Viral Video: ಎಂತಾ ಬ್ಯುಸಿನೆಸ್ ಮೈಂಡ್ ನೋಡಿ…… ಚಲಿಸುತ್ತಿರುವ ರೈಲಿನಲ್ಲಿಯೇ ಪ್ರಯಾಣಿಕರಿಗೆ ಐ ಬ್ರೋಸ್ ಮಾಡಿದ ಮಹಿಳೆ

ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿನಿತ್ಯ ಚಿತ್ರ ವಿಚಿತ್ರ ವಿಡಿಯೋಗಳು ಹರಿದಾಡುತ್ತಿರುತ್ತವೆ. ಅವುಗಳಲ್ಲಿ ಕೆಲವೊಂದು ದೃಶ್ಯಗಳು ನಮ್ಮನ್ನು ನಗಿಸುವುದು ಮಾತ್ರವಲ್ಲದೆ, ಹುಬ್ಬೇರಿಸುವಂತೆ ಮಾಡುತ್ತವೆ. ಸದ್ಯ ಅಂತಹದೊಂದು ವಿಡಿಯೋ ಇದೀಗ ವೈರಲ್ ಆಗಿದ್ದು, ಮಹಿಳೆಯೊಬ್ಬರು ಲೋಕಲ್ ರೈಲಿನಲ್ಲಿಯೇ ಪ್ರಯಾಣಿಕರಿಗೆ ಐ ಬ್ರೋಸ್ ಮಾಡಿದ್ದಾರೆ. ಈ ದೃಶ್ಯವನ್ನು ನೋಡಿ ನೆಟ್ಟಿಗರು ಫುಲ್ ಶಾಕ್ ಆಗಿದ್ದಾರೆ.

Viral Video: ಎಂತಾ ಬ್ಯುಸಿನೆಸ್ ಮೈಂಡ್ ನೋಡಿ...... ಚಲಿಸುತ್ತಿರುವ ರೈಲಿನಲ್ಲಿಯೇ ಪ್ರಯಾಣಿಕರಿಗೆ ಐ ಬ್ರೋಸ್ ಮಾಡಿದ ಮಹಿಳೆ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ

Updated on:Aug 18, 2024 | 5:36 PM

ಮುಖದ ಕಳೆ ಹೆಚ್ಚಿಸುವಲ್ಲಿ ಹುಬ್ಬುಗಳು ಪ್ರಮುಖ ಪಾತ್ರವಹಿಸುತ್ತದೆ. ಅದರಲ್ಲೂ ತಿದ್ದಿ ತೀಡಿದಂತಹ ಹುಬ್ಬು ಲಕ್ಷಣವಾಗಿ ಕಾಣುವಂತೆ ಮಾಡುತ್ತದೆ. ಹೀಗೆ ಹುಬ್ಬುಗಳ ಅಂದ ಹೆಚ್ಚಿಸಲು ಹೆಂಗಳೆಯರು ಬ್ಯೂಟಿ ಪಾರ್ಲರ್ ಗೆ ಹೋಗಿ ಐ ಬ್ರೋಸ್ ಮಾಡಿಸಿಕೊಳ್ಳುತ್ತಾರೆ. ಹೆಚ್ಚಾಗಿ ಬ್ಯೂಟಿ ಪಾರ್ಲರ್ ಗಳಲ್ಲೇ ಐಬ್ರೋಸ್ ಮಾಡುತ್ತಾರೆ. ಆದ್ರೆ ಇಲ್ಲೊಂದು ಮಹಿಳೆ ಇದೊಳ್ಳೆ ಬ್ಯುಸಿನೆಸ್ ಐಡಿಯಾ ಎನ್ನುತ್ತಾ ಲೋಕಲ್ ರೈಲಿನಲ್ಲಿ ಪ್ರಯಾಣಿಸುತ್ತಾ, ಅಲ್ಲಿದ್ದ ಮಹಿಳಾ ಪ್ರಯಾಣಿಕರಿಗೆ ಐಬ್ರೋ ಮಾಡಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದ್ದು, ಈ ದೃಶ್ಯ ನೆಟ್ಟಿಗರನ್ನು ಹುಬ್ಬೇರಿಸುವಂತೆ ಮಾಡಿದೆ.

ಪಶ್ಚಿಮ ಬಂಗಾಳದಲ್ಲಿನ ವಿಡಿಯೋ ಇದಾಗಿದ್ದು, ಇಲ್ಲಿನ ಬೊಂಗಾವ್ ಲೋಕಲ್ ರೈಲಿನಲ್ಲಿ ಮಹಿಳೆಯೊಬ್ಬರು ಸಹ ಪ್ರಯಾಣಿಕರಿಗೆ ಪ್ರಯಾಣಿಸುತ್ತಲೇ ಐಬ್ರೋ ಮಾಡಿದ್ದಾರೆ. ಈ ಕುರಿತ ಪೋಸ್ಟ್ ಒಂದನ್ನು ಶೇಲಿ ಗಂಗೂಲಿ (sheliganguly) ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ವೈರಲ್ ವಿಡಿಯೋದಲ್ಲಿ ಮಹಿಳೆಯೊಬ್ಬರು ಲೋಕಲ್ ರೈಲಿನಲ್ಲಿ ಪ್ರಯಾಣಿಸುತ್ತಾ ಸಹ ಪ್ರಯಾಣಿಕರೊಬ್ಬರಿಗೆ ಐ ಬ್ರೋ ಮಾಡುವ ದೃಶ್ಯವನ್ನು ಕಾಣಬಹುದು. ಮಹಿಳೆಯೊಬ್ಬರು ರೈಲಿನಲ್ಲಿ ಸುಮ್ಮನೆ ಕುಳಿತುಕೊಳ್ಳುವ ಬದಲು ಏನಾದ್ರೂ ಮಾಡ್ಬೋದಲ್ವಾ ಎನ್ನುತ್ತಾ, ಒಂದೊಳ್ಳೆ ಬ್ಯುಸಿನೆಸ್ ಐಡಿಯಾ ಹಾಕಿ, ರೈಲಿನಲ್ಲಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರಿಗೆ ಐಬ್ರೋಸ್ ಮಾಡಿದ್ದಾರೆ.

ಇದನ್ನೂ ಓದಿ: ಲಂಚದ ಹಣವನ್ನು ಪರಸ್ಪರ ಹಂಚಿಕೊಳ್ಳುತ್ತಿರುವ ಟ್ರಾಫಿಕ್ ಪೊಲೀಸರು; ವಿಡಿಯೋ ವೈರಲ್

ಜುಲೈ 20 ರಂದು ಹಂಚಿಕೊಳ್ಳಲಾದ ಈ ವಿಡಿಯೋ 9.7 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ‘ಈ ಕಣ್ಣಲ್ಲಿ ಇನ್ನೇನೆಲ್ಲಾ ನೋಡಬೇಕೋ’ ಎಂಬ ತಮಾಷೆಯ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ‘ಅವರ ಶ್ರಮಕ್ಕೆ ಮೆಚ್ಚುಗೆ ನೀಡಲೇಬೇಕು. ಏಕೆಂದ್ರೆ ಚಲಿಸುತ್ತಿರುವ ವಾಹನಗಳಲ್ಲಿ ಐ ಬ್ರೋಸ್ ಮಾಡುವುದು ಸುಲಭದ ವಿಷಯವೇ ಅಲ್ಲ’ ಎಂದು ಕಾಮೆಂಟ್ ಬರೆದುಕೊಂಡಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 5:35 pm, Sun, 18 August 24