Redmi A2: ಕೇವಲ 5,999 ರೂ.: ಒಂದೇ ದಿನ ಎರಡು ಹೊಸ ಫೋನ್ ಬಿಡುಗಡೆ ಮಾಡಿದ ರೆಡ್ಮಿ

|

Updated on: May 19, 2023 | 2:55 PM

ರೆಡ್ಮಿ ತನ್ನ ಎ ಸರಣಿಯಲ್ಲಿ ಹೊಸ ರೆಡ್ಮಿ ಎ2 (Redmi A2) ಮತ್ತು ರೆಡ್ಮಿ ಎ2+ (Redmi A2+) ಎಂಬ ಎರಡು ಸ್ಮಾರ್ಟ್‌ಫೋನ್‌ಗಳನ್ನು ಅನಾವರಣ ಮಾಡಿದೆ. ಈ ಎರಡು ಸ್ಮಾರ್ಟ್‌ಫೋನ್‌ಗಳ ಬೆಲೆ ಎಷ್ಟು?, ಏನೆಲ್ಲ ಫೀಚರ್ಸ್ ಇದೆ ಎಂಬುದನ್ನು ನೋಡೋಣ.

Redmi A2: ಕೇವಲ 5,999 ರೂ.: ಒಂದೇ ದಿನ ಎರಡು ಹೊಸ ಫೋನ್ ಬಿಡುಗಡೆ ಮಾಡಿದ ರೆಡ್ಮಿ
Redmi A2
Follow us on

ಚೀನಾ ಮೂಲದ ಪ್ರಸಿದ್ಧ ಶವೋಮಿ (Xiaomi) ಕಂಪನಿ ಸ್ಮಾರ್ಟ್​ಫೋನ್ ಕ್ಷೇತ್ರದಲ್ಲಿ ತನ್ನ ನಂಬರ್ ಒನ್ ಸ್ಥಾನವನ್ನು ಭದ್ರ ಪಡಿಸಿಕೊಳ್ಳಲು ಇದೀದ ಒಂದರ ಹಿಂದೆ ಒಂದರಂತೆ ಆಕರ್ಷಕ ಫೋನ್​ಗಳನ್ನು ಬಿಡುಗಡೆ ಮಾಡುತ್ತಿದೆ. ತನ್ನ ರೆಡ್ಮಿ ಬ್ರ್ಯಾಂಡ್​ನಡಿಯಲ್ಲಿ ಬಜೆಟ್ ಬೆಲೆಗೆ ನೂತನ ಮೊಬೈಲ್ ಪರಿಚಯಿಸುತ್ತಿದೆ. ಇದೀಗ ಒಂದೇ ದಿನ ಭಾರತದಲ್ಲಿ ಎರಡು ಆಕರ್ಷಕ ಮೊಬೈಲ್ ರಿಲೀಸ್ ಮಾಡಿದೆ. ರೆಡ್ಮಿ ತನ್ನ ಎ ಸರಣಿಯಲ್ಲಿ ಹೊಸ ರೆಡ್ಮಿ ಎ2 (Redmi A2) ಮತ್ತು ರೆಡ್ಮಿ ಎ2+ (Redmi A2+) ಎಂಬ ಎರಡು ಸ್ಮಾರ್ಟ್‌ಫೋನ್‌ಗಳನ್ನು ಅನಾವರಣ ಮಾಡಿದೆ. ಈ ಎರಡು ಸ್ಮಾರ್ಟ್‌ಫೋನ್‌ಗಳ ಬೆಲೆ ಎಷ್ಟು?, ಏನೆಲ್ಲ ಫೀಚರ್ಸ್ ಇದೆ ಎಂಬುದನ್ನು ನೋಡೋಣ.

ಬೆಲೆ ಎಷ್ಟು?:

ರೆಡ್ಮಿ A2+ ಒಂದು ಸ್ಟೋರೇಜ್ ಆಯ್ಕೆಯಲ್ಲಷ್ಟೆ ಬಿಡುಗಡೆ ಆಗಿದೆ. ಇದರ 4GB + 64GB ಸ್ಟೋರೇಜ್ ಆಯ್ಕೆಗೆ 8,499 ರೂ. ಇದೆ. ಅಂತೆಯೆ  ರೆಡ್ಮಿA2 ಮೂರು ಸ್ಟೋರೇಜ್ ಆಯ್ಕೆಯಲ್ಲಿ ರಿಲೀಸ್ ಆಗಿದೆ. ಇದರ 2GB + 32GB ಆಯ್ಕೆಗೆ 5,999 ರೂ., 2GB + 64GBಗೆ 6,499 ರೂ. ಮತ್ತು 4GB + 64GB ಆಯ್ಕೆಗೆ 7,499 ರೂ. ನಿಗದಿ ಮಾಡಲಾಗಿದೆ.

ಇದನ್ನೂ ಓದಿ
Tech Tips: ಇನ್​ಸ್ಟಾಗ್ರಾಮ್​ ಸ್ಟೇಟಸ್​ನ ಈ ಟ್ರಿಕ್ ನಿಮಗೆ ಗೊತ್ತೇ?: ಏನದು ನೋಡಿ
Realme Narzo N53: ಬಜೆಟ್ ಪ್ರಿಯರಿಗಾಗಿ ಕೇವಲ 8,999 ರೂ. ಗೆ ಆಕರ್ಷಕ ಸ್ಮಾರ್ಟ್​ಫೋನ್ ಪರಿಚಯಿಸಿದ ರಿಯಲ್ ಮಿ
Poco F5 5G: ಭಾರತದಲ್ಲಿ ಸೇಲ್ ಕಾಣುತ್ತಿದೆ ಪೋಕೋ F5 5G ಸ್ಮಾರ್ಟ್​ಫೋನ್: ಆಫರ್ ಏನಿದೆ?
Google Pixel Fold: ಗ್ಯಾಜೆಟ್ ಲೋಕಕ್ಕೆ ಬಂತು ಗೂಗಲ್ ಫೋಲ್ಡಿಂಗ್ ಫೋನ್

ಈ ಫೋನ್ ಮೇ 23, 2023 ರಿಂದ ಪ್ರತ್ಯೇಕವಾಗಿ ಅಮೆಜಾನ್‌,ಮಿ.ಕಾಮ್‌, ಮೀ ಹೋಮ್ಸ್‌ ಮತ್ತು ಆದ್ಯತೆಯ ಪಾಲುದಾರ ಸ್ಟೋರ್‌ಗಳಲ್ಲಿ ಖರೀದಿಗೆ ಲಭ್ಯವಾಗಲಿದೆ. ಮೊದಲ ಸೇಲ್ ಪ್ರಯುಕ್ತ ಆಫರ್ ಘೋಷಣೆ ಮಾಡಲಾಗಿದ್ದು ICICI ಬ್ಯಾಂಕ್ ಕಾರ್ಡ್ ಮೂಲಕ ಖರೀದಿ ಮಾಡಿದರೆ 500 ರೂ. ಡಿಸ್ಕೌಂಟ್ ಪಡೆಯಬಹುದು.

Motorola Edge 40: ಗ್ಯಾಜೆಟ್ ಮಾರುಕಟ್ಟೆಗೆ ಲೇಟೆಸ್ಟ್ ಎಂಟ್ರಿ ಕೊಟ್ಟಿದೆ ಮೋಟೊ ಫೋನ್

ಏನಿದೆ ವಿಶೇಷತೆ?:

ರೆಡ್ಮಿ A2 ಮತ್ತು ರೆಡ್ಮಿ A2+ ಈ ಎರಡು ಸ್ಮಾರ್ಟ್‌ಫೋನ್‌ಗಳ ಡಿಸ್ ಪ್ಲೇ ಒಂದೇ ರೀತಿಯಲ್ಲಿದೆ. ಇದು 1600 x 720 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯದ 6.52 ಇಂಚಿನ LCD ಡಿಸ್‌ ಪ್ಲೇಯನ್ನು ಹೊಂದಿವೆ. ಈ ಡಿಸ್‌ ಪ್ಲೇ 20:9 ರಚನೆಯ ಅನುಪಾತವನ್ನು ಪಡೆದುಕೊಂಡಿದ್ದು, ವಾಟರ್‌ಡ್ರಾಪ್ ನಾಚ್‌ ವಿನ್ಯಾಸದಿಂದ ಕೂಡಿದೆ. ಪ್ರೊಸೆಸರ್ ಕೂಡ ಸೇಮ್ ಇದೆ. ಮೀಡಿಯಾಟೆಕ್‌ ಹಿಲಿಯೋ G36SoC ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದ್ದು ಆಂಡ್ರಾಯ್ಡ್‌ 12 (Go Edition) ಬೆಂಬಲ ನೀಡಲಾಗಿದೆ.

ಕ್ಯಾಮೆರಾ ವಿವಾರಕ್ಕೆ ಬರುವುದಾದರೆ, ರೆಡ್ಮಿ A2 ಮತ್ತು ರೆಡ್ಮಿ A2+ ಸ್ಮಾರ್ಟ್‌ಫೋನ್‌ಗಳು ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿವೆ. ಮುಖ್ಯ ಕ್ಯಾಮೆರಾ 8MP ಸೆನ್ಸಾರ್‌ ಹೊಂದಿದ್ದು, LED ಫ್ಲ್ಯಾಷ್ ಅನ್ನು ಒಳಗೊಂಡಿದೆ. 0.08 ಮೆಗಾಫಿಕ್ಸೆಲ್​ನ ಡೆಪ್ತ್ ಸೆನ್ಸಾರ್ ನೀಡಲಾಗಿದೆ. ಇದಲ್ಲದೆ ವಿಡಿಯೋ ಕರೆಗಳು ಮತ್ತು ಸೆಲ್ಫಿಗಳಿಗಾಗಿ 5MP ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ.

ರೆಡ್ಮಿ A2 ಮತ್ತು ರೆಡ್ಮಿ A2+ ಸ್ಮಾರ್ಟ್‌ಫೋನ್‌ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಬೆಂಬಲಿಸಲಿದೆ. ಇದು ಮೈಕ್ರೋ-ಯುಎಸ್‌ಬಿ ಚಾರ್ಜಿಂಗ್ ಪೋರ್ಟ್‌ನಲ್ಲಿ 10W ಚಾರ್ಜಿಂಗ್ ನೀಡಲಾಗಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್-ಸಿಮ್, 4G, 2.4GHz ವೈಫೈ, ಬ್ಲೂಟೂತ್ 5.0, GPS, ಗ್ಲೋನಾಸ್ ಮತ್ತು ಗೆಲಿಲಿಯೋವನ್ನು ಬೆಂಬಲಿಸುತ್ತವೆ. 5ಜಿ ಸಪೋರ್ಟ್ ನೀಡಲಾಗಿಲ್ಲ. ಈ ಎರಡೂ ಫೋನಿನ ಫೀಚರ್ಸ್​ ಬಹುತೇಕ ಒಂದೇ ಆಗಿದ್ದು ರೆಡ್ಮಿ A2+ ನಲ್ಲಿ ಫಿಂಗರ್​ಪ್ರಿಂಟ್ ಸೆನ್ಸಾರ್ ಆಯ್ಕೆ ನೀಡಲಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ