ಬಸ್ ನಿಲ್ಲಿಸದಿದ್ದಕ್ಕೆ ಕೋಪಗೊಂಡು ಗಾಜು ಹೊಡೆದು ಕಂಡಕ್ಟರ್‌ ಮೇಲೆ ಹಾವು ಎಸೆದ ಮಹಿಳೆ

ಬಸ್​​ ನಿಲ್ಲಿಸಲಿಲ್ಲ ಎಂಬ ಕಾರಣಕ್ಕೆ ಮಹಿಳೆಯೊಬ್ಬಳು ಬಸ್ಸಿನ ಗಾಜು ಹೊಡೆದು ಹಾಕಿದ್ದಾಳೆ. ಇದಲ್ಲದೇ ಪ್ರಶ್ನಿಸಿದ ಕಂಡಕ್ಟರ್​ ಮೇಲೆ ತನ್ನ ಬ್ಯಾಗ್​​ನಲ್ಲಿ ಇರಿಸಿದ್ದ ಹಾವನ್ನು ತೆಗೆದು ಬಿಸಾಕಿದ್ದಾಳೆ. ಬಸ್​​​ ಕಂಡಕ್ಟರ್ ಹಾಗೂ ಡ್ರೈವರ್​​ ದೂರಿನ ಆಧಾರದ ಮೇಲೆ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

ಬಸ್ ನಿಲ್ಲಿಸದಿದ್ದಕ್ಕೆ ಕೋಪಗೊಂಡು ಗಾಜು ಹೊಡೆದು ಕಂಡಕ್ಟರ್‌ ಮೇಲೆ ಹಾವು ಎಸೆದ ಮಹಿಳೆ
ಕಂಡಕ್ಟರ್‌ ಮೇಲೆ ಹಾವು ಎಸೆದ ಮಹಿಳೆ
Follow us
ಅಕ್ಷತಾ ವರ್ಕಾಡಿ
|

Updated on: Aug 10, 2024 | 5:34 PM

ಹೈದರಾಬಾದ್: ಬಸ್​​ ನಿಲ್ಲಿಸದಿದ್ದಕ್ಕೆ ಮಹಿಳೆಯೊಬ್ಬಳು ಬಾಟಲಿಯಿಂದ ಬಸ್​​ ಗಾಜು ಹೊಡೆದು ಬಸ್ ಕಂಡಕ್ಟರ್ ಮೇಲೆ ಹಾವನ್ನು ಎಸೆದ ಘಟನೆ ಹೈದರಾಬಾದ್​​ನ ವಿದ್ಯಾನಗರದಲ್ಲಿ ನಡೆದಿದೆ. ಮಹಿಳೆ ಕುಡಿದ ಮತ್ತಿನಲ್ಲಿದ್ದ ಈ ಕೃತ್ಯ ಎಸಗಿರುವುದಾಗಿ ಪೊಲೀಸರು ತಿಳಿಸಿದ್ದು, ಆಕೆಯನ್ನು ಬಂಧಿಸಿ ಕರೆದೊಯ್ಯಲಾಗಿದೆ.

ಗುರುವಾರ ಸಂಜೆ ವಿದ್ಯಾನಗರದಲ್ಲಿ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ (ಟಿಜಿಎಸ್‌ಆರ್‌ಟಿಸಿ) ಸೇರಿದ ಬಸ್‌ಗೆ ಮಹಿಳೆ ಮದ್ಯದ ಬಾಟಲಿಯನ್ನು ಎಸೆದಿದ್ದಾಳೆ. ಬಳಿಕ ಕಂಡಕ್ಟರ್ ಮಹಿಳೆಯನ್ನು ಪ್ರಶ್ನಿಸಿದಾಗ, ಆಕೆ ತನ್ನ ಬ್ಯಾಗ್‌ನಿಂದ ಹಾವನ್ನು ಹೊರತೆಗೆದು ಆಕೆಯ ಮೇಲೆ ಎಸೆದಿದ್ದಾಳೆ. ಘಟನೆಯ ಕುರಿತು ನಲ್ಲಕುಂಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವುದಾಗಿ ಟಿಜಿಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಹಸ್ತಮೈಥುನ ವಿಡಿಯೋ ಕಳುಹಿಸಿ ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಶಿಕ್ಷಕಿಯ ಬಂಧನ

ವಿದ್ಯಾನಗರ ಸಿಗ್ನಲ್‌ನಲ್ಲಿ ಫ್ರೀ ಲೆಫ್ಟ್‌ನಲ್ಲಿ ಆರ್‌ಟಿಸಿ ಬಸ್ ನಿಲ್ದಾಣವಿಲ್ಲ. ಆದ್ದರಿಂದ ಚಾಲಕ ಬಸ್​​ ನಿಲ್ಲಿಸಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ದೂರಿನ ಆಧಾರದ ಮೇಲೆ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಿ ಆಕೆಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಹಿಳೆ ಕುಡಿದ ಮತ್ತಿನಲ್ಲಿದ್ದಳು, ಬಸ್ ಚಾಲಕ ವಾಹನ ನಿಲ್ಲಿಸದಿದ್ದಾಗ ಕಂಡಕ್ಟರ್ ಮೇಲೆ ಹಾವನ್ನು ಎಸೆದಿದ್ದಾಳೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ