Viral Video: ಸ್ಮಾರ್ಟ್ ಕಳ್ಳರಿದ್ದಾರೆ ಹುಷಾರ್! ಇವರ ಬಳಿ ಇದೆ ಮಾಯಾಬಟ್ಟೆ
Thieves : ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಗಾದೆ ಎಂತೆಂಥಾ ಸ್ವರೂಪ ಪಡೆದುಕೊಳ್ಳುತ್ತದೆ ಎನ್ನುವುದಕ್ಕೆ ಸಾಕ್ಷಿ ಈ ವಿಡಿಯೋ. ಇವರ ತಂತ್ರದ ಮುಂದೆ ಯಾವ ಬೀಗವೂ ಸುರಕ್ಷಿತವಲ್ಲ ಅಂತಾಯಿತಲ್ಲ!
Viral : ಕೇವಲ ಒಂದು ಬಟ್ಟೆಯ ಸಹಾಯದಿಂದ ಅಂಗಡಿಯ ಶಟರ್ ತೆಗೆದು ಬೆಲೆಬಾಳುವ ವಸ್ತುಗಳನ್ನು ದೋಚಿಕೊಂಡು ಹೋದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗಿದೆ. ಕಬ್ಬಿಣದ ಶಟರ್ ಕೂಡ ಈಗ ಸುರಕ್ಷಿತ ಅಲ್ಲ ಎನ್ನುವಂತಾಯಿತಲ್ಲವೆ? ರಾತ್ರಿ ಈ ಅಂಗಡಿಯ ಬಳಿ ಬಂದ ಕಳ್ಳರ ಗುಂಪು ಹೂಡಿದ ಈ ತಂತ್ರ ಯಾರನ್ನೂ ಗಾಬರಿಗೆ ಬೀಳಿಸದೆ ಇರದು. ಮೊದಲು ಶಟರ್ ತೆಗೆಯಲು ಪ್ರಯತ್ನಿಸುತ್ತಾರೆ. ಅದು ಸಾಧ್ಯವಾಗದಿದ್ದಾಗ ಒಂದು ಬಟ್ಟೆಯನ್ನು ತಂದು ಶಟರ್ಗೆ ಸಿಕ್ಕಿಸಿ ಎಲ್ಲರೂ ಬಲಕೊಟ್ಟು ಎಳೆಯುತ್ತಾರೆ. ಶಟರ್ ತೆರೆದುಕೊಳ್ಳುತ್ತದೆ. ಬೆಲೆಯುಳ್ಳ ವಸ್ತುಗಳೊಂದಿಗೆ ಪರಾರಿಯಾಗುತ್ತಾರೆ. ಈ ಕಾಲದಲ್ಲಿ ಇಂಥ ಒಗ್ಗಟ್ಟಿನಲ್ಲಿ ಎಷ್ಟೊಂದು ಬಲವಿದೆಯಲ್ಲ!?
ನೋಡಿ ವಿಡಿಯೋ
ಇದನ್ನೂ ಓದಿ
View this post on Instagram
Giedda ಎಂಬ ಟ್ವಿಟರ್ ಖಾತೆದಾರರು ಈ ವಿಡಿಯೋ ಹಂಚಿಕೊಂಡಿದ್ದಾರೆ. ನೋಡಿ ನಿಮ್ಮ ನಿಮ್ಮ ಮನೆ, ಅಂಗಡಿಗಳಿಗೆ ಇನ್ನೆಂಥ ಭದ್ರತೆ ಒದಗಿಸಿಕೊಳ್ಳುತ್ತೀರೋ!
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 11:30 am, Wed, 17 August 22