Video: ಒಂದೇ ದಿನದಲ್ಲಿ 15 ಗಿನ್ನಿಸ್ ವಿಶ್ವ ದಾಖಲೆ ಬರೆದ ವ್ಯಕ್ತಿ; ವಿಡಿಯೋ ಇಲ್ಲಿದೆ ನೋಡಿ

Video: ಒಂದೇ ದಿನದಲ್ಲಿ 15 ಗಿನ್ನಿಸ್ ವಿಶ್ವ ದಾಖಲೆ ಬರೆದ ವ್ಯಕ್ತಿ; ವಿಡಿಯೋ ಇಲ್ಲಿದೆ ನೋಡಿ

ಅಕ್ಷತಾ ವರ್ಕಾಡಿ
|

Updated on: Aug 11, 2024 | 9:27 AM

ಒಂದೇ ದಿನದಲ್ಲಿ 15 ಗಿನ್ನಿಸ್ ವಿಶ್ವ ದಾಖಲೆ ಮುರಿಯಲು ಹೇಗೆ ಸಾಧ್ಯ ಎಂಬ ಅನುಮಾನ ನಿಮ್ಮಲ್ಲಿಬಹುದು. ಹಾಗಿದ್ರೆ ಯಾವೆಲ್ಲಾ ಸವಾಲುಗಳನ್ನು ಮುರಿದು ಒಂದೇ ದಿನದಲ್ಲಿ 15 ವಿಶ್ವ ದಾಖಲೆ ಪಡೆದುಕೊಂಡರು ಎಂಬುದನ್ನು ಈ ವಿಡಿಯೋದಲ್ಲಿ ನೋಡಿ.

ಅಮೆರಿಕದ ಡೇವಿಡ್ ರಶ್ ಎಂಬ ವ್ಯಕ್ತಿ ಒಂದೇ ದಿನದಲ್ಲಿ ಒಂದಲ್ಲ.. ಎರಡಲ್ಲ.. ಬರೋಬ್ಬರಿ 15 ಗಿನ್ನಿಸ್ ದಾಖಲೆಗಳನ್ನು ಪಡೆದುಕೊಂಡಿದ್ದಾರೆ. ಅಮೆರಿಕದ ಇಡಾಹೋ ಮೂಲದ ಡೇವಿಡ್ ರಶ್ ಇದುವರೆಗೆ 250 ವಿಶ್ವ ದಾಖಲೆಗಳನ್ನು ಮುರಿದಿದ್ದು, ಇತ್ತೀಚೆಗಷ್ಟೇ ಒಂದೇ ದಿನದಲ್ಲಿ 15 ಗಿನ್ನಿಸ್ ದಾಖಲೆಗಳನ್ನು ಬರೆಯುವ ಮೂಲಕ ಸಂಚಲನ ಮೂಡಿಸಿದ್ದಾರೆ. ಒಂದೇ ದಿನದಲ್ಲಿ 15 ಗಿನ್ನಿಸ್ ವಿಶ್ವ ದಾಖಲೆ ಮುರಿಯಲು ಹೇಗೆ ಸಾಧ್ಯ ಎಂಬ ಅನುಮಾನ ನಿಮ್ಮಲ್ಲಿ ಕಾಡಿರಬಹುದು. ಹಾಗಿದ್ರೆ ಏನೆಲ್ಲಾ ಸವಾಲುಗಳನ್ನು ಮುರಿದು 15 ವಿಶ್ವ ದಾಖಲೆ ಪಡೆದುಕೊಂಡರು ಎಂಬುದನ್ನು ಈ ಮೇಲಿನ ವಿಡಿಯೋದಲ್ಲಿ ನೋಡಿ. ಇದಲ್ಲದೇ ಇತ್ತೀಚಿಗಷ್ಟೇ ಲಂಡನ್‌ನಲ್ಲಿರುವ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಪ್ರಧಾನ ಕಚೇರಿಗೆ ಭೇಟಿ ನೀಡಿದ ಡೇವಿಡ್ ರಶ್ ಅವರು ತಮಗೆ ಸಿಕ್ಕಿದ್ದ 180 ಪ್ರಶಸ್ತಿಗಳನ್ನು ಹರಾಜು ಹಾಕುತ್ತಿರುವುದಾಗಿ ಘೋಷಿಸಿದ್ದಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಇದನ್ನೂ ಓದಿ: ನಾಯಿ ಮಾಡಿದ ಕಿತ್ತಾಪತಿಯಿಂದ ಹೊತ್ತಿ ಉರಿದ ಮನೆ; ವಿಡಿಯೋ ಇಲ್ಲಿದೆ ನೋಡಿ