Redmi Note 12 Turbo: ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಬರುತ್ತಿದೆ ರೆಡ್ಮಿ ನೋಟ್ 12 ಟರ್ಬೋ: ಭರ್ಜರಿ ಸೇಲ್ ಖಚಿತ
ಶವೋಮಿ ಕಂಪನಿ ರೆಡ್ಮಿ ನೋಟ್ 12 ಟರ್ಬೋ (Redmi Note 12 Turbo) ಬಗ್ಗೆ ಕೆಲ ಮಾಹಿತಿ ಹೊರಹಾಕಿದ್ದು ಹುಬ್ಬೇರಿಸುವಂತೆ ಮಾಡಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಮಾರ್ಚ್ 28 ರಂದು ಈ ಸ್ಮಾರ್ಟ್‌ಫೋನ್ ಬಿಡುಗಡೆ ಆಗಲಿದೆ ಎಂದು ಹೇಳಲಾಗಿದೆ.
ವರ್ಷದ ಆರಂಭದಲ್ಲಿ ಯಾವುದೇ ಮೊಬೈಲ್ಗಳನ್ನು ಬಿಡುಗಡೆ ಮಾಡದೆ ಸೈಲೆಂಟ್ ಆಗಿದ್ದ ಶವೋಮಿ (Xiaomi) ಕಂಪನಿ ಇದೀಗ ಒಂದರ ಹಿಂದೆ ಒಂದರಂತೆ ಆಕರ್ಷಕ ಸ್ಮಾರ್ಟ್‌ಫೋನ್ ಪರಿಚಯಿಸಲು ಮುಂದಾಗಿದೆ. ತನ್ನ ರೆಡ್ಮಿ ಬ್ರ್ಯಾಂಡ್ನಡಿಯಲ್ಲಿ ಸಾಲು ಸಾಲು ಫೋನುಗಳ ರಿಲೀಸ್ಗೆ ರೆಡಿಯಾಗಿ ನಿಂತಿದೆ. ಭಾರತದಲ್ಲಿ ಇದೇ ಮಾರ್ಚ್ 30 ರಂದು ರೆಡ್ಮಿ ನೋಟ್ 12 4ಜಿ (Redmi Note 12 4G) ಫೋನ್ ಅನಾವರಣಗೊಳ್ಳಲಿದೆ. ಇದರ ನಡುವೆ ಕಂಪನಿ ರೆಡ್ಮಿ ನೋಟ್ 12 ಟರ್ಬೋ (Redmi Note 12 Turbo) ಬಗ್ಗೆ ಕೆಲ ಮಾಹಿತಿ ಹೊರಹಾಕಿದ್ದು ಹುಬ್ಬೇರಿಸುವಂತೆ ಮಾಡಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಮಾರ್ಚ್ 28 ರಂದು ಈ ಸ್ಮಾರ್ಟ್‌ಫೋನ್ ಬಿಡುಗಡೆ ಆಗಲಿದೆ ಎಂದು ಹೇಳಲಾಗಿದೆ. ಹಾಗಾದರೆ ಟೆಕ್ ಪ್ರಿಯರ ನಿದ್ದೆ ಕದ್ದಿರುವ ಈ ಫೋನ್ನಲ್ಲಿ ಅಂಥದ್ದೇನಿದೆ ಎಂಬುದನ್ನು ನೋಡೋಣ.
ರೆಡ್ಮಿ ನೋಟ್ 12 ಟರ್ಬೋ ಸ್ಮಾರ್ಟ್ಫೋನ್ನಲ್ಲಿ ಆಕರ್ಷಕ ಡಿಸ್ ಪ್ಲೇ, ಬಲಿಷ್ಠ ಬ್ಯಾಟರಿ, ಪ್ರೊಸೆಸರ್, ಕ್ಯಾಮೆರಾ ನೀಡಲಾಗಿದೆ. ಇದರಲ್ಲಿ 6.67 FHD+ ಅಮೊಲೇಡ್ ಸ್ಕ್ರೀನ್ ಹೊಂದಿರಲಿದ್ದು, ಇದಕ್ಕೆ ಪೂರಕವಾಗಿ 120Hz ರಿಫ್ರೆಶ್ ರೇಟ್ ಆಯ್ಕೆ ಪಡೆದಿರಲಿದೆ. ಪ್ರೊಸೆಸರ್ ವಿಚಾರಕ್ಕೆ ಬರುವುದಾದರೆ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 7+ ಜೆನ್ 1 ಪ್ರೊಸೆಸರ್‌ನಲ್ಲಿ ಕಾರ್ಯ ನಿರ್ವಹಿಸಲಿದ್ದು, ಆಂಡ್ರಾಯ್ಡ್ 13 ಓಎಸ್ ಸಫೋರ್ಟ್ ಪಡೆದಿರಲಿದೆ ಎಂದು ಹೇಳಲಾಗಿದೆ.
ಇದರಲ್ಲಿರುವ ಕ್ಯಾಮೆರಾ ಕೂಡ ಅದ್ಭುತವಾಗಿದೆ. ತ್ರಿವಳಿ ಕ್ಯಾಮೆರಾ ರಚನೆ ಪಡೆದಿರಲಿದ್ದು, ಪ್ರಾಥಮಿಕ ಕ್ಯಾಮೆರಾ 64 ಮೆಗಾ ಪಿಕ್ಸಲ್ ಸೆನ್ಸಾರ್ ಹೊಂದಿರಲಿದೆ. ಸೆಕೆಂಡರಿ ಕ್ಯಾಮೆರಾ 8 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿ ಇರಲಿದೆ. ಹಾಗೆಯೇ ತೃತೀಯ ಕ್ಯಾಮೆರಾ 2 ಮೆಗಾ ಪಿಕ್ಸಲ್ ಸೆನ್ಸಾರ್ನಲ್ಲಿದೆ. ಇದರೊಂದಿಗೆ 16 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಅಳವಡಿಸಲಾಗಿದೆ.
Tecno Spark 10 Pro: 16 GB RAM ಟೆಕ್ನೋ ಫೋನ್ ಬೆಲೆ ₹12,499
ದೀರ್ಘ ಸಮಯ ಬಾಳಿಕೆ ಬರುವ 5,000mAh ಬ್ಯಾಟರಿ ಬ್ಯಾಕ್‌ಅಪ್ ಪಡೆದಿರಲಿದ್ದು, ಇದಕ್ಕೆ ಪೂರಕವಾಗಿ 67W ಫಾಸ್ಟ್ ಚಾರ್ಜಿಂಗ್ ನೀಡಲಾಗಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಫೋನ್ 5ಜಿ ಸಪೋರ್ಟ್ ನೀಡಲಿದೆ ಎನ್ನಲಾಗಿದೆ. ಉಳಿದಂತೆ ವೈ-ಫೈ, ಜಿಪಿಎಸ್, ಬ್ಲೂಟೂತ್ ಮತ್ತು ಯುಎಸ್‌ಬಿ ಟೈಪ್-ಸಿ, ಫಿಂಗರ್ಪ್ರಿಂಟ್ ಸ್ಕ್ಯಾನರ್ ಆಯ್ಕೆಗಳನ್ನು ಪಡೆದಿರಲಿದೆ. ಇದರ ಬೆಲೆ ಎಷ್ಟಿರಬಹುದು ಎಂಬುದು ಇನ್ನೂ ಬಹಿರಂಗವಾಗಿಲ್ಲ.
ರೆಡ್ಮಿ ನೋಟ್ 12 4G:
ರೆಡ್ಮಿ ನೋಟ್ 12 4G ಸ್ಮಾರ್ಟ್‌ಫೋನ್ ಭಾರತದಲ್ಲಿ ಮಾರ್ಚ್ 30ಕ್ಕೆ ರಿಲೀಸ್ ಆಗಲಿದೆ. ಇದು 6.67 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಅಮೋಲೆಡ್ ಡಿಸ್‌ಪ್ಲೇ ಹೊಂದಿದೆ. ಕ್ವಾಲ್ಕಮ್ ಸ್ನಾಪ್ಡ್ರಾಗನ್ 685 SoC ಪ್ರೊಸೆಸರ್ ಅನ್ನು ಹೊಂದಿದ್ದು, ಆಂಡ್ರಾಯ್ಡ್ 13 ಆಧಾರಿತ MIUI 14 ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ನ ಸ್ಯಾಮ್ಸಂಗ್ JN1 ಪ್ರೈಮರಿ ಸೆನ್ಸಾರ್ನಲ್ಲಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್, ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮಾಕ್ರೊ ಲೆನ್ಸ್ ಆಗಿದೆ. ಇವುಗಳ ಜೊತಗೆ 13 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ. 5,000mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದ್ದು, ಇದಕ್ಕೆ ತಕ್ಕಂತೆ 33W ವೇಗದ ಚಾರ್ಜಿಂಗ್ ಬೆಂಬಲ ಪಡೆದುಕೊಂಡಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:45 pm, Sun, 26 March 23