Viral Video: ಮೀನಿಗಾಗಿ ನದಿಗೆ ಎಸೆದ ಬಲೆಯಲ್ಲಿ ದೈತ್ಯ ಹೆಬ್ಬಾವು ಸೆರೆ; ವಿಡಿಯೋ ವೈರಲ್​​

|

Updated on: Aug 11, 2024 | 11:30 AM

ಮೀನಿನ ಬಲೆಯಲ್ಲಿ ದೈತ್ಯ ಹೆಬ್ಬಾವು ಕಂಡು ಬೆಚ್ಚಿಬಿದ್ದ ಮೀನುಗಾರರು, ಬಳಿಕ ಉರಗ ತಜ್ಞರಿಗೆ ಮಾಹಿತಿ ನೀಡಿದ್ದಾರೆ. ಕೆಲವೇ ನಿಮಿಷಗಳಲ್ಲಿ ಉರಗ ತಜ್ಞರ ತಂಡ ಸ್ಥಳಕ್ಕೆ ತಲುಪಿದ್ದು, ಸುಮಾರು ಅರ್ಧ ಗಂಟೆ ಪ್ರಯತ್ನಗಳ ಬಳಿಕ ಹೆಬ್ಬಾವನ್ನು ಬಲೆಯಿಂದ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

Viral Video: ಮೀನಿಗಾಗಿ ನದಿಗೆ ಎಸೆದ ಬಲೆಯಲ್ಲಿ ದೈತ್ಯ ಹೆಬ್ಬಾವು ಸೆರೆ; ವಿಡಿಯೋ ವೈರಲ್​​
ಮೀನಿಗಾಗಿ ನದಿಗೆ ಎಸೆದ ಬಲೆಯಲ್ಲಿ ದೈತ್ಯ ಹೆಬ್ಬಾವು ಸೆರೆ
Follow us on

ನದಿಯಲ್ಲಿ ಮೀನು ಹಿಡಿಯಲು ಬಿಟ್ಟಿದ್ದ ಬಲೆಯಲ್ಲಿ ದೈತ್ಯ ಹೆಬ್ಬಾವೊಂದು ಸೆರೆಯಾಗಿರುವ ಘಟನೆ ಆಗುಂಬೆಯಲ್ಲಿ ನಡೆದಿದೆ. ಮೀನಿನ ಬದಲು 7 ಅಡಿ ಉದ್ದದ ದೈತ್ಯ ಹೆಬ್ಬಾವನ್ನು ಕಂಡು ಮೀನುಗಾರರು ಬೆಚ್ಚಿಬಿದ್ದಿದ್ದಾರೆ. ಬಳಿಕ ಸ್ಥಳೀಯರ ಸಹಾಯದಿಂದ ಅಳಿವಿನಂಚಿನಲ್ಲಿರುವ ಹೆಬ್ಬಾವನ್ನು ಬಲೆಯಿಂದ ಬಿಡಿಸಿದ್ದಾರೆ. ಗ್ರಾಮಸ್ಥರು ಹೆಬ್ಬಾವಿನ ಜೀವ ಉಳಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಹೆಬ್ಬಾವು ಬಲೆಗೆ ಬಿದ್ದಿರುವುದನ್ನು ಕಂಡ ಮೀನುಗಾರರು, ಗ್ರಾಮಸ್ಥರು ಉರಗ ತಜ್ಞರಿಗೆ ಮಾಹಿತಿ ನೀಡಿದ್ದಾರೆ. ಕೆಲವೇ ನಿಮಿಷಗಳಲ್ಲಿ ಉರಗ ತಜ್ಞರ ತಂಡ ಸ್ಥಳಕ್ಕೆ ತಲುಪಿದೆ. ಹೆಬ್ಬಾವು ಬಲೆಯಲ್ಲಿ ಸಿಕ್ಕಿಬಿದ್ದಿದ್ದನ್ನು ಕಂಡು ಸುಮಾರು ಅರ್ಧ ಗಂಟೆ ಪ್ರಯತ್ನ ನಡೆಸಿ ಹೆಬ್ಬಾವನ್ನು ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ವಿಡಿಯೋ ವೈರಲ್ ಆಗುತ್ತಿದೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ಹಸ್ತಮೈಥುನ ವಿಡಿಯೋ ಕಳುಹಿಸಿ ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಶಿಕ್ಷಕಿಯ ಬಂಧನ

ajay_v_giri ಎಂಬ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ವಿಡಿಯೋ ಎಲ್ಲೆಡೆ ಭಾರೀ ವೈರಲ್​​ ಆಗಿದೆ. ಆಗಸ್ಟ್​​​​ 7ರಂದು ಹಂಚಿಕೊಂಡಿರುವ ಈ ವಿಡಿಯೋ ಮೂರು ದಿನಗಳಲ್ಲಿ 65ಸಾವಿರಕ್ಕೂ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದೆ. ಹೆಬ್ಬಾವನ್ನು ರಕ್ಷಣೆಗೈದ ತಂಡದವರಿಗೆ ನೆಟ್ಟಿಗರು ಕಾಮೆಂಟ್​​ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ