Height Increasing Surgery: ಬಣ್ಣ, ಗಾತ್ರ, ಎತ್ತರ ಮತ್ತಿತರೇ ಬಾಹ್ಯಸಮಸ್ಯೆಗಳಿಂದ ಬಳಲುತ್ತಿರುವ ಜನರನ್ನು ಸಮಾಜವು ಕೀಳರಿಮೆಯಲ್ಲಿ ಬೀಳಿಸಿ ಒದ್ದಾಡಿಸುತ್ತದೆ. ಸತತ ನಿರಾಕರಣೆಗೆ ಗುರಿಯಾದ ವ್ಯಕ್ತಿ ಖಿನ್ನತೆ ಅಥವಾ ಇನ್ನಿತರೇ ಮಾನಸಿಕ ತೊಂದರೆಗಳಿಗೆ ಈಡಾಗುತ್ತಾರೆ. ಆಗ ಅವರಿಗಳು ಸ್ನೇಹಿತರು ಮತ್ತು ಕುಟುಂಬದಿಂದ ದೂರು ಉಳಿಯಲು ಬಯಸುತ್ತಾರೆ. ಈ ಸಂದರ್ಭದಲ್ಲಿ ಇವರ ಸ್ಥಿತಿ ಅತ್ಯಂತ ಶೋಚನೀಯವಾಗಿರುತ್ತದೆ. ಅವರನ್ನು ಆ ಕೂಪದಿಂದ ಎತ್ತುವವರು ಬೇಕು ಅಥವಾ ಸ್ವತಃ ಅವರೇ ಪರಿಹಾರ ಕಂಡುಕೊಳ್ಳಬೇಕು. ಜಾರ್ಜಿಯಾದ ನೌಕಾಪಡೆಯಲ್ಲಿರುವ ಡಿನ್ಝೆಲ್ ಸೈಗರ್ಸ್ಗೆ 27 ವರ್ಷ. ಕುಳ್ಳನೆಂಬ ಕಾರಣಕ್ಕೆ ಅನೇಕ ಹುಡುಗಿಯರಿಂದ ತಿರಸ್ಕರಿಸಲ್ಪಟ್ಟ ನಂತರ ಈತ ಕಂಡುಕೊಂಡ ಉಪಾಯ, ತನ್ನ ಎತ್ತರವನ್ನು ಹೆಚ್ಚಿಸಿಕೊಳ್ಳುವುದು. ಆದರೆ ಹೇಗೆ?
‘ಹದಿಹರೆಯದ ದಿನಗಳಲ್ಲಿ ನಾನು ತುಂಬಾ ಅವಮಾನವನ್ನು ಅನುಭವಿಸಿದ್ದೇನೆ. ನನಗಿಂತ ಎತ್ತರವಿರುವ ಹುಡುಗಿಯರಿಂದ ತಿರಸ್ಕಾರಕ್ಕೆ ಈಡಾಗಿದ್ದೇನೆ. ಆನಂತರ ಹುಡುಗಿಯರನ್ನು ಮಾತನಾಡಿಸುವ ಮೊದಲು ಅವರ ಎತ್ತರವನ್ನು ಗಮನಿಸುವುದು ಅಭ್ಯಾಸವಾಯಿತು. ಆಗೆಲ್ಲಾ ಅತ್ಯಂತ ಸಂಕಟಕ್ಕೆ ಈಡುಮಾಡುತ್ತ ಹೋಯಿತು. ಕುಳ್ಳಗಿದ್ದ ನಾನು ಒಟ್ಟಾರೆ ಕೀಳರಿಮೆಯಿಂದ ಬಳಲಿದೆ.”
ಇದನ್ನೂ ಓದಿ : Viral Video: ಮಧ್ಯಪ್ರದೇಶದ ಈ ರೌಡಿ ಮಂಗಣ್ಣನನ್ನು ಹಿಡಿದುಕೊಟ್ಟವರಿಗೆ ರೂ. 21000 ಬಹುಮಾನ
‘ಮೊದಲು 5.5 ಅಡಿ ಎತ್ತರ ಇದ್ದ ಈತ ಶಸ್ತ್ರಚಿಕಿತ್ಸೆ ನಂತರ 6 ಅಡಿಯಾಗಿದ್ದಾನೆ. ಇದಕ್ಕಾಗಿ ಸುಮಾರು ರೂ. 66 ಲಕ್ಷ ಹಣವನ್ನು ವ್ಯಯಿಸಿದ್ದೇನೆ. ನನ್ನ ಜೀವಮಾನವಿಡೀ ನಾನು ಕುಳ್ಳಗೆ ಕಾಣುವುದು ನನಗಿಷ್ಟವಿರಲಿಲ್ಲ. ನನ್ನ ಎತ್ತರವನ್ನು ಹೇಗಾದರೂ ಹೆಚ್ಚಿಸಿಕೊಳ್ಳಬೇಕೆಂದು ಯೋಚಿಸುತ್ತಿದ್ದೆ. Limb lengthening surgery ಶಸ್ತ್ರಚಿಕಿತ್ಸೆಯು ನನಗೆ ವರದಾನವಾಗಿ ಕಂಡಿತು’ ಎಂದಿದ್ಧಾನೆ ಸೈಗರ್ಸ್.
ಇದನ್ನೂ ಓದಿ : Viral Video;ನನ್ನ ಮೊಟ್ಟೆಗಳಿಗೆ ಕೈಹಾಕಿದರೆ ಅಷ್ಟೇ; ಹೆಬ್ಬಾವು ಮುಂದೇನು ಮಾಡಿತು?
ಈತನಕ ಆರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾನೆ ಸೈಗರ್ಸ್. ಎರಡೂ ಕಾಲುಗಳ ಮೂಳೆಯನ್ನು ಅರ್ಧದಷ್ಟು ಕತ್ತರಿಸಿ ರಾಡ್ ಅನ್ನು ತೂರಿಸಲಾಗಿದೆ. 90 ದಿನಗಳಲ್ಲಿ ಹೊಸ ಮೂಳೆಯು ಬೆಳೆಯುತ್ತದೆ. ತದನಂತರ ರಾಡ್ ಅನ್ನು ತೆಗೆಯಲಾಗುತ್ತದೆ. ಒಟ್ಟಾರೆ ಈ ಚಿಕಿತ್ಸೆಯ ಅವಧಿ ಒಂದು ವರ್ಷ. ಆದರೂ ಮೊದಲಿನಂತೆ ಚಟುವಟಿಕೆಯಿಂದ ಇರಲು ಪೂರಕವಾದ ವ್ಯಾಯಾಮ, ಆರೈಕೆ ಬೇಕಾಗುತ್ತದೆ.
ಆದರೂ ಇದು ಎಲ್ಲರಿಗೂ ಸಾಧ್ಯವಾಗುವುದೇ? ಅಡ್ಡಪರಿಣಾಮಗಳನ್ನು ಎದುರಿಸುವುದು ಎಲ್ಲರಿಗೂ ಸುಲಭವೇ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ