Year Ender 2023: ಈ ವರ್ಷ ಭಾರತದಲ್ಲಿ ಬಿಡುಗಡೆಯಾದ ಬೆಸ್ಟ್ ಕ್ಯಾಮೆರಾ ಫೋನುಗಳು ಯಾವುವು ಗೊತ್ತೇ?
Best Camera Smartphones in 2023: ನೀವು ಉತ್ತಮ ಕ್ಯಾಮೆರಾ ಹೊಂದಿರುವ ಫೋನ್ ಖರೀದಿಸಲು ಬಯಸಿದರೆ, 2023 ರಲ್ಲಿ ಬಿಡುಗಡೆ ಆದ ಬೆಸ್ಟ್ ಕ್ಯಾಮೆರಾ ಫೋನುಗಳು ಯಾವುವು ಎಂಬುದನ್ನು ನಾವು ಹೇಳುತ್ತೇವೆ. ನಿಮ್ಮ ಬಜೆಟ್‌ಗೆ ಅನುಗುಣವಾಗಿ ನಿಮ್ಮ ನೆಚ್ಚಿನ ಸ್ಮಾರ್ಟ್‌ಫೋನ್ ಅನ್ನು ನೀವು ಖರೀದಿಸಬಹುದು.
2023ನೇ ವರ್ಷದ ಅಂತ್ಯಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದೆ. ಈ ವರ್ಷವನ್ನು ಮೆಲುಕಿ ಹಾಕಿ ನೋಡಿದಾಗ ಮಾರುಕಟ್ಟೆಗೆ ಅನೇಕ ಬ್ರ್ಯಾಂಡ್ಗಳು ನೂರಾರು ಸ್ಮಾರ್ಟ್ಫೋನ್ಗಳು (Smartphones) ಲಗ್ಗೆಯಿಟ್ಟಿವೆ. ಮುಖ್ಯವಾಗಿ ಈ ವರ್ಷ ಕ್ಯಾಮೆರಾ ಫೋನುಗಳ ಹಾವಳಿ ಹೆಚ್ಚಾಗಿತ್ತು. ಅದರಲ್ಲೂ 200 ಮೆಗಾ ಪಿಕ್ಸೆಲ್ ಕ್ಯಾಮೆರಾದ ಫೋನುಗಳು ಹೆಚ್ಚು ಬಿಡುಗಡೆ ಆದವು. ನೀವು ಸಹ ಉತ್ತಮ ಕ್ಯಾಮೆರಾ ಹೊಂದಿರುವ ಫೋನ್ ಖರೀದಿಸಲು ಬಯಸಿದರೆ, 2023 ರಲ್ಲಿ ಬಿಡುಗಡೆ ಆದ ಬೆಸ್ಟ್ ಕ್ಯಾಮೆರಾ ಫೋನುಗಳು ಯಾವುವು ಎಂಬುದನ್ನು ನಾವು ಹೇಳುತ್ತೇವೆ. ನಿಮ್ಮ ಬಜೆಟ್‌ಗೆ ಅನುಗುಣವಾಗಿ ನಿಮ್ಮ ನೆಚ್ಚಿನ ಸ್ಮಾರ್ಟ್‌ಫೋನ್ ಅನ್ನು ನೀವು ಖರೀದಿಸಬಹುದು.
ಐಫೋನ್ 15 ಪ್ರೊ ಮ್ಯಾಕ್ಸ್: ಈ ವರ್ಷ ಹೆಚ್ಚು ಸದ್ದು ಮಾಡಿದ ಫೋನ್‌ಗಳಲ್ಲಿ ಇದು ಒಂದಾಗಿದೆ. ಫೋಟೋಗ್ರಫಿಗೆ ಹೇಳಿ ಮಾಡಿಸಿದ ಫೋನ್ ಇದಾಗಿದ್ದು, 120mm ನಲ್ಲಿ 5x ಜೂಮ್, ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಮತ್ತು ಆಟೋಫೋಕಸ್, 3D ಸಂವೇದಕ-ಶಿಫ್ಟ್ ಮಾಡ್ಯೂಲ್‌ನೊಂದಿಗೆ ನೀವು ಉತ್ತಮ ಕ್ಯಾಮರಾ ವೈಶಿಷ್ಟ್ಯಗಳನ್ನು ಪಡೆಯುತ್ತೀರಿ. 48MP+12MP+12MP ಟ್ರಿಪಲ್ ರಿಯರ್ ಕ್ಯಾಮೆರಾ ಮತ್ತು 12MP ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ. ಇದರ ಬೆಲೆ ರೂ. 1,59,900 ರಿಂದ ಪ್ರಾರಂಭವಾಗುತ್ತದೆ.
Trending Smartphones: 20,000 ರೂ. ಒಳಗಿನ ಅತ್ಯುತ್ತಮ ಸ್ಮಾರ್ಟ್ಫೋನ್ಗಳು ಇಲ್ಲಿದೆ ನೋಡಿ
ಸ್ಯಾಮ್ಸಂಗ್ ಗ್ಯಾಲಕ್ಸಿ S23 ಆಲ್ಟ್ರಾ: ಸ್ಯಾಮ್‌ಸಂಗ್‌ನ ಪ್ರೀಮಿಯಂ ಸ್ಮಾರ್ಟ್‌ಫೋನ್ ಗ್ಯಾಲಕ್ಸಿ S23 ಅಲ್ಟ್ರಾ ಅತ್ಯುತ್ತಮ ಕ್ಯಾಮೆರಾ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಇದು 200MP ಕ್ಯಾಮೆರಾವನ್ನು ಹೊಂದಿದ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್, ಸೂಪರ್ ಕ್ವಾಡ್ ಪಿಕ್ಸೆಲ್‌ಗಳೊಂದಿಗೆ ಅಡಾಪ್ಟಿವ್ ಪಿಕ್ಸೆಲ್ ಸಂವೇದಕ ಮತ್ತು 1.5 ವೇಗದ ಸ್ವಯಂ ಫೋಕಸ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಇದು 200MP+10MP+12MP+10MP ಕ್ವಾಡ್ ಹಿಂಬದಿಯ ಕ್ಯಾಮೆರಾಗಳನ್ನು ಮತ್ತು OIS ಬೆಂಬಲದೊಂದಿಗೆ 12MP ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. ಈ ಫೋನ್ ಆರಂಭಿಕ ಬೆಲೆ 1,24,999 ರೂ.
ಗೂಗಲ್ ಪಿಕ್ಸೆಲ್ 8 ಪ್ರೊ: ಗೂಗಲ್ ಪಿಕ್ಸೆಲ್ 8 ಪ್ರೊ ಅನ್ನು ಮುಂದಿನ ಪೀಳಿಗೆಯ ಸ್ಮಾರ್ಟ್‌ಫೋನ್ ಎಂದು ಕರೆಯಲಾಗುತ್ತದೆ. ನೈಟ್ ಸೈಟ್ ಮತ್ತು ಮ್ಯಾಜಿಕ್ ಎರೇಸರ್‌ನಂತಹ ವೈಶಿಷ್ಟ್ಯಗಳೊಂದಿಗೆ ಕಂಪ್ಯೂಟೇಶನಲ್ ಫೋಟೋಗ್ರಫಿಯಲ್ಲಿ ಗೂಗಲ್ ಈ ಫೋನನ್ನು ಪರಿಚಯಿಸಿದೆ. Audio Magic Eraser ವೈಶಿಷ್ಟ್ಯದಂತಹ ಹೊಸ ತಂತ್ರಗಳೊಂದಿಗೆ Pixel 8 Pro ಅನ್ನು ನೀವು 1,06,999 ಕ್ಕೆ ಖರೀದಿಸಬಹುದು. ಈ ಫೋನ್ 50MP+48MP+48MP ಟ್ರಿಪಲ್ ರಿಯರ್ ಕ್ಯಾಮೆರಾ ಮತ್ತು 10.5MP ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ.
ಒನ್ಪ್ಲಸ್ ಓಪನ್: ಒನ್ಪ್ಲಸ್ ತನ್ನ ಮೊದಲ ಮಡಚುವ ಸ್ಮಾರ್ಟ್‌ಫೋನ್‌ನಲ್ಲಿ ಉತ್ತಮ ಛಾಯಾಗ್ರಹಣ ಅನುಭವವನ್ನು ಒದಗಿಸಲು ಸ್ವಿಟ್ಜರ್ಲೆಂಡ್‌ನ ಪ್ರಮುಖ ಕ್ಯಾಮೆರಾ ಕಂಪನಿ ಹ್ಯಾಸೆಲ್‌ಬ್ಲಾಡ್‌ನೊಂದಿಗೆ ಪಾಲುದಾರಿಕೆ ಹೊಂದಿದೆ. ಕ್ವಾಲ್ಕಂ ಸ್ನಾಪ್ಡ್ರಾಗನ್ 8 Gen 2 ಚಿಪ್‌ಸೆಟ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಸೋನಿಯ ಹೊಸ LYT-T808 ಇಮೇಜ್ ಸೆನ್ಸರ್‌ಗಳನ್ನು ಇದರಲ್ಲಿ ಬಳಸಲಾಗಿದೆ.
48MP+64MP+48MP ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊರತುಪಡಿಸಿ, ಇದು ಪ್ರಾಥಮಿಕ ಡಿಸ್‌ಪ್ಲೇಯಲ್ಲಿ 20MP ಫ್ರಂಟ್ ಕ್ಯಾಮೆರಾ ಮತ್ತು ಕವರ್ ಡಿಸ್‌ಪ್ಲೇಯಲ್ಲಿ 32MP ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ನ ಆರಂಭಿಕ ಬೆಲೆ 1,39,999 ರೂ.
ರೆಡ್ಮಿ ನೋಟ್ 12 ಪ್ರೊ ಪ್ಲಸ್: ನಿಮ್ಮ ಬಜೆಟ್ ಕಡಿಮೆಯಿದ್ದರೆ ಈ ಫೋನ್ ಉತ್ತಮ ಆಯ್ಕೆಯಾಗಿದೆ. ಇದು 200MP ಕ್ಯಾಮೆರಾವನ್ನು ಹೊಂದಿದೆ ಮತ್ತು 30,000 ರೂ. ಗಿಂತ ಅಗ್ಗವಾಗಿದೆ. ಇದು ಶವೋಮಿಯ HPX ಸಂವೇದಕದೊಂದಿಗೆ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS), ಅಲ್ಟ್ರಾ-ಲೋ ರಿಫ್ಲೆಕ್ಷನ್ ಕೋಟಿಂಗ್‌ನಂತಹ ಉತ್ತಮ ಕ್ಯಾಮೆರಾ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಈ ಸ್ಮಾರ್ಟ್‌ಫೋನ್ 200MP+8MP+2MP ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. 16MP ಫ್ರಂಟ್ ಕ್ಯಾಮೆರಾ ಇದೆ. ಇದರ ಬೆಲೆ 27,999 ರೂ. ಗಳಿಂದ ಪ್ರಾರಂಭವಾಗುತ್ತದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ