Video: ನದಿಯಲ್ಲಿ ಕೊಚ್ಚಿ ಹೋದ ಬಹುಮಹಡಿ ಕಟ್ಟಡ; ಭೀಕರ ದೃಶ್ಯ ಇಲ್ಲಿದೆ ನೋಡಿ

Video: ನದಿಯಲ್ಲಿ ಕೊಚ್ಚಿ ಹೋದ ಬಹುಮಹಡಿ ಕಟ್ಟಡ; ಭೀಕರ ದೃಶ್ಯ ಇಲ್ಲಿದೆ ನೋಡಿ

ಅಕ್ಷತಾ ವರ್ಕಾಡಿ
|

Updated on: Aug 01, 2024 | 4:02 PM

ಭಾರೀ ಮಳೆಯಿಂದಾಗಿ ಬಹುಮಹಡಿಯ ಕಟ್ಟಡವೊಂದು ಕುಸಿದು ಬಿದ್ದಿರುವ ಭೀಕರ ದೃಶ್ಯ ಸೋಶಿಯಲ್​​ ಮೀಡಿಯಾಗಳಲ್ಲಿ ವೈರಲ್​​ ಆಗುತ್ತಿದೆ. ಗುರುವಾರ ಬೆಳಗ್ಗೆ ಈ ಘಟನೆ ಸಂಭವಿಸಿದ್ದು, ಹಿಮಾಚಲ ಪ್ರದೇಶದ ಪಾರ್ವತಿ ನದಿಯ ಬಲವಾದ ಪ್ರವಾಹಕ್ಕೆ ಕಟ್ಟಡ ಸೆಕುಂಡುಗಳಲ್ಲಿ ಕುಸಿದು ಬಿದಿದ್ದು, ನೀರಿನಲ್ಲಿ ಕೊಚ್ಚಿ ಹೋಗಿದೆ. ವಿಡಿಯೋ ಇಲ್ಲಿದೆ ನೋಡಿ.

ದೇಶದ ಹಲವು ಭಾಗಗಳಲ್ಲಿ ಭಾರಿ ಮಳೆ ಸುರಿಯುತ್ತಿದೆ. ಹಿಮಾಚಲ ಪ್ರದೇಶದಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಶಿಮ್ಲಾ ಜಿಲ್ಲೆಯಲ್ಲಿ ಸಂಭವಿಸಿದ ಮೇಘಸ್ಫೋಟದ ಪರಿಣಾಮ 30ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ. ಇದೀಗ ಹಿಮಾಚಲ ಪ್ರದೇಶದ ಕುಲುವಿನಲ್ಲಿ ಕಟ್ಟಡವೊಂದು ಬಹುಮಹಡಿಯ ಕಟ್ಟಡ ಕುಸಿದಿದ್ದು, ಘಟನೆ ಸಂಬಂಧಿಸಿದ ಭೀಕರ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ. ಗುರುವಾರ ಬೆಳಗ್ಗೆ ಈ ಘಟನೆ ಸಂಭವಿಸಿದ್ದು, ಪಾರ್ವತಿ ನದಿಯ ಬಲವಾದ ಪ್ರವಾಹಕ್ಕೆ ಕಟ್ಟಡ ಕುಸಿದು ಬಿದ್ದಿದೆ. ಈ ಕಟ್ಟಡದಲ್ಲಿ ಯಾರು ಇಲ್ಲದ ಕಾರಣ ಯಾವುದೇ ಜೀವಹಾನಿಯಾಗಿಲ್ಲ.ಕಟ್ಟಡ ಕುಸಿದು ಬಿದ್ದಿದ್ದು, ನದಿ ನೀರಿನಲ್ಲಿ ಕೊಚ್ಚಿ ಹೋಗಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. @ohmygodsanjana ಎಂಬ ಟ್ವಿಟರ್​ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ವಿಡಿಯೋ ವೈರಲ್​ ಆಗುತ್ತಿದೆ. ಈ ಭೀಕರ ದೃಶ್ಯ ಒಂದು ಕ್ಷಣ ಎದೆಯಲ್ಲಿ ನಡುಕ ಹುಟ್ಟಿಸುವುದಂತೂ ಖಂಡಿತಾ.

ಇದನ್ನೂ ಓದಿ: ಪೆಟ್ರೋಲ್ ಬಂಕ್​ನಲ್ಲಿ ಕಾಯುತ್ತಿದ್ದಾಗಲೇ ದಿಢೀರ್ ಹೃದಯಾಘಾತ; ಕುಸಿದು ಬಿದ್ದು ಶಿಕ್ಷಕ ಸಾವು

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​​ ಮಾಡಿ