರತ್ಯೇಕ ರಿಯಾಯಿತಿಗಳು ಸಹ ಲಭ್ಯವಿದೆ.

(ಬೆಂಗಳೂರು, ಮಾ: 08): ಆಪಲ್ ಕಂಪನಿ ಇತ್ತೀಚೆಗಷ್ಟೆ ತನ್ನ ಹೊಸ ಐಫೋನ್ 16e (Apple iPhone 16e) ಫೋನ್ ಅನ್ನು ಬಿಡುಗಡೆ ಮಾಡಿತ್ತು. ಆದರೆ, ನೀವು ಹೊಸ ಐಫೋನ್ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ ಐಫೋನ್ 16 ನಿಮಗೆ ಉತ್ತಮ ಆಯ್ಕೆಯಾಗಿದೆ. ಯಾಕೆಂದರೆ ನೀವು ಐಫೋನ್ 16e ಬೆಲೆಗೆ ಐಫೋನ್ 16 ಅನ್ನು ಖರೀದಿಸಬಹುದು. ಇದು ನಿಮಗೆ ಅಚ್ಚರಿಯಾದರೂ ಸತ್ಯ. ಮಹಿಳಾ ದಿನಾಚರಣೆಯ ವಿಶೇಷ ಸಂದರ್ಭದ ಪ್ರಯುಕ್ತ ಮಾರಾಟ ಇದೀಗ ಪ್ರಾರಂಭವಾಗಿದೆ. ನೀವು ಅತ್ಯಂತ ಕಡಿಮೆ ಬೆಲೆಗೆ ಒಂದೊಳ್ಳೆ ಸ್ಮಾರ್ಟ್‌ಫೋನ್ ಅನ್ನು ಈ ಆಫರ್ ಮೂಲಕ ಪಡೆದುಕೊಳ್ಳಬಹುದು.
ಐಫೋನ್ 16 ನ ಅತ್ಯುತ್ತಮ ಆಫರ್ ಗಳ ವಿವರ:
ಐಫೋನ್ 16 (128GB) ರೂಪಾಂತರದ ಬೆಲೆ 79,900 ರೂ. ಮತ್ತು ನೀವು ಅದನ್ನು ಪ್ರಸಿದ್ಧ ಇ ಕಾಮರ್ಸ್ ತಾಣ ಅಮೆಜಾನ್ನಿಂದ ಆರ್ಡರ್ ಮಾಡಬಹುದು. ಅಮೆಜಾನ್‌ನಲ್ಲಿ ಈ ಫೋನ್ ಮೇಲೆ ನೇರ ಶೇ. 9 ರಷ್ಟು ರಿಯಾಯಿತಿ ಲಭ್ಯವಿದೆ ಮತ್ತು ನೀವು ಇದನ್ನು 72,900 ರೂ. ಗೆ ಆರ್ಡರ್ ಮಾಡಬಹುದು. ವಿಶೇಷವೆಂದರೆ ಈ ಫೋನ್ ಮೇಲೆ ಪ್ರತ್ಯೇಕ ರಿಯಾಯಿತಿಗಳು ಸಹ ಲಭ್ಯವಿದೆ. ವಿನಿಮಯ ಕೊಡುಗೆಯ ಅಡಿಯಲ್ಲಿ, ನಿಮಗೆ 22,800 ರೂ. ಗಳ ನೇರ ರಿಯಾಯಿತಿ ಸಿಗುತ್ತಿದೆ. ಆದರೆ ಇಷ್ಟೊಂದು ರಿಯಾಯಿತಿ ಪಡೆಯಲು, ನಿಮ್ಮ ಹಳೆಯ ಫೋನಿನ ಸ್ಥಿತಿ ಚೆನ್ನಾಗಿರಬೇಕು. ಈ ಆಫರ್ ಹಳೆಯ ಫೋನಿನ ಮಾದರಿಯನ್ನು ಅವಲಂಬಿಸಿರುತ್ತದೆ. ಫೋನ್‌ನಲ್ಲಿ EMI ಕೊಡುಗೆಯನ್ನು ಸಹ ನೀಡಲಾಗುತ್ತಿದೆ.
ಐಫೋನ್ 16 ನಲ್ಲಿ A18 ಚಿಪ್‌ಸೆಟ್ ಲಭ್ಯವಿದೆ:
ಎಲ್ಲಾ ರಿಯಾಯಿತಿ ಕೊಡುಗೆಗಳನ್ನು ಪಡೆದ ನಂತರ, ನೀವು ಈ ಫೋನ್ ಅನ್ನು 50,100 ರೂ. ಗೆ ಪಡೆಯಬಹುದು. ನೀವು ಇದರಲ್ಲಿರುವ ಫೀಚರ್ಸ್ ಬಗ್ಗೆ ಚಿಂತಿಸಬೇಕಾಗಿಲ್ಲ. ಈ ಫೋನ್ ಅತ್ಯುತ್ತಮ ಕಾರ್ಯಕ್ಷಮತೆ, ಶಕ್ತಿಶಾಲಿ ಕ್ಯಾಮೆರಾ ಮತ್ತು ಮುಂದುವರಿದ AI ವೈಶಿಷ್ಟ್ಯಗಳೊಂದಿಗೆ ಬರುತ್ತದೆ. iOS 17 ನಲ್ಲಿ ಚಾಲನೆಯಲ್ಲಿರುವ ಈ ಹೊಸ ಐಫೋನ್, ಆಪಲ್‌ನ A18 ಚಿಪ್‌ಸೆಟ್‌ನೊಂದಿಗೆ ಸಜ್ಜುಗೊಂಡಿದೆ, ಇದು ಹಿಂದಿನ ಎಲ್ಲ ಐಫೋನ್ಗಿಂತ ಹೆಚ್ಚು ಶಕ್ತಿಶಾಲಿಯಾಗಿದೆ. ಅಲ್ಲದೆ, ಆಪಲ್ ಇಂಟೆಲಿಜೆನ್ಸ್ ಸಹಾಯದಿಂದ, ಈ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಅತ್ಯುತ್ತಮ AI ಅನುಭವವನ್ನು ಒದಗಿಸಲಿದೆ.
Tech Tips: ನಿಮ್ಮ ಮೊಬೈಲ್ಗೆ ನಿಮ್ಮದೇ ಹೆಸರಿನ ಕಾಲರ್ ಟ್ಯೂನ್ ಸೆಟ್ ಮಾಡೋದು ಹೇಗೆ?
ಐಫೋನ್ 16 AI ಬೆಂಬಲದೊಂದಿಗೆ ಬರುತ್ತದೆ:
ಐಫೋನ್ 16 6.1-ಇಂಚಿನ OLED ಡಿಸ್ಪ್ಲೇಯನ್ನು ಹೊಂದಿದ್ದು, ಇದು ಉತ್ತಮ ದೃಶ್ಯ ಅನುಭವವನ್ನು ನೀಡುತ್ತದೆ. ಆಪಲ್ ಇಂಟೆಲಿಜೆನ್ಸ್ ಕಾರಣದಿಂದಾಗಿ ಈ ಫೋನ್ ಸ್ಮಾರ್ಟ್ ಬಳಕೆದಾರ ಅನುಭವವನ್ನು ಒದಗಿಸುತ್ತದೆ. ಆಪಲ್ ಇಂಟೆಲಿಜೆನ್ಸ್ ಐಫೋನ್ 16 ರ ದೊಡ್ಡ ಹೈಲೈಟ್ ಆಗಿದೆ. ಈ AI-ಆಧಾರಿತ ವ್ಯವಸ್ಥೆಯು ಬಳಕೆದಾರರಿಗೆ ಉತ್ತಮವಾಗಿ ಬರೆಯಲು, ತಮ್ಮನ್ನು ತಾವು ವ್ಯಕ್ತಪಡಿಸಲು ಮತ್ತು ಕೆಲಸವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಆಪಲ್‌ನ ಈ AI ವ್ಯವಸ್ಥೆಯು ಉತ್ತಮ ಗೌಪ್ಯತೆ ರಕ್ಷಣೆಯೊಂದಿಗೆ ಬರುತ್ತದೆ, ಇದು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಸಂಪೂರ್ಣವಾಗಿ ಸುರಕ್ಷಿತವಾಗಿರಿಸುತ್ತದೆ.
ಇದು ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. ಇದರ ಮುಖ್ಯ ಕ್ಯಾಮೆರಾ 48MP ಆಗಿದೆ. ಇದಲ್ಲದೆ, 12MP ಅಲ್ಟ್ರಾ ವೈಡ್ ಕ್ಯಾಮೆರಾವನ್ನು ಒದಗಿಸಲಾಗಿದೆ, ಇದು 2x ಟೆಲಿಫೋಟೋ ಲೆನ್ಸ್‌ನೊಂದಿಗೆ ಬರುತ್ತದೆ. ಇದು ಮ್ಯಾಕ್ರೋ ಛಾಯಾಗ್ರಹಣಕ್ಕೆ ಬೆಂಬಲವನ್ನು ಹೊಂದಿದೆ. ಇದರ ಸಹಾಯದಿಂದ ನೀವು ವಿಡಿಯೋ ಸೆರೆಹಿಡಿಯಲು ಸಾಧ್ಯವಾಗುತ್ತದೆ. ನೀವು 60fps ನಲ್ಲಿ 4k ವಿಡಿಯೋಗಳನ್ನು ಮಾಡಬಹುದು. ಇದು ಡಾಲ್ಬಿ ವಿಷನ್ ಬೆಂಬಲವನ್ನು ಹೊಂದಿದೆ. ಇದು ಫ್ಯೂಷನ್ ಕ್ಯಾಮೆರಾ ಲೆನ್ಸ್ನಿಂದ ಕೂಡಿದೆ.
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ