ಪ್ರೀತಿ ಪ್ರೇಮ ಪುಸ್ತಕದ ಬದನೆಕಾಯಿ ಅನ್ನುವವರು ನಡುವೆ ನನ್ನ ಪ್ರೀತಿ ಶಾಶ್ವತ ಎಂದು ತೋರಿಸಿಕೊಟ್ಟಿದ್ದಾಳೆ ಇಲ್ಲೊಬ್ಬಳು ಯುವತಿ. ಈಕೆಯ ಹೆಸರು ಸಿಡ್ನಿ ಡೀನ್. 27 ವರ್ಷದ ಸಿಡ್ನಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅದು ಕೂಡ 51 ವರ್ಷದ ವ್ಯಕ್ತಿಯ ಜೊತೆ ಎಂಬುದು ವಿಶೇಷ. ಇದರಲ್ಲೇನು ವಿಶೇಷವಿದೆ ಎಂಬ ಪ್ರಶ್ನೆ ನಿಮ್ಮಲ್ಲಿದ್ದರೆ, ಅಲ್ಲೇ ಇರೋದು ಟ್ವಿಸ್ಟ್. ಸಿಡ್ನಿ ಡೀನ್ ಮದುವೆಯಾಗಿರುವುದು ತನ್ನ ಮಾಜಿ ಬಾಯ್ಫ್ರೆಂಡ್ನ ತಂದೆಯನ್ನು ಎಂಬುದು ಇಲ್ಲಿ ವಿಶೇಷ. ಇಂತಹದೊಂದು ವಿಚಿತ್ರ ಲವ್ಸ್ಟೋರಿ ನಡೆದಿರುವುದು ದೂರದ ಅಮೆರಿಕದಲ್ಲಿ. ಯುಎಸ್ನ ಒಹಿಯೋ ಮೂಲದ ಸಿಡ್ನಿ ಡೀನ್ ಶಾಲಾ ದಿನಗಳಲ್ಲೇ ಲವ್ನಲ್ಲಿ ಬಿದ್ದಿದ್ದಳು. ಅದರಂತೆ ಪೌಲ್ ಅವರ ಮಗನ ಜೊತೆ ಡೇಟಿಂಗ್ ಕೂಡ ನಡೆಯುತ್ತಿತ್ತು. ಹೀಗೆ ಜೊತೆಯಾಗಿ ಹಲವು ಬಾರಿ ಮನೆಗೆ ಕೂಡ ಬಂದು ಹೋಗಿದ್ದಾಳೆ. ಈ ಸಂದರ್ಭದಲ್ಲಿ ಬಾಯ್ ಫ್ರೆಂಡ್ ತಂದೆ ಪೌಲ್ ಅವರ ಪರಿಚಯವಾಗಿದೆ.
ಹೀಗೆ ಪರಿಚಯವಾದ ಪೌಲ್ ಜೊತೆ ಉತ್ತಮ ಗೆಳೆತನ ಏರ್ಪಟ್ಟಿತ್ತು. ವಾರಾಂತ್ಯದಲ್ಲಿ ಬಾಯ್ ಫ್ರೆಂಡ್ ಜೊತೆಗೆ ಬಂದಾಗ ಪೌಲ್ ಹಾಗೂ ಸಿಡ್ನಿ ಗಂಟೆಗಳ ಕಾಲ ಹರಟುತ್ತಿದ್ದಳು. ಇದರಿಂದ ಇಬ್ಬರ ನಡುವೆ ಅನೋನ್ಯತೆ ಕೂಡ ಬೆಳೆಯಿತು. ಆದರೆ ಶಾಲಾ ದಿನಗಳು ಮುಗಿದು ಕಾಲೇಜು ಮೆಟ್ಟಿಲೇರಿದಾಗ ಸಿಡ್ನಿ ಡೀನ್ ಹಾಗೂ ಬಾಯ್ಫ್ರೆಂಡ್ ನಡುವೆ ಮೈಮನಸ್ಸು ಏರ್ಪಟ್ಟಿದೆ.
ಇದೇ ವಿಚಾರವಾಗಿ ಆಗಾಗ್ಗೆ ಜಗಳವಾಗುತ್ತಿತ್ತು. ಇದನ್ನೇ ನೆಪವಾಗಿಟ್ಟುಕೊಂಡು ಬಾಯ್ ಫ್ರೆಂಡ್ ಸಿಡ್ನಿ ಡೀನ್ಗೆ ಕೈಕೊಟ್ಟಿದ್ದಾನೆ. ಇದಾಗ್ಯೂ ಬಾಯ್ ಫ್ರೆಂಡ್ ತಂದೆ ಜೊತೆಗಿನ ಸಿಡ್ನಿ ಗೆಳೆತನ ಮಾತ್ರ ಮುಂದುವರೆದಿತ್ತು. ಇಬ್ಬರೂ ವಾರಾಂತ್ಯದಲ್ಲಿ ಭೇಟಿಯಾಗುತ್ತಿದ್ದರು. ಭೇಟಿಯಾದಾಗೆಲ್ಲಾ ತನ್ನ ಬಗ್ಗೆ ಹೆಚ್ಚಿನ ಕಾಳಜಿವಹಿಸುತ್ತಿದ್ದ ಪೌಲ್ನ ನಡೆಯಿಂದ ಸಿಡ್ನಿ ಡೀನ್ ಮತ್ತಷ್ಟು ಆಕರ್ಷಿತಳಾದಳು.
ಇಬ್ಬರ ನಡುವಿನ ಗೆಳೆತನವು ನಿಧಾನಕ್ಕೆ ಪ್ರೇಮಕ್ಕೆ ತಿರುಗಿದೆ. ಇದೇ ವೇಳೆ ತನ್ನ ಮನದಿಂಗಿತವನ್ನು ಸಿಡ್ನಿ ಡೀನ್ ಪೌಲ್ ಮುಂದೆ ತೆರೆದಿಟ್ಟಿದ್ದಾಳೆ. ಅತ್ತ ಕಡೆ ಸಂಗಾತಿಯನ್ನು ಎದುರು ನೋಡುತ್ತಿದ್ದ ಪೌಲ್ ಕೂಡ ಹಿಂದೆ ಮುಂದೆ ಯೋಚಿಸಲಿಲ್ಲ. ಅದರಂತೆ ಇಬ್ಬರೂ ಡೇಟಿಂಗ್ ಪ್ರಾರಂಭಿಸಿದ್ದಾರೆ. ಅಷ್ಟೇ ಅಲ್ಲದೆ ಮದುವೆಯಾಗಲು ಕೂಡ ನಿರ್ಧರಿಸಿದ್ದಾರೆ.
ಆದರೆ ಈ ಮದುವೆಗೆ ಸಿಡ್ನಿ ಡೀನ್ ಪೋಷಕರು ಮಾತ್ರ ಒಪ್ಪಿರಲಿಲ್ಲ. ಏಕೆಂದರೆ ಸಿಡ್ನಿಯ ಅಮ್ಮನಿಗೆ ಪೌಲ್ ಯಾರೆಂದು ಮೊದಲೇ ಗೊತ್ತಿತ್ತು. ಆತನ ವಯಸ್ಸಿನ ಅಂತರದ ಕಾರಣದಿಂದ ಮದುವೆಗೆ ಮನೆಯಲ್ಲಿ ಸಮ್ಮತಿ ಸೂಚಿಸಿರಲಿಲ್ಲ. ಸುಮಾರು ಒಂದು ವರ್ಷಗಳ ಕಾಲ ಪೋಷಕರ ಒಪ್ಪಿಗೆಗಾಗಿ ಸಿಡ್ನಿ ಕಾದಿದ್ದಳು. ಆದರೆ ಮಗಳ ಬಗ್ಗಲ್ಲ ಎಂಬುದನ್ನು ಅರಿತ ಪೋಷಕರು ಅಂತಿಮವಾಗಿ ಮದುವೆಗೆ ಒಪ್ಪಿಗೆ ಸೂಚಿಸಿದ್ದಾರೆ.
ಅದರಂತೆ 24 ವರ್ಷದ ಅಂತರ ಹೊಂದಿರುವ ಪೌಲ್ನನ್ನು ಸಿಡ್ನಿ ಡೀನ್ ವಿವಾಹವಾಗಿದ್ದಾರೆ. ಇಲ್ಲಿ ಇಂಟ್ರೆಸ್ಟಿಂಗ್ ವಿಷಯ ಎಂದರೆ ಸಿಡ್ನಿ ಡೀನ್ಗೆ ಕೈಕೊಟ್ಟ ಮಾಜಿ ಪ್ರಿಯತಮ ಈಗ ಮಲಮಗನಿದ್ದಾನೆ. ಅಂದರೆ ಮಾಜಿ ಪ್ರಿಯತಮನ ತಂದೆಯನ್ನೇ ವಿವಾಹವಾಗಿ ಬಾಯ್ಫ್ರೆಂಡ್ ಅನ್ನು ಮಲಮಗನ ಸ್ಥಾನಕ್ಕೆ ತಂದು ನಿಲ್ಲಿಸಿದ್ದಾಳೆ ಎಂಬುದೇ ಇಲ್ಲಿ ವಿಶೇಷ.