ಹುಟ್ಟು ಹಬ್ಬದಂದು ಆನ್‌ಲೈನ್‌ನಲ್ಲಿ ಕೇಕ್ ಆರ್ಡರ್ ಮಾಡಿ ಕತ್ತರಿಸಿ ಪರಸ್ಪರ ತಿನ್ನಿಸುತ್ತಾ ಸಂಭ್ರಮಿಸಿದ ಕೆಲ ಹೊತ್ತಿನಲ್ಲೇ ಆರೋಗ್ಯ ಏರುಪೇರಾಗಿದ್ದು, ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದ 10 ವರ್ಷದ ಬಾಲಕಿ ಮಾನ್ವಿ ಸೇರಿದಂತೆ ಕುಟುಂಬಸ್ಥರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗಿದೆ ಹುಟ್ಟುಹಬ್ಬದಂದೇ ಬಾಲಕಿ ಸಾವನ್ನಪ್ಪಿದ್ದಾಳೆ. ಈ ಅಘಾತಕಾರಿ ಘಟನೆ ಪಂಜಾಬ್ನ ಪಟಿಯಾಲಾದಲ್ಲಿ ನಡೆದಿದೆ.
ಮಾರ್ಚ್ 24 ರಂದು ಪಟಿಯಾಲಾದ ಬೇಕರಿಯಿಂದ ಆನ್‌ಲೈನ್‌ನಲ್ಲಿ ಕೇಕ್ ಆರ್ಡರ್ ಮಾಡಲಾಗಿದ್ದು, ರಾತ್ರಿ 7 ಗಂಟೆ ಸುಮಾರಿಗೆ ಕೇಕ್ ಕತ್ತರಿಸಲಾಗಿದೆ, ಅದೇ ರಾತ್ರಿ 10 ಗಂಟೆಯ ವೇಳೆಗೆ ಇಡೀ ಕುಟುಂಬವು ಅಸ್ವಸ್ಥಗೊಂಡಿದೆ ಎಂದು ಮೃತ ಬಾಲಕಿಯ ಅಜ್ಜ ಹರ್ಬನ್ ಲಾಲ್ ಹೇಳಿದ್ದಾರೆ. ಮಾನ್ವಿ ಸಾವಿಗೆ ಕೆಲವೇ ಗಂಟೆಗಳ ಮೊದಲು ಸಾಮಾಜಿಕ ಮಾಧ್ಯಮದಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸುತ್ತಿರುವ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.
ಮಾನ್ವಿಯ ತಾಯಿ ಕಾಜಲ್ ನೀಡಿದ ದೂರಿನ ಮೇರೆಗೆ ಸ್ಥಳೀಯ ಪೊಲೀಸರು ‘ಕನ್ಹಾ ಬೇಕರಿ’ ಅಂಗಡಿ ವಿರುದ್ಧ ಸೆಕ್ಷನ್ 304-ಎ (ನಿರ್ಲಕ್ಷ್ಯದಿಂದ ಸಾವು) ಮತ್ತು 273ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: ಈ ಐಸ್ಕ್ರೀಮ್ ನೋಡಿದ್ರೆ, ಮಕ್ಕಳು ಯಾವಾತ್ತೂ ಐಸ್ಕ್ರೀಮ್ ಬೇಕು ಎಂದು ಹಠ ಮಾಡಲ್ಲ!
ಪಟಿಯಾಲಾದ ‘ಕೇಕ್ ಕನ್ಹಾ’ನಿಂದ ಆರ್ಡರ್ ಮಾಡಲಾಗಿದ್ದ ಚಾಕೊಲೇಟ್ ಕೇಕ್ ನಲ್ಲಿ ವಿಷಕಾರಿ ಅಂಶವಿತ್ತು ಎಂದು ಕುಟುಂಬದವರು ಆರೋಪಿಸಿದ್ದಾರೆ. “ಬೇಕರಿ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಮಾಡಲಾಗಿದ್ದು, ಕೇಕ್‌ನ ಮಾದರಿಯನ್ನು ಸಹ ಪರೀಕ್ಷೆಗೆ ಕಳುಹಿಸಲಾಗಿದೆ, ನಾವು ವರದಿಗಳಿಗಾಗಿ ಕಾಯುತ್ತಿದ್ದೇವೆ” ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:56 pm, Sun, 31 March 24