Viral Video: ಹೆಣ್ಣು ಮಕ್ಕಳೊಂದಿಗೆ ಅಸಭ್ಯವಾಗಿ ವರ್ತಿಸಿದ ಪುಂಡನಿಗೆ ಮಹಿಳೆಯ ಕೈಯಿಂದ ಬಿತ್ತು ಧರ್ಮದೇಟು; ವಿಡಿಯೋ ವೈರಲ್
ರೈಲು ಅಥವಾ ಇನ್ನವುದೇ ಜನ ಜಂಗುಳಿಯ ಸ್ಥಳಗಳಲ್ಲಿ ಕೆಲ ಪುಂಡರು ಮಹಿಳೆಯರ ಮೇಲೆ ಕೈ ಹಾಕಿ ಅಸಭ್ಯವಾಗಿ ವರ್ತಿಸುತ್ತಿರುತ್ತಾರೆ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ ಕೂಡಾ ಚಲಿಸುತ್ತಿರುವ ರೈಲಿನಲ್ಲಿ ಮಹಿಳೆಯರ ಮೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದು, ಸಿಟ್ಟಿಗೆದ್ದ ಮಹಿಳೆಯೊಬ್ಬರು ಆತನಿಗೆ ಸರಿಯಾಗಿ ಧರ್ಮದೇಟು ನೀಡಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದ್ದು, ಮಹಿಳೆಯ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಕೆಲ ಪುಂಡರ ಕಾಟದಿಂದ ಹೆಣ್ಣುಮಕ್ಕಳಿಗೆ ಸ್ವತಂತ್ರವಾಗಿ ಓಡಾಡಲು ಕೂಡಾ ಕಷ್ಟಸಾಧ್ಯವಾಗಿದೆ. ಬಸ್ಸಿನಲ್ಲಿ ಆಗಿರಲಿ ಅಥವಾ ಹೌದು ರೈಲಿನಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಕೆಲ ಲಜ್ಜೆಗೆಟ್ಟ ಪ್ರಯಾಣಿಕರು ತಮ್ಮ ಬಳಿ ಕೂರುವ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸುತ್ತಿರುತ್ತಾರೆ. ಇನ್ನೂ ಜನಜಂಗುಳಿ ಸ್ಥಳಗಳಲ್ಲಿಯೂ ಕೆಲ ಪುಂಡರು ಹೆಣ್ಣುಮಕ್ಕಳ ಮೈ ಮುಟ್ಟಿ ಅಸಭ್ಯ ವರ್ತನೆಯನ್ನು ತೋರುತ್ತಿರುತ್ತಾರೆ. ಇಂತಹ ಸುದ್ದಿಗಳು ಆಗಾಗ್ಗೆ ಕೇಳಿ ಬರುತ್ತಿರುತ್ತವೆ. ಇಲ್ಲೊಬ್ಬ ವ್ಯಕ್ತಿ ಕೂಡಾ ಚಲಿಸುತ್ತಿರುವ ರೈಲಿನಲ್ಲಿ ಮಹಿಳೆಯರ ಮೈ ಮುಟ್ಟಿ ಅಸಭ್ಯ ವರ್ತನೆಯನ್ನು ತೋರಿದ್ದು, ಇದರಿಂದ ಕೋಪಗೊಂಡ ಮಹಿಳೆಯೊಬ್ಬರು, ಅಲ್ಲೇ ಡ್ರಾ ಅಲ್ಲೇ ಬಹುಮಾನ ಎನ್ನುವಂತೆ, ಮೈ ಮುಟ್ಟಿದಾತನಿಗೆ ಸರಿಯಾಗಿ ಧರ್ಮದೇಟು ನೀಡಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ದಿಟ್ಟ ಮಹಿಳೆಯ ಈ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಈ ಕುರಿತ ಪೋಸ್ಟ್ ಒಂದನ್ನು ಸಾಲ್ವಾನ್ (Salwan Momika) ಎಂಬವರು ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಎಕ್ಸ್ ನಲ್ಲಿ ಹಂಚಿಕೊಂಡಿದ್ದು, ” ಹಿಂದೂ ಮಹಿಳೆಗೆ ಕಿರುಕುಳ ನೀಡಲು ಪ್ರಯತ್ನಿಸಿದ ಮುಸ್ಲಿಂ ವ್ಯಕ್ತಿಗೆ ಸರಿಯಾಗಿ ಪಾಠ ಕಲಿಸಿದ ಮಹಿಳೆ” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.
This Muslim tried to molest a Hindu woman, so she taught him a lesson pic.twitter.com/fShxDjX4bW
— Salwan Momika (@Salwan_Momika1) August 16, 2024
ವೈರಲ್ ವಿಡಿಯೋದಲ್ಲಿ ಹಿಂದೂ ಮಹಿಳೆಯೊಬ್ಬರು ಮುಸ್ಲಿಂ ವ್ಯಕ್ತಿಗೆ ಸರಿಯಾಗಿ ಧರ್ಮದೇಟು ನೀಡುತ್ತಿರುವ ದೃಶ್ಯವನ್ನು ಕಾಣಬಹುದು. ಚಲಿಸುತ್ತಿರುವ ರೈಲಿನಲ್ಲಿ ಆ ವ್ಯಕ್ತಿ ಹಿಂದೂ ಮಹಿಳೆಯ ಮೈ ಮುಟ್ಟಲು ಯತ್ನಿಸಿದ್ದಾನೆ. ಇದರಿಂದ ಕೋಪಗೊಂಡ ಆ ಮಹಿಳೆ ಮೈ ಮುಟ್ಟಿದಾತನ ಕೂದಲೇಳೆದು ಹಿಂದೂ ಹೆಣ್ಣುಮಕ್ಕಳ ಮೈ ಮುಟ್ಟಿದ್ರೆ ಜಾಗ್ರತೆ ಎಂದು ಹೇಳುತ್ತಾ ಆತನ ಮೈ ಚಳಿ ಬಿಡಿಸಿದ್ದಾರೆ.
ಇದನ್ನೂ ಓದಿ: ಅತ್ಯಾಚಾರ ಎಸಗಲು ಮುಂದಾದ ಕಾಮಾಂಧನನ್ನು ಕೊಂಬಿನಿಂದ ತಿವಿದು ಬಿಸಾಕಿದ ಹಸು; ವಿಡಿಯೋ ವೈರಲ್
ಆಗಸ್ಟ್ 17 ರಂದು ಹಂಚಿಕೊಳ್ಳಲಾದ ಈ ವಿಡಿಯೋ 5 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ‘ಈ ಧೈರ್ಯಶಾಲಿ ಮಹಿಳೆಗೆ ನನ್ನದೊಂದು ಸಲಾಂ’ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ‘ ಪ್ರತಿಯೊಬ್ಬ ಮಹಿಳೆಯೂ ಇದೇ ರೀತಿ ಧೈರ್ಯವಂತೆಯಾಗಬೇಕು’ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೂ ಅನೇಕರು ಆ ಮಹಿಳೆಯ ಕೆಲಸಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:59 pm, Sun, 18 August 24