ಸ್ಮಾರ್ಟ್‌ಫೋನ್ (Smartphone) ಮಾರುಕಟ್ಟೆಯಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ಚೀನಾ ಮೂಲದ ಶವೋಮಿ ಕಂಪನಿ ಅಪರೂಪಕ್ಕೆ ಮೊಬೈಲ್ಗಳನ್ನು ಬಿಡುಗಡೆ ಮಾಡುತ್ತಿದೆ. ಈ ಹಿಂದೆ ಶವೋಮಿ (Xiaomi) ತನ್ನ ಬ್ರ್ಯಾಂಡ್ನಡಿಯಲ್ಲಿ ಶವೋಮಿ 13 ಸರಣಿಯ ಕೆಲ ಫೋನ್ಗಳನ್ನು ಲಾಂಚ್ ಮಾಡಿತ್ತು. ಈ ಸರಣಿಯಲ್ಲಿ ಶವೋಮಿ 13, ಶವೋಮಿ 13 ಪ್ರೊ ಮತ್ತು ಶವೋಮಿ 13 ಲೈಟ್ ಎಂಬ ಮೂರು ಸ್ಮಾರ್ಟ್ಫೋನ್ಗಳು ಬಿಡುಗಡೆ ಆಗಿದ್ದವು. ಇದೀಗ ಈ ಆವೃತ್ತಿಯ ಮುಂದುವರೆದ ಭಾಗವಾಗಿ ಶವೋಮಿ 13 ಅಲ್ಟ್ರಾ (Xiaomi 13 Ultra) ಸ್ಮಾರ್ಟ್‌ಫೋನ್ ಜಾಗತಿಕ ಮಾರುಕಟ್ಟೆಯಲ್ಲಿ ರಿಲೀಸ್ ಆಗಿದೆ. ಹುಬ್ಬೇರಿಸುವಂತಹ ಫೀಚರ್ಗಳು ಇದರಲ್ಲಿ ಅಡಕವಾಗಿದ್ದು ಬಲಿಷ್ಠ ಪ್ರೊಸೆಸರ್, ಆಕರ್ಷಕ ಕ್ಯಾಮೆರಾ ನೀಡಲಾಗಿದೆ. ಈ ಫೋನ್ಗಳ ಬೆಲೆ, ಫೀಚರ್ಸ್ ಕುರಿತ ಮಾಹಿತಿ ಇಲ್ಲಿದೆ.
ಬೆಲೆ ಎಷ್ಟು?:
ಜಾಗತಿಕ ಮಾರುಕಟ್ಟೆಯಲ್ಲಿ ಶವೋಮಿ 13 ಅಲ್ಟ್ರಾ ಎರಡು ಸ್ಟೋರೇಜ್ ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆ. ಇದರ 12GB RAM + 256GB ಸ್ಟೋರೇಜ್ ಮಾದರಿಗೆ RMB 5,999 ಬೆಲೆ ಹೊಂದಿದೆ. ಅಂದರೆ ಭಾರತದಲ್ಲಿ ಇದರ ಬೆಲೆ ಸುಮಾರು 71,600 ರೂ. ಇರಬಹುದು. ಅಂತೆಯೆ 16GB RAM + 512GB ವೇರಿಯಂಟ್‌ಗೆ RMB 6499 ಬೆಲೆ ನಿಗದಿ ಮಾಡಲಾಗಿದೆ. ಇದಕ್ಕೆ ಭಾರತದಲ್ಲಿ 77,600 ರೂ. ಇರಬಹುದು. ಈ ಫೋನ್ ಭಾರತಕ್ಕೆ ಯಾವಾಗ ಬರಲಿದೆ ಎಂಬ ಬಗ್ಗೆ ಮಾಹಿತಿ ಬಹಿರಂಗವಾಗಿಲ್ಲ.
ಏನಿದೆ ಫೀಚರ್ಸ್:
ಶವೋಮಿ 13 ಅಲ್ಟ್ರಾ ಫೋನ್ ಆಕರ್ಷಕವಾದ 6.73 ಇಂಚಿನ 2K ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, ಇದು LTPO ಗೆ ಬೆಂಬಲ ಪಡೆದಿದೆ. 120Hz ರಿಫ್ರೆಶ್ ರೇಟ್, HDR10+, ಡಾಲ್ಬಿ ವಿಷನ್, P3 ಕಲರ್ ಗ್ಯಾಮಟ್, 1920Hz PWM ಡಿಮ್ಮಿಂಗ್ ಸೇರಿದಂತೆ ಅನೇಕ ಆಯ್ಕೆಗಳಿದ್ದು, ಗೊರಿಲ್ಲಾ ಗ್ಲಾಸ್ ರಕ್ಷಣೆಯನ್ನು ಪಡೆದುಕೊಂಡಿದೆ. ಬಲಿಷ್ಠಾದ ಸ್ನಾಪ್‌ಡ್ರಾಗನ್ 8 ಜನ್ 2 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸುತ್ತಿದ್ದು ಆಂಡ್ರಾಯ್ಡ್ 13 ಬೆಂಬಲ ಪಡೆದುಕೊಂಡಿದೆ.
ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಇದು ಅದ್ಭುತವಾಗಿದೆ. ಈ ಫೋನ್ ಕ್ವಾಡ್ ರಿಯರ್ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದ್ದು, ಇದರಲ್ಲಿ 50ಮೆಗಾಪಿಕ್ಸೆಲ್ ಸೋನಿ IMX989 ಸೆನ್ಸರ್, 50ಮೆಗಾಪಿಕ್ಸೆಲ್ ಸೋನಿ IMX858 ಅಲ್ಟ್ರಾವೈಡ್ ಕ್ಯಾಮೆರಾ, OIS ನೊಂದಿಗೆ 50ಮೆಗಾಪಿಕ್ಸೆಲ್ ಸೂಪರ್ ಟೆಲಿಫೋಟೋ ಸೆನ್ಸರ್ ಮತ್ತು 3x ಆಪ್ಟಿಕಲ್ ಜೂಮ್‌ನೊಂದಿಗೆ 50ಮೆಗಾಪಿಕ್ಸೆಲ್ ಟೆಲಿಫೋಟೋ ಸೆನ್ಸರ್ ಹೊಂದಿದೆ. ಇದರೊಂದಿಗೆ 32ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಆಯ್ಕೆ ನೀಡಲಾಗಿದೆ. ಈ ಕ್ಯಾಮೆರಾದಲ್ಲೂ ಅನೇಕ ಆಯ್ಕೆಗಳನ್ನು ನೀಡಲಾಗಿದ್ದು, ಫೋಟೋಗ್ರಫಿಗೆ ಹೇಳಿ ಮಾಡಿಸಿದಂತಿದೆ.
ಈ ಸ್ಮಾರ್ಟ್ಫೋನ್ನಲ್ಲಿ ದೀರ್ಘ ಸಮಯ ಬಾಳಿಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದ್ದು ಚಾರ್ಜಿಂಗ್ ವಿಭಾಗದಲ್ಲಿ ಎರಡು ಆಯ್ಕೆ ಪಡೆದುಕೊಂಡಿದೆ. ಒಂದು 90W ವೈರ್ಡ್ ಫಾಸ್ಟ್ ಚಾರ್ಜಿಂಗ್ ಹಾಗೂ ಮತ್ತೊಂದು 50W ವಾಯರ್‌ಲೆಸ್ ಚಾರ್ಜಿಂಗ್ ಟೆಕ್ನಾಲಜಿ. ಇದರ ಮೂಲಕ ಕೆಲವೇ ನಿಮಿಷಗಳಲ್ಲಿ ಈ ಫೋನ್ ಸಂಪೂರ್ಣ ಚಾರ್ಜ್ ಆಗುತ್ತಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:14 pm, Thu, 20 April 23