ಹೊಸ ವರ್ಷಕ್ಕೆ ಹೊಸ ಫೋನ್: ಜನವರಿಯಲ್ಲಿ ಬರುತ್ತಿದೆ ಪವರ್​ಫುಲ್ ಸ್ಮಾರ್ಟ್​ಫೋನ್ಸ್

|

Updated on: Dec 24, 2023 | 1:47 PM

Smartphones Launching in 2024: ಮುಂದಿನ ವರ್ಷ 2024 ಆರಂಭದಲ್ಲಿ ಮಾರುಕಟ್ಟೆಗೆ ಬರಲಿರುವ ಕೆಲವು ಅತ್ಯುತ್ತಮ ಸ್ಮಾರ್ಟ್​ಫೋನ್‌ಗಳು ಯಾವುವು? ಮತ್ತು ಅವುಗಳ ವೈಶಿಷ್ಟ್ಯಗಳು ಏನು ಎಂಬುದನ್ನು ನೋಡೋಣ. ಇದರಲ್ಲಿ ಏಸಸ್ ರಾಗ್ ಫೋನ್ 8, ಸ್ಯಾಮ್​ಸಂಗ್ ಗ್ಯಾಲಕ್ಸಿ S24 ಸರಣಿ ಸೇರಿದಂತೆ ಅನೇಕ ಫೋನುಗಳಿವೆ.

ಹೊಸ ವರ್ಷಕ್ಕೆ ಹೊಸ ಫೋನ್: ಜನವರಿಯಲ್ಲಿ ಬರುತ್ತಿದೆ ಪವರ್​ಫುಲ್ ಸ್ಮಾರ್ಟ್​ಫೋನ್ಸ್
Smartphones
Follow us on

ಹೊಸ ವರ್ಷ 2024 (New Year 2024) ಅನ್ನು ಸ್ವಾಗತಿಸಲು ಭರ್ಜರಿ ಸಿದ್ಧತೆ ನಡೆಯುತ್ತಿದೆ. ಹೊಸ ವರ್ಷದಲ್ಲಿ ಹೊಸದನ್ನು ಏನಾದರು ಖರೀದಿಸಲು ಪ್ರತಿಯೊಬ್ಬರೂ ಆಶಿಸುತ್ತಾರೆ. ಅದರಂತೆ ನೀವು 2024 ಹೊಸ ವರ್ಷದಲ್ಲಿ ಸ್ಮಾರ್ಟ್‌ಫೋನ್ ಖರೀದಿಸಲು ಯೋಜಿಸುತ್ತಿದ್ದೀರಾ?. ಸ್ಮಾರ್ಟ್‌ಫೋನ್ ಕಂಪನಿಗಳು ನಿಮಗಾಗಿ 2024ನೇ ವರ್ಷ ಹೊಸ ಫೋನ್‌ಗಳನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿವೆ. ಹಾಗಾದರೆ, ಮುಂದಿನ ವರ್ಷದ ಆರಂಭದಲ್ಲಿ ಮಾರುಕಟ್ಟೆಗೆ ಬರಲಿರುವ ಕೆಲವು ಅತ್ಯುತ್ತಮ ಸ್ಮಾರ್ಟ್​ಫೋನ್‌ಗಳು ಯಾವುವು? ಮತ್ತು ಅವುಗಳ ವೈಶಿಷ್ಟ್ಯಗಳು ಏನು ಎಂಬುದನ್ನು ನೋಡೋಣ.

ಏಸಸ್ ರಾಗ್ ಫೋನ್ 8: ಏಸಸ್ ರಾಗ್ ಫೋನ್ 8 ಜನವರಿ 2024 ರಲ್ಲಿ ಬಿಡುಗಡೆಯಾಗಲಿದೆಯಂತೆ. ಈ ಫೋನ್ 6.78 ಇಂಚಿನ ಡಿಸ್​ಪ್ಲೇಯನ್ನು ಹೊಂದಿರುತ್ತದೆ. 512GB/1TB ರೂಪಾಂತರದಲ್ಲಿ ಬಿಡುಗಡೆ ಆಗಲಿದೆ ಎಂಬ ಮಾತಿದೆ. ಇದು ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಕ್ಯಾಮೆರಾಗೆ ಸಂಬಂಧಿಸಿದಂತೆ, ಇದು 50 ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾವನ್ನು ನೀಡುತ್ತದೆ.

ಒನ್​ಪ್ಲಸ್ 12 ಸರಣಿ: ಬಹುನಿರೀಕ್ಷಿತ ಒನ್​ಪ್ಲಸ್ 12 ಸರಣಿಯು 2024 ರಲ್ಲಿ ಬಿಡುಗಡೆಯಾಗುವ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಿದೆ. ಈ ಸ್ಮಾರ್ಟ್‌ಫೋನ್ ಜನವರಿ 23 ರಂದು ಬಿಡುಗಡೆ ಆಗುವುದು ಬಹುತೇಕ ಖಚಿತವಾಗಿದೆ. ಈ ಫೋನ್ 6.82-ಇಂಚಿನ HD+ LTPEO OLED ಡಿಸ್ಪ್ಲೇಯನ್ನು ಹೊಂದಿದೆ. ಕ್ವಾಲ್ಕಂ ಸ್ನಾಪ್​ಡ್ರಾಗನ್ 8 Gen 3 ಪ್ರೊಸೆಸರ್‌ನಿಂದ ನಡೆಸಲ್ಪಡುತ್ತಿದೆ. ಇದರಲ್ಲಿ 64 MP ಹಿಂಬದಿಯ ಕ್ಯಾಮೆರಾ ಮತ್ತು 32 MP ಮುಂಭಾಗದ ಕ್ಯಾಮೆರಾವನ್ನು ಅಳವಡಿಸಲಾಗಿದೆ.

ಇದನ್ನೂ ಓದಿ
ಹೊಸ ವರ್ಷಕ್ಕೆ ಜಿಯೋದಿಂದ ಬಂಪರ್ ಆಫರ್: ಪ್ರಿಪೇಯ್ಡ್ ಬಳಕೆದಾರರು ಫುಲ್ ಖುಷ್
ಒಂದೇ ಇಯರ್‌ಬಡ್‌ಗಳಲ್ಲಿ 2 ಹಾಡುಗಳನ್ನು ಕೇಳುವುದು ಹೇಗೆ?: ಇಲ್ಲಿದೆ ಟ್ರಿಕ್
ಭಾರತದಲ್ಲಿ ಬಜೆಟ್ ಬೆಲೆಗೆ ಒಪ್ಪೋ A59 5G ಫೋನ್ ರಿಲೀಸ್
100W ವೇಗದ ಚಾರ್ಜರ್, ಅದ್ಭುತ ಕ್ಯಾಮೆರಾ: ಹಾನರ್​ನಿಂದ ಬಂತು ಹೊಸ ​ಫೋನ್

ಭಾರತದಲ್ಲಿ ಪೋಕೋ M6 5G ಸ್ಮಾರ್ಟ್​ಫೋನ್ ಬಿಡುಗಡೆ: ಇದು ಕಡಿಮೆ ಬೆಲೆಯ ಬೆಸ್ಟ್ 5ಜಿ ಫೋನ್

ರೆಡ್ಮಿ ನೋಟ್ 13 ಸರಣಿ: ಚೀನೀ ಸ್ಮಾರ್ಟ್‌ಫೋನ್ ದೈತ್ಯ ರೆಡ್ಮಿ ಮುಂದಿನ ವರ್ಷ ನೋಟ್ 13 ಸರಣಿಯನ್ನು ಬಿಡುಗಡೆ ಮಾಡಲಿದೆ. ಈ ಸರಣಿ ಅಡಿಯಲ್ಲಿ ನೋಟ್ 13, ನೋಟ್ 13 ಪ್ರೊ ಮತ್ತು ನೋಟ್ 13 ಪ್ರೊ ಪ್ಲಸ್ ಮಾದರಿಗಳು ಇವೆ. ಈ ಫೋನ್‌ಗಳು 6.67-ಇಂಚಿನ AMOLED ಡಿಸ್ಪ್ಲೇಯನ್ನು ಹೊಂದಿರುತ್ತದೆ. ನೋಟ್ 13 ರಲ್ಲಿ 100 ಮೆಗಾ ಪಿಕ್ಸೆಲ್ ಕ್ಯಾಮೆರಾ ಮತ್ತು ನೋಟ್ 13 ಪ್ರೊ ಮಾದರಿಗಳಲ್ಲಿ 200 ಎಂಪಿ ಕ್ಯಾಮೆರಾವನ್ನು ನೀಡಲಾಗುವುದು. ಈ ಫೋನ್ 5000 mAh ಬ್ಯಾಟರಿಯನ್ನು ಹೊಂದಿದೆ.

ವಿವೋ X100 ಸರಣಿ: ವಿವೋ X100 ಸರಣಿಯು ಮುಂದಿನ ವರ್ಷ ಜನವರಿಯಲ್ಲಿ ಮಾರುಕಟ್ಟೆಗೆ ಪ್ರವೇಶಿಸಲಿದೆ. ಈ ಸರಣಿಯ ಭಾಗವಾಗಿ, ವಿವೋ X100 ಮತ್ತು ವಿವೋ X100 ಪ್ರೊ ಹೆಸರಿನ ಎರಡು ಫೋನ್‌ಗಳನ್ನು ಬಿಡುಗಡೆ ಮಾಡಲಾಗುವುದು. ಇದು 6.78 ಇಂಚಿನ 8 LTPO AMOLED ಡಿಸ್ಪ್ಲೇಯನ್ನು ಹೊಂದಿರುತ್ತದೆ. ಕ್ಯಾಮೆರಾಕ್ಕೆ ಸಂಬಂಧಿಸಿದಂತೆ, ಇದು 50-ಹಿಂಭಾಗದ ಕ್ಯಾಮೆರಾವನ್ನು ಒಳಗೊಂಡಿದೆ.

ಸ್ಯಾಮ್​ಸಂಗ್ ಗ್ಯಾಲಕ್ಸಿ S24: ಮಾರುಕಟ್ಟೆಯಲ್ಲಿ ಬರುತ್ತಿರುವ ಮತ್ತೊಂದು ಹೊಸ ಫೋನ್ ಸ್ಯಾಮ್​ಸಂಗ್ ಗ್ಯಾಲಕ್ಸಿ S24 ಸರಣಿಯಾಗಿದೆ. ಈ ಸರಣಿಯ ಭಾಗವಾಗಿ ಗ್ಯಾಲಕ್ಸಿ S24, ಗ್ಯಾಲಕ್ಸಿ S24+ ಮತ್ತು ಗ್ಯಾಲಕ್ಸಿ S24 ಅಲ್ಟ್ರಾ ಮಾದರಿಗಳನ್ನು ಬಿಡುಗಡೆ ಮಾಡಲಾಗುತ್ತದೆ. ವೈಶಿಷ್ಟ್ಯಗಳಿಗೆ ಸಂಬಂಧಿಸಿದಂತೆ, ಇದು ಕ್ವಾಲ್ಕಣ ಸ್ನಾಪ್​ಡ್ರಾಗನ್ 8 Gen 3 SoC ಪ್ರೊಸೆಸರ್​ನೊಂದಿಗೆ ಬರುತ್ತದೆ. IP68 ರೇಟಿಂಗ್‌ನೊಂದಿಗೆ ನೀರು ಮತ್ತು ಧೂಳು ನಿರೋಧಕ, 8K ಗುಣಮಟ್ಟದ ವಿಡಿಯೋಗಳನ್ನು ರೆಕಾರ್ಡ್ ಮಾಡಬಹುದು.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ