Viral Video: 84 ವರ್ಷಗಳಿಂದ ಒಂದೇ ಕಂಪನಿಯಲ್ಲಿ ಕೆಲಸ; ಗಿನ್ನಿಸ್ ದಾಖಲೆ ಬರೆದ ವ್ಯಕ್ತಿ
84 ವರ್ಷಗಳಿಂದ ಒಂದೇ ಕಂಪನಿಯಲ್ಲಿ ಕೆಲಸ ಮಾಡುವ ಮೂಲಕ 100 ವರ್ಷದ ವ್ಯಕ್ತಿಯೊಬ್ಬರು ವಿಶ್ವ ದಾಖಲೆಯನ್ನು ಬರೆದಿದ್ದಾರೆ. ಈ ವ್ಯಕ್ತಿಯ ಹೆಸರು ವಾಲ್ಟರ್ ಆರ್ಥಮನ್. ಇತ್ತೀಚಿಗಷ್ಟೇ ತಮ್ಮ ಸಹೋದ್ಯೋಗಿ ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ಅದ್ಧೂರಿಯಾಗಿ 101 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.
ಸಾಮಾನ್ಯವಾಗಿ ಒಂದು ಕಂಪೆನಿಯಲ್ಲಿ ಮೂರ್ನಾಲ್ಕು ವರ್ಷ ಹೆಚ್ಚೆಂದರೆ 10ವರ್ಷ ಕೆಲಸ ಮಾಡಬಹುದು. ಇಲೊಬ್ಬ ವ್ಯಕ್ತಿ ಬರೋಬ್ಬರೀ 84 ವರ್ಷಗಳಿಂದ ಒಂದೇ ಕಂಪನಿಯಲ್ಲಿ ಕೆಲಸ ಮಾಡುವ ಮೂಲಕ ವಿಶ್ವ ದಾಖಲೆಯನ್ನು ಬರೆದಿದ್ದಾರೆ. ಈ ವ್ಯಕ್ತಿಯ ಹೆಸರು ವಾಲ್ಟರ್ ಆರ್ಥಮನ್. ಬ್ರೆಜಿಲ್‌ನ ಸಣ್ಣ ಪಟ್ಟಣವಾದ ಬ್ರಸ್ಕ್‌ನಲ್ಲಿ ಜನಿಸಿದ ಇವರು ಬಡತನದಿಂದಾಗಿ ಚಿಕ್ಕ ವಯಸ್ಸಿನಲ್ಲೇ ಶಿಕ್ಷಣ ತೊರೆದು ಕೆಲಸಕ್ಕೆ ಸೇರಿಕೊಂಡಿದ್ದರು. 15 ವರ್ಷ ವಯಸ್ಸಿನವರಾಗಿದ್ದಾಗ ಕಂಪನಿಯಲ್ಲಿ ಶಿಪ್ಪಿಂಗ್ ಸಹಾಯಕರಾಗಿ ಕೆಲಸ ಮಾಡಲು ಪ್ರಾರಂಭಿಸಿದ್ದರು. ಜರ್ಮನ್ ಭಾಷೆಯಲ್ಲಿ ಅವರ ಉತ್ತಮ ಕೌಶಲ್ಯದಿಂದಾಗಿ ಅವರನ್ನು ಇಂಡಸ್ಟ್ರಿಯಾಸ್ ರೆನಾಕ್ಸ್ ಎಸ್‌ಎಯಲ್ಲಿ ನೇಮಿಸಲಾಯಿತು. ಕಂಪನಿಯಲ್ಲಿ ಅವರ ಉದ್ಯೋಗ ಪ್ರಾರಂಭವಾದ ಸ್ವಲ್ಪ ಸಮಯದ ನಂತರ, ಅವರು ಮಾರಾಟ ವ್ಯವಸ್ಥಾಪಕರಾಗಿ ಬಡ್ತಿ ಪಡೆದರು. ಈ ಮೂಲಕ ಸುಮಾರು 84 ವರ್ಷಗಳಿಂದ ಒಂದೇ ಕಂಪೆನಿಯಲ್ಲಿ ಕೆಲಸ ಮಾಡಿದ್ದಾರೆ.
ಇತ್ತೀಚಿಗಷ್ಟೇ ತಮ್ಮ ಸಹೋದ್ಯೋಗಿ ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ಅದ್ಧೂರಿಯಾಗಿ 101 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇದು 2022ರ ಘಟನೆಯಾದರೂ ಇದೀಗ ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದಕ್ಕೆ ನೆಟಿಜನ್‌ಗಳು ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಭಾರತೀಯ ಸಂಸ್ಕ್ರತಿ ಮರೆಯದ ಅಂಬಾನಿ ಸೊಸೆ; ಪ್ಯಾರಿಸ್‌ನಲ್ಲೂ ಕರಿಮಣಿ ತೊಟ್ಟು ಬಂದ ರಾಧಿಕಾ ಮರ್ಚೆಂಟ್
101ರ ವಯಸ್ಸಿನಲ್ಲೂ ಸಖತ್ ಆರೋಗ್ಯವಾಗಿರುವ ಇವರು ಪ್ರತಿದಿನ ವ್ಯಾಯಾಮ ಮಾಡುತ್ತಾರಂತೆ. ಈ ವಯಸ್ಸಿನಲ್ಲೂ ಅತ್ಯುತ್ತಮ ಮಾನಸಿಕ ಸ್ಥಿತಿ ಮತ್ತು ಉತ್ತಮ ಸ್ಮರಣೆಯನ್ನು ಹೊಂದಿದ್ದಾರೆ. ಸದ್ಯ ಇವರ ಬಗೆಗಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದ್ದು, 84 ವರ್ಷಗಳಿಂದ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿರುವುದು ಹೇಗೆ ಸಾಧ್ಯ? ಎಂದು ಸಾಕಷ್ಟು ನೆಟ್ಟಿಗರು ಪ್ರಶ್ನಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ