ಲಂಚದ ಹಣವನ್ನು ಮೂರು ಟ್ರಾಫಿಕ್ ಪೊಲೀಸರು ಕುಳಿತು ಹಂಚಿಕೊಳ್ಳುತ್ತಿರುವ ವಿಡಿಯೋ ವೈರಲ್ ಆದ ಬೆನ್ನಲ್ಲೇ ಇದೀಗ ದೆಹಲಿಯ ಮೂವರು ಟ್ರಾಫಿಕ್ ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ ಎಂದು ವರದಿಯಾಗಿದೆ. ಕಳೆದ ವಾರ ಗಾಜಿಪುರ ಪೊಲೀಸ್ ಠಾಣೆ ಎದುರು ಮೂವರು ಪೊಲೀಸರು ಲಂಚದ ಹಣವನ್ನು ಹಂಚಿಕೊಳ್ಳುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದು,ಸದ್ಯ ಎಲ್ಲೆಡೆ ವೈರಲ್ ಆಗುತ್ತಿದೆ.
ಪಿಟಿಐ ವರದಿಯ ಪ್ರಕಾರ, ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಶನಿವಾರ ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ ಮೂವರು ಟ್ರಾಫಿಕ್ ಪೊಲೀಸರನ್ನು ಅಮಾನತುಗೊಳಿಸಲಾಗಿದೆ ಎಂದು ಹೇಳಿದ್ದಾರೆ. “ವೀಡಿಯೊವನ್ನು ಗಮನದಲ್ಲಿಟ್ಟುಕೊಂಡು, ಪ್ರಾಥಮಿಕ ತನಿಖೆಯ ನಂತರ, ಮೂವರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ವಿವರವಾದ ಇಲಾಖಾ ವಿಚಾರಣೆ ಕೂಡ ನಡೆಯುತ್ತಿದೆ” ಎಂದು ಸಕ್ಸೇನಾ ಹೇಳಿದ್ದಾರೆ.
दिल्ली ट्रैफिक पुलिस अधिकारी का रिश्वत लेते वीडियो वायरल
वीडियो गाजीपुर थाने के पास का बताया जा रहा है@DCPSouthDelhi @dtptraffic @CPDelhi @DelhiPolice @LtGovDelhi @DCPWestDelhi pic.twitter.com/QgROjCo80w
— The National Bulletin Hindi (@BulletinHindi) August 17, 2024
ಇದನ್ನೂ ಓದಿ: ಈತ ಡಿಜಿಟಲ್ ಕಳ್ಳ, ದೇವರ ಹುಂಡಿ ಮೇಲೆ ತನ್ನ QR Code ಅಂಟಿಸಿ ಲಕ್ಷ ಲಕ್ಷ ದೋಚಿದ್ದ ಖದೀಮ
ಮೂವರು ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಲಂಚ ಸ್ವೀಕರಿಸಿದ ಲಂಚದ ಹಣವನ್ನು ಪರಸ್ಪರ ಹಂಚುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ವಶಪಡಿಸಿಕೊಂಡ ವಾಹನಗಳನ್ನು ಹಿಂತಿರುಗಿಸುವುದರ ವಿರುದ್ಧ ಸಹಾಯಕ ಉಪ-ತಪಾಸಣಾ (ಎಎಸ್‌ಐ) ಮತ್ತು ಅವರ ತಂಡವು ಲಂಚಕ್ಕೆ ಬೇಡಿಕೆಯಿಟ್ಟಿದ್ದಾರೆ ಎಂದು ವರದಿಗಳು ಸೂಚಿಸಿವೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಗಾಜಿಪುರ ಪೊಲೀಸ್ ಠಾಣೆ ಬಳಿ ತಾತ್ಕಾಲಿಕವಾಗಿ ಟ್ರಾಫಿಕ್ ಪೊಲೀಸರು ಲಂಚದ ದಂಧೆ ನಡೆಸುತ್ತಿದ್ದಾರೆ ಎಂದು ಸಾಕಷ್ಟು ನೆಟ್ಟಿಗರು ಕಾಮೆಂಟ್ನಲ್ಲಿ ಬರೆದು ಆಕ್ರೋಶ ವ್ಯಕ್ತಪಡಿಸಿದ್ದರು.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ