Trending Smartphones: 20,000 ರೂ. ಒಳಗಿನ ಅತ್ಯುತ್ತಮ ಸ್ಮಾರ್ಟ್ಫೋನ್ಗಳು ಇಲ್ಲಿದೆ ನೋಡಿ
Best Smartphones Under 20K: ಪ್ರಸ್ತುತ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಉತ್ತಮ ಫೀಚರ್ಸ್ ಇರುವ ಅನೇಕ ಸ್ಮಾರ್ಟ್ಫೋನ್ಗಳು ಲಭ್ಯವಿವೆ. ನೀವು ಉತ್ತಮ ಫೀಚರ್ ಪ್ಯಾಕ್ಡ್ ಫೋನ್ ಖರೀದಿಸಲು ಬಯಸಿದರೆ ರೂ. 20,000 ಒಳಗಿನ ಟಾಪ್ ಸ್ಮಾರ್ಟ್ಫೋನ್ಗಳ ಪಟ್ಟಿ ಇಲ್ಲಿದೆ.
ಇಂದು ಸ್ಮಾರ್ಟ್‌ಫೋನ್ (Smartphone) ಎಂಬುವುದು ಅತ್ಯಗತ್ಯ ವಸ್ತುವಾಗಿಬಿಟ್ಟಿದೆ. ಹಿಂದಿನ ಕಾಲದಲ್ಲಿ ಕರೆ ಮಾಡಲು ಮಾತ್ರ ಬಳಸುತ್ತಿದ್ದ ಫೋನ್ ಈಗ ಅಂಗೈಯಲ್ಲಿ ಎಲ್ಲವನ್ನೂ ಸ್ಮಾರ್ಟ್‌ಫೋನ್ ರೂಪದಲ್ಲಿ ತಂದಿದೆ. ಇದಕ್ಕೆ ಪ್ರಮುಖ ಕಾರಣ ಇಂದು ಮಾರುಕಟ್ಟೆಯಲ್ಲಿ ಅತಿ ಕಡಿಮೆ ಬೆಲೆಗೆ ಉತ್ತಮ ಫೀಚರ್ಗಳನ್ನು ಹೊಂದಿರುವ ಹೊಸ ಸ್ಮಾರ್ಟ್ಫೋನ್ಗಳು ಲಭ್ಯವಿರುವುದು. ನೀವು ಕೂಡ ಉತ್ತಮ ಫೀಚರ್ ಪ್ಯಾಕ್ಡ್ ಫೋನ್ ಖರೀದಿಸಲು ಬಯಸಿದರೆ ರೂ. 20,000 ಒಳಗಿನ ಟಾಪ್ ಸ್ಮಾರ್ಟ್ಫೋನ್ಗಳ ಪಟ್ಟಿ ಇಲ್ಲಿವೆ. ಇವುಗಳಲ್ಲಿ ಸ್ಯಾಮ್ಸಂಗ್, ಶವೋಮಿ, ಒನ್ಪ್ಲಸ್ನಂತಹ ಟಾಪ್ ಬ್ರಾಂಡ್ ಫೋನ್‌ಗಳೂ ಸೇರಿವೆ.
ಒನ್ಪ್ಲಸ್ ನಾರ್ಡ್ CE3 ಲೈಟ್ 5G:
ಈ ಫೋನ್ 6.72 ಇಂಚಿನ LCD ಡಿಸ್‌ಪ್ಲೇ ಹೊಂದಿದೆ. 2400 x 1080 ಪಿಕ್ಸೆಲ್‌ಗಳ ರೆಸಲ್ಯೂಶನ್, 120Hz ರಿಫ್ರೆಶ್ ರೇಟ್‌ನೊಂದಿಗೆ ಬರುತ್ತದೆ. ಕ್ವಾಲ್ಕಂ ಸ್ನಾಪ್ಡ್ರಾಗನ್ 695 ಚಿಪ್ ಸೆಟ್ ನೀಡಲಾಗಿದ್ದು, 8GB RAM ಮತ್ತು 256GB ಆಂತರಿಕ ಮೆಮೊರಿ ಇದೆ. ಆಂಡ್ರಾಯ್ಡ್ 13 ಆಪರೇಟಿಂಗ್ ಸಿಸ್ಟಂ ಆಧಾರಿತ OxygenOS 13 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 200% ಅಲ್ಟ್ರಾ-ವಾಲ್ಯೂಮ್ ಮೋಡ್ ಅನ್ನು ಹೊಂದಿದೆ. ಹಿಂಭಾಗದಲ್ಲಿ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಇದೆ. 108MP ಪ್ರಾಥಮಿಕ ಕ್ಯಾಮೆರಾ, 2MP ಮ್ಯಾಕ್ರೋ ಲೆನ್ಸ್ ಮತ್ತು 2MP ಡೆಪ್ತ್ ಕ್ಯಾಮೆರಾ ಇದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ, 16MP ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. ಅಮೆಜಾನ್ನಲ್ಲಿ ಇದರ ಬೆಲೆ ರೂ. 19,999.
ಐಕ್ಯೂ Z7S 5G:
ಈ ಫೋನ್ 2400 x 1080 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ 6.38-ಇಂಚಿನ ಪೂರ್ಣ HD ಪ್ಲಸ್ ಡಿಸ್ಪ್ಲೇಯನ್ನು ಹೊಂದಿದೆ. 90Hz ರಿಫ್ರೆಶ್ ದರದೊಂದಿಗೆ ಬರುತ್ತದೆ. ಇದು ಆಂಡ್ರಾಯ್ಡ್ 13 ಆಪರೇಟಿಂಗ್ ಸಿಸ್ಟಮ್ ಆಧಾರಿತ Funtouch OS 13 ನಲ್ಲಿ ಕಾರ್ಯನಿರ್ವಹಿಸುತ್ತದೆ. 2 ಮೆಗಾಪಿಕ್ಸೆಲ್ ಸೆಕೆಂಡರಿ ಸೆನ್ಸಾರ್ ಜೊತೆಗೆ 64 ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕದ ಡ್ಯುಯಲ್ ರಿಯರ್ ಕ್ಯಾಮೆರಾ ವ್ಯವಸ್ಥೆಯನ್ನು ಹೊಂದಿದೆ. ಮುಂಭಾಗದಲ್ಲಿ, 16-ಮೆಗಾಪಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ. ಇದು ಆಕ್ಟಾ-ಕೋರ್ ಕ್ವಾಲ್ಕಂ ಸ್ನಾಪ್ಡ್ರಾಗನ್ 695 5G SoC ಮತ್ತು Adreno 619L GPU ಅನ್ನು ಹೊಂದಿದೆ. ಜನಪ್ರಿಯ ಇ-ಕಾಮರ್ಸ್ ಸೈಟ್ ಅಮೆಜಾನ್ನಲ್ಲಿ ಇದರ ಬೆಲೆ ರೂ. 17,999.
ಬಜೆಟ್ ಪ್ರಿಯರ ಬೆಸ್ಟ್ ಫೋನ್ ರೆಡ್ಮಿ 13C ಸ್ಮಾರ್ಟ್‌ಫೋನ್ ಮಾರಾಟ ಭಾರತದಲ್ಲಿ ಆರಂಭ
ರೆಡ್ಮಿ ನೋಟ್ 12 ಪ್ರೊ 5G:
ಈ ಫೋನ್ 1080×2400 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ 6.67-ಇಂಚಿನ ಪೂರ್ಣ HD ಪ್ಲಸ್ AMOLED ಡಿಸ್‌ಪ್ಲೇ, 120Hz ರಿಫ್ರೆಶ್ ರೇಟ್ ಹೊಂದಿದೆ. 50MP ಪ್ರಾಥಮಿಕ ಸಂವೇದಕವಿದೆ. 8MP ಅಲ್ಟ್ರಾವೈಡ್ ಸಂವೇದಕ ಮತ್ತು 2MP ಮ್ಯಾಕ್ರೋ ಲೆನ್ಸ್ ಕ್ಯಾಮೆರಾ ಇದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 16MP ಕ್ಯಾಮೆರಾ ಇದೆ. ಅಮೆಜಾನ್ನಲ್ಲಿ ಇದರ ಬೆಲೆ ರೂ. 19,739.
ಸ್ಯಾಮ್ಸಂಗ್ ಗ್ಯಾಲಕ್ಸಿ M34:
ಈ ಫೋನ್ 6.6 ಇಂಚಿನ ಸೂಪರ್ AMOLED ಡಿಸ್‌ಪ್ಲೇ ಹೊಂದಿದೆ. 120Hz ರಿಫ್ರೆಶ್ ದರ, ಪೂರ್ಣ HD ಪ್ಲಸ್ ರೆಸಲ್ಯೂಶನ್ನಿಂದ ಕೂಡಿದೆ. ಎಕ್ಸಿನೊಸ್ 1280 SoC ನಿಂದ ನಡೆಸಲ್ಪಡುತ್ತಿದೆ. ಇದು 8GB RAM ಅನ್ನು ಹೊಂದಿದೆ. 50MP ಮೆಗಾ ಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಇದೆ. 120 ಡಿಗ್ರಿ ವೀಕ್ಷಣೆಯ ಕ್ಷೇತ್ರದೊಂದಿಗೆ ಮೂರನೇ ಸಂವೇದಕವಿದೆ. ಇದರ ಬೆಲೆ ಅಮೆಜಾನ್ನಲ್ಲಿ 19,480 ರೂ.
ಮೋಟೋರೊಲಾ G84:
ಈ ಸ್ಮಾರ್ಟ್‌ಫೋನ್ 2400 x 1080 ಪಿಕ್ಸೆಲ್‌ಗಳ ಪೂರ್ಣ HD ಪ್ಲಸ್ ರೆಸಲ್ಯೂಶನ್‌ನೊಂದಿಗೆ ಬರುತ್ತದೆ. ಇದು 120Hz ರಿಫ್ರೆಶ್ ದರದೊಂದಿಗೆ 6.55-ಇಂಚಿನ POLED ಡಿಸ್‌ಪ್ಲೇ ಹೊಂದಿದೆ. 12GB RAM ಮತ್ತು 256GB ಆಂತರಿಕ ಮೆಮೊರಿಯೊಂದಿಗೆ ಬರುತ್ತದೆ. ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 695 SoC ನಿಂದ ಚಾಲಿತವಾಗಿದೆ. ಆಂಡ್ರಾಯ್ಡ್ 13 ಮೂಲಕ ಕಾರ್ಯನಿರ್ವಹಿಸುತ್ತದೆ. ಹಿಂಭಾಗದಲ್ಲಿ, 50MP ಪ್ರಾಥಮಿಕ ಕ್ಯಾಮೆರಾ ಮತ್ತು 8MP ಕ್ಯಾಮೆರಾದೊಂದಿಗೆ ಡ್ಯುಯಲ್ ಕ್ಯಾಮೆರಾ ವ್ಯವಸ್ಥೆ ಇದೆ. ಸೆಲ್ಫಿಗಾಗಿ ಮುಂಭಾಗದಲ್ಲಿ 16MP ಕ್ಯಾಮೆರಾ ಇದೆ. 5000mAh ಬ್ಯಾಟರಿ ಇರುವ ಈ ಫೋನಿಗೆ ಅಮೆಜಾನ್ನಲ್ಲಿ ರೂ. 17,999.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ