Viral Post : ವಿಶ್ವದ ಅತ್ಯಂತ ಹಿರಿಯ ನಾಯಿ ಎಂಬ ಹೆಗ್ಗಳಿಕೆಗೆ 22 ವರ್ಷದ ಗಿನೋ ವುಲ್ಫ್ ಪಾತ್ರವಾಗಿದೆ. ಈ ಮೂಲಕ ಗಿನ್ನೀಸ್ ವರ್ಲ್ಡ್ ರೆಕಾರ್ಡ್ನ ಪಟ್ಟಿಗೆ ಈ ಹಿರಿಯ ವಯಸ್ಸಿನ ನಾಯಿಯ ಹೆಸರು ಸೇರ್ಪಡೆಯಾಗಿದೆ. 22 ವಸಂತಗಳನ್ನು ಪೂರೈಸಿರುವ ಈ ನಾಯಿ ಹುಟ್ಟಿದ್ದು ಸೆಪ್ಟೆಂಬರ್ 2000ರಲ್ಲಿ. ಅಲೆಕ್ಸ್ ವೂಲ್ಫ್ ಎಂಬುವವರು ಈ ನಾಯಿಯನ್ನು ಕೊಲೊರ್ಯಾಡೋದ ಹ್ಯೂಮನ್ ಸೊಸೈಟಿ ಆಫ್ ಬೌಲ್ಡರ್ ವ್ಯಾಲಿಯಿಂದ ದತ್ತು ತೆಗೆದುಕೊಂಡು ಮಗುವಿನಂತೆ ಸಾಕುತ್ತ ಬಂದರು. ಇದೀಗ ಜಿನೋಗೆ 22ರ ಹರೆಯ!
ಗಿನೋನ ಪೋಷಕ ಅಲೆಕ್ಸ್ ವೂಲ್ಫ್, ‘ಎರಡು ವರ್ಷದವನಿದ್ದಾಗ ಇವನನ್ನು ದತ್ತು ತೆಗೆದುಕೊಂಡೆ. ಅಂದಿನಿಂದ ಇಂದಿನವರೆಗೂ ಇವನನ್ನು ಬಹಳ ಕಾಳಜಿ ಮತ್ತು ಪ್ರೀತಿಯಿಂದ ನೋಡಿಕೊಂಡಿದ್ದೇನೆ. ಇವನ ದೇಹ ಮತ್ತು ವಯಸ್ಸನ್ನು ನೋಡಿದಾಗ ಅಚ್ಚರಿಯಾಗುತ್ತದೆ, ಇವನಿಗೆ 22 ವರ್ಷ? ಎಂದು. ಇದೀಗ ಗಿನ್ನೀಸ್ ವರ್ಲ್ಡ್ ರೆಕಾರ್ಡ್ಗೆ ಇವನ ಹೆಸರು ಸೇರಿರುವುದು ಬಹಳ ಸಂತೋಷವೆನ್ನಿಸುತ್ತಿದೆ. ಇವನು ಬಹಳ ಒಳ್ಳೆಯವನು’ ಎನ್ನುತ್ತಾರೆ.
ಇದನ್ನೂ ಓದಿ : ವಿಶ್ವ ಗಿನ್ನೀಸ್ ದಾಖಲೆ; ಜಗತ್ತಿನಲ್ಲೇ ಅತೀ ದೊಡ್ಡ ಪಾದಗಳನ್ನು ಹೊಂದಿರುವ ಮಹಿಳೆ
ಮಾತು ಮುಂದುವರೆಸಿದ ಅಲೆಕ್ಸ್, ‘ಇವನು ಚಿಕ್ಕವನಿದ್ದಾಗ ಮ್ಯಾನ್ಹಟನ್ ಬೀಚಿನ ಬಳಿ ಇದ್ದ ನಮ್ಮ ಮನೆಯಲ್ಲಿ ಇನ್ನೂ ಒಂದಿಷ್ಟು ನಾಯಿಗಳಿದ್ದವು. ಅವುಗಳೊಂದಿಗೆ ಹಿತ್ತಲಿನೊಳಗೆ ಓಡಾಡಿ ನನ್ನ ಅಪ್ಪ ಅಮ್ಮನನ್ನು ಹುಡುಕಲು ಪ್ರಯತ್ನಿಸುತ್ತಿದ್ದ. ಸಮುದ್ರ ತೀರದಲ್ಲಿ ಭರದಿಂದ ಓಡುತ್ತಿದ್ದ. ಗಾಲ್ಫ್ನ ಅಂಗಳದಲ್ಲಿಯೂ ಮುದದಿಂದ ಆಟವಾಡಿಕೊಂಡಿರುತ್ತಿದ್ದ.’ ಎನ್ನುತ್ತಾರೆ.
ಸದ್ಯದ ದಿನಗಳಲ್ಲಿ ಜಗಿನೋ ಬೆಚ್ಚಗೆ ಮಲಗಲು ಇಷ್ಟಪಡುತ್ತಾನೆ. ಸಾಲ್ಮನ್ ಫಿಷ್ ಎಂದರೆ ತುಂಬಾ ಇಷ್ಟ. ಆದರೆ ವಯಸ್ಸಿನ ಕಾರಣದಿಂದಾಗಿ ದೃಷ್ಟಿ ಕಳೆದುಕೊಂಡಿದ್ದಾನೆ. ಆದರು ಅಕ್ಕಪಕ್ಕದವರೊಂದಿಗೆ ಪ್ರೀತಿಯಿಂದ ಇರುತ್ತಾನೆ. ನಿಯಮಿತವಾಗಿ ವೈದ್ಯತಪಾಸಣೆ, ಆಹಾರ ಮತ್ತು ಕುಟುಂಬದವರ ಪ್ರೀತಿಯೇ ಅವನ ದೀರ್ಘಾಯುಷ್ಯದ ಗುಟ್ಟು.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 12:42 pm, Thu, 24 November 22