ಪ್ರಸಿದ್ಧ ರಿಯಲ್ ಮಿ ಕಂಪನಿ ಸ್ಮಾರ್ಟ್ಫೋನ್ಗಳನ್ನು (Smartphone) ಬಿಡುಗಡೆ ಮಾಡುತ್ತಿರುವುದು ತೀರಾ ಕಡಿಮೆ ಆಗುತ್ತಿದೆ. ಅಪರೂಪಕ್ಕಷ್ಟೆ ಮೊಬೈಲ್ಗಳನ್ನು ಅನಾವರಣ ಮಾಡುತ್ತಿದೆ. ಕೊನೆಯದಾಗಿ ರಿಯಲ್ ಮಿ ಕಂಪನಿ ಪ್ರಸಿದ್ಧ ಪಾನೀಯ ಸಂಸ್ಥೆ ಕೋಕಾ-ಕೋಲಾ ಜೊತೆಗೂಡಿ ರಿಯಲ್ ಮಿ 10 ಪ್ರೊ 5ಜಿ ಕೋಕಾ-ಕೋಲಾ ಎಡಿಷನ್ (Realme 10 Pro Coca-Cola Edition) ಅನ್ನು ಬಿಡುಗಡೆ ಮಾಡಿತ್ತು. ಈ ಸ್ಮಾರ್ಟ್ಫೋನ್ಗೆ ಉತ್ತಮ ಪ್ರತಿಕ್ರಿಯೆ ಕೇಳಿಬಂದಿದೆ. ಇದೀಗ ಜಾಗತೀಕ ಮಾರುಕಟ್ಟೆಗೆ ಕಂಪನಿ ಹೊಸ ಮೊಬೈಲ್ ಒಂದನ್ನು ಪರಿಚಯಿಸಿದೆ. ಅದುವೇ ರಿಯಲ್ ಮಿ ಜಿಟಿ 3 (Realme GT 3). ಟೆಕ್ ಪ್ರಿಯರನ್ನು ದಂಗಾಗಿಸಿರುವ ಈ ಫೋನ್ನಲ್ಲಿ ಅತ್ಯಂತ ವೇಗದ ಚಾರ್ಜಿಂಗ್ ಸೌಲಭ್ಯ ನೀಡಲಾಗಿದೆ. ಮೊಬೈಲ್ ವರ್ಲ್ಡ್ ಕಾಂಗ್ರೆಸ್ 2023 ಈವೆಂಟ್‌ನಲ್ಲಿ ಈ ಫೋನ್ ರಿಲೀಸ್ ಆಗದೆ. ಇದರ ಬೆಲೆ, ಫೀಚರ್ಸ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಏನು ಫೀಚರ್ಸ್?:
ರಿಯಲ್ ಮಿ GT 3 ಸ್ಮಾರ್ಟ್‌ಫೋನ್ 2772 x 1240 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯದ 6.74 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಅದ್ಭುತವಾದ 144Hz ರಿಫ್ರೆಶ್ ರೇಟ್ ಆಯ್ಕೆ ನೀಡಲಾಗಿದೆ. ಬಲಿಷ್ಠವಾದ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 8+ ಜನ್ 1 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಇದರ ಮೂಲಕ ನೀವು ಎಷ್ಟೇ ದೊಡ್ಡ ಗಾತ್ರದ ಫೈಲ್ಗಳನ್ನು ಡೌನ್ಲೋಡ್ ಮಾಡಿದರೂ ಯಾವುದೇ ಅಡೆತಡೆ ಇಲ್ಲಿದೆ ಉತ್ತಮ ಕಾರ್ಯಕ್ಷಮತೆ ನೀಡಲಿದೆ. 1TB ಇಂಟರ್ನಲ್ ಸ್ಟೋರೇಜ್ ಆಯ್ಕೆ ಕೊಡಲಾಗಿದೆ.
Tech Tips: ನಿಮ್ಮ ಫೇಸ್ಬುಕ್ನಲ್ಲಿರುವ ಫೋಟೋ, ವಿಡಿಯೋಗಳನ್ನು ಗೂಗಲ್ ಫೋಟೋಸ್ಗೆ ವರ್ಗಾಹಿಸಬೇಕೇ?: ಇಲ್ಲಿದೆ ಟ್ರಿಕ್
ಕ್ಯಾಮೆರಾ ವಿಚಾರ ಬರುವುದಾದರೆ ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಪಡೆದುಕೊಂಡಿದೆ. 50 ಮೆಗಾಪಿಕ್ಸೆಲ್ ಸೋನಿ IMX890 ಸೆನ್ಸರ್ನ ಮುಖ್ಯ ಕ್ಯಾಮೆರಾ ಒಂದುಕಡೆಯಾದರೆ 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಮತ್ತು 2 ಮೆಗಾಪಿಕ್ಸೆಲ್ ಸೆನ್ಸರ್ನ ಮೊತ್ತೆರಡು ಕ್ಯಾಮೆರಾ ಇದೆ. ಜೊತೆಗೆ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಆಯ್ಕೆ ಇದ್ದು, ಅತ್ಯುತ್ತಮ ಫೋಟೋ ಸೆರೆ ಹಿಡಿಯುತ್ತದೆ.
ರಿಯಲ್ ಮಿ GT 3 ಫೋನ್‌ನ ಮುಖ್ಯ ಹೈಲೇಟ್ ಇದರ ಫಾಸ್ಟ್ ಚಾರ್ಜರ್. ಇದು ಬರೋಬ್ಬರಿ 240W ಚಾರ್ಜಿಂಗ್‌ಬೆಂಬಲಿಸುವ 4,600mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದ್ದು, ಈ ಮೂಲಕ ಕೇವಲ ನಾಲ್ಕು ನಿಮಿಷದಲ್ಲಿ ಅರ್ಧದಷ್ಟು ಬ್ಯಾಟರಿ ಭರ್ತಿ ಮಾಡಬಹುದಾಗಿದೆ. 10 ನಿಮಿಷಗಳ ಒಳಗೆ 0-100% ಫುಲ್ ಚಾರ್ಜ್ ಆಗುತ್ತಂತೆ.
ಉಳಿದಂತೆ 5G, 4G LTE, ಹಾಟ್‌ಸ್ಪಾಟ್, ಬ್ಲೂಟೂತ್, ವೈಫೈ, ಯುಎಸ್‌ಬಿ ಸಿ ಪೋರ್ಟ್ ಅನ್ನು ಒಳಗೊಂಡಿದೆ. ಡಾಲ್ಬಿ ಅಟ್ಮಾಸ್‌ನೊಂದಿಗೆ ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳು ಮತ್ತು ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಆಯ್ಕೆ ಈ ಫೋನ್‌ನ ಮತ್ತಷ್ಟು ಫೀಚರ್ಗಳಲ್ಲಿ ಪ್ರಮುಖವಾದವು. ಇದರ 8GB + 128GB ಮಾದರಿಗೆ $649, ಅಂದರೆ ಭಾರತದಲ್ಲಿ ಇದರ ಬೆಲೆ ಅಂದಾಜಿ 53,700 ರೂ. ಇರಬಹುದು. ಸದ್ಯಕ್ಕೆ ಜಾಗತಿಕವಾಗಿ ರಿಲೀಸ್ ಆಗಿರುವ ಈ ಸ್ಮಾರ್ಟ್‌ಫೋನ್ ಇದೇ ತಿಂಗಳಲ್ಲಿ ಭಾರತಕ್ಕೂ ಕಾಲಿಡಬಹುದು.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ