Viral Video: ಯುಎಸ್​ನ ಬೀದಿಯಲ್ಲಿ ಪಂಜಾಬಿ ಹಾಡಿನ ಸದ್ದು: ವಯಲಿನ್​ನಲ್ಲಿ​ ಬಿಜಲೀ ಹಾಡು ನುಡಿಸಿದ 13 ವರ್ಷದ ಬಾಲಕಿ

| Updated By: Pavitra Bhat Jigalemane

Updated on: Feb 27, 2022 | 2:02 PM

ಯುಎಸ್​ನ ಬೀದಿಯೊಂದರ ಮಧ್ಯೆ 13 ವರ್ಷದ ಬಾಲಕಿಯೊಬ್ಬಳು ಪಂಜಾಬಿಯ ಬಿಜಲಿ ಹಾಡನ್ನು ವೈಲಿನ್​ನಲ್ಲಿ ನುಡಿಸಿದ್ದಾಳೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಪಾಪಟ್ಟೆ ವೈರಲ್​ ಆಗಿದೆ.

Viral Video: ಯುಎಸ್​ನ ಬೀದಿಯಲ್ಲಿ ಪಂಜಾಬಿ ಹಾಡಿನ ಸದ್ದು: ವಯಲಿನ್​ನಲ್ಲಿ​ ಬಿಜಲೀ ಹಾಡು ನುಡಿಸಿದ 13 ವರ್ಷದ ಬಾಲಕಿ
ವಯಲಿನ್​ ನುಡಿಸುತ್ತಿರುವ ಬಾಲಕಿ
Follow us on

ಸಂಗೀತಕ್ಕೆ ಭಾಷೆಯ ಹಂಗಿಲ್ಲ, ಗಡಿಯ ನಿರ್ಬಂಧವಿಲ್ಲ. ಈ ವಿಡಿಯೋ ಅದನ್ನು ಸಾಬೀತುಪಡಿಸಿದೆ. ಯುಎಸ್​ನ ಬೀದಿಯೊಂದರ ಮಧ್ಯೆ 13 ವರ್ಷದ ಬಾಲಕಿಯೊಬ್ಬಳು ಪಂಜಾಬಿಯ ಬಿಜಲಿ ಹಾಡನ್ನು ವೈಲಿನ್​ (violin)ನಲ್ಲಿ ನುಡಿಸಿದ್ದಾಳೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಪಾಪಟ್ಟೆ ವೈರಲ್​ ಆಗಿದೆ. ಪಂಜಾಬಿ ಗಾಯಕ ಹಾರ್ಡಿ ಸಂಧು(Harddy Sandhu) ಹಾಡಿದ ಬಿಜಲಿ ಬಿಜಲಿ ಹಾಡನ್ನು ಬಾಲಕಿ ವೈಯಲಿನ್​ನಲ್ಲಿ ನುಡಿಸಿದ್ದಾಳೆ.  ಇನ್ಸ್ಟಾಗ್ರಾಮ್​ ಮತ್ತು ಯುಟ್ಯೂಬ್​ನಲ್ಲಿ ಹಂಚಿಕೊಳ್ಳ;ಲಾದ ವೀಡಿಯೋ ನೆಟ್ಟಿಗರ ಗಮನ ಸೆಳೆದಿದೆ. ಕರೋಲಿನಾ ಪ್ರೊಟ್ಸೆಂಕೊ(Karolina Protsenko )ಎನ್ನುವ  ಬಾಲಕಿ ಈ ಹಾಡನ್ನು ನುಡಿಸಿದ್ದಾಳೆ.

ವಿಡಿಯೋದಲ್ಲಿ ಆಕೆ ಎಂಜಾಯ್​ ಮಾಡಿಕೊಂಡು ವಯಲಿನ್​ಅನ್ನು ನುಡಿಸುವುದನ್ನು ಕಾಣಬಹುದು. ಸುತ್ತಲು ನಿಂತ ಜನ ಆಕೆ ಶ್ರದ್ಧೆಯಿಂದ ನುಡಿಸುತ್ತಿರುವುದನ್ನು ನೋಡಿ ದಂಗಾಗಿದ್ದಾರೆ. ಆಕೆಯ ಕೈಚಳಕ ಎಲ್ಲರನ್ನು ಮೋಡಿ ಮಾಡಿದಂತಿದೆ.  ಸದ್ಯ ವೈರಲ್​ ಆಗಿರುವ ವಿಡಿಯೋ 5 ಲಕ್ಷದಷ್ಟು ಲೈಕ್ಸ್​ಗಳಿಸಿದೆ. ಭಾರತದ ಈ ಪಂಜಾಬಿ ಗೀತೆ ಪಿಟೀಲಿನಲ್ಲಿ ಸುಮಧುರವಾಗಿ ಧ್ವನಿಸುತ್ತದೆ! ಧನ್ಯವಾದಗಳು ಕರೋಲಿನಾ, ನಿಮ್ಮ ಪ್ರತಿಭೆಯನ್ನು ಮುಂದುವರಿಸಿ ಮತ್ತು ದೇವರು ನಿಮ್ಮನ್ನು ಆಶೀರ್ವದಿಸಲಿ ಎಂದು ಯೂಟ್ಯೂಬ್‌ನಲ್ಲಿ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.

13 ವರ್ಷದ ಕರೋಲಿನಾ  ತನ್ನ ಪಿಟೀಲಿನಲ್ಲಿ ಅನೇಕ ಜನಪ್ರಿಯ ಹಾಡುಗಳ ನುಡಿಸಿದ್ದಾಳೆ. ಯುಎಸ್​ನ ಬೀದಿಗಳಲ್ಲಿ ಪ್ರದರ್ಶಿಸುವ ವೀಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುತ್ತಾಳೆ. ಆಕೆ ಇನ್‌ಸ್ಟಾಗ್ರಾಮ್‌ನಲ್ಲಿ ಎಂಟು ಲಕ್ಷಕ್ಕೂ ಹೆಚ್ಚು ಫಾಲೋವರ್ಸ್​ಗಳನ್ನು ಹೊಂದಿದ್ದಾಳೆ.

ಇದನ್ನೂ ಓದಿ:

‘ನಾವೆಲ್ಲ ಸಹೋದರ ಸಹೋದರಿಯರು ಯುದ್ಧವನ್ನು ನಿಲ್ಲಿಸಿ’ ಎಂದು ಮನವಿ ಮಾಡಿದ ಪುಟ್ಟ ಬಾಲಕಿ: ವಿಡಿಯೋ ವೈರಲ್​

Published On - 1:59 pm, Sun, 27 February 22