Aurangabad : ಮಹಾರಾಷ್ಟ್ರದ ಪೈಠಾಣ್ ಜಿಲ್ಲೆಯಲ್ಲಿ ಹದಿಹರೆಯದ ಹುಡುಗಿಯರಿಬ್ಬರು ಸಾರ್ವಜನಿಕವಾಗಿ ಜಗಳವಾಡಿದ್ದಾರೆ. ಇಬ್ಬರ ಬಾಯ್ಫ್ರೆಂಡ್ ಒಬ್ಬನೇ ಆಗಿದ್ದು ಈ ಜಗಳಕ್ಕೆ ಕಾರಣವಾಗಿದೆ ಎಂದು ಪಿಟಿಐ ವರದಿ ಮಾಡಿದೆ. ಬುಧವಾರ ಬೆಳಗ್ಗೆ ಪೈಠಾಣ್‌ನ ಜನನಿಬಿಡ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಹುಡುಗಿಯರಿಬ್ಬರೂ 17ರ ಹರೆಯದವರು. ಮೊದಲು ಹುಡುಗಿಯೊಬ್ಬಳು ಹುಡುನೊಂದಿಗೆ ಬಸ್ ನಿಲ್ದಾಣಕ್ಕೆ ಬರುತ್ತಾಳೆ. ಈ ವಿಷಯ ತಿಳಿದ ಇನ್ನೊಬ್ಬ ಹುಡುಗಿ ಅವರಿದ್ದ ಸ್ಥಳಕ್ಕೆ ಬರುತ್ತಾಳೆ. ನಂತರ ಇಬ್ಬರ ನಡುವೆ ವಾಗ್ವಾದ ನಡೆದು ಜಗಳಕ್ಕೆ ತಿರುಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ ಈ ಇಬ್ಬರ ಜಗಳದಲ್ಲಿ ಹುಡುಗ ತಾನು ಅಲ್ಲಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ ಎನ್ನುವುದು ಮಾತ್ರ ಗಮನಿಸಬೇಕಾದ ವಿಷಯ! ನಂತರ ಪೊಲೀಸರು ಹುಡುಗಿಯರನ್ನು ಪೊಲೀಸ್ಠಾಣೆಗೆ ಕರೆದೊಯ್ದು ಕೌನ್ಸೆಲಿಂಗ್ ಮಾಡಿ ಬಿಡುಗಡೆ ಮಾಡಿದ್ದಾರೆ.
ಮತ್ತಷ್ಟು ಟ್ರೆಂಡಿಂಗ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 10:45 am, Sat, 27 August 22