2 ವರ್ಷದ ಬಾಲಕಿ ಹಾವನ್ನು ಕಚ್ಚಿ ಕೊಲ್ಲುವ ಮೂಲಕ ತನ್ನ ದ್ವೇಷವನ್ನು ತೀರಿಸಿಕೊಂಡಿದ್ದಾಳೆ. ಹೌದು ಟರ್ಕಿಯ ಕಾಂತಾರ್ ಹಳ್ಳಿಯಲ್ಲಿ ಲಿಟಲ್ ಎಸ್ಇ ಎಂಬ 2 ವರ್ಷದ ಬಾಲಕಿ ಮೆನೆಯ ಹಿಂದಿನ ವಾರಂಡದಲ್ಲಿ ಆಟವಾಡುತ್ತಿದ್ದಳು. ಈ ವೇಳೆ ಅಲ್ಲೇ ಇದ್ದ ಸರಿಸೃಪ ಬಾಲಕಿಯನ್ನು ಕಚ್ಚಿದೆ. ಆಗ ಬಾಲಕಿ ಆ ಹಾವಿನ ಬಾಲವನ್ನು ತಿರುಗಿ ಕಚ್ಚುವ ಮೂಲಕ ಹಾವನ್ನು ಕೊಂದಿದ್ದಾಳೆ. ಈ ಮೂಲಕ ತನ್ನ ಧ್ವೇಷವನ್ನು ತೀರಿಸಿಕೊಂಡಿದ್ದಾಳೆ.
ಬಾಲಕಿ ಹಾವವನ್ನು ಕಚ್ಚಿದ ನಂತರ ಜೋರಾಗಿ ಕಿರುಚಾಡಿದ್ದಾಳೆ. ಕೂಡಲೇ ಅಕ್ಕಪಕ್ಕದ ಮನೆಯವರು ಸೇರಿದ್ದಾರೆ. ಆಗ ಅಕ್ಕಪಕ್ಕದ ಮನೆಯವರು ಬಾಲಕಿಯನ್ನು ನೋಡಿ ಆವಕ್ಕಾಗಿದ್ದಾರೆ. ತುಟಿ ಅಂಚಿನಲ್ಲಿ ಹಾವಿನ ರಕ್ತ ಮತ್ತು ಬಾಯಿಯಲ್ಲಿ ಹಾವಿನ ತುಂಡನ್ನು ಕಂಡು ದಿಗ್ಬ್ರಾಂತರಾಗಿದ್ದಾರೆ.
ನಂತರ ಕೂಡಲೆ ಬಾಲಕಿಯ ತಂದೆ-ತಾಯಿಯನ್ನು ಕರೆದಿದ್ದಾರೆ. ಬಾಲಕಿಯ ಅವಸ್ತೆ ಕಂಡು ತಂದೆ-ತಾಯಿ ಕೂಡ ಆಶ್ಚರ್ಯಗೊಂಡಿದ್ದಾರೆ. ಬಳಿಕ ಕೂಡಲೆ ಬಾಲಕಿಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೇರಿಸಿದ್ದಾರೆ. ಅಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದುಕೊಂಡು, ಬಿಂಗೋಲ್ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಗೆ ಸಾಗಿಸಲಾಯಿತು. ಆಸ್ಪತ್ರೆಯಲ್ಲಿ ಬಾಲಕಿಯನ್ನು 24 ಗಂಟೆಗಳ ಕಾಲ ನಿಗಾದಲ್ಲಿ ಇರಿಸಲಾಯಿತು ಎಂದು UNILAD ವರದಿ ತಿಳಿಸಿದೆ. ಅದೃಷ್ಟವಶಾತ್ ಬಾಲಕಿಗೆ ಪ್ರಾಣಾಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
Published On - 10:00 pm, Tue, 16 August 22