ಇಂದು ವಿಶ್ವ ಛಾಯಾಗ್ರಹಣ ದಿನ (World Photography Day). ಪದಗಳಲ್ಲಿ ವಿವರಿಸಲಾಗದ್ದನ್ನ ಫೋಟೋ ಮೂಲಕ ಹೇಳಬಹುದಾದ ಅದ್ಬುತ ಶಕ್ತಿ ಈ ಫೋಟೋಗ್ರಫಿದಲ್ಲಿದೆ. ಛಾಯಾಚಿತ್ರದ ಮೂಲಕ ವಿಶ್ವವನ್ನು ಸಕಾರಾತ್ಮಕವಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಆರಂಭವಾದ ವಿಶ್ವ ಛಾಯಾಗ್ರಹಣ ದಿನವನ್ನು ಪ್ರತಿ ವರ್ಷ ಆಗಸ್ಟ್ 19 ಆಚರಿಸಲಾಗುತ್ತದೆ. ಫೊಟೋಗ್ರಫಿ ಒಂದು ಕಲೆ. ಹಿಂದಿನ ಇತಿಹಾಸದ ಸಾಕ್ಷಿ ಫೋಟೋ (Photo). ಯಾವುದೇ ಒಂದು ಘಟನೆಯನ್ನು ಸಂಪೂರ್ಣವಾಗಿ ವಿವರಿಸುವ ಸಾಧ್ಯತೆ ಒಂದು ಪೋಟೋವಿನಲ್ಲಿದೆ. ಈ ಸಂದರ್ಭ ಸ್ಮಾರ್ಟ್ಫೋನ್ ಪ್ರಿಯರಿಗಾಗಿ ಭಾರತದಲ್ಲಿ ಲಭ್ಯವಿರುವ ಆಕರ್ಷಕ ಕ್ಯಾಮೆರಾ ಫೋನುಗಳ (Camera Smartphone) ಬಗ್ಗೆ ಮಾಹಿತಿಯನ್ನು ನಾವು ನೀಡುತ್ತೇವೆ.
ಒಪ್ಪೋ ರೆನೋ 8 ಪ್ರೊ: 45,999 ರೂ. ಬೆಲೆಯ ಈ ಸ್ಮಾರ್ಟ್ಫೋನ್ ಕ್ಯಾಮೆರಾಕ್ಕೆ ಹೇಳಿ ಮಾಡಿಸಿದ್ದು. ಇದು 50MP +8MP + 2MP ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಸೆಲ್ಫೀಗಾಗಿ 32MP ಕ್ಯಾಮೆರಾ ನೀಡಲಾಗದೆ. ಈ ಫೋನ್ MariSilicon X NPU ಮತ್ತು Dual Sony ಯಿಂದ ಕಾರ್ಯನಿರ್ವಹಿಸುತ್ತದೆ. IMX766 ಮತ್ತು IMX709 ಫ್ಲ್ಯಾಗ್ಶಿಪ್ ಸೆನ್ಸಾರ್ ಹೊಂದಿದ್ದು, ಮೀಡಿಯಾಟೆಕ್ ಡೈಮೆನ್ಸಿಟಿ 8100 ಪ್ರೊಸೆಸರ್ ನೀಡಲಾಗಿದೆ. 6.7 ಇಂಚಿನ ಡಿಸ್ಪ್ಲೇ ಮತ್ತು 4500mAh ಬ್ಯಾಟರಿ ಕೊಡಲಾಗಿದೆ.
ಸ್ಯಾಮ್ಸಂಗ್ ಗ್ಯಾಲಕ್ಸಿ S22 ಆಲ್ಟ್ರಾ: ಈ ಫೋನಿನ 12GB RAM ಮತ್ತು 253GB ಸ್ಟೋರೇಜ್ ಆಯ್ಕೆಯ ಬೆಲೆ 1,09,999 ರೂ. ಇಷ್ಟು ಬೆಲೆ ಹೊಂದಿರುವ ಈ ಫೋನಿನ ಕ್ಯಾಮೆರಾ ಮಾತ್ರ ಅದ್ಭುತವಾಗಿದೆ. ಇದರಲ್ಲಿ 108MP+ 12MP+ 10MP+ 10MP ಸ್ಪೋರ್ಟ್ಸ್ ಕ್ವಾಡ್ ಕ್ಯಾಮೆರಾ ಸೆಟಪ್ ನೀಡಲಾಗಿದೆ. 40 ಮೆಗಾಫಿಕ್ಸೆಲ್ನ ಸೆಲ್ಫೀ ಕ್ಯಾಮೆರಾ ಕೂಡ ಇದೆ. 100X ಜೂಮ್ ಫೀಚರ್ ಇದರ ಹೈಲೇಟ್ ಆಗಿದ್ದು, 5000mAh ಬ್ಯಾಟರಿ, 6.8 ಇಂಚಿನ ಡಿಸ್ ಪ್ಲೇ, ಆಕ್ಟ್ರಾಕೋರ್ ಪ್ರೊಸೆಸರ್ ಅಳವಡಿಸಲಾಗಿದೆ.
ಐಫೋನ್ 13: 128GB ಸ್ಟೋರೇಜ್ ಆಯ್ಕೆಯ ಆ್ಯಪಲ್ ಐಫೋನ್ 13 ಸದ್ಯ ಫ್ಲಿಪ್ಕಾರ್ಟ್ನಲ್ಲಿ ಕೇವಲ 73,999 ರೂ. ಗೆ ಮಾರಾಟ ಆಗುತ್ತಿದೆ. ಇದರಲ್ಲಿರುವ ಡ್ಯುಯೆಲ್ ರಿಯರ್ ಕ್ಯಾಮೆರಾ 12 ಮೆಗಾಫಿಕ್ಸೆಲ್ನಲ್ಲಿದೆ. ಸೆಲ್ಫೀ ಕ್ಯಾಮೆರಾ ಕೂಡ 12 ಮೆಗಾಫಿಕ್ಸೆಲ್ನಿಂದ ಕೂಡಿದೆ. ನೀವು ಕ್ಯಾಮೆರಾ ಫೋನ್ ಹುಡುಕುತ್ತಿದ್ದರೆ ಇದೊಂದು ಅತ್ಯುತ್ತಮ ಆಯ್ಕೆಯಾಗಿದೆ.
ರಿಯಲ್ ಮಿ ಜಿಟಿ 2 ಪ್ರೊ: ಈ ಫೋನಿನ 8GB RAM ಮತ್ತು 128GB ಸ್ಟೋರೇಜ್ ಆಯ್ಕೆಗೆ 49,999 ರೂ. ನಿಗದಿ ಮಾಡಲಾಗಿದೆ. ಇದು 50MP+ 50MP+ 2MP ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. 32 ಮೆಗಾಫಿಕ್ಸೆಲ್ನ ಸೆಲ್ಫೀ ಕ್ಯಾಮೆರಾ ಕೂಡ ನೀಡಲಾಗಿದೆ. ಇದರಲ್ಲಿರುವ ಮೈಕ್ರೊಲೆನ್ಸ್ ಸಾಕಷ್ಟು ಪ್ರಸಿದ್ಧಿ ಪಡೆದಿದೆ. 5000mAh ಬ್ಯಾಟರಿ, 6.7 ಇಂಚಿನ ಡಿಸ್ ಪ್ಲೇ, ಕ್ವಾಲ್ಕಂ ಸ್ನಾಪ್ಡ್ರಾಗನ್ 8 Gen 1 ಪ್ರೊಸೆಸರ್ ಅಳವಡಿಸಲಾಗಿದೆ.
ಗೂಗಲ್ ಫಿಕ್ಸೆಲ್ 6a: ಇತ್ತೀಚೆಗಷ್ಟೆ ಬಿಡುಗಡೆ ಆದ ಗೂಗಲ್ ಫಿಕ್ಸೆಲ್ 6a ಸ್ಮಾರ್ಟ್ಫೋನ್ನ 6GB RAM + 12GB ಸ್ಟೋರೇಜ್ ಆಯ್ಕೆಯ ಬೆಲೆ 43,999 ರೂ. ಈ ಫೋನಿನ ಕ್ಯಾಮೆರಾ ಮತ್ತು ವಿಡಿಯೋ ಅದ್ಭುತವಾಗಿದೆ. ಇದು ಗೂಗಲ್ ಟೆನ್ಸಾರ್ ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸುತ್ತಿದ್ದು, 6.14 ಇಂಚಿನ ಡಿಸ್ ಪ್ಲೇ ಮತ್ತು 4110mAh ಬ್ಯಾಟರಿ ನೀಡಲಾಗಿದೆ.
Published On - 2:35 pm, Fri, 19 August 22