Lava Yuva 3 Pro: 50MP ಕ್ಯಾಮೆರಾ, 5000mAh ಬ್ಯಾಟರಿ: ಹೊಸ ದೇಶೀಯ ಸ್ಮಾರ್ಟ್​ಫೋನ್​ಗೆ ಭಾರತೀಯರು ಫಿದಾ

Lava Yuva 3 Pro Launched: ಬಜೆಟ್ ಪ್ರಿಯರಿಗೆ ಹೇಳಿ ಮಾಡಿಸಿದ ಹೊಸ ಸ್ಮಾರ್ಟ್‌ಫೋನ್ ಒಂದು ಬಿಡುಗಡೆ ಆಗಿದೆ. ದೇಶೀಯ ಸ್ಮಾರ್ಟ್‌ಫೋನ್ ತಯಾರಕ ಸಂಸ್ಥೆ ಲಾವಾ ತನ್ನ ಹೊಸ ಲಾವಾ ಯುವ 3 ಪ್ರೊ ಅನ್ನು ದೇಶದಲ್ಲಿ ಇಂದು ಅನಾವರಣ ಮಾಡಿದೆ. ಈ ಫೋನಿನ ಬೆಲೆ ಎಷ್ಟು?, ಏನೆಲ್ಲ ಫೀಚರ್ಸ್ ಇದೆ ಎಂಬುದನ್ನು ನೋಡೋಣ.

Lava Yuva 3 Pro: 50MP ಕ್ಯಾಮೆರಾ, 5000mAh ಬ್ಯಾಟರಿ: ಹೊಸ ದೇಶೀಯ ಸ್ಮಾರ್ಟ್​ಫೋನ್​ಗೆ ಭಾರತೀಯರು ಫಿದಾ
Lava Yuva 3 Pro
Follow us
Vinay Bhat
|

Updated on: Dec 14, 2023 | 3:32 PM

ದೇಶೀಯ ಸ್ಮಾರ್ಟ್‌ಫೋನ್ ತಯಾರಕ ಸಂಸ್ಥೆ ಲಾವಾ ಇಂಟರ್‌ನ್ಯಾಷನಲ್‌ನಿಂದ ಹೊಸ ಸ್ಮಾರ್ಟ್​ಫೋನ್ ಬಿಡುಗಡೆ ಆಗಿದೆ. ಇದರ ಹೆಸರು ಲಾವಾ ಯುವ 3 ಪ್ರೊ (Lava Yuva 3 Pro). ಬಜೆಟ್ ಪ್ರಿಯರಿಗೆ ಹೇಳಿ ಮಾಡಿಸಿದ ಈ ಸ್ಮಾರ್ಟ್‌ಫೋನ್ ಮೂರು ವಿಭಿನ್ನ ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ. ಯುನಿಸೊಕ್ T616 SoC ನಿಂದ ಚಾಲಿತವಾಗಿದ್ದು, 8GB RAM ನೊಂದಿಗೆ ಜೋಡಿಸಲಾಗಿದೆ. ಅತ್ಯುತ್ತಮ ಕ್ಯಾಮೆರಾ, ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಕೂಡ ಒದಗಿಸಲಾಗಿದೆ. ಹಾಗಾದರೆ, ಈ ಫೋನಿನ ಬೆಲೆ ಎಷ್ಟು?, ಏನೆಲ್ಲ ಫೀಚರ್ಸ್ ಇದೆ ಎಂಬುದನ್ನು ನೋಡೋಣ.

ಭಾರತದಲ್ಲಿ ಲಾವಾ ಯುವ 3 ಪ್ರೊ ಬೆಲೆ, ಲಭ್ಯತೆ:

ಲಾವಾ ಯುವ 3 ಪ್ರೊ ಸ್ಮಾರ್ಟ್​ಫೋನ್ ಸದ್ಯಕ್ಕೆ ಭಾರತದಲ್ಲಿ ಒಂದು ಸ್ಟೋರೇಜ್ ಆಯ್ಕೆಯಲ್ಲಿ ಮಾತ್ರ ಪರಿಚಯಿಸಲಾಗಿದೆ. ಇದರ ಏಕೈಕ 8GB RAM + 128GB ಸ್ಟೋರೇಜ್ ಮಾದರಿಗೆ 8,999 ರೂ. ಇದೆ. ಈ ಫೋನ್ ಪ್ರಸ್ತುತ ಲಾವಾದ ರಿಟೇಲ್ ನೆಟ್‌ವರ್ಕ್ ಮತ್ತು ಲಾವಾ ಇ-ಸ್ಟೋರ್‌ನಾದ್ಯಂತ ಡೆಸರ್ಟ್ ಗೋಲ್ಡ್, ಫಾರೆಸ್ಟ್ ವಿರಿಡಿಯನ್ ಮತ್ತು ಮೆಡೋ ಪರ್ಪಲ್ ಬಣ್ಣದ ಆಯ್ಕೆಗಳಲ್ಲಿ ಮಾರಾಟಕ್ಕಿದೆ.

Deepfake: ‘ಕ್ವಾಂಟಮ್ ಎಐಗೆ ಬನ್ನಿ, ಮೊದಲ ದಿನವೇ 2.5 ಲಕ್ಷ ರೂ ಗಳಿಸಿ’- ಇನ್ಫೋಸಿಸ್ ನಾರಾಯಣಮೂರ್ತಿ ಓಪನ್ ಆಫರ್ ಕೊಟ್ಟಿದ್ದು ನಿಜವಾ?

ಇದನ್ನೂ ಓದಿ
Image
ಭಾರತಕ್ಕೆ ಬಂತು ರಿಯಲ್ ಮಿ C ಸರಣಿಯ ಮೊದಲ 5G ಫೋನ್ ರಿಯಲ್ ಮಿ C67: ಬೆಲೆ?
Image
ಈ 5 ತಪ್ಪುಗಳಿಂದ ನಿಮ್ಮ ಸ್ಮಾರ್ಟ್​ಫೋನ್​ಗೆ ವೈರಸ್ ಅಟ್ಯಾಕ್ ಆಗಬಹುದು
Image
ಭಾರತಕ್ಕೆ ಬರುತ್ತಿದೆ ಪೋಕೋದ ಹೊಸ ​ಫೋನ್: ಟೆಕ್ ಪ್ರಿಯರಲ್ಲಿ ಭಾರೀ ನಿರೀಕ್ಷೆ
Image
20,000 ರೂ. ಒಳಗಿನ ಅತ್ಯುತ್ತಮ ಸ್ಮಾರ್ಟ್​ಫೋನ್​ಗಳು ಇಲ್ಲಿದೆ ನೋಡಿ

ಲಾವಾ ಯುವ 3 ಪ್ರೊ ಫೀಚರ್ಸ್:

ಡ್ಯುಯಲ್-ಸಿಮ್ (ನ್ಯಾನೋ) ಲಾವಾ ಯುವ 3 ಪ್ರೊ ಸ್ಮಾರ್ಟ್​ಫೋನ್ ಆಂಡ್ರಾಯ್ಡ್ 13 ನಲ್ಲಿ ಕಾರ್ಯನಿರ್ವಹಿಸುತ್ತದೆ. ಆಂಡ್ರಾಯ್ಡ್ 14 ಮತ್ತು ಎರಡು ವರ್ಷಗಳ ಭದ್ರತಾ ನವೀಕರಣಗಳನ್ನು ಸ್ವೀಕರಿಸಲು ಅಪ್‌ಗ್ರೇಡ್ ಮಾಡಬಹುದು. ಇದು 269ppi ಪಿಕ್ಸೆಲ್ ಸಾಂದ್ರತೆ ಮತ್ತು 90Hz ರಿಫ್ರೆಶ್ ದರದೊಂದಿಗೆ 6.5-ಇಂಚಿನ HD+ (720×1,600 ಪಿಕ್ಸೆಲ್‌ಗಳು) ಡಿಸ್‌ಪ್ಲೇಯನ್ನು ಹೊಂದಿದೆ. 8GB RAM ಜೊತೆಗೆ ಆಕ್ಟಾ-ಕೋರ್ ಯುನಿಸಕ್ T616 SoC ನಲ್ಲಿ ಕಾರ್ಯನಿರ್ವಹಿಸುತ್ತದೆ. ವರ್ಚುವಲ್ RAM ವೈಶಿಷ್ಟ್ಯ ನೀಡಲಾಗಿದ್ದು, ಆನ್‌ಬೋರ್ಡ್ ಮೆಮೊರಿಯನ್ನು 16GB ವರೆಗೆ ವಿಸ್ತರಿಸಬಹುದು.

ಕ್ಯಾಮೆರಾ ವಿಚಾರಕ್ಕೆ ಬಂದರೆ, ಈ ಫೋನ್ AI-ಬೆಂಬಲಿತ 50-ಮೆಗಾಪಿಕ್ಸೆಲ್ ಡ್ಯುಯಲ್ ಹಿಂಬದಿಯ ಕ್ಯಾಮೆರಾ ಘಟಕವನ್ನು LED ಫ್ಲ್ಯಾಷ್‌ನೊಂದಿಗೆ ಹೊಂದಿದೆ. ಇದು HDR, ಪೋರ್ಟ್ರೇಟ್, ಪನೋರಮಾ, ಬರ್ಸ್ಟ್, ಸ್ಲೋ ಮೋಷನ್, ನೈಟ್ ಮತ್ತು ಟೈಮ್ ಲ್ಯಾಪ್ಸ್ ಫೋಟೋಗ್ರಫಿ ಸೇರಿದಂತೆ ಅನೇಕ ಕ್ಯಾಮೆರಾ ಮೋಡ್‌ಗಳನ್ನು ಬೆಂಬಲಿಸುತ್ತದೆ. ಸೆಲ್ಫಿ ಮತ್ತು ವಿಡಿಯೋ ಚಾಟ್‌ಗಳಿಗಾಗಿ, ಡಿಸ್ ಪ್ಲೇಯು ಫ್ಲ್ಯಾಷ್‌ನೊಂದಿಗೆ 8-ಮೆಗಾಪಿಕ್ಸೆಲ್ ಕ್ಯಾಮೆರಾ ಸಂವೇದಕವಿದೆ.

ಲಾವಾ ಯುವ 3 ಪ್ರೊ 18W ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಪ್ಯಾಕ್ ಮಾಡಿದೆ. ಬ್ಯಾಟರಿಯು 38 ಗಂಟೆಗಳ ಟಾಕ್ ಟೈಮ್ ಮತ್ತು 500 ಗಂಟೆಗಳ ಸ್ಟ್ಯಾಂಡ್‌ಬೈ ಸಮಯವನ್ನು ಒಂದೇ ಚಾರ್ಜ್‌ನಲ್ಲಿ ನೀಡುತ್ತದೆ ಎಂದು ಕಂಪನಿ ಹೇಳಿದೆ. ಇದು ಒಂದೇ ಚಾರ್ಜ್‌ನಲ್ಲಿ 468 ನಿಮಿಷಗಳವರೆಗೆ ಯೂಟ್ಯೂವ್ ಪ್ಲೇಬ್ಯಾಕ್ ಸಮಯವನ್ನು ನೀಡುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G VoLTE, ಬ್ಲೂಟೂತ್ 5, GPRS, OTG, Wi-Fi 802.1, 3.5mm ಆಡಿಯೋ ಜ್ಯಾಕ್ ಮತ್ತು USB ಟೈಪ್-ಸಿ ಪೋರ್ಟ್ ಸೇರಿವೆ. ಇದು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್‌ನೊಂದಿಗೆ ಬರುತ್ತದೆ. ಫೇಸ್ ಅನ್‌ಲಾಕ್ ವೈಶಿಷ್ಟ್ಯವನ್ನು ಬೆಂಬಲಿಸುತ್ತದೆ. ಈ ಹ್ಯಾಂಡ್ಸೆಟ್ AG ಗ್ಲಾಸ್ ಬ್ಯಾಕ್ ಪ್ಯಾನೆಲ್ ಅನ್ನು ಒಳಗೊಂಡಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್