ಸ್ಮಾರ್ಟ್‌ಫೋನ್ (Smartphone) ಮಾರುಕಟ್ಟೆಯಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ಚೀನಾ ಮೂಲದ ಶವೋಮಿ ಕಂಪನಿ ಅಪರೂಪಕ್ಕೆ ಮೊಬೈಲ್ಗಳನ್ನು ಬಿಡುಗಡೆ ಮಾಡುತ್ತಿದೆ. ಕಳೆದ ವರ್ಷಾಂತ್ಯದಲ್ಲಿ ಶವೋಮಿ (Xiaomi) ತನ್ನ ಬ್ರ್ಯಾಂಡ್ನಡಿಯಲ್ಲಿ ಶವೋಮಿ 12 ಸರಣಿಯನ್ನು ಅನಾವರಣ ಮಾಡಿ ಧೂಳೆಬ್ಬಿಸಿತ್ತು. ಭಾರತದಲ್ಲೂ ಈ ಸ್ಮಾರ್ಟ್‌ಫೋನ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಇದೀಗ ಈ ಸರಣಿಯ ಮುಂದುವರೆಗ ಭಾಗವಾಗಿ ಶವೋಮಿ 13 ಸರಣಿ (Xiaomi 13 Series) ಮಾರುಕಟ್ಟೆಗೆ ಅಪ್ಪಳಿಸಲು ತಯಾರಾಗಿದೆ. MIUI 14 ಔಟ್-ಆಫ್-ಬಾಕ್ಸ್‌ನೊಂದಿಗೆ ಬರಲಿರುವ ಈ ನೂತನ ಸರಣಿಯಲ್ಲಿ ಶವೋಮಿ 13 ಮತ್ತು ಶವೋಮಿ 13 ಪ್ರೊ ಎಂಬ ಎರಡು ಸ್ಮಾರ್ಟ್ಫೋನ್ಗಳು ಇರಲಿದೆ ಎಂದು ಹೇಳಲಾಗಿದೆ. ಹುಬ್ಬೇರಿಸುವಂತಹ ಫೀಚರ್ಗಳು ಇದರಲ್ಲಿ ಅಡಕವಾಗಿದ್ದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 Gen 2 SoC ಪ್ರೊಸೆಸರ್ ಬಲವನ್ನು ಪಡೆದುಕೊಂಡಿರುವ ಸಾಧ್ಯತೆ ಇದೆ. ಜೊತೆಗೆ ಆಕರ್ಷಕ ಕ್ಯಾಮೆರಾ ಕೂಡ ಇರಲಿದೆ. ಶವೋಮಿ 13 ಸರಣಿ ಡಿಸೆಂಬರ್ 1 ರಂದು ಚೀನಾದಲ್ಲಿ ಬಿಡುಗಡೆ ಆಗಲಿದೆ. ಹೊಸ ವರ್ಷಕ್ಕೆ ಭಾರತಕ್ಕೂ ಕಾಲಿಡುವ ನಿರೀಕ್ಷೆಯಿದೆ.
ಈ ಸ್ಮಾರ್ಟ್ಫೋನ್ಗಳ ಫೀಚರ್ಸ್ ಬಗ್ಗೆ ಖಚಿತ ಮಾಹಿತಿ ಹೊರಬಿದ್ದಿಲ್ಲ. ಆದರೆ, ಮೂಲಗಳ ಪ್ರಕಾರ ಶವೋಮಿ 13 6.2 ಇಂಚಿನ ಅಮೋಲ್ಡ್ ಡಿಸ್‌ಪ್ಲೇಯನ್ನು ಹೊಂದಿರಬಹುದು. ಡಿಸ್‌ಪ್ಲೇ 120Hz ರಿಫ್ರೆಶ್ ರೆಟ್ ಮತ್ತು ಡಾಲ್ಬಿ ವಿಷನ್ ಬೆಂಬಲವನ್ನು ಪಡೆದಿದೆ. ಇದರಲ್ಲಿ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 Gen 2 ಆಕ್ಟಾ-ಕೋರ್ ಪ್ರೊಸೆಸರ್ ಇರುವುದು ಖಚಿತವಾಗಿದೆ. ಆಂಡ್ರಾಯ್ಡ್ 13 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. 12GB RAM-256GB, 8GB RAM-128GB ಮತ್ತು 512GB ಸ್ಟೋರೇಜ್ ಆಯ್ಕೆಯೊಂದಿಗೆ ಖರೀದಿಗೆ ಸಿಗಲಿದೆ.
Fact Check ಸ್ನಾಪ್ಚಾಟ್ ಖರೀದಿಸಲು ಎಲಾನ್ ಮಸ್ಕ್ ಚಿಂತನೆ ಎಂಬ ವೈರಲ್ ಸ್ಕ್ರೀನ್ಶಾಟ್ ಫೇಕ್
ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್‌ನಲ್ಲಿ ಬರುವ ಸಾಧ್ಯತೆಯಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೋನಿ IMX800 ಸೆನ್ಸಾರ್, ಎರಡನೇ ಕ್ಯಾಮೆರಾ ಮತ್ತು ಮೂರನೇ ಕ್ಯಾಮೆರಾ ಬಗ್ಗೆ ಮಾಹಿತಿಯಿಲ್ಲ. 32 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಇರಬಹುದು. 120W ಫಾಸ್ಟ್ ಚಾರ್ಜರ್ ಸೌಲಭ್ಯದೊಂದಿಗೆ ಬರಲಿದೆ. ರಿವರ್ಸ್ ಚಾರ್ಜಿಂಗ್ ಮತ್ತು ವೈರ್‌ಲೆಸ್ ಫಾಸ್ಟ್ ಚಾರ್ಜಿಂಗ್ ಕೂಡ ನೀಡಿದರೆ ಅಚ್ಚರಿ ಪಡಬೇಕಿಲ್ಲ.
ಇತ್ತ ಶವೋಮಿ 13 ಪ್ರೊ 6.7 ಇಂಚಿನ ಸ್ಯಾಮ್‌ಸಂಗ್ E6 ಅಮೋಲ್ಡ್ ಡಿಸ್‌ಪ್ಲೇಯನ್ನು ಹೊಂದಿರಲಿದೆ. ಇದು 1440 x 3200 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿರುವ ಸಾಧ್ಯತೆಯಿದೆ. ಇದುಕೂಡ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 Gen 2 ಆಕ್ಟಾ-ಕೋರ್ ಪ್ರೊಸೆಸರ್ ವೇಗವನ್ನು ಹೊಂದಿದೆ. ಆಂಡ್ರಾಯ್ಡ್ 13 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.
Flipkart Black Friday Sale: 20,000 ರೂ. ಒಳಗೆ ಸಿಗುತ್ತಿದೆ ಈ ಬೊಂಬಾಟ್ ಸ್ಮಾರ್ಟ್ಫೋನ್ಗಳು
ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್‌ನಲ್ಲಿ ಬರುವ ಸಾಧ್ಯತೆಯಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೋನಿ IMX989 ಸೆನ್ಸಾರ್, ಎರಡನೇ ಕ್ಯಾಮೆರಾ 50 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಆಂಗಲ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 50 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಅನ್ನು ಒಳಗೊಂಡಿರಬಹುದು. ಇದಲ್ಲದೆ 32 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ.
ಶವೋಮಿ 13 ಪ್ರೊ ಬ್ಯಾಟರಿ 4,800mAh ಸಾಮರ್ಥ್ಯ ಇರಬಹುದು. ಇದು 120W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಬಹುದು ಎಂದು ನಿರೀಕ್ಷಿಸಲಾಗಿದೆ. ಜತೆಗೆ ರಿವರ್ಸ್ ಚಾರ್ಜಿಂಗ್ ಮತ್ತು ವೈರ್‌ಲೆಸ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G ಬೆಂಬಲ ಪಡೆದಿರುವ ಜೊತೆತೆ ವೈಫೈ, ಬ್ಲೂಟೂತ್ 5.2, USB ಟೈಪ್-C ಪೋರ್ಟ್ ಅನ್ನು ಬೆಂಬಲಿಸುತ್ತಿದೆ. ಈ ಎರಡೂ ಫೋನುಗಳ ಬೆಲೆ ಇನ್ನಷ್ಟು ಬಹಿರಂಗವಾಗಬೇಕಿದೆ.
ಹೆಚ್ಚಿನ ಟೆಕ್ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ