Motorola Edge 40: ಮೇ 23ಕ್ಕೆ ಮೋಟೋ ಎಡ್ಜ್‌ 40 ಸ್ಮಾರ್ಟ್‌ಫೋನ್‌ ಬಿಡುಗಡೆ: ಖರೀದಿಗೆ ಕ್ಯೂ ಗ್ಯಾರಂಟಿ

ಮೋಟೋ ಇದೀಗ ದೇಶದಲ್ಲಿ ಮೋಟೋರೊಲಾ ಎಡ್ಜ್‌ 40 (Motorola Edge 40) ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಲು ತಯಾರಿಸಿ ನಡೆಸಿದೆ. ಇತ್ತೀಚೆಗಷ್ಟೆ ವಿದೇಶದಲ್ಲಿ ಅನಾವರಣಗೊಂಡಿದ್ದ ಈ ಫೋನ್ ಇದೇ ಮೇ 23 ರಂದು ಭಾರತದ ಮಾರುಕಟ್ಟೆಗೆ ಅಪ್ಪಳಿಸಲಿದೆ.

Motorola Edge 40: ಮೇ 23ಕ್ಕೆ ಮೋಟೋ ಎಡ್ಜ್‌ 40 ಸ್ಮಾರ್ಟ್‌ಫೋನ್‌ ಬಿಡುಗಡೆ: ಖರೀದಿಗೆ ಕ್ಯೂ ಗ್ಯಾರಂಟಿ
Motorola Edge 40
Follow us
Vinay Bhat
|

Updated on: May 19, 2023 | 7:30 PM

ಭಾರತದಲ್ಲಿ ಮೋಟೋರೊಲಾ ಕಂಪನಿಯ ಫೋನ್​ಗಳಿಗೆ ಅತ್ಯುತ್ತಮ ಬೇಡಿಕೆಯಿದೆ. ಬಜೆಟ್ ಬೆಲೆಯಿಂದ ಹಿಡಿದು ಹೈ-ರೇಂಜ್ ಮಾದರಿಯ ವರೆಗೆ ಆಕರ್ಷಕ ಮೊಬೈಲ್​ಗಳನ್ನು ಅನಾವರಣ ಮಾಡುವ ಮೋಟೋ ಇದೀಗ ದೇಶದಲ್ಲಿ ಮೋಟೋರೊಲಾ ಎಡ್ಜ್‌ 40 (Motorola Edge 40) ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಲು ತಯಾರಿಸಿ ನಡೆಸಿದೆ. ಇತ್ತೀಚೆಗಷ್ಟೆ ವಿದೇಶದಲ್ಲಿ ಅನಾವರಣಗೊಂಡಿದ್ದ ಈ ಫೋನ್ ಇದೇ ಮೇ 23 ರಂದು ಭಾರತದ ಮಾರುಕಟ್ಟೆಗೆ ಅಪ್ಪಳಿಸಲಿದೆ. ಭರ್ಜರಿ ಫೀಚರ್​ಗಳ ಜೊತೆಗೆ ಸಾಕಷ್ಟು ಬಲಿಷ್ಠವಾಗಿರುವ ಈ ಫೋನ್​ನಲ್ಲಿ ಡೈಮೆನ್ಸಿಟಿ 8020 SoC ಪ್ರೊಸೆಸರ್‌ ಅಳವಡಿಸಲಾಗಿದೆ. ಈ ಫೋನಿನ ವಿಶೇಷತೆ, ಬೆಲೆ ಕುರಿತ ಪೂರ್ಣ ಮಾಹಿತಿ ಇಲ್ಲಿದೆ.

ಮೋಟೋರೊಲಾ ಎಡ್ಜ್‌ 40 ಸ್ಮಾರ್ಟ್‌ಫೋನ್‌ ಮೊನ್ನೆ ಯುರೋಪ್‌ನಲ್ಲಿ ಮಾತ್ರ ರಿಲೀಸ್ ಆಗಿತ್ತು. ಅಲ್ಲಿ ಈ ಫೋನ್ ಬೆಲೆ EUR 599.99, ಭಾರತದಲ್ಲಿ ಇದರ ಬೆಲೆ ಅಂದಾಜು 27,999 ರೂ. ಇರಬಹುದು ಎಂದು ಅಂದಾಜಿಸಲಾಗಿದೆ. ಈ ಸ್ಮಾರ್ಟ್‌ಫೋನ್‌ ಬೆಲೆ ಪ್ರಿ ಬುಕ್ಕಿಂಗ್‌ ಗ್ರಾಹಕರಿಗೆ ಇದು ಅನ್ವಯಿಸಲಿದೆ. ಇದು 8GB RAM + 256GB ಸ್ಟೋರೇಜ್ ಆಯ್ಕೆಯಿಂದ ಕೂಡಿದೆ. ಎಕ್ಲಿಪ್ಸ್ ಬ್ಲ್ಯಾಕ್, ಲೂನಾರ್ ಬ್ಲೂ ಮತ್ತು ನೆಬ್ಯುಲಾ ಗ್ರೀನ್ ಬಣ್ಣದ ಆಯ್ಕೆಗಳಲ್ಲಿ ಖರೀದಿಗೆ ಸಿಗಲಿದೆ.

Google Pixel Fold: ಗ್ಯಾಜೆಟ್ ಲೋಕಕ್ಕೆ ಬಂತು ಗೂಗಲ್ ಫೋಲ್ಡಿಂಗ್ ಫೋನ್

ಇದನ್ನೂ ಓದಿ
Image
Tech Tips: ಯೂಟ್ಯೂಬ್​ನಲ್ಲಿ​ ವಿಡಿಯೋ ನೋಡುವಾಗ ಜಾಹೀರಾತು ಬಾರದಂತೆ ಮಾಡುವುದು ಹೇಗೆ?: ಇಲ್ಲಿದೆ ಟ್ರಿಕ್
Image
Redmi A2: ಕೇವಲ 5,999 ರೂ.: ಒಂದೇ ದಿನ ಎರಡು ಹೊಸ ಫೋನ್ ಬಿಡುಗಡೆ ಮಾಡಿದ ರೆಡ್ಮಿ
Image
Tech Tips: ಇನ್​ಸ್ಟಾಗ್ರಾಮ್​ ಸ್ಟೇಟಸ್​ನ ಈ ಟ್ರಿಕ್ ನಿಮಗೆ ಗೊತ್ತೇ?: ಏನದು ನೋಡಿ
Image
Realme Narzo N53: ಬಜೆಟ್ ಪ್ರಿಯರಿಗಾಗಿ ಕೇವಲ 8,999 ರೂ. ಗೆ ಆಕರ್ಷಕ ಸ್ಮಾರ್ಟ್​ಫೋನ್ ಪರಿಚಯಿಸಿದ ರಿಯಲ್ ಮಿ

ಫೀಚರ್ಸ್ ಏನಿದೆ?:

ಮೋಟೋರೊಲಾ ಎಡ್ಜ್‌ 40 ಸ್ಮಾರ್ಟ್‌ಫೋನ್‌ 2,400 x 1,080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.55 ಇಂಚಿನ ಫುಲ್‌ ಹೆಚ್‌ಡಿ+ ಫೋಲ್ಡ್‌ ಸ್ಕ್ರೀನ್‌ ಅನ್ನು ಹೊಂದಿದೆ. 144Hz ರಿಫ್ರೆಶ್ ರೇಟ್, 360 Hz ಟಚ್ ಸ್ಯಾಂಪ್ಲಿಂಗ್ ರೇಟ್ ನೀಡಲಾಗಿದೆ. ಬಲಿಷ್ಠವಾದ ಮಿಡಿಯಾ ಟೆಕ್ ಡೈಮೆನ್ಸಿಟಿ 8020 SoC ಪ್ರೊಸೆಸರ್‌ ವೇಗವನ್ನು ಹೊಂದಿದ್ದು ಆಂಡ್ರಾಯ್ಡ್‌ 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.

ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ, ಈ ಫೋನ್ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದಿಂದ ಕೂಡಿದೆ. ಇದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಟೆಕ್ನಾಲಜಿಯನ್ನು ಹೊಂದಿದೆ. ಎರಡನೇ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್‌ ಅಲ್ಟ್ರಾವೈಡ್ ಮ್ಯಾಕ್ರೋ ವಿಷನ್ ಅನ್ನು ಹೊಂದಿದೆ. ಮುಂಭಾಗ ಸೆಲ್ಫೀ ಮತ್ತು ವಿಡಿಯೋ ಕರೆಗಳಿಗಾಗಿ 32 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಕ್ಯಾಮೆರಾವನ್ನು ಅಳವಡಿಸಲಾಗಿದೆ.

ಮೋಟೋರೊಲಾ ಎಡ್ಜ್‌ 40 ಸ್ಮಾರ್ಟ್‌ಫೋನ್‌ 4,400mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದಕ್ಕೆ ತಕ್ಕಂತೆ 68W ಟರ್ಬೋಪವರ್ ವೈರ್ಡ್ ಚಾರ್ಜಿಂಗ್ ಮತ್ತು 15W ವೈರ್‌ಲೆಸ್ ಚಾರ್ಜಿಂಗ್‌ ಅನ್ನು ಬೆಂಬಲಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G ಬೆಂಬಲ ಪಡೆದುಕೊಂಡಿದೆ. ಉಳಿದಂತೆ 4G LTE ಹಾಟ್‌ಸ್ಪಾಟ್‌, ವೈಫೈ, ಯುಎಸ್‌ಬಿ ಸಿ ಪೋರ್ಟ್‌, ಬ್ಲೂಟೂತ್ 5.2, ಜಿಪಿಎಸ್, ಎನ್‌ಎಫ್‌ಸಿ ಸೇರಿದಂತೆ ಇತ್ತೀಚಿನ ಎಲ್ಲ ಆಯ್ಕೆಗಳನ್ನು ನೀಡಲಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್