Viral Video: ವಿದ್ಯುತ್ ಸ್ಪರ್ಶಿಸಿ ಕರಡಿ ಸಾವು; ಮೃತದೇಹದ ಮೇಲೆ ಕುಳಿತು ಫೋಟೋ ಕ್ಲಿಕ್ಕಿಸಿ ವಿಕೃತಿ ಮೆರೆದ ವ್ಯಕ್ತಿ
ಟ್ರಾನ್ಸ್‌ಫಾರ್ಮರ್ ಮೇಲೆ ಹತ್ತಿ ಕರಡಿಯ ಮೃತದೇಹವನ್ನು ನೆಲಕ್ಕೆ ಬಿಸಾಕಿದ ವ್ಯಕ್ತಿ ನಂತರ ಅದರ ಮೇಲೆ ಕುಳಿತು ಫೋಟೋ ಕ್ಲಿಕ್ಕಿಸಿಕೊಂಡಿದ್ದಾನೆ. ಈ ದೃಶ್ಯವನ್ನು ಸುತ್ತಮುತ್ತ ಜಮಾಯಿಸಿದ ಜನರು ತಮ್ಮ ಫೋನ್ ಕ್ಯಾಮೆರಾಗಳಲ್ಲಿ ರೆಕಾರ್ಡ್ ಮಾಡಿದ್ದಾರೆ. ವ್ಯಕ್ತಿಯ ಈ ಅಮಾನವೀಯ ಕೃತ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹಿಮಾಚಲ ಪ್ರದೇಶ: ವಿದ್ಯುತ್ ಸ್ಪರ್ಶಿಸಿ ಹೆಣ್ಣು ಕರಡಿ ಮತ್ತು ಅದರ ಮರಿಯೊಂದು ಸಾವನ್ನಪ್ಪಿರುವ ಘಟನೆ ಹಿಮಾಚಲ ಪ್ರದೇಶದ ಡಾಲ್‌ಹೌಸಿಯಲ್ಲಿ ನಡೆದಿದೆ. ಟ್ರಾನ್ಸ್‌ಫಾರ್ಮರ್‌ನಲ್ಲಿ ಸಿಕ್ಕಿಬಿದ್ದು ಸತ್ತಿದ್ದ ಕರಡಿಯನ್ನು ವ್ಯಕ್ತಿಯೊಬ್ಬರು ಕೆಳಗಿಳಿಸಿದ್ದು, ಬಳಿಕ ಅದರ ಮೇಲೆ ಕುಳಿತು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಸದ್ಯ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ನೆಟ್ಟಿಗರಿಂದ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಕೆಲವು ಸುದ್ದಿ ವರದಿಗಳ ಪ್ರಕಾರ, ಮುನ್ಸಿಪಲ್ ಕೌನ್ಸಿಲ್ ಜೂನಿಯರ್ ಇಂಜಿನಿಯರ್ ಸಂಜೀವ್ ಶರ್ಮಾ ಎಂದು ಗುರುತಿಸಲಾದ ವಿದ್ಯುತ್ ಇಲಾಖೆ ಸಿಬ್ಬಂದಿ ಮತ್ತು ಕೆಲವು ಅರಣ್ಯ ಇಲಾಖೆ ಅಧಿಕಾರಿಗಳ ಸಹಾಯದಿಂದ ವಿದ್ಯುತ್ ಆಘಾತಕ್ಕೊಳಗಾದ ಕರಡಿಯನ್ನು ಟ್ರಾನ್ಸ್‌ಫಾರ್ಮರ್‌ನಿಂದ ತೆಗೆದುಹಾಕಲಾಗಿದೆ.
ಟ್ರಾನ್ಸ್‌ಫಾರ್ಮರ್ ಮೇಲೆ ಹತ್ತಿ ಕರಡಿಯ ದೇಹವನ್ನು ನೆಲಕ್ಕೆ ಬಿಸಾಕಿದ ವ್ಯಕ್ತಿ ನಂತರ ಕರಡಿಯ ಮೃತದೇಹ ಮೇಲೆ ಕುರಿತು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಈ ದೃಶ್ಯವನ್ನು ಸುತ್ತಮುತ್ತ ಜಮಾಯಿಸಿದ ಜನರು ತಮ್ಮ ಫೋನ್ ಕ್ಯಾಮೆರಾಗಳಲ್ಲಿ ರೆಕಾರ್ಡ್ ಮಾಡಿದ್ದಾರೆ. ವ್ಯಕ್ತಿಯ ಈ ಅಮಾನವೀಯ ಕೃತ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕರಡಿಯ ಮೃತದೇಹದ ದುರ್ಬಳಕೆಯ ವಿರುದ್ಧ ಪ್ರಾಣಿ ಪ್ರೇಮಿಗಳು ಮತ್ತು ಕಲ್ಯಾಣ ಕಾರ್ಯಕರ್ತರು ಧ್ವನಿ ಎತ್ತಿದ್ದಾರೆ. ಜೊತೆಗೆ ಆತನ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ಇದನ್ನೂ ಓದಿ: ಲಂಚದ ಹಣವನ್ನು ಪರಸ್ಪರ ಹಂಚಿಕೊಳ್ಳುತ್ತಿರುವ ಟ್ರಾಫಿಕ್ ಪೊಲೀಸರು; ವಿಡಿಯೋ ವೈರಲ್
streetdogsofbombay ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಆಗಸ್ಟ್ 17ರಂದು ಹಂಚಿಕೊಂಡ ವಿಡಿಯೋ ಒಂದೇ ದಿನದಲ್ಲಿ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. “ಮೃತ ದೇಹದ ಮೇಲೆ ಕುರಿತು ಫೋಟೋ ಕ್ಲಿಕ್ಕಿಸಿಕೊಂಡಿದ್ದು, ನಾಚಿಕೆಗೇಡಿನ ಸಂಗತಿ” ಎಂದು ಸಾಕಷ್ಟು ನೆಟ್ಟಿಗರು ಕಾಮೆಂಟ್ನಲ್ಲಿ ಬರೆದುಕೊಂಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ