Video: ಅರರೇ…. ಈ ಪುಟ್ಟ ಪೋರಿ ಅದೆಷ್ಟು ಚಂದವಾಗಿ ದೋಸೆ ಮಾಡುತ್ತಾಳೆ ನೋಡಿ

ದೊಡ್ಡವರಾದ ನಮಗೆಯೇ ಒಂದೊಂದು ಸಾರಿ ಸರಿಯಾಗಿ, ಚೆಂದವಾಗಿ ದೋಸೆ ಮಾಡಲು ಬರುವುದಿಲ್ಲ. ಆದ್ರೆ ಇಲ್ಲೊಂದು ಪುಟಾಣಿ ಮಗು ದೊಡ್ಡವರಿಗಿಂತ ನಾನೇನು ಕಮ್ಮಿಯಿಲ್ಲ ಎಂಬಂತೆ ಚೆಂದವಾಗಿ ದೋಸೆ ಮಾಡಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಪುಟ್ಟ ಪೋರಿ ದೋಸೆ ಮಾಡುವ ಸ್ಟೈಲ್ ನೋಡಿ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.

Video: ಅರರೇ.... ಈ ಪುಟ್ಟ ಪೋರಿ ಅದೆಷ್ಟು ಚಂದವಾಗಿ ದೋಸೆ ಮಾಡುತ್ತಾಳೆ ನೋಡಿ
ವೈರಲ್​​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Aug 19, 2024 | 11:25 AM

ಮುಗ್ಧತೆಗೆ ಮತ್ತೊಂದು ಹೆಸರೇ ಈ ಮಕ್ಕಳು. ಜಗತ್ತಿನ ಯಾವ ಪರಿವೆ ಇಲ್ಲದೇ ಅವರಿಗೆ ತೋಚಿದ್ದನ್ನು ಮಾಡುವ, ಹೇಳುವ, ತುಂಟಾವಾಡುವ ಮಕ್ಕಳು ಒಂದೊಂದು ಸಾರಿ ಅವರುಗಳ ಮುಗ್ಧತೆಯಿಂದಲೇ ನಾವುಗಳು ಬಾಯಿ ಮೇಲೆ ಬೆರಳಿಡುವಂತೆ ಮಾಡುತ್ತವೆ. ಅದರಲ್ಲೂ ಈಗಿನ ಕಾಲದ ಮಕ್ಕಳಂತೂ ತುಂಬಾನೇ ಚೂಟಿ, ಬೆರಳು ಕೊಟ್ಟರೆ ಹಸ್ತ ನುಂಗುವಷ್ಟು ಬುದ್ಧಿವಂತರು. ಈ ಮಕ್ಕಳು ಮಾಡುವ ತುಂಟಾಟಗಳ, ದೊಡ್ಡವರಂತೆ ವರ್ತಿಸುವ ಕೆಲವೊಂದು ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ್ಗೆ ಕಾಣಸಿಗುತ್ತಿರುತ್ತವೆ. ಇದೀಗ ಅದೇ ರೀತಿಯಾ ವಿಡಿಯೋವೊಂದು ವೈರಲ್ ಆಗಿದ್ದು, ಪುಟಾಣಿ ಮಗುವೊಂದು ದೊಡ್ಡವರಿಗಿಂತ ನಾನೇನು ಕಮ್ಮಿಯಿಲ್ಲ ಎಂಬಂತೆ ಚೆಂದವಾಗಿ ದೋಸೆ ಮಾಡಿದೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಪುಟ್ಟ ಪೋರಿ ದೋಸೆ ಮಾಡುವ ಸ್ಟೈಲ್ ನೋಡಿ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.

ಈ ಕುರಿತ ಪೋಸ್ಟ್ ಒಂದನ್ನು sts.tamilselvan ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಈ ರುಚಿಕರವಾದ ದೋಸೆ ಯಾರಿಗೆ ಬೇಕು” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ. ವೈರಲ್ ವಿಡಿಯೋದಲ್ಲಿ ಪುಟ್ಟ ಪೋರಿಯೊಬ್ಬಳು ಚೆಂದವಾಗಿ ಚೆಂದವಾಗಿ ದೋಸೆ ಮಾಡುವ ದೃಶ್ಯ ಕಾಣಬಹುದು. ಗ್ಯಾಸ್ ಸ್ಟವ್ ಪಕ್ಕ ಕುಳಿತ ಈ ಪುಟಾಣಿ ಮೊದಲಿಗೆ ಹೆಂಚಿಗೆ ದೋಸೆ ಹಿಟ್ಟು ಹಾಕಿ ನಂತರ ಆ ದೋಸೆಯನ್ನು ಚೆಂದವಾಗಿ ತಿರುವಿ ಹಾಕಿದೆ.

ಇದನ್ನೂ ಓದಿ: ಎಂತಾ ಬ್ಯುಸಿನೆಸ್ ಮೈಂಡ್ ನೋಡಿ…… ಚಲಿಸುತ್ತಿರುವ ರೈಲಿನಲ್ಲಿಯೇ ಪ್ರಯಾಣಿಕರಿಗೆ ಐ ಬ್ರೋಸ್ ಮಾಡಿದ ಮಹಿಳೆ

ವೈರಲ್​​ ವಿಡಿಯೋ

ಐದು ದಿನಗಳ ಹಿಂದೆ ಹಂಚಿಕೊಳ್ಳಲಾಗ ಈ ವಿಡಿಯೋ 10 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ‘ಈ ವಯಸ್ಸಿನಲ್ಲಿ ನನಗೆ ಚಮಚವನ್ನು ಹಿಡಿಯುವುದು ಸಹ ಗೊತ್ತಿರಲಿಲ್ಲ’ ಎಂಬ ಕಾಮೆಂಟ್ ಬರೆದುಕೊಂದಿದ್ದಾರೆ. ಇನ್ನೊಬ್ಬ ಬಳಕೆದಾರರು ‘ರೀಲ್ಸ್ ಗಾಗಿ ಮಕ್ಕಳ್ನನು ಬೆಂಕಿಯ ಪಕ್ಕ ಕೂರಿಸುವುದು ಸರಿಯಲ್ಲ’ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ‘ಬರೀ ಪ್ರೀತಿಯನ್ನೇ ತುಂಬಿದಂತಹ ವಿಶ್ವದ ಮೊದಲ ದೋಸೆ’ ಎಂಬ ಕಾಮೆಂಟ್ ಮಾಡಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ